ಚಂದ್ರನಲ್ಲಿದೆ 1 ಲಕ್ಷ ವರ್ಷಕ್ಕೆ ಬೇಕಾದ ಆಮ್ಲಜನಕ?

Team Udayavani, Nov 13, 2021, 6:50 AM IST

ಚಂದ್ರನಲ್ಲಿದೆ 1 ಲಕ್ಷ ವರ್ಷಕ್ಕೆ ಬೇಕಾದ ಆಮ್ಲಜನಕ?

ಲಿಸ್ಮೋರ್‌ (ಆಸ್ಟ್ರೇಲಿಯಾ): ಆಧುನಿಕ ಖಗೋಳ ವಿಜ್ಞಾನವು, ಭೂಮಿಯ ಸುತ್ತಲೂ ಸುತ್ತುವ ಚಂದ್ರನ ಬಗ್ಗೆ ಎರಡು ಕುತೂಹಲಕರ ವಿಚಾರವನ್ನು ಪತ್ತೆ ಹಚ್ಚಿದೆ. ಮೊದಲನೆಯದಾಗಿ ಚಂದ್ರನಲ್ಲಿರುವ ಆಮ್ಲಜನಕ, ಅಲ್ಲಿರುವ ಬಂಡೆಗಳು ಹಾಗೂ ಮಣ್ಣಿನ ಕಣಗಳಲ್ಲಿ ಘನರೂಪದಲ್ಲಿ ಅಡಕವಾಗಿದೆ ಎಂಬುದು ಹಾಗೂ ಕೋಟ್ಯಂತರ ವರ್ಷಗಳ ಹಿಂದೆ ಚಂದ್ರನಿಂದ ಸಿಡಿದಿದ್ದ ಚೂರೊಂದು ಈಗಲೂ ಸೂರ್ಯನ ಸುತ್ತಲೂ ಸುತ್ತುತ್ತಿದೆ.  ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ವಿಜ್ಞಾನಿಗಳು ಮತ್ತಷ್ಟು ಸಂಶೋಧನೆಗಳತ್ತ ಮುಂದಾಗಿದ್ದಾರೆ.

ಚಂದ್ರನಲ್ಲಿರುವ ಆಮ್ಲಜನಕವು ಬಂಡೆಗಳಲ್ಲಿ, ಮಣ್ಣಿನಲ್ಲಿ ಅಡಗಿರುವುದರಿಂದ ಅದನ್ನು ಅನಿಲ ರೂಪವಾಗಿ ಪರಿವರ್ತಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲು ಅಮೆರಿಕ ಹಾಗೂ ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಗಳು ನಿರ್ಧರಿಸಿದ್ದಾರೆ.  ಇದು ಸಾಧ್ಯವಾದರೆ ಆ ಗ್ರಹದಲ್ಲಿ ಸುಮಾರು 800 ಕೋಟಿ ಜನರು, 1 ಲಕ್ಷ ವರ್ಷಗಳವರೆಗೆ ಜೀವಿಸುವಷ್ಟು ಆಮ್ಲಜನಕವು ಉಸಿರಾಟಕ್ಕೆ ಲಭ್ಯವಾಗಲಿದೆ ಎಂಬುದು ವಿಜ್ಞಾನಿಗಳ ಅಂದಾಜು.  ಈ ಬೃಹತ್‌ ಯೋಜನೆಗಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಹಾಗೂ ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್‌ಎ) ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಇದು ಸಾಧ್ಯವಾದರೆ ಕೆಲವು ದಶಕಗಳಲ್ಲಿ ಚಂದ್ರನು ವಾಸಯೋಗ್ಯವಾಗಬಹುದು.

ಸುತ್ತುತ್ತಿದೆ ಚಂದ್ರನ ಚೂರು!: ಕೋಟ್ಯಂತರ ವರ್ಷಗಳ ಹಿಂದೆ, ಮಂಗಳ ಗ್ರಹದಷ್ಟು ಬೃಹದಾಕಾರದ ಹೆಬ್ಬಂಡೆಯೊಂದು ಭೂಮಿಗೆ ಅಪ್ಪಳಿಸಿದ್ದರಿಂದಾಗಿ ಭೂಮಿಯ ಚೂರೊಂದು ಸಿಡಿದು ಚಂದ್ರನಾಗಿ ರೂಪುಗೊಂಡಿದೆ ಎಂಬ ಸಿದ್ಧಾಂತವನ್ನು ದಶಕಗಳ ಹಿಂದೆಯೇ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಆಗ ಸಂಭವಿಸಿದ ಘರ್ಷಣೆಯ ವೇಳೆ ಚಂದ್ರನಿಂದಲೇ ಸಿಡಿದ ಸಣ್ಣ ಚೂರೊಂದು 150 ಅಡಿ ಉದ್ದ ಹಾಗೂ 190 ಅಡಿ ಅಗಲವಿರುವ ಬಂಡೆಯು, ಭೂಮಿಯಿಂದ 9 ಮಿಲಿಯನ್‌ ಮೈಲುಗಳ ದೂರದಲ್ಲಿ ಸೂರ್ಯನ ಸುತ್ತಲೂ ಈಗಲೂ ಸುತ್ತುತ್ತಿದೆ ಎಂಬುದನ್ನು ಆರಿಝೋನಾ ವಿಶ್ವವಿದ್ಯಾವಿಲಯದ ಖಗೋಳ ವಿಜ್ಞಾನ ವಿಭಾಗದ ಸಂಶೋಧಕರ ತಂಡವೊಂದು ಹೇಳಿದೆ.

ಅವರ ಸಂಶೋಧನ ಪ್ರಬಂಧ, “ನೇಚರ್‌ ಕಮ್ಯೂನಿಕೇಷನ್ಸ್‌’  ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. 2016ರಲ್ಲೇ ಇದು ಪತ್ತೆಯಾಗಿತ್ತಾದರೂ ಚಂದ್ರನಿಂದಲೇ ಸಿಡಿದಿರುವ ಚೂರು ಎಂಬುದು ತಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.