ಲೀಪ್‌ ಇಯರ್‌ಗಿದೆ ವಿಜ್ಞಾನ ಲೋಕದ ನಂಟು


Team Udayavani, Feb 29, 2020, 6:00 AM IST

februvery-29

ನಾಲ್ಕು ವರ್ಷಗಳಿಗೊಮ್ಮೆ 29 ದಿನಗಳು ಬರುವ ಫೆಬ್ರವರಿ ತಿಂಗಳು ಇದಾಗಿದ್ದು, 2020ನೇ ಇಸವಿ ಅಧಿಕ ವರ್ಷ ಅಥವಾ “ಲೀಪ್‌ ಇಯರ್‌’ಗೆ ಸಾಕ್ಷಿಯಾಗುತ್ತಿದೆ. ಗ್ರೆಗೊರಿಯನ್‌ ಅಥವಾ ಇಂಗ್ಲಿಷ್‌ ಕ್ಯಾಲೆಂಡರ್‌ನಲ್ಲಿ ದಿನ ಮತ್ತು ವರ್ಷಗಳ ಲೆಕ್ಕಾಚಾರ ಸರಿದೂಗಿಸಲು ಈ ಅಧಿಕ ವರ್ಷವನ್ನು ಗುರುತಿಸಲಾಗುತ್ತದೆ. ಅಧಿಕ ವರ್ಷ ಎಂದರೇನು? ಅದರ ಮಹತ್ವ ಏನು? ಫೆಬ್ರವರಿಯಲ್ಲಿ ತಿಂಗಳಲ್ಲೇಕೆ ಹೆಚ್ಚುವರಿಯಾಗಿ ಒಂದು ದಿನ ಸೇರಿಸುತ್ತಾರೆ ಇತ್ಯಾದಿಗಳ ಕುರಿತ ಮಾಹಿತಿ ಇಲ್ಲಿವೆ.

ಏನಿದು ಅಧಿಕ ವರ್ಷ?
ಜಗತ್ತಿನಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವುದು ಗ್ರೆಗೊರಿಯನ್‌ ಕ್ಯಾಲೆಂಡರ್‌. ಸೌರ ವರ್ಷದ ಲೆಕ್ಕಾಚಾರವನ್ನು ಸರಿಪಡಿಸಲು ಈ ಅಧಿಕ ವರ್ಷವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ವರ್ಷಕ್ಕೆ 365 ದಿನಗಳಿದ್ದರೆ, ಅಧಿಕ ವರ್ಷದ ಸಂದರ್ಭ ಒಂದು ದಿನವನ್ನು ಹೆಚ್ಚಿಗೆ ಅಂದರೆ, 366 ದಿನಗಳನ್ನಾಗಿ ಲೆಕ್ಕ ಹಿಡಿಯುವ ಮೂಲಕ ಲೆಕ್ಕಾಚಾರವನ್ನು ಸರಿದೂಗಿಸಲಾಗುತ್ತದೆ.

ಅಧಿಕ ವರ್ಷ ಗುರುತಿಸುವುದು ಹೇಗೆ?
ಅಧಿಕ ವರ್ಷ ಪರಿಗಣನೆಯಲ್ಲೂ ಒಂದು ಲೆಕ್ಕಾಚಾರವಿದೆ. ಇದರ ಕರಾರುವಾಕ್‌ ಲೆಕ್ಕಾಚಾರಕ್ಕಾಗಿ 4 ವರ್ಷಕ್ಕೊಮ್ಮೆ ಅಧಿಕ ವರ್ಷ ಎಂಬುದರ ಬದಲಿಗೆ ಪ್ರತಿ 400 ವರ್ಷಗಳಲ್ಲಿ 97 ಅಧಿಕ ದಿನವಿರುವ ವರ್ಷಗಳನ್ನು ಗುರುತಿಸಲಾಗಿದೆ. ಅಂದರೆ ಒಂದು ಹೆಚ್ಚಿನ ದಿನ ಹೊಂದಿದ ವರ್ಷ 4ರಿಂದ ಭಾಗವಾಗಬೇಕು. 100ರಿಂದ ಭಾಗಿಸಲ್ಪಡುವ ವರ್ಷಗಳೆಲ್ಲವೂ 400ರಿಂದಲೂ ಭಾಗಿಸಲ್ಪಟ್ಟಾಗ ಮಾತ್ರ ಅಧಿಕ ವರ್ಷಗಳಾಗುತ್ತವೆ. 1600, 2000 ಮತ್ತು 2400 ಅಧಿಕ ವರ್ಷಗಳು ಎಂದು ಗುರುತಿಸಲ್ಪಟ್ಟರೆ 1700, 1800, 1900 ಹಾಗೂ 2100 ವರ್ಷಗಳು ಅಧಿಕ ವರ್ಷಗಳಾಗುವುದಿಲ್ಲ.

ಭಾರತೀಯ ಕಾಲಗಣನೆಯಲ್ಲೂ
ಭಾರತೀಯ ದಿನಗಣನೆ ಅಥವಾ ಪಂಚಾಂಗ ಪದ್ಧತಿಯಲ್ಲೂ ಸೂರ್ಯನ ಸುತ್ತ ಭೂಮಿ ತಿರುಗುವ ಗತಿಯಿಂದ ಆಗುವ ವ್ಯತ್ಯಯವನ್ನು ಗಣನೆಗೆ ತೆಗೆದುಕೊಳ್ಳುವ ಕ್ರಮ ಇದೆ. ಆದರೆ ಇದನ್ನು ನಾಲ್ಕು ವರ್ಷಗಳಿಗೊಮ್ಮೆ ವಾರ್ಷಿಕ ಒಂದು ದಿನವಾಗಿ ಮಾಡುವುದಿಲ್ಲ. ಬದಲಿಗೆ ಪ್ರತೀ ವರ್ಷ “ಅಧಿಕ ಮಾಸ’ ಅಥವಾ “ಪುರುಷೋತ್ತಮ’ ಮಾಸವಾಗಿ ಪರಿಗಣಿಸಲಾಗುತ್ತದೆ.

ಈ ಲೆಕ್ಕಾಚಾರವಿಲ್ಲದಿದ್ದರೆ ಏನಾಗುತ್ತದೆ?
ಋತುಗಳು ಮತ್ತು ಖಗೋಳ ಘಟನೆಗಳು ಪ್ರತಿ ವರ್ಷ ಇಂಥದ್ದೇ ದಿನ ಎಂದು ಪುನರಾವರ್ತನೆಯಾಗುವುದಿಲ್ಲ. ಅವುಗಳು ಬದಲಾಗುತ್ತಿರುತ್ತವೆ. ನಿರ್ದಿಷ್ಟ ದಿನಗಳು ಇರುವ ಕ್ಯಾಲೆಂಡರ್‌ ಸಮ ಪ್ರಮಾಣದ ಲೆಕ್ಕ ತೋರಿಸುವುದರಲ್ಲಿ ತಪ್ಪುತ್ತದೆ. ಈ ವ್ಯತ್ಯಯವನ್ನು ಸರಿದೂಗಿಸಲು ಗ್ರೆಗೊರಿಯನ್‌ ಕ್ಯಾಲೆಂಡರ್‌ನಲ್ಲಿ ನಿರ್ದಿಷ್ಟವಾಗಿ ಒಂದು ದಿನವನ್ನು ಸೇರಿಸಲಾಗುತ್ತದೆ. ಇದರಿಂದ ಲೆಕ್ಕಾಚಾರ ಸರಿಪಡಿಸಬಹುದು. ಗ್ರೆಗೊರಿಯನ್‌ ಕ್ಯಾಲೆಂಡರ್‌ನಲ್ಲಿ ಒಂದು ವೇಳೆ ಹೆಚ್ಚುವರಿ ದಿನವನ್ನು ನಾಲ್ಕು ವರ್ಷಗಳಿಗೊಮ್ಮೆ ಸೇರಿಸದೇ ಇದ್ದಲ್ಲಿ ಸುಮಾರು 6 ಗಂಟೆಗಳನ್ನು ನಾವು ಪ್ರತಿ ವರ್ಷ ಕಳೆದುಕೊಳ್ಳುತ್ತೇವೆ. ಒಂದು ಶತಮಾನದಲ್ಲಿ 24 ದಿನಗಳು ಕಡಿಮೆಯಾದಂತಾಗುತ್ತದೆ.

ಲೆಕ್ಕ ಯಾಕೆ ಬೇಕು?
ಭೂಮಿಯು ಸೂರ್ಯನ ಸುತ್ತ ಸುತ್ತಲು ತೆಗೆದುಕೊಳ್ಳುವ ಅವಧಿಯನ್ನು ಸೌರ ವರ್ಷ ಎನ್ನುತ್ತಾರೆ. ಗ್ರೆಗೊರಿಯನ್‌ ಕ್ಯಾಲೆಂಡರ್‌ ಪದ್ಧತಿ ಯಲ್ಲಿ ಒಂದು ವರ್ಷಕ್ಕೆ 365 ದಿನ. ಆದರೆ ಭೂಮಿಯು ಸೂರ್ಯನ ಸುತ್ತ ಸುತ್ತಲು ನಿಜಕ್ಕೂ ತೆಗೆದುಕೊಳ್ಳುವ ಅವಧಿ 365 ದಿನ, 5 ಗಂಟೆ, 48 ನಿಮಿಷ ಮತ್ತು 46 ಸೆಕೆಂಡ್‌ಗಳು. ಇದನ್ನು ಟ್ರೋಫಿಕಲ್‌ ಇಯರ್‌ ಅಥವಾ ಉಷ್ಣವಲಯದ ವರ್ಷ ಎಂದೂ ವೈಜ್ಞಾನಿಕವಾಗಿ ಹೇಳುತ್ತಾರೆ. ಗ್ರೆಗೊರಿಯನ್‌ ಕ್ಯಾಲೆಂಡರ್‌ನಲ್ಲಿ 365 ದಿನಗಳು ಮಾತ್ರವೇ ಇರುವುದರಿಂದ ಪ್ರತಿ ವರ್ಷವೂ ಹೆಚ್ಚುವರಿಯಾಗಿ 5 ಗಂಟೆ, 48 ನಿಮಿಷ, 46 ಸೆಕೆಂಡ್‌ಗಳು ಉಳಿಯುತ್ತವೆ. ಇದನ್ನು ಒಟ್ಟಾಗಿಸಿ, ಒಂದು ದಿನವಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ ಹೆಚ್ಚುವರಿ ಒಂದು ದಿನವನ್ನು ಸೇರಿಸಲಾಗುತ್ತದೆ. 1582ರಲ್ಲಿ ಈ ಮಾದರಿಯ ಲೆಕ್ಕಾಚಾರವನ್ನು ಜಾರಿಗೆ ತರಲಾಯಿತು.

ಈ ಕ್ರಮ ತಂದಿದ್ದು ಯಾರು?
ರೋಮ್‌ ಸಾಮ್ರಾಜ್ಯದ ಚಕ್ರವರ್ತಿ ಜ್ಯೂಲಿಯಸ್‌ ಸೀಸರ್‌ ಸುಮಾರು 2,000 ವರ್ಷಗಳ ಹಿಂದೆ ಇದನ್ನು ಜಾರಿಗೆ ತಂದ. ಆದರೆ ಜ್ಯೂಲಿಯನ್‌ ಕ್ಯಾಲೆಂಡರ್‌ನಲ್ಲಿ 4ರಿಂದ ಭಾಗಿಸಬಹುದಾದ ಒಂದು ನಿಯಮಾವಳಿ ಪಾಲನೆ ಮಾಡಲಾಗುತ್ತಿತ್ತು. ಆದರೆ ಇದರಿಂದ ನಿರ್ದಿಷ್ಟವಾದ ಲೆಕ್ಕ ದೊರೆಯದೆ ಅಧಿಕ ವರ್ಷವನ್ನು ಗುರುತಿಸುವಿಕೆ ಕಷ್ಟ ಸಾಧ್ಯವಾಗುತ್ತಿತ್ತು. ಈ ನಿಟ್ಟಿನಲ್ಲಿ 1500ರ ಸುಮಾರಿಗೆ ಗ್ರೆಗೊರಿಯನ್‌ ಕ್ಯಾಲೆಂಡರ್‌ನ್ನು ಸಿದ್ಧಪಡಿಸುವ ಮೂಲಕ ಈ ಲೆಕ್ಕಾಚಾರ ಸರಿಪಡಿಸಲಾಯಿತು. ಯೇಸು ಹುಟ್ಟಿದ ವರ್ಷದಿಂದ ಗ್ರೆಗೋರಿಯನ್‌ ಕ್ಯಾಲೆಂಡರ್‌ ಜಾರಿಗೆ ಬಂದಿದೆ ಎಂಬ ಉಲ್ಲೇಖವೂ ಇತಿಹಾಸದಲ್ಲಿ ಇದೆ.

ಪ್ರತಿ ವರ್ಷದಲ್ಲಿ 365.242 ದಿನಗಳಿರುತ್ತವೆ. ಆದರೆ ಇದನ್ನು ಪೂರ್ಣ ಪ್ರಮಾಣವಾಗಿ ಮಾಡಿ 365.25 ಎಂದು ಪರಿಗಣಿಸಿ ಅಧಿಕ ವರ್ಷ ಎಂದು ನಿರ್ಧಾರ ಮಾಡಲಾಗುತ್ತದೆ. ಆದರೆ ವಾಸ್ತವ ಮಾಪನದ ಪ್ರಕಾರ ಈ ಬದಲಾವಣೆಯಿಂದ ಭೂಮಿಯ ಪಯಣದ 11 ನಿಮಿಷ ವ್ಯತ್ಯಾಸವನ್ನು ನಾವು ಕೈಬಿಟ್ಟದಂತಾಗುತ್ತದೆ. ಅದೇ ಕಾರಣಕ್ಕೆ ಪ್ರತಿ 400 ವರ್ಷಗಳಲ್ಲಿ ಮೂರು ಸಲ ಅಧಿಕ ವರ್ಷವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಹೀಗಾಗಿ 100ರಿಂದ ಭಾಗವಾಗುವ ವರ್ಷಗಳು 400 ವರ್ಷದಿಂದಲೂ ಭಾಗವಾದರೆ ಅದೂ ಅಧಿಕವರ್ಷ. ಉಳಿದಂತೆ 100ರಿಂದ ಭಾಗವಾಗುವವು ಅಧಿಕ ವರ್ಷಗಳು ಅಲ್ಲ.

ಟಾಪ್ ನ್ಯೂಸ್

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.