ಶ್ರೀ ವಿಶ್ವೇಶತೀರ್ಥರ ಕೊನೆ ಸಂದೇಶ ಪ್ರಥಮಾರಾಧನೆ ಸಂದೇಶದಲ್ಲಿ ಸಾಮ್ಯ
Team Udayavani, Dec 17, 2020, 5:58 AM IST
ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ದಂತಕಥೆಯಂತಿದ್ದರು. ಕೊನೆಯುಸಿರು ಎಳೆಯುವ ಮುನ್ನ (2019ರ ಡಿ.19) ಕೊಟ್ಟ ಸಂದೇಶವೂ ಈಗ ಪ್ರಥಮಾರಾಧನೆ ಸಂದರ್ಭದಲ್ಲಿ (2020ರ ಡಿ.17) ಶಿಷ್ಯರು ಕೊಟ್ಟ ಸಂದೇಶವೂ ತಾಳೆಯಾಗುತ್ತಿದೆ.
ಶ್ರೀ ವಿಶ್ವೇಶತೀರ್ಥರು ಕಳೆದ ವರ್ಷ ಕೊನೆಯ ಸಂದೇಶ ನೀಡಿದ್ದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ. ಅದು ಮಹಾಭಾರತದ ಉಪಾಖ್ಯಾನಗಳಲ್ಲಿ ಒಂದು. ಇಂದ್ರದ್ಯುಮ್ನ ಪುಣ್ಯ ಖಾಲಿ ಯಾದ ಬಳಿಕ ಸ್ವರ್ಗದಿಂದ ಭೂಮಿಗೆ ಬಂದ. ಅನೇಕ ವರ್ಷ ರಾಜನಾಗಿ ಆಳ್ವಿಕೆ ನಡೆಸಿದ ಕಾರಣ ತನ್ನ ಪರಿಚಯ ಯಾರಿಗಾದರೂ ಇದೆಯೋ ಎಂಬ ತಿಳಿಯುವ ಮನಸಾಯಿತು. ಮುದಿ ಗೂಬೆ, ಬಕಪಕ್ಷಿಯಲ್ಲಿ ಕೇಳಿದಾಗ ಪರಿಚಯವಿಲ್ಲ ಎಂದರು. ಕೊನೆಗೆ ಸರೋವರದಲ್ಲಿರುವ ಆಮೆ ಬಳಿ ಬಂದು ಕೇಳಿದ. ಆಗ ಆಮೆ “ನಿನ್ನ ಪರಿಯಚ ಯವಿಲ್ಲ ದವರು ಯಾರು? ನೀನು ಎಂತೆಂಥ ಸರೋವರ ವನ್ನು ಕಟ್ಟಿಸಿದೆ? ನನ್ನಂಥ ಎಷ್ಟು ಜಲಚರಗಳಿಗೆ ಆಶ್ರಯ ಕೊಟ್ಟೆ? ಎಷ್ಟು ರೈತರಿಗೆ ಅನುಕೂಲ ಮಾಡಿಕೊಟ್ಟೆ? ನಿನ್ನ ಉಪಕಾರ ಮರೆಯಲು ಸಾಧ್ಯವೆ?’ ಎಂದು ಹೇಳಿತು. ಕೂಡಲೇ ದೇವತೆ ಗಳು ಕೆಳಗಿಳಿದು ಬಂದು “ನಮ್ಮ ಲೆಕ್ಕಾ ಚಾರದಲ್ಲಿ ತಪ್ಪಾಯಿತು. ನಿನ್ನ ಪುಣ್ಯ ವಿನ್ನೂ ಖರ್ಚಾಗಿಲ್ಲ. ಎಷ್ಟು ದಿನ ಭೂಮಿ ಯಲ್ಲಿ ನಿಮ್ಮ ಉಪಕಾರವನ್ನು ಸ್ಮರಿಸಿ ಕೊಳ್ಳುತ್ತಾರೋ ಅಷ್ಟು ದಿನ ನಿಮ್ಮ ಪುಣ್ಯ ಖಾಲಿಯಾಗಿಲ್ಲವೆಂದರ್ಥ. ಕೂಡಲೇ ಸ್ವರ್ಗಕ್ಕೆ ಹೊರಡು’ ಎಂದು ಹೇಳಿ ಸ್ವರ್ಗಾರೋಹಣ ಮಾಡಿಸಿದರು.
ಜೀವನ (ಸಂದೇಶದ) ಸಮಾರೋಪ
ಶ್ರೀ ವಿಶ್ವೇಶತೀರ್ಥರ ಮಾತು ಇದೇ ಕೊನೆ. ಅವರು ಜೀವನದುದ್ದಕ್ಕೂ ಏನು ಮಾಡಿದರೋ ಅದನ್ನು ಪ್ರಾಯಃ ಅವರಿಗೂ ತಿಳಿಯದೆಯೇ ಇಂದ್ರದ್ಯುಮ್ನನ ಸಂದೇಶದೊಂದಿಗೆ ಸಮಾರೋಪ ಮಾಡಿದ್ದರು. ಅವರು ಇಹಲೋಕ ತ್ಯಜಿಸುವ ಮೂರು ದಿನಗಳ ಹಿಂದೆ ಡಿ. 26ರಂದು ಸೂರ್ಯ ಗ್ರಹಣ ಬಂದಿದ್ದರೆ, ಎರಡು ದಿವಸ ಬಿಟ್ಟು ಡಿ. 31ರಂದು ಸುದೀರ್ಘ ಗ್ರಹಣದಂತಾದ ಕೊರೊನಾ ವೈರಸ್ ಚೀನದಲ್ಲಿ ಕಾಣಿಸಿಕೊಂಡಿತು. ಇದರ ತರ್ಕವನ್ನು ಬೇಧಿಸಲು ಕಾಸ್ಮಿಕ್ ವರ್ಲ್ಡ್ ಆಂತರ್ಯವನ್ನು ಬೇಧಿಸಬೇಕು.
ಪ್ರಥಮಾರಾಧನೆ
ಪ್ರಥಮ ಆರಾಧನೆ ಡಿ. 17ರಂದು ನಡೆ ಯುತ್ತಿದೆ. ಕೊರೊನಾ ಕಾರಣದಿಂದ ಜನರು ಹೆಚ್ಚು ಸೇರು ವಂತಿಲ್ಲವಾಗಿದೆ. ಡಿ. 10ರಿಂದ 18ರ ವರೆಗೆ ಆನ್‌ಲೈನ್ ನಲ್ಲಿ ಗೋಷ್ಠಿಗಳು, ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಡಿ. 17 ರಂದು ತಿಥಿ ಪ್ರಕಾರ ಪ್ರಥಮ ಆರಾಧನೋತ್ಸವ ನಡೆಯುತ್ತಿದೆ. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾ ಪೀಠದ ಆವರಣದಲ್ಲಿ ಹೊಸದಾಗಿ ನಿರ್ಮಾಣ ಗೊಂಡ ವೃಂದಾವನ ಸಮುಚ್ಚಯದಲ್ಲಿ ಶ್ರೀ ವಿಶ್ವೇಶತೀರ್ಥರ ವೃಂದಾವನದ ಪಕ್ಕದಲ್ಲಿಯೇ ಗುರು ಶ್ರೀ ವಿದ್ಯಾಮಾನ್ಯತೀರ್ಥರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆಗೊಳ್ಳುತ್ತಿದೆ.
ಆರಾಧನಾ ಸಂದೇಶ
ಆರಾಧನೆಗೆ ಬರಲಾಗದವರು ಅವರಿದ್ದಲ್ಲಿಯೇ ಸ್ವಾಮೀಜಿಯವರಿಗೆ ಪ್ರಿಯ ವಾದ ಕೆಲಸಗಳನ್ನು ಸ್ವಾಮೀಜಿ ಸ್ಮರಣೆ ಯಲ್ಲಿ ನಡೆಸಿ ಸಮಾಜಾಂತರ್ಗತ ದೇವರಿಗೆ ಸಮರ್ಪಿಸಿ ಆರಾಧನೋತ್ಸವ ಆಚರಿಸಬಹುದು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥರು ಕರೆ ನೀಡಿದ್ದಾರೆ. ಯಾವ್ಯಾವ ಉತ್ತಮ ಕೆಲಸಗಳಿವೆಯೋ ಅವೆಲ್ಲದಕ್ಕೂ ಒಂದಲ್ಲೊಂದು ರೀತಿಯಲ್ಲಿ ಭಾಗಿಯಾ ದವರು ಅವರು. ಜಪ, ಪೂಜೆ, ದಾನ, ವೈದ್ಯಕೀಯ ಶಿಬಿರ, ಪರಿಸರ ರಕ್ಷಣೆ, ಮಾನವೀಯತೆ, ಸನ್ನಡತೆ, ಗೋಗ್ರಾಸ, ಪ್ರಾಮಾಣಿಕ ಬದುಕೂ ಪೂಜೆ ಹೀಗೆ ಒಳ್ಳೆಯ ಕೆಲಸಕ್ಕೆ ಇತಿಮಿತಿ ಉಂಟೆ? ಯಾವುದನ್ನೂ ಮಾಡಿ ಕೃಷ್ಣಾರ್ಪಣ ಬಿಡಬಹುದು, ಇವೆಲ್ಲವೂ ಭಗವಂತನ ಆರಾಧನೆ ಎಂದು ಗುರುಗಳು ಜೀವನದಲ್ಲಿ ಕಂಡುಕೊಂಡ ಅರ್ಥದಲ್ಲಿ ಶಿಷ್ಯ ಕರೆ ನೀಡಿದ್ದಾರೆ. ಗುರು ಸಂದೇಶದಲ್ಲಿ ಏನನ್ನು ಹೇಳಿದ್ದರೋ ಅದನ್ನೇ (ವಿಧಿ, ನೇಚರ್ ಇತ್ಯಾದಿ ಅರ್ಥದಲ್ಲಿಯೂ) ಶಿಷ್ಯರ ಮಾತಿನಲ್ಲಿ ಹೇಳಿಸಿದ್ದಾರೆನ್ನಬಹುದು.
ಧರ್ಮ ಪೂಜೆಗಲ್ಲ, ಧಾರಣೆಗೆ
ಕೊರೊನಾ ಇಲ್ಲವಾಗಿದ್ದರೆ ಸಾವಿರಾರು ಭಕ್ತರು ಸ್ವಾಮೀಜಿ ವೃಂದಾವನಕ್ಕೆ ಪ್ರದ ಕ್ಷಿಣೆ ಬಂದು ಪೂಜೆ ಸಲ್ಲಿಸುತ್ತಿದ್ದರು. “ಧರ್ಮವನ್ನು ಪೂಜಿಸಬೇಡಿ, ಧರ್ಮವನ್ನು ಬದುಕಿ. ಧರ್ಮ ಪೂಜಿಸುವುದಕ್ಕೆ ಇರುವುದಲ್ಲ, ಬದುಕುವುದಕ್ಕೆ ಇರುವುದು’ ಎಂದು ಓಶೋ ಹೇಳಿದ್ದಿದೆ. ಮಹಾ ಪುರುಷರೆಂಬವರಿಗೆ ಪೂಜೆ ಸಲ್ಲಿಸಿ, ನಾವು ಹಾಗೆ ಬದುಕಲು ಏನೂ ಪರಿಶ್ರಮ ಪಡದೆ ನಮ್ಮ ಸಣ್ಣ ಬುದ್ಧಿಯನ್ನು ಬಿಡದೆ ಬದುಕುತ್ತೇವೆ. ಅವರನ್ನು ದೊಡ್ಡ ಮನುಷ್ಯರೆಂದು ಹೇಳಲು ಇರುವ ಕಾರಣ ನಮಗೆ ಸಣ್ಣತನದಿಂದ ಹೊರಬರಲು ಮನಸ್ಸಿಲ್ಲದೆ ಇರುವುದು ಎಂದು ಓಶೋ ಹೇಳುತ್ತಾರೆ. ಭಾರತೀಯ ಧರ್ಮ ಶಾಸ್ತ್ರದಲ್ಲಿ “ಧರ್ಮ’ ಎಂದರೆ ಧರಿಸಲು (ಅನುಷ್ಠಾನಿಸಲು) “ಧಾರಣಾತ್ ಧರ್ಮ ಇತ್ಯಾಹುಃ’ ಎಂದು ಹೇಳಿದ್ದಾರೆ. ಇಲ್ಲಿ ಧರ್ಮ ಅಂದರೆ ರಿಲಿಜಿಯನ್, ಮತವೂ ಅಲ್ಲ. ಜೀವನದ (ಆತ್ಮದ) ಉನ್ನತಿಗಾಗಿ (ಮೌಲ್ಯವರ್ಧನೆ) ಧರ್ಮ ಇರುವುದು ಎನ್ನುವುದನ್ನು ವಿದ್ವಾಂಸ ಚಿಪ್ಪಗಿರಿ ನಾಗೇಂದ್ರಾಚಾರ್ಯ ಬೆಟ್ಟು ಮಾಡುತ್ತಾರೆ.
ನೇಚರ್ ಕೊಡುತ್ತಿರುವ ಕರೆ
ಪೇಜಾವರ ಶ್ರೀಗಳ ವೃಂದಾವನದತ್ತ ಬರ ದಂತೆ ಕೊರೊನಾ ವೈರಸ್ ತಡೆಯೊಡ್ಡಿ ಸ್ವಯಂ ಪರಿಶ್ರಮದಿಂದ “ಧರ್ಮದಂತೆ, ಉಪದೇಶ ಮಾಡಿ ದಂತೆ, ಉಪದೇಶ ಕೇಳಿದಂತೆ, ಏನು ನುಡಿಯುತ್ತೇವೋ ಹಾಗೆ ನಡೆಯಿರಿ. ಆತ್ಮವಂಚಕ ರಾಗಿ ನಡೆಯದಿರಿ’ ಎಂದು ನೇಚರ್ ಕರೆ ಕೊಡು ವಂತಿದೆ. ಶ್ರೀ ವಿಶ್ವೇಶತೀರ್ಥರು ಕೊನೆಯ ಮಾತಿನಲ್ಲಿ ಕೊಟ್ಟ ಸಂದೇಶದ ಮರ್ಮವೂ ಇದುವೇ ಆಗಿದೆ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.