ಬದಲಾಗುತ್ತಿದೆ ದೇಶದ ಉನ್ನತ ಶಿಕ್ಷಣ


Team Udayavani, Nov 22, 2022, 6:10 AM IST

ಬದಲಾಗುತ್ತಿದೆ ದೇಶದ ಉನ್ನತ ಶಿಕ್ಷಣ

ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವು ಪ್ರಯೋಗಗಳನ್ನು ತರುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಮೂರು ವರ್ಷದ ಪದವಿ ಶಿಕ್ಷಣದ ಬದಲು ನಾಲ್ಕು ವರ್ಷದ ಪದವಿ ಹೀಗೆ ಹಲವಾರು ಆವಿಷ್ಕಾರ, ಬದಲಾವಣೆಗಳನ್ನು ತರಲಾಗುತ್ತಿದೆ. ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯಾ ಕ್ಷೇತ್ರದ ಪರಿಣತ(ಪ್ರೊಫೆಸರ್‌ ಆಫ್ ಪ್ರ್ಯಾಕ್ಟೀಸ್‌)ರನ್ನು ನೇಮಕ ಮಾಡುವ ಬಗ್ಗೆ ಆದೇಶ ಹೊರಡಿಸಿದ್ದನ್ನು ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ಪಿಎಚ್‌.ಡಿ. ಪದವಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೂಡ ಪರಿಷ್ಕರಣೆ ಮಾಡಲಾಗಿದೆ.

ಪ್ರೊಫೆಸರ್‌ ಆಫ್ ಪ್ರ್ಯಾಕ್ಟೀಸ್‌ಗೆ ಅರ್ಹರು ಯಾರು?:

ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷವಾಗಿರುವ ಪರಿಣತಿಯನ್ನು ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ ಹದಿನೈದು ವರ್ಷಗಳ ಕಾಲ ಸೇವಾನುಭವ ಹೊಂದಿರಬೇಕಾಗುತ್ತದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು (ಎಚ್‌ಇಐ) ಈ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಿ ಕೊಳ್ಳಲು ಅವಕಾಶಗಳನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಕೆಲವು ದಿನಗಳ ಹಿಂದೆ ಅವಕಾಶ ಕಲ್ಪಿಸಿಕೊಟ್ಟಿದೆ. ವಿಜ್ಞಾನ, ತಂತ್ರಜ್ಞಾನ, ಉದ್ಯಮಶೀಲತೆ, ಸಮಾಜ ವಿಜ್ಞಾನ, ಮಾಧ್ಯಮ, ಸಾಹಿತ್ಯ, ಕಲೆ, ನಾಗರಿಕ ಸೇವೆಗಳು, ಸಶಸ್ತ್ರ ಪಡೆಗಳು, ಕಾನೂನು, ಸಮುದಾಯ ಅಭಿವೃದ್ಧಿ, ಪಂಚಾಯತ್‌ ರಾಜ್‌ ಸಹಿತ ನಿಗದಿಪಡಿಸ ಲಾಗುವ ಕ್ಷೇತ್ರಗಳಿಂದ ಪರಿಣತರನ್ನು ಆಯ್ಕೆ ಮಾಡಲು ಅವಕಾಶ ಇದೆ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರು ಅಥವಾ ನಿವೃತ್ತರಾದವರಿಗೆ ಇಂಥ ಕ್ಷೇತ್ರಕ್ಕೆ ಅವಕಾಶ ಇಲ್ಲ.

ಪಿಎಚ್‌.ಡಿ.ಗೆ ಸ್ನಾತಕೋತ್ತರ ಪದವಿ ಬೇಡ:

ಹೊಸ ಶಿಕ್ಷಣ ನೀತಿಯ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಪದವಿ ಪಡೆದುಕೊಂಡು ಶೇ.75 ಅಂಕಗಳನ್ನು ಪಡೆದುಕೊಂಡರೆ ಪಿಎಚ್‌.ಡಿ. ಪದವಿಗೆ ಸೇರ್ಪಡೆಯಾಗಲು ಅರ್ಹರು. ಸದ್ಯ ಇರುವ ನಿಯಮದಲ್ಲಿ ಸ್ನಾತ  ಕೋತ್ತರ ಪದವಿಯಲ್ಲಿ ಶೇ.55 ಅಂಕ ಗÙ ‌ನ್ನು ಪಡೆದಿರಬೇಕು. ಕೆಲವೊಂದು ವಿವಿಗಳಲ್ಲಿ ಎಂ.ಫಿಲ್‌ ಪದವಿ ಕಡ್ಡಾಯಗೊಳಿಸಲಾಗಿತ್ತು. ಬದಲಾಗಿರುವ ಸ್ಥಿತಿಯಲ್ಲಿ ಎಂ.ಫಿಲ್‌ ಪದವಿಯನ್ನೇ ರದ್ದು ಮಾಡಲಾಗಿದೆ.

ಹೊಸ ವ್ಯವಸ್ಥೆಯಲ್ಲಿ ನೇಮಕ ಹೇಗೆ? :

ವಿವಿಗಳ ವ್ಯಾಪ್ತಿಗಳಲ್ಲಿ ಕುಲಪತಿಗಳು, ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ನೇಮಕ ಮಾಡಲು ಕಾನೂನು ಬದ್ಧ ಅಧಿಕಾರ ಇರುವವರು ಆಯಾ ಕ್ಷೇತ್ರದ ಪರಿಣತರ ನೇಮಕಕ್ಕೆ ನಾಮ ನಿರ್ದೇಶನ ಮಾಡುವ ಮೂಲಕ ಕ್ರಮ ಕೈಗೊಳ್ಳುತ್ತಾರೆ. ಆಯಾ ಸಂಸ್ಥೆಗೆ ಮಂಜೂ ರಾಗಿರುವ ಒಟ್ಟು ಬೋಧಕ ಸಿಬಂದಿಯ ಶೇ.10ಕ್ಕಿಂತ ಇಂಥ ನಾಮ ನಿರ್ದೇಶನದ ಮೂಲಕ ಮಾಡುವ ನೇಮಕಗಳು ಮೀರುವಂತೆ ಇಲ್ಲ. ಆಸಕ್ತರು ತಮ್ಮ ಸ್ವವಿವರವನ್ನು ಉನ್ನತ ಶಿಕ್ಷಣ ಸಂಸ್ಥೆಗೆ ಕಳುಹಿಸಿಕೊಡಬೇಕು. ಇಬ್ಬರು ಸದಸ್ಯರು ಇರುವ ಉನ್ನತ ಸಮಿತಿ ಅವುಗ ಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ.

ಸಾಂಪ್ರದಾಯಿಕ ಶಿಕ್ಷಣ ಕಡ್ಡಾಯ ಅಲ್ಲ :

ವಿವಿಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೊಫೆಸರ್‌ಗಳಾಗಿ ಕೆಲಸ ಮಾಡಲು ಆಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ, ನ್ಯಾಶನಲ್‌ ಎಲಿಜಿಬಿಲಿಟಿ ಟೆಸ್ಟ್‌ನಲ್ಲಿ ಉತ್ತೀರ್ಣ, ಪಿಎಚ್‌.ಡಿ. ಪದವಿ, ಅದಕ್ಕಿಂತ ಹೆಚ್ಚಿನ ಅಧ್ಯಯನ ಬೇಕಾಗುತ್ತದೆ. ಯುಜಿಸಿ ಪರಿಚಯಿಸಲು ಮುಂದಾಗಿರುವ ಹೊಸ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ಎನ್ನುವುದು ಕಡ್ಡಾಯವಲ್ಲ. ನಿಗದಿತ ಕ್ಷೇತ್ರದಲ್ಲಿ ಆತ ಅಪರಿಮಿತವಾಗಿರುವ ಜ್ಞಾನ ಮತ್ತು ಪ್ರಾಯೋಗಿಕವಾಗಿ ಅದನ್ನು ಅನುಷ್ಠಾನಗೊಳಿಸಲು ಪರಿಣತಿ ಹೊಂದಿದ್ದರೆ ಸಾಂಪ್ರದಾಯಿಕ ಶಿಕ್ಷಣದ ಅಗತ್ಯವಿಲ್ಲ.

ಸಂಶೋಧನ ಪ್ರಬಂಧ ಪ್ರಕಟಿಸಬೇಕಾಗಿಲ್ಲ :

ಹಾಲಿ ಇರುವ ನಿಯಮಗಳ ಪ್ರಕಾರ ಅಂತಿಮ ಹಂತ ದಲ್ಲಿ ಪ್ರಕಟಿಸಬೇಕಾಗಿರುವ ಪಿಎಚ್‌.ಡಿ. ಪ್ರಬಂಧವನ್ನು ಕನಿಷ್ಠ 2 ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕಾಗಿತ್ತು. ಆದರೆ ಈ ನಿಯಮ ಈಗ ರದ್ದಾಗಿದೆ. ಹಲವಾರು ನಿಯತಕಾಲಿಕಗಳಲ್ಲಿ ಸಂಶೋಧನ ಪ್ರಬಂಧಗಳು ಪ್ರಕಟಗೊಂಡರೆ ನಿಗದಿತ ಶುಲ್ಕವನ್ನೂ ಪಾವತಿ ಮಾಡುತ್ತವೆ. 2019ರಲ್ಲಿ ಯುಜಿಸಿ ಸಮಿತಿ ಮಾಡಿದ ನಿಯಮದಂತೆ ಅಂಥ ನಿಯತಕಾಲಿ ಕಗಳಲ್ಲಿ ಪ್ರಕಟಗೊಂಡ ಪ್ರಬಂಧಗಳನ್ನು ಶೈಕ್ಷಣಿಕವಾಗಿ ಅರ್ಹತೆ ಪಡೆಯಲು ಪರಿಗಣಿಸಬಾರದು ಎಂದಿತ್ತು.

ಪಿಎಚ್‌.ಡಿ.ಗೆ ಪ್ರವೇಶ ಹೇಗೆ?:

ಹೊಸ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಎನ್‌ಇಟಿ ಅಥವಾ ಜೆಆರ್‌ಎಫ್ (ಜ್ಯೂನಿಯರ್‌ ರಿಸರ್ಚ್‌ ಫೆಲೋ), ಆಯಾ ಶಿಕ್ಷಣ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಪ್ರವೇಶ ಪರೀಕ್ಷೆಯ ಪಠ್ಯಕ್ರಮದಲ್ಲಿ ರಿಸರ್ಚ್‌ ಮೆಥಡಾಲಜಿಯ ಶೇ.50, ಆಯಾ ವಿಷಯದ ಶೇ.50 ಅಂಶಗಳು ಇರಬೇಕು. ಲಿಖೀತ ಪರೀಕ್ಷೆಯಲ್ಲಿನ ಸಾಮರ್ಥ್ಯಕ್ಕೆ ಶೇ.70, ಮೌಖೀಕ ಸಂದರ್ಶನದಲ್ಲಿ ಶೇ.30 ಅಂಕಗಳಲ್ಲಿ ಪಡೆಯುವ ಒಟ್ಟು ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಂಶೋಧನೆಗೇ ಆದ್ಯತೆ :

ಹೊಸ ನಿಯಮಗಳ ಪ್ರಕಾರ ಯಾವುದೇ ವಿಚಾರದಲ್ಲಿ ಪಿಎಚ್‌.ಡಿ. ಮಾಡುವರಿಗೆ ಸಂಶೋಧನೆಗೆ ಹೆಚ್ಚಿನ ಅದ್ಯತೆ ನೀಡಲು ಸೂಚಿಸಲಾಗಿದೆ. ಅವರಿಗೆ ಬೋಧನೆಯಲ್ಲಿ ತರಬೇತಿ, ಶಿಕ್ಷಣ, ಅವರು ಆಯ್ಕೆ ಮಾಡಿದ ವಿಷಯದಲ್ಲಿ ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆಯಲು ಒತ್ತು ನೀಡಲು ಸೂಚಿಸಲಾಗಿದೆ. ವಾರಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಬೋಧನೆ, ಸಂಶೋಧನೆ, ಪ್ರಯೋಗಶಾಲೆಯಲ್ಲಿ ಪ್ರಯೋಗ, ಅದರಲ್ಲಿ ಬಂದ ಅಂಶಗಳ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಲಾಗಿದೆ. ಹಿಂದಿನ ನಿಯಮ ಪ್ರಕಾರ ಪ್ರತೀ ಆರು ತಿಂಗಳಿಗೆ ಒಂದು ಬಾರಿ ರಿಸರ್ಚ್‌ ಅಡ್ವೆ„ಸರಿ ಕಮಿಟಿ ಮುಂದೆ ಸಂಶೋಧನ ವಿದ್ಯಾರ್ಥಿ ಹಾಜರಾಗಿ, ಅಧ್ಯಯನದ ಪ್ರಗತಿ ಮಂಡಿಸಬೇಕಾಗಿತ್ತು. ಹೊಸ ಪದ್ಧತಿಯಲ್ಲಿ ಪ್ರತೀ ಸೆಮಿಸ್ಟರ್‌ನಲ್ಲಿ ಕೂಡ ಈ ವ್ಯವಸ್ಥೆಯನ್ನು ಮಾಡಬೇಕಾಗಿದೆ.

ಸಂಶೋಧನ ಮಾರ್ಗದರ್ಶಕರು :

ಅರ್ಹತೆ ಪಡೆದ ಪ್ರೊಫೆಸರ್‌ಗಳು, ಎಸೋಸಿಯೇಟ್‌ ಪ್ರೊಫೆಸರ್‌ಗಳು ಗರಿಷ್ಠವೆಂದರೆ ಎಂಟು, ಆರು ಮತ್ತು ನಾಲ್ಕು ಮಂದಿಗೆ ಮಾರ್ಗದರ್ಶನ ನೀಡಲು ಅವಕಾಶ ಇದೆ. ಹೊಸ ನಿಯಮ  ಗಳ ಪ್ರಕಾರ ನಿವೃತ್ತಿಯಾಗಲು ಮೂರು ವರ್ಷ ಇರುವ ಪ್ರೊಫೆಸರ್‌ಗಳು ಹೊಸಬರಿಗೆ ಮಾರ್ಗದರ್ಶಕರಾಗಿ ನೇಮಕಗೊಳ್ಳಲು ಅವಕಾಶ ಇಲ್ಲ.

ಅರೆಕಾಲಿಕ ಪಿಎಚ್‌.ಡಿ . :

ಪೂರ್ಣಕಾಲಿಕ ಪಿಎಚ್‌.ಡಿ. ನಿಯಮವೇ ಅರೆಕಾಲಿಕವಾಗಿ ಪಿಎಚ್‌.ಡಿ. ಮಾಡುವವರಿಗೆ ಅನ್ವಯವಾಗುತ್ತದೆ. ಅವರು ತಮ್ಮ ಉದ್ಯೋಗದಾತನಿಂದ ಅಥವಾ ಕಂಪೆನಿಗಳಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಸಲ್ಲಿಸಬೇಕಾಗುತ್ತದೆ. ಅದರಲ್ಲಿ ಸಂಶೋಧನ ವಿದ್ಯಾರ್ಥಿಗೆ ಬೇಕಾಗುವ ಸಮಯ ನೀಡಬೇಕಾಗುತ್ತದೆ ಎಂಬುದನ್ನೂ ನಮೂದಿಸಬೇಕಾಗುತ್ತದೆ.

-ಸದಾಶಿವ ಕೆ.

ಟಾಪ್ ನ್ಯೂಸ್

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.