ವಿಶ್ವ ಪುರುಷರ ದಿನ‌: ಪ್ರಬಲನಾಗಿ ಕಾಣಿಸಿಕೊಳ್ಳುತ್ತಲೇ ದುರ್ಬಲನಾಗುತ್ತಿದ್ದಾನೆ ಪುರುಷ


Team Udayavani, Nov 19, 2020, 6:23 AM IST

ವಿಶ್ವ ಪುರುಷರ ದಿನ‌: ಪ್ರಬಲನಾಗಿ ಕಾಣಿಸಿಕೊಳ್ಳುತ್ತಲೇ ದುರ್ಬಲನಾಗುತ್ತಿದ್ದಾನೆ ಪುರುಷ

ಸಾಂದರ್ಭಿಕ ಚಿತ್ರ

ಸಮಾಜ ಹೆಣ್ಣನ್ನು ಸ್ವಾವಲಂಬಿ ಮಾಡುತ್ತಿದೆ, ಅದಕ್ಕೆ ಬೇಕಿರುವ ಪೂರಕ ಮನಃಸ್ಥಿತಿ ಪುರುಷರಲ್ಲಿ ಇನ್ನೂ ಕಂಡುಬಂದಿಲ್ಲ. ಇದು ಪುರುಷರನ್ನು ಮತ್ತಷ್ಟು ಖನ್ನರನ್ನಾಗಿಸಿದೆ. ಮಹಿಳೆಯರಿಗೆ ಬೇಕಿರುವ ಎಲ್ಲ ನೆರವನ್ನು ಕೊಡಲು ಮುಂದಾಗುವ ಪುರುಷರೇ ಮತ್ತೂಂದು ಪುರುಷನ ಸಂಕಟಗಳಿಗೆ “ಅಳುಮುಂಜಿ’ಯ ಪಟ್ಟ ಕಟ್ಟುತ್ತಾರೆ.

ಪ್ರಪಂಚದಲ್ಲಿ ಸದಾ ಚರ್ಚೆಗೀಡಾಗುವ ಜೀವಿಗಳಲ್ಲಿ ಗಂಡೂ ಒಂದು. ಹೆಣ್ಣನ್ನು ಸಣ್ಣ ವಯಸ್ಸಿನಿಂದಲೇ ತಿದ್ದುವ ಸಮಾಜಕ್ಕೆ ಪುರುಷ ಮಾತ್ರ ಸದಾ ಸಿದ್ಧ ವಸ್ತುವಾಗಿಯೇ ಕಾಣಬೇಕು. ಸಮಾಜ ಹೆಣ್ಣನ್ನು ನಿಯಂತ್ರಿಸುವ ಭರದಲ್ಲಿ ಗಂಡು ಎನ್ನುವ ಜೀವಿ ಯನ್ನು ಹಾಗೇ ಬಿಟ್ಟುಬಿಟ್ಟಿತು. ತಾಯಿಯಿಂದ ಬೇರ್ಪಟ್ಟ ಗಿಣಿಗಳು ಮಾಂಸದ ಅಂಗಡಿಯಲ್ಲಿ ಮತ್ತು ಸಾಧುವಿನ ಆಶ್ರಮ ಸೇರಿಕೊಂಡು “ಕೊಲ್ಲು’ ಮತ್ತು “ಶರಣು’ ಎನ್ನುವ ಮಾತುಗಳನ್ನು ಕಲಿತಂತೆ ಪುರುಷ ತಾನೆಲ್ಲಿ ಸೇರಿಕೊಂಡನೋ, ಎಲ್ಲಿ ಬದುಕಿದ್ದನೋ ಅಲ್ಲಿ ಕಲಿಯುತ್ತಿ¨ªಾನೆ. ಮಿತಿ ಎಂಬುದೇ ಇಲ್ಲದೆ ಕಲಿತ¨ªೆಲ್ಲ ತನ್ನ ಅರ್ಹತೆ ಎಂದುಕೊಳ್ಳಲು ಶುರುಮಾಡಿದ. ಮರದ ಕೊಂಬೆಯೇ ಕೊಡಲಿಗೆ ಕಾವಾಗುವಂತೆ ಪುರುಷ ಬದಲಾದ. ಕಾರಣಗಳ ಬಗ್ಗೆ ಒಂದಷ್ಟು ಚರ್ಚೆಗೆ ಮೇಲ್ಪಂಕ್ತಿ ಹಾಕಬೇಕಿದೆ.

ವಿಶ್ವದಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಮಹಿಳೆಯ ರಿಗಿಂತ ಪುರುಷರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಸಹಜ ಸಾವಿನಲ್ಲಿ ಪುರುಷ ಮಹಿಳೆಗಿಂತ 5 ವರ್ಷ ಮೊದಲೇ ಸಾವನ್ನಪ್ಪುತ್ತಿ¨ªಾನೆ. ಮಹಿಳೆಯರಿಗಿಂತ ಶೇ.33ರಷ್ಟು ಪುರುಷರೇ ಹೆಚ್ಚು ಹಲ್ಲೆಗಳೊಳ ಗಾಗುತ್ತಿದ್ದಾರೆ. ಕ್ಯಾನ್ಸರ್‌ ಕಾರಣದ ಸಾವುಗಳಲ್ಲಿ ಪುರುಷನೇ ಮೊದಲು, ಹಾರ್ಟ್‌ಅಟ್ಯಾಕ್‌ ಸಂಖ್ಯೆ ಯಲ್ಲಿ ಪುರುಷನದ್ದೇ ಅಧಿಕ ಸಾವು. ಮಕ್ಕಳ ಕಳ್ಳಸಾ ಗಾಣಿಕೆಗೆ ತುತ್ತಾಗುವವರಲ್ಲಿ ಗಂಡುಮಕ್ಕಳ ಪ್ರಮಾಣವೇ ಹೆಚ್ಚು. ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿರುವವರೂ ಪುರುಷರೇ.

ಪುರುಷ ತಾನು ಪ್ರಬಲನಾಗಿ ಕಾಣಿಸಿಕೊಳ್ಳುತ್ತಲೇ ದುರ್ಬಲನಾಗುತ್ತಿದ್ದಾನೆ. 21ನೇ ಶತಮಾನದವರೆಗೂ ಪುರುಷನ ಬಗ್ಗೆ ಅಷ್ಟಾಗಿ ಯಾರೂ ಗಮನಕೊಟ್ಟಿ ರಲಿಲ್ಲ. ಆದರೆ ಇತ್ತೀಚೆಗೆ ಪುರುಷರ ಬಗ್ಗೆ ಚರ್ಚೆಗಳು ಪುರುಷರಿಂದಲೇ ಆರಂಭವಾಗಿವೆ. ಹೆಚ್ಚುತ್ತಿರುವ ಅತ್ಯಾಚಾರಗಳು, ಮಹಿಳೆಯರ ಮೇಲಿನ ದೌರ್ಜ ನ್ಯಗಳು, ಕುಟುಂಬ ಕಲಹದಂಥ ಅನೇಕ ಪುರುಷ ಕಾರಣ ಸಮಸ್ಯೆಗಳು ಕ್ಷಣಮಾತ್ರದಲ್ಲಿ ಜಗಜ್ಜಾಹೀ ರಾಗಿ ಪುರುಷನ ಬಗ್ಗೆ ಅಸಹ್ಯ ಹುಟ್ಟುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಪುರುಷ ದೌರ್ಜನ್ಯ ಕಡಿಮೆ ಮಾಡಲು “ಶಿಕ್ಷೆ’ಯೊಂದೇ ಮಾನದಂಡ ಆಗುತ್ತಿದೆ. ಆದರೆ ಗಂಡು ಹುಟ್ಟಿನಿಂದ ಬೆಳೆಯು ವರೆಗೂ ಆತನಿಗೆ ನಾವು ಕೊಡುತ್ತಾ ಬಂದ ಶಿಕ್ಷಣವೇನು ಎನ್ನುವ ಬಗ್ಗೆ ಚರ್ಚೆಯಾಗಿಲ್ಲ. ಏಕೆ?

ತಾಯಿಯಂಥ ಗೆಳತಿ ಮಗನಿಗಿಲ್ಲ: ಪ್ರತೀ ಹೆಣ್ಣಿಗೆ ತಾಯಿ ಮೊದಲ ಸ್ನೇಹಿತೆ. ತಂದೆಯ ಮೇಲೆ ಅದೆಷ್ಟೇ ಪ್ರೇಮವಿದ್ದರೂ ಮಗಳು ತನ್ನ ಸೂಕ್ಷ್ಮ ವಿಚಾರಗಳನ್ನು ಹೇಳಿಕೊಳ್ಳಲಿಚ್ಛಿಸುವುದು ತಾಯಿಯ ಬಳಿಯೇ. ಇದೇ ರೀತಿ ಗಂಡು ಮಗು ತಂದೆಯೊಂದಿಗೆ ಅಥವಾ ತಾಯಿಯೊಂದಿಗೆ ತನ್ನಲ್ಲಾಗುವ ಸೂಕ್ಷ್ಮ ಮಾನಸಿಕ- ದೈಹಿಕ ಬದಲಾವಣೆ ಬಗ್ಗೆ ಹೇಳಿಕೊಳ್ಳುತ್ತಿದೆಯೇ? ಇಲ್ಲ. ಆತ ಕಲಿಯುವುದು ತನ್ನ ವಯಸ್ಸಿನ ಇನ್ನೊಬ್ಬ ನಿಂದ. ಶಾಲೆಯಲ್ಲಿ ಬಾಲಕಿಯರಿಗೆ ಶಿಕ್ಷಕಿಯರು ಮಾಡುವ ಪ್ರತ್ಯೇಕ ತರಗತಿಗಳು ಅದೇ ವಯಸ್ಸಿಗೆ ಮೀಸೆ ಮೂಡುತ್ತಿರುವ ಬಾಲಕನಿಗೆ ಏಕಿಲ್ಲ? ಆತ ಎಲ್ಲವನ್ನೂ ತಿಳಿದಿದ್ದಾನೆ ಎನ್ನುವ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯವಾಯಿತು?

ಅಮ್ಮನೊಟ್ಟಿಗೆ ಮಗಳು ಅಡುಗೆ ಕಲಿತಷ್ಟೇ ವೇಗವಾಗಿ ಅಪ್ಪನೊಟ್ಟಿಗೆ ಮಗ ಸಮಾಜದಲ್ಲಿ ಹೇಗಿರಬೇಕು ಎಂದು ಏಕೆ ಕಲಿಯಲಿಲ್ಲ? ಗಂಡನ್ನು ಯಾವ ರೀತಿ ಬೆಳೆಸಬೇಕು, ಯಾವ ರೀತಿ ಜೀವನ ಮಾಡಬೇಕು ಎಂಬುದರ ವಿಚಾರದಲ್ಲಿ 2 ಸಾವಿರ ವರ್ಷಗಳ ಕಾಲ ಯಾವುದೇ ಬದಲಾವಣೆ ಇರಲಿಲ್ಲ. ಅದೆಲ್ಲ ಒಂದೇ ತೆರನಾಗಿತ್ತು. ಸಮಾಜದ ಹೊರಗೆ ಸಿಕ್ಕ ಸಿಕ್ಕದ್ದನ್ನೆಲ್ಲ ಕಲಿಯುವ ಪುರುಷ ಮಹಿಳೆಯಷ್ಟು ಸೂಕ್ಷ್ಮತೆ ಬೆಳಸಿಕೊಳ್ಳಲೇ ಇಲ್ಲ. ದುರಂತ ಅಂದರೆ ಸಮಾಜ ಇದನ್ನೇ ಗಂಡಸಿನ ಅರ್ಹತೆಯನ್ನಾಗಿಸಿತು.

ಆದರೆ 21 ಶತಮಾನ ಮೊದಲಿನಂತಿಲ್ಲ. ಗಂಡು ಮಕ್ಕಳು ಎಂದರೆ ಹೊರಗಿರುತ್ತಾರೆ. ಹೆಣ್ಣು ಒಳಗಿರು ತ್ತಾಳೆ ಎಂಬುದು ಸುಳ್ಳಾಗಿದೆ. ಸಮಾಜದಲ್ಲಿ ಹೆಣ್ಣು ಎಲ್ಲಾ ಸ್ತರದಲ್ಲಿಯೂ ಗಂಡಸಿಗೆ ಸಮಾನವಾಗಿ ಬೆಳೆಯುತ್ತಿದ್ದಾಳೆ. ಸಮಾಜದ ವೇಗದ ಬದಲಾವಣೆಗೆ ಗಂಡಸಿನ ಮನೋಭಾವ ಬದಲಾವಣೆ ಆಗುತ್ತಿಲ್ಲ.

ಔದ್ಯೋಗಿಕವಾಗಿ ಹೆಣ್ಣು ಗಂಡಿನಷ್ಟೇ ವೇಗವಾಗಿ ಕೆಲಸ ನಿರ್ವಹಿಸುವ ಚಾಕಚಕ್ಯತೆ ಹೊಂದಿದ್ದಾಳೆ. ಹೆಣ್ಣು ತನಗಿರುವ ನಯ-ವಿನಯ, ಶ್ರದ್ಧೆಯೊಟ್ಟಿಗೆ ಔದ್ಯೋಗಿಕವಾಗಿ ಬೇಕಿರುವ ಹೆಚ್ಚುವರಿ ದುಡಿಮೆ, ಸಮಯ ಪ್ರಜ್ಞೆ, ಕ್ರಿಯಾತ್ಮಕ ಕೆಲಸಗಳಲ್ಲಿ ತಾನು ಹೆಚ್ಚು ಎಂಬುದನ್ನು ಸಾಬೀತು ಮಾಡುತ್ತಿ¨ªಾಳೆ. ಔದ್ಯೋಗಿಕ ವಾಗಿ ಮಹಿಳೆ ಹೊರೆ ಇಳಿಸುವ (ಅನಾರೋಗ್ಯ, ಗರ್ಭಿಣಿಯಾದಾಗ) ಸಮಯದಲ್ಲಿ ಪುರುಷ ಹೊರೆಯಡಿ ಸಿಲುಕುತ್ತಿದ್ದಾನೆ. ಈ ಹೆಚ್ಚಿನ ಹೊರೆಯ ಬಗ್ಗೆ ಮಾತನಾಡುವವರು ಯಾರು?

ಔದ್ಯೋಗಿಕ ಸಮಾನತೆಯಲ್ಲಿ ಹೆಣ್ಣು ಈ ಹಿಂದೆ ಹೊತ್ತುಕೊಂಡು ಬಂದಿದ್ದ ಮನೆ ಒಳಗಿನ ಜವಾಬ್ದಾರಿಗಳನ್ನು ನಿಭಾಯಿಸಲು ಪರ್ಯಾಯ ಮನಃಸ್ಥಿತಿ ಪುರುಷನಲ್ಲಿ ಆಗಿಲ್ಲ. ಮನೆ ಒಳಗೂ ಹೊರಗೂ ಇಬ್ಬರೂ ದುಡಿಯುತ್ತಾರೆ ಮನೆ ಒಳಗೆ ಹೆಣ್ಣು ಮತ್ತಷ್ಟು ದುಡಿಯುತ್ತಾಳೆ. ಆದರೆ ಅದು ಪುರುಷನ ಮುಂದಿನ ಗುರಿಯನ್ನು ಗೋಜಲನ್ನಾಗಿಸಿದೆ.

ಪುರುಷ ಮನೆ ಒಳಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಶಕ್ಯನಾಗಿಲ್ಲ. ಸಮಾಜ ಹೆಣ್ಣನ್ನು ಸ್ವಾವಲಂಬಿ ಮಾಡುತ್ತಿದೆ, ಅದಕ್ಕೆ ಬೇಕಿರುವ ಪೂರಕ ಮನಃಸ್ಥಿತಿ ಪುರುಷರಲ್ಲಿ ಇನ್ನೂ ಕಂಡುಬಂದಿಲ್ಲ. ಇದು ಪುರುಷರನ್ನು ಮತ್ತಷ್ಟು ಖನ್ನರನ್ನಾಗಿಸಿದೆ. ಮಹಿಳೆಯರಿಗೆ ಬೇಕಿರುವ ಎಲ್ಲ ನೆರವನ್ನು ಕೊಡಲು ಮುಂದಾಗುವ ಪುರುಷರೇ ಮತ್ತೂಂದು ಪುರುಷನ ಸಂಕಟಗಳಿಗೆ “ಅಳುಮುಂಜಿ’ಯ ಪಟ್ಟ ಕಟ್ಟುತ್ತಾರೆ.

ಗಂಡುಮಕ್ಕಳು ಕುತೂಹಲದಿಂದಷ್ಟೇ ಅಲ್ಲದೇ ಖನ್ನತೆ ಒಳಗಾಗಿಯೂ ಡ್ರಗ್‌ ದಾಸರಾಗುತ್ತಿದ್ದಾರೆ. ಖನ್ನರಾ ಗಲು ಈ ಸಮಾಜವೇ ಆಸ್ಪದ ಕೊಟ್ಟಂತಿದೆ. ಆತನನ್ನು ತುಂಬಾ ಪ್ರಬಲ ಮನಃಸ್ಥಿತಿಯವನು ಎಂದು ತೋರಿಸಿಕೊಂಡು ಆತನೊಟ್ಟಿಗೆ ಭಾವನಾತ್ಮಕವಾಗಿ ಮಾತಾಡದಂತೆ ಮಾಡಿರುವ ಸಮಾಜ ಆತ ದುಃಖ ತೋಡಿಕೊಂಡರೆ ಅಳುಬುರಕನ ಪಟ್ಟಕಟ್ಟುತ್ತದೆ.

ಅತ್ಯಾಚಾರದಂಥ ಘನಘೋರ ಕೃತ್ಯಗಳಲ್ಲಿ ಗಂಡಸು ತನ್ನೆಲ್ಲ ಮಾನವೀಯತೆಯನ್ನು ಮರೆತು ಮೃಗವಾಗುತ್ತಾನೆ. ನಾಲ್ವರು ಪುರುಷರು ಒಟ್ಟಿಗೆ ಸೇರಿದಾಗ ಅವರಲ್ಲಾಗುವ ಮೃಗೀಯ ಮಾನಸಿಕ ಬದಲಾವಣೆಯ ಬಗ್ಗೆ ಅಧ್ಯಯನಗಳು ಆಗುತ್ತಿಲ್ಲ. ಆತನನ್ನು ಗಲ್ಲಿಗೇರಿಸುವ ಬಗ್ಗೆ ಮಾತನಾಡುತ್ತಲೇ ನಾವು ಆತನ ಆ ಬದಲಾವಣೆಯ ಕುರಿತು ವೈದ್ಯಕೀ ಯ, ಸಾಮಾಜಿಕ ಅಧ್ಯಯನಗಳನ್ನು ಮಾಡದಿ ದ್ದರೆ ಬಹುಶಃ ಇಂತಹ ಪ್ರಕರಣಗಳನ್ನು ಬೇರಿನಿಂದಲೇ ಚಿವುಟಲು ಸಾಧ್ಯವಾಗುವುದಿಲ್ಲ. ಪುರುಷನ ಆಳದಲ್ಲಿ ಮೃಗೀಯ ಬೀಜ ಬಿದ್ದಿದ್ದು ಎಲ್ಲಿಂದ ಎನ್ನುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ಪುರುಷ ಪ್ರಧಾನ ಸಮಾಜ ಎಂದು ಮಾತನಾಡುತ್ತಲೇ ಪುರುಷ ತನ್ನ ಮೇಲೆ ತಾನೇ ಶೋಷಣೆ ಮಾಡಿಕೊಳ್ಳುತ್ತಿದ್ದಾನೆ. ಚಿಕ್ಕವಯಸ್ಸಿನಿಂದಲೂ ಆತ ನಿಗೆ ನೀಡಬೇಕಿರುವ ಜೀವನ ಶಿಕ್ಷಣ ಸಿಗುತ್ತಿಲ್ಲ. ಗಂಡುಮಗುವನ್ನು ತಿದ್ದುವ, ಸಂತೈಸುವ, ಸರಿದಾರಿ ಯಲ್ಲಿ ನಡೆಸುವ ಜವಾಬ್ದಾರಿ ಮನೆಯಿಂದಲೇ ಶುರುವಾಗಬೇಕು.

ಡಾ| ಗಿರೀಶ್‌ ಚಂದ್ರ, ಮಾನಸಿಕ ರೋಗ ತಜ್ಞರು

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maha Kumbh Mela 2025: ಛತ್ತೀಸ್‌ ಗಢ ಟು ಪ್ರಯಾಗ್‌ ರಾಜ್;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

Maha Kumbh: ಛತ್ತೀಸ್‌ ಗಢ ಟು ಪ್ರಯಾಗ್‌;‌ ಸ್ಕೇಟಿಂಗ್‌ ಮೂಲಕ ಕುಂಭಮೇಳಕ್ಕೆ ಆಗಮಿಸಿದ ಯುವಕ

mahatma-gandhi

Belagavi Congress Session: “ತ್ರಿಸೂತ್ರ’ವೇ ನವಭಾರತದ ಮಂತ್ರ!

Work-Time

Work Time Issue: ವಾರಕ್ಕೆ 90 ಗಂಟೆ ಕೆಲಸ ಸಲೀಸಾ?

Jalachara-4

Winter Season: ಚಳಿಗಾಲದಲ್ಲಿ ಕಡಲಿಗೆ ಇಳಿಯುವ ಮುನ್ನ…

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.