ಕನಸಿನಲ್ಲಿ ಕಂಡ ಯಂತ್ರದ ಆವಿಷ್ಕಾರ
Team Udayavani, Apr 3, 2022, 1:41 PM IST
ಎಲ್ಲರಿಗೂ ದಿನನಿತ್ಯ ಕನಸು ಬೀಳುವುದು ಸರ್ವೇಸಾಮಾನ್ಯ. ಹಲವರಿಗೆ ಕನಸಿನಲ್ಲಿ ಕಂಡ ವ್ಯಕ್ತಿಗಳು, ಚಿತ್ರಣಗಳು ಮರೆತುಹೋಗುತ್ತವೆ. ಕೆಲವೊಮ್ಮೆ ಎಲ್ಲವೂ ನೆನಪಿರುತ್ತವೆ. ಆದರೆ ನಾವ್ಯಾರೂ ಕನಸುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬಿದ್ದ ಕನಸುಗಳ ಬಗ್ಗೆ ಅತಿಯಾಗಿ ಯೋಚಿಸುವುದೂ ಇಲ್ಲ,ಆದರೆ ನಮ್ಮ ಕನಸುಗಳು ನಮ್ಮನ್ನು ಕ್ರಿಯೇಟಿವ್ ವ್ಯಕ್ತಿಯಾಗಿ ಮಾಡುತ್ತದೆ ಎಂದರೆ ನಂಬುತ್ತೀರಾ?
ನಂಬಲೇಬೇಕು ಅದಕ್ಕೆ ಸೂಕ್ತ ಉದಾಹರಣೆ ಎಲಿಯಾಸ್ ಹೋವ್. ಈತ ಓರ್ವ ಅಮೆರಿಕಾದ ಸಂಶೋಧಕ. 1819 ರಂದು ಜನಿಸಿದ ಈತನಿಗೆ ಸಣ್ಣ ವಯಸ್ಸಿನಿಂದಲೂ ಯಂತ್ರಗಳ ಬಗ್ಗೆ ಬಹಳ ಆಸಕ್ತಿ. ಅದರಲ್ಲಿಯೂ ಹೊಲಿಗೆ ಯಂತ್ರದ ಕುರಿತು ಸ್ವಲ್ಪ ಹೆಚ್ಚೇ ಆಸಕ್ತಿ. ಆಗಿನ ಕಾಲದಲ್ಲಿ ಬಟ್ಟೆಗಳನ್ನು ಕೈಯಿಂದಲೇ ತಯಾರಿಸುವ ಪರಿಸ್ಥಿತಿ ಇತ್ತು. ಒಂದು ಬಟ್ಟೆ ತಯಾರಿಸಲು ಅನೇಕ ದಿನಗಳ ಸಮಯಾವಕಾಶ ಬೇಕಿತ್ತು. ಇದರ ಕುರಿತು ಆತ ಬಹಳಷ್ಟು ಪರಿಶ್ರಮ ಪಟ್ಟಿದ್ದ.
ಒಮ್ಮೆ ಆತನ ಕನಸಿನಲ್ಲಿ ಹೊಲಿಗೆ ಯಂತ್ರವನ್ನು ಕಂಡನು. ಅದರಲ್ಲಿ ಬಳಸಲಾಗಿದ್ದ ಸೂಜಿ ವಿಭಿನ್ನವಾಗಿತ್ತು. ದಾರವನ್ನು ಬಟ್ಟೆಗೆ ಚುಚ್ಚಿ ಅದನ್ನು ಮತ್ತೆ ಮೇಲಕ್ಕೆ ತರುವ ಹೊಸ ರೀತಿಯ ಯಂತ್ರವನ್ನು ಕನಸಿನಲ್ಲಿ ಕಂಡ ಆತ. ತಾನು ಕನಸಿನಲ್ಲಿ ಕಂಡ ಯಂತ್ರದ ಮಾದರಿಯನ್ನೇ ನೆನಪಿಸಿಕೊಂಡ. ಸೂಜಿಯ ತುದಿಯ ರಂಧ್ರಗಳನ್ನು ಕನಸಿನಲ್ಲಿ ಕಂಡಂತೆ ವಿನ್ಯಾಸಗೊಳಿಸಿ ಐದು ವರ್ಷಗಳು ಪರಿಶ್ರಮಪಟ್ಟು ಹೊಲಿಗೆ ಯಂತ್ರವನ್ನು ಕಂಡುಹಿಡಿದ.
1846 ರಲ್ಲಿ ಯಂತ್ರಕ್ಕೆ ಪೇಟೆಂಟ್ ಕೂಡ ಪಡೆದುಕೊಂಡ. ಹೋವ್ ಕಂಡುಹಿಡಿದ ಯಂತ್ರ ಅಮೇರಿಕಾದಲ್ಲೂ ಪ್ರಸಿದ್ಧಿ ಪಡೆಯತೊಡಗಿತು. ಲೆದರ್ ಸೇರಿದಂತೆ ಎಲ್ಲಾ ರೀತಿಯ ಬಟ್ಟೆಗಳನ್ನು ಹೊಲಿಯಬಹುದಾದ ಯಂತ್ರವನ್ನು ಪ್ರಪಂಚಾದ್ಯಂತ ಕೀರ್ತಿ ಎಲಿಯಾಸ್ ಹೋವ್ ಗೆ ಸೇರುತ್ತದೆ.
ಆದ್ದರಿಂದ ರಾತ್ರಿ ಬೀಳುವ ಕನಸುಗಳನ್ನು ಕಡೆಗಣಿಸಬೇಡಿ. ಹಾಗೆಂದ ಮಾತ್ರಕ್ಕೆ ಕನಸುಗಳನ್ನು ಕಂಡರೆ ಸಾಲದು. ಕನಸುಗಳನ್ನು ನನಸಾಗಿಸಿಕೊಳ್ಳಲು ಹೋವ್ ಶ್ರಮ ಪಟ್ಟಂತೆ ಸತತವಾಗಿ ಶ್ರಮ ಪಡಲು ಸಿದ್ಧವಿರಬೇಕು.
-ವೇದಶ್ರೀ ಜಿ. ಎಂ. ನಾಪೋಕ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.