ಮುದ್ದಣನ ಸಾಹಿತ್ಯ ಗುರು ಪೀಳಿಗೆಯಲ್ಲಿ ಸಾಹಿತ್ಯ ರತ್ನಗಳು


Team Udayavani, Apr 16, 2017, 7:13 AM IST

muddanna.jpg

ಮೂಗೋಶ್ರೀ ವೇದಿಕೆ ಹೆಸರಿನಲ್ಲಿ ದಿ| ಮೂಕಾಂಬಿಕೆಯಮ್ಮ ಉಳ್ಳೂರು, ದಿ| ಗೋಪಾಲಕೃಷ್ಣ ಅಡಿಗ ಮೊಗೇರಿ, ದಿ| ಬಿ. ಎಚ್‌. ಶ್ರೀಧರ್‌ ಬವಳಾಡಿ ಅಡಕವಾಗಿದೆ. ಇವರು ಕ್ರಮವಾಗಿ ಆಶುಕವಿ, ನವ್ಯಕವಿ, ನಿತ್ಯಕವಿಗಳೆಂದು ಪ್ರಸಿದ್ಧರು. ಈ ಸಂಸ್ಥೆ ಇಂದು ಅಪರಾಹ್ನ 3 ಗಂಟೆಗೆ ಕುಂದಾಪುರ ತಾಲೂಕಿನ ಮೊಗೇರಿ ಶಂಕರನಾರಾಯಣ ದೇವಸ್ಥಾನದಲ್ಲಿ ನಿರ್ಮಿಸಲಾಗುವ ದಿ| ವೆಂಕಟರಮಣ ಹೆಬ್ಟಾರ್‌ ವೇದಿಕೆಯಲ್ಲಿ ಅಡಿಗರ ಜನ್ಮಶತಾಬ್ದ ಸಮಾರಂಭವನ್ನು ಆಯೋಜಿಸಿದೆ. ಈ ಮೂರೂ ಸಾಧಕರ ಮೂಲ ಬೇರು ಬವಳಾಡಿ. ಈ ತಲೆಮಾರಿಗೂ ಹಿಂದಿನವರಾದ ಬವಳಾಡಿ ವೆಂಕಟರಮಣ ಹೆಬ್ಟಾರ್‌ ಕವಿ ಮುದ್ದಣನ ಸಾಹಿತ್ಯ ಗುರುವಾಗಿದ್ದರು ಎನ್ನುವುದು ಅನೇಕರಿಗೆ ಗೊತ್ತಿರದ ಸಂಗತಿ. 

ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು (ಕವಿ ಮುದ್ದಣ) ಅವರ ಜೀವಿತ ಕಾಲದಲ್ಲಿ ಎಲೆಮರೆಯ ಕಾಯಿಯಾಗಿದ್ದರು ಎಂಬುದನ್ನು ಓದಿ ತಿಳಿದುಕೊಂಡಿದ್ದೇವೆ. ಆದರೆ ಅವರ ಕಾಲಾನಂತರ ಅವರ ಸಾಹಿತ್ಯಕೃತಿಗಳು ಪ್ರಸಿದ್ಧಿಗೆ ಬಂದವು. ಮುದ್ದಣನ ಸಾಹಿತ್ಯ ಮಾರ್ಗದರ್ಶಕ, ಗುರು ಬವಳಾಡಿ ವೆಂಕಟರಮಣ ಹೆಬ್ಟಾರರ ಹೆಸರು ಇನ್ನೂ ಎಲೆಮರೆ ಕಾಯಿಯಾಗಿಯೇ ಇರುವುದು ಸೋಜಿಗ. ಹಾಗಂತ ಇದು ಯಾರಿಗೂ ಗೊತ್ತಿಲ್ಲದ ವಿಷಯವೆ? ಹಾಗಿಲ್ಲ. ಡಾ| ಶಿವರಾಮ ಕಾರಂತರು, ಇದೇ ಮನೆತನಕ್ಕೆ ಸೇರಿದ ಪ್ರೊ| ಬಿ. ಎಚ್‌. ಶ್ರೀಧರ್‌ ಇದನ್ನು ಉಲ್ಲೇಖೀಸಿದ್ದಾರೆ. ಹಿರಿಯ ಸಾಹಿತ್ಯಪ್ರೇಮಿಗಳಿಗೆ ಒಂದಿಷ್ಟು ಗೊತ್ತಿದೆ. ಸಾಮಾನ್ಯ ಜನರಿಗೆ ಇನ್ನೂ ಗೊತ್ತಿಲ್ಲ. 

ಹೇಗೆ ಗುರುವಾದರು?
ವೆಂಕಟರಮಣ ಹೆಬ್ಟಾರ್‌ ಕುಂದಾಪುರ ತಾಲೂಕಿನ ಬವಳಾಡಿಯವರು. ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ನಲ್ಲಿ ಮುದ್ದಣ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾಗ ರೆವೆನ್ಯೂ ಇನ್ಸ್‌ಪೆಕ್ಟರ್‌ ಕಚೇರಿಯಲ್ಲಿ ಖಾಸಗಿ ಗುಮಾಸ್ತರಾಗಿದ್ದ ವೆಂಕಟರಮಣ ಹೆಬ್ಟಾರ್‌ ಹೊಟೇಲ್‌ನಲ್ಲಿ ಒಟ್ಟಾಗುತ್ತಿದ್ದರು. ಹೆಬ್ಟಾರ್‌ ಸಾಹಿತ್ಯ, ಸಂಗೀತ, ವ್ಯಾಕರಣ, ತರ್ಕ, ವೇದಾಂತ, ಜ್ಯೋತಿಷ, ಗಣಿತ, ದಾರುಶಿಲ್ಪ, ಯಕ್ಷಗಾನ, ನಾಟಕ ಮೊದಲಾದ ವಿದ್ಯೆಗಳಲ್ಲಿ, ಲ್ಯಾಟಿನ್‌, ಸಂಸ್ಕೃತ, ಇಂಗ್ಲಿಷ್‌, ಗ್ರೀಕ್‌, ಹೊಸಗನ್ನಡ, ಹಳೆಗನ್ನಡ ಮೊದಲಾದ ಭಾಷೆಗಳಲ್ಲಿ ಪಾರಂಗತರಾಗಿದ್ದರು. ಸಂಸ್ಕೃತ – ಕನ್ನಡದಲ್ಲಿ ಹಾಡುಗಳನ್ನು ರಚಿಸಿ ಸ್ವಾತಂತ್ರ ಹೋರಾಟದಲ್ಲಿಯೂ ಕೊಡುಗೆ ಸಲ್ಲಿಸಿದ್ದರು. ಮನೆಯ ಬಾಗಿಲಿನ ಕುಸುರಿ ಕಲೆಯನ್ನು ಇವರೇ ಮಾಡಿದ್ದರಂತೆ. ಸಂಸ್ಕೃತ – ಕನ್ನಡದಲ್ಲಿ ಕವಿತೆಗಳನ್ನು ಲೀಲಾಜಾಲವಾಗಿ ರಚಿಸುತ್ತಿದ್ದರು. ಮುದ್ದಣರು ಆ ಸಂದರ್ಭ ಹೆಬ್ಟಾರರಿಗೆ ತನ್ನ ಕೃತಿಗಳನ್ನು ತೋರಿಸಿ ಅವರ ಸಹೃದಯ ವಿಮರ್ಶೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದರು. “ರಾಮಪಟ್ಟಾಭಿಷೇಕ’ ಪದ್ಯಕಾವ್ಯವನ್ನು ಮುದ್ದಣ ರಚಿಸಿ ಮುಗಿಸುವ ಮೊದಲು ಹೆಬ್ಟಾರರೆದುರು ಇಟ್ಟು ಪಟ್ಟಾಭಿಷೇಕದ ಪದ್ಯಗಳನ್ನು ಬರೆದು ಕೊಡಲು ನೀವೇ ಸಮರ್ಥರು ಎಂದು ಕೇಳಿಕೊಂಡರು. “ಜೈಮಿನಿ ಭಾರತದ ಪದ್ಯಗಳ ಗಂಭೀರ ಕ್ಲಿಷ್ಟತೆಗಳು ನಿಮ್ಮ ಪದ್ಯಗಳಲ್ಲಿ ಇಲ್ಲ. ಆದ್ದರಿಂದ ಈ ಕಾವ್ಯ ಮುಗಿಸಲು ಪಟ್ಟಾಭಿಷೇಕದ 16 ವಾರ್ಧಕ ಷಟ³ದಿಗಳನ್ನು ಬರೆದು ಕೊಡುತ್ತೇನೆ. ಇನ್ನು ಮುಂದೆ ನೀವು ಗದ್ಯಕಾವ್ಯಗಳನ್ನೇ ಬರೆದರೆ ಜಯಶಾಲಿಗಳಾಗುವಿರಿ’ ಎಂದು ಹೇಳಿ 16 ನುಡಿಗಳನ್ನು ಕಾವ್ಯಕ್ಕೆ ಸೇರಿಸಿಕೊಟ್ಟರು. “ಇಬ್ಬರ ಪದ್ಯಗಳಿರುವುದರಿಂದ ಬರೆದವರ ಜಿಜ್ಞಾಸೆ ಮೂಡುತ್ತದೆ. ನಮ್ಮಿಬ್ಬರ ತಾಯಿ ಹೆಸರು ಮಹಾಲಕ್ಷ್ಮಿ ಆದ ಕಾರಣ “ಮಹಾಲಕ್ಷ್ಮೀಕೃತ’ ಎಂದು ಬರೆಯಬಹುದೇ?’ ಎಂದು ಮುದ್ದಣ ಕೇಳಿದರು. ಅದಕ್ಕೆ ಹೆಬ್ಟಾರ್‌ ಸಮ್ಮತಿಸಿದರು. ಹೆಬ್ಟಾರ್‌ ಪ್ರೇರಣೆಯಂತೆ ಲಕ್ಷ್ಮೀನಾರಾಯಣಪ್ಪನವರು ಮುದ್ದಣ- ಮನೋರಮೆಯರ ಅದ್ವಿತೀಯ ಸಂವಾದವನ್ನೊಳಗೊಂಡ ಗದ್ಯ ಕಾವ್ಯವನ್ನು (ರಾಮಾಶ್ವಮೇಧ) ಬರೆದರು. ಮುದ್ದಣರ ಮರಣೋತ್ತರದಲ್ಲಿ ಹೆಬ್ಟಾರರು ವಯೋವೃದ್ಧರಾಗಿದ್ದಾಗ ರಾಮಪಟ್ಟಾಭಿಷೇಕದ ಪದ್ಯಶೈಲಿಯ ಭೇದದ ಕುರಿತು ಸಂಶಯ ಉಂಟಾಗಿ ಕೆಲವರು ಮೊಗೇರಿ, ಬವಳಾಡಿ, ಉಳ್ಳೂರುಗಳಲ್ಲಿ ಸಂದರ್ಶಿಸಿ ವಿಷಯಗಳನ್ನು ತಿಳಿದುಕೊಂಡರು. ಈ 16 ಪದ್ಯಗಳನ್ನು ತನಗೆ ಬವಳಾಡಿ ಗದ್ದೆ ಅಂಚಿನಲ್ಲಿ ಕುಳಿತು ಸ್ಮತಿ ಬಲದಿಂದ ಹೆಬ್ಟಾರ್‌ ಹೇಳಿದರು. ಅದನ್ನು ಬರೆದುಕೊಂಡು ಬೆಂಗಳೂರಿನಲ್ಲಿ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿದ್ದ “ಕನ್ನಡ ನುಡಿ’ ವಾರಪತ್ರಿಕೆಯಲ್ಲಿ ಪ್ರಕಟಿಸಿದೆ. ಆಗಲೇ ಈ ವಿಷಯ ಕನ್ನಡಿಗರಿಗೆ ಗೊತ್ತಾಯಿತು ಎಂದು ಹೆಬ್ಟಾರರ ತಮ್ಮನ ಮಗ, ಹೆಸರಾಂತ ಸಾಹಿತಿ ಬಿ. ಎಚ್‌. ಶ್ರೀಧರ್‌ ತಮ್ಮ “ಜೀವಯಾನ’ ಕೃತಿಯಲ್ಲಿ ವಿವರಿಸಿದ್ದಾರೆ. 

ಕಾರಂತರ ಉಲ್ಲೇಖ
ಸಾಲಿಗ್ರಾಮದಲ್ಲಿ ವಾಸವಿದ್ದ ಐ. ಶಿವರಾಮಯ್ಯನವರು ತಿಳಿಸಿದಂತೆ ಡಾ| ಕೋಟ ಶಿವರಾಮ ಕಾರಂತರು ಮುದ್ದಣ- ವೆಂಕಟರಮಣ ಹೆಬ್ಟಾರ್‌ ಸಂಬಂಧವನ್ನು ಉಲ್ಲೇಖೀಸಿದ್ದಾರೆ. ಇದು ಮಂಗಳೂರು ವಿ.ವಿ. ಪ್ರಕಟಿಸಿದ “ಶಿವರಾಮ ಕಾರಂತರ ಲೇಖನಗಳು’ ಎರಡನೆಯ ಸಂಪುಟದ 364ನೆಯ ಪುಟದಲ್ಲಿದೆ. “ಮುದ್ದಣರ ರತ್ನಾವತಿ ಕಲ್ಯಾಣ ಮತ್ತು ಕುಮಾರವಿಜಯ ಯಕ್ಷಗಾನ ಕಾವ್ಯವನ್ನು ತಂದುಕೊಟ್ಟರೆ ತಿದ್ದಿಕೊಡುವೆ’ ಎಂದು ಹೆಬ್ಟಾರ್‌ ಅವರು ಶಿವರಾಮಯ್ಯನವರಲ್ಲಿ ಹೇಳಿದ್ದನ್ನು ಶಿವರಾಮಯ್ಯನವರು ತನಗೆ ತಿಳಿಸಿರುವುದಾಗಿ ಡಾ| ಕಾರಂತರು ದಾಖಲಿಸಿದ್ದಾರೆ. ಈ ಸನ್ನಿವೇಶವನ್ನು ನೋಡಿದರೆ ಹೆಬ್ಟಾರರು ಮುದ್ದಣನ ಕಾವ್ಯದಲ್ಲಿ ಕೈಯಾಡಿಸಿದ್ದಾರೆಂದು, ಇಬ್ಬರೂ ಚರ್ಚಿಸಿದ್ದಾರೆಂದು ಅರ್ಥವಾಗುತ್ತದೆ ಎಂದು ಸಾಹಿತಿ ಮಾಲಿನಿ ಮಲ್ಯ ಹೇಳುತ್ತಾರೆ.  

“ರತ್ನಾವತಿ ಕಲ್ಯಾಣ’ ಕೃತಿಯಲ್ಲಿ “ಸುಬ್ಬರಾಯರ ಪದಸಹಾಯದಿ ಬರೆದೆ’ ಎಂದೂ, “ಕುಮಾರವಿಜಯ’ದಲ್ಲಿ “ಮಳಲಿ ಸುಬ್ಬರಾಯರಿಗೆ ಅರ್ಪಿಸಿದೆನು’ ಎಂದೂ ಉಲ್ಲೇಖವಿರುವುದರಿಂದ ಮಳಲಿ ಸುಬ್ಬ ರಾವ್‌ ಅವರೂ ಮುದ್ದಣನಿಗೆ ಮಾರ್ಗದರ್ಶಕರಾಗಿದ್ದರೆಂದು ಹೇಳಬಹುದೆನ್ನುವುದರತ್ತ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಕಾಂತ ಸಿದ್ಧಾಪುರ ಬೆಟ್ಟು ಮಾಡುತ್ತಾರೆ. 

ವೆಂಕಟರಮಣ ಹೆಬ್ಟಾರರ ಪೂರ್ವಜರು ಬಾರಕೂರಿನಿಂದ ಬವಳಾಡಿಗೆ ಬಂದು “ಹೆಬ್ಟಾರರ ಅಡಿ’ ಸ್ಥಳವನ್ನು ಕೊಂಡು ವಾಸವಿದ್ದ ಕಾರಣ ಹೆಬ್ಟಾರರಾದರು. ಶಂಭು ಹೆಬ್ಟಾರ್‌ ಮತ್ತು ಮಹಾಲಕ್ಷ್ಮೀಯವರಿಗೆ 18 ಮಕ್ಕಳಿದ್ದರು. ಮಹಾಲಕ್ಷ್ಮಿಯವರೂ, 18 ಮಕ್ಕಳಲ್ಲಿ ಬದುಕುಳಿದ ಐವರು ಮಕ್ಕಳಾದ ವೆಂಕಟರಮಣ ಹೆಬ್ಟಾರ್‌, ಪಾರ್ವತಮ್ಮ, ಸರಸ್ವತಿ, ಹಿರಿಯಣ್ಣ ಹೆಬ್ಟಾರ್‌, ಸೀತಾರಾಮ ಹೆಬ್ಟಾರ್‌ ಎಲ್ಲರೂ ಕವಿತಾ ಶಕ್ತಿಯವರು. 

ಗ್ರಾಮ್ಯ ಆಶುಕವಿ ಮೂಕಜ್ಜಿ
ಸರಸ್ವತಮ್ಮ ಉಳ್ಳೂರಿನ ಉಡುಪರ ಮನೆಗೆ ಮದುವೆಯಾದರು. ಸರಸ್ವತಮ್ಮನವರು ಕುಂದಾಪುರದ ವರ್ಣನೆಯನ್ನು ವಾರ್ಧಕ ಷಟ³ದಿಯಲ್ಲಿ ರಚಿಸಿದ್ದು ಬಹಳ ಪ್ರಸಿದ್ಧ. ಸರಸ್ವತಿಯಮ್ಮನವರು ಗ್ರಾಮ್ಯ ಮತ್ತು ಅಭಿಜಾತ ಕನ್ನಡಗಳೆರಡರಲ್ಲೂ ಪರಿಣತರಾಗಿದ್ದರು, ಕಾವ್ಯ ಶಾಸ್ತ್ರ, ವಿನೋದಪರರು. ಇವರಿಂದಲೇ ಜ್ಞಾನ ಪಡೆದ ಮೂಕಾಂಬಿಕೆಯಮ್ಮ (ಮೂಕಜ್ಜಿ) ಲೋಕಾನುಭವದ ಬಲದ ಆಧಾರದಲ್ಲಿ ಹಿಂದಿನ ಮತ್ತು ಇಂದಿನ ಜೀವನ ಪದ್ಧತಿಗಳ ಉತ್ತಮ – ಅಧಮ ಮುಖಗಳೆರಡನ್ನೂ ಗ್ರಾಮ್ಯಭಾಷೆಯಲ್ಲಿ ವರ್ಣಿಸಿ ಪ್ರಸಿದ್ಧ ಆಶುಕವಿಯಾದರು. 

ನಿರಕ್ಷರರಾಗಿಯೂ ಆಶುಕವಿ
ಪಾರ್ವತಮ್ಮ ಮೊಗೇರಿ ಅಡಿಗರ ಮನೆಗೆ ಮದುವೆಯಾದರು. ನಿರಕ್ಷರರಾಗಿಯೂ ಹಾಡುಗಳನ್ನು ರಚಿಸಿ ಮೊಮ್ಮಕ್ಕಳಲ್ಲಿ ಬರೆದುಕೊಳ್ಳಲು ಹೇಳುತ್ತಿದ್ದರು. ಊರ ಹೆಮ್ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಇವರ ಮಗ ರಾಮಪ್ಪ ಅಡಿಗರು ಮೊಗೇರಿ ಪಂಚಾಂಗವನ್ನು ಆರಂಭಿಸಿದರು. ಇವರ ಮಗನೇ ಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರು.  

ಮೊಗೇರಿಗೆ ತಿಲಕಪ್ರಾಯರು
ಕವಿ ಗೋಪಾಲಕೃಷ್ಣ ಅಡಿಗರು ನವ್ಯ ಕಾವ್ಯದಲ್ಲಿ ಮೊದಲಿಗರಾಗಿ ಮೊಗೇರಿಗೆ ತಿಲಕಪ್ರಾಯರಾದರು. ಅವರು ಗತಿಸಿದ ಬಳಿಕವೂ ಅವರ ಕವನಗಳು ಹಾಡುಗಾರರ ಬಾಯಲ್ಲಿ ನಲಿಯುತ್ತಿರುವುದು ಅದರ ಮಹತ್ವವನ್ನು ಸಾರುತ್ತಿದೆ. ಮೈಸೂರಿನ ಶಾರದಾ ವಿಲಾಸ ಕಾಲೇಜು, ಸೈಂಟ್‌ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರು, ಸಾಗರದ ಲಾಲ್‌ ಬಹಾದ್ದೂರ್‌ ಶಾಸಿŒ ಕಾಲೇಜು, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದ ಅಡಿಗರು, ನವ್ಯಸಾಹಿತ್ಯದ ಜನಕ ಎಂದು ಪ್ರಸಿದ್ಧರು. “ಅನಾಥೆ’, “ಆಕಾಶದೀಪ’ ಕಾದಂಬರಿ, “ಮಣ್ಣಿನ ವಾಸನೆ’ ವಿಮಶಾìಕೃತಿ, ಭಾವತರಂಗ, ಭೂಮಿಗೀತಾ, ವರ್ಧಮಾನ, ಸಮಗ್ರ ಕಾವ್ಯ ಇತ್ಯಾದಿಗಳು ಅಡಿಗರ ಕವನಸಂಗ್ರಹಗಳು. “ಸಾಕ್ಷಿ’ ನಿಯತಕಾಲಿಕೆ ಮೂಲಕ ಪ್ರಬುದ್ಧ ಸಾಹಿತ್ಯವನ್ನು ಓದುಗರಿಗೆ ತಲುಪಿಸಿದ ಕೀರ್ತಿ ಅವರದು. 

ಉ.ಕ.ದಲ್ಲಿ ನೆಲೆ ಕಂಡ ಬಿಎಚ್‌ಶ್ರೀ ಹಿರಿಯಣ್ಣ ಹೆಬ್ಟಾರ್‌ ಪಾಂಡವವಿಜಯ, ವಿಶ್ವಾಮಿತ್ರ ಪ್ರತಾಪ, ದುಷ್ಯಂತ ಚರಿತ್ರೆ, ಭಾನುಮತಿ ಕಲ್ಯಾಣ ಗ್ರಂಥಗಳನ್ನು ರಚಿಸಿದ್ದರು. ಭಾಗವತಿಕೆ, ಮೃದಂಗವಾದನದಲ್ಲಿ ನಿಷ್ಣಾತರಾಗಿದ್ದರು. ಹಿರಿಯಣ್ಣ ಮತ್ತು ಸೀತಾರಾಮ ಹೆಬ್ಟಾರ್‌ ಇಬ್ಬರೂ ಹಾಡುಗಳನ್ನು ರಚಿಸುವಲ್ಲಿ ಎತ್ತಿದ ಕೈ. ಸೀತಾರಾಮ ಹೆಬ್ಟಾರರ ಪುತ್ರ ಪ್ರೊ| ಬಿ.ಎಚ್‌.ಶ್ರೀಧರ್‌ ಅವರು ಭಟ್ಕಳ ಇಸ್ಲಾಮಿಯ ಹೈಸ್ಕೂಲ್‌ನಲ್ಲಿ ಸಹಶಿಕ್ಷಕ, ಮುಖ್ಯಶಿಕ್ಷಕ, ಕುಮಟದ ಕೆನರಾ ಕಾಲೇಜಿನಲ್ಲಿ ಪ್ರಾಧ್ಯಾಪಕ, ಶಿರಸಿಯ ಎಂಎಂ ಕಲಾ ವಿಜ್ಞಾನ ಕಾಲೇಜಿನಲ್ಲಿ ಉಪಪ್ರಾಂಶುಪಾಲ, ಸಿದ್ದಾಪುರದ ಎಂಜೆಸಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. 19ನೆಯ ವಯಸ್ಸಿನಲ್ಲಿ ಬೆಂಗಳೂರಿನ ಸುಬೋಧ ರಾಮರಾಯರ ಕರೆ ಮೇರೆಗೆ ಚಂಪಕಮಾಲಾ ವೃತ್ತದಲ್ಲಿ ಕವನ ಸಂಕಲನವನ್ನು ರಚಿಸಿದ್ದರು. ಸುಮಾರು 50 ಪುಸ್ತಕಗಳನ್ನು ಹೊರತಂದರು. ಇದರಲ್ಲಿ ಮೇರುಕೃತಿ “ಕಾವ್ಯಸೂತ್ರ’. ಇದಕ್ಕೆ ಅನೇಕ ಪ್ರಶಸ್ತಿಗಳು ಬಂದಿವೆ. ಮಹರ್ಷಿ ಅರವಿಂದರ ಗ್ರಂಥ ಆಧರಿಸಿದ ಅನುವಾದಕೃತಿ “ವೇದರಹಸ್ಯ’ ಈಗಷ್ಟೇ ಮುದ್ರಣಗೊಳ್ಳುತ್ತಿದೆ. ವೃತ್ತಿ ಜೀವನದ ಆರಂಭದಲ್ಲಿ “ಕರ್ಮವೀರ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದರು. “ಬೆಂದರೆ ಬೇಂದ್ರೆಯಾದಾನು!’, “ಮಾಸ್ತಿ ಕನ್ನಡದ ಆಸ್ತಿ’ ಇವರ ಛಾಪು ಮೂಡಿಸಿದ ನುಡಿಗಟ್ಟುಗಳು. 

ಮೂಗೋಶ್ರೀ ವೇದಿಕೆ
ಹೀಗೆ ಒಂದೇ ಮೂಲದಿಂದ ಬಂದ ಆಶುಕವಿ, ನವ್ಯಕವಿ, ನಿತ್ಯಕವಿಗಳಾದ ಮೂಕಾಂಬಿಕೆಯಮ್ಮ, ಗೋಪಾಲಕೃಷ್ಣ ಅಡಿಗ, ಬಿ.ಎಚ್‌. ಶ್ರೀಧರ್‌ ಅವರ ಸಾಹಿತ್ಯಗಳನ್ನು ಜನರಿಗೆ ಪರಿಚಯಿಸುವುದು, ವೆಬ್‌ಸೈಟ್‌ ಮೂಲಕ ಮಾಹಿತಿ ಲಭ್ಯವಾಗುವಂತೆ ಮಾಡುವುದು ಮೂಗೋಶ್ರೀ ವೇದಿಕೆಯ ಉದ್ದೇಶ ಎಂದು ಮುಖ್ಯ ಪ್ರವರ್ತಕ ಮೊಗೇರಿ ಜನಾರ್ದನ ಅಡಿಗ ಹೇಳುತ್ತಾರೆ. ಮೂಕಾಂಬಿಕೆಯಮ್ಮ ಜನಿಸಿ 110ನೆಯ ವರ್ಷವಾದರೆ, ಅಡಿಗರು, ಶ್ರೀಧರರ ಜನ್ಮಶತಾಬ್ದ ನಡೆಯುತ್ತಿದೆ.

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.