QR Code!: ಬಿಟ್ಟೇನೆಂದರೆ ಬಿಡದು, ಈ ಕ್ಯುಆರ್ ಕೋಡ್!
Team Udayavani, Jul 11, 2024, 7:15 AM IST
ಐದಾರು ವರ್ಷಗಳಿಂದ ನಮ್ಮ ದೈನಂದಿನ ಜೀವನದ ಪ್ರಯಾಣ ಮತ್ತು ವ್ಯವಹಾರಗಳಲ್ಲಿ ನುಸುಳಿಕೊಂಡ ಕ್ಯುಆರ್ ಕೋಡ್ ಗೊತ್ತಿ¨ªೋ, ಗೊತ್ತಿಲ್ಲದೆಯೋ ಎಲ್ಲ ಸ್ತರಗಳಲ್ಲೂ ಅವಿಭಾಜ್ಯ ಅಂಗವಾಗಿ ಸ್ಥಾಪಿತ ಗೊಂಡಿದೆ. ಕ್ಯುಆರ್ ಕೋಡ್ ಆಧಾರಿತ ವ್ಯವಸ್ಥೆ, ವ್ಯಾಪಾರ, ವ್ಯವಹಾರ ನಮ್ಮೆಲ್ಲರ ಬಾಳಿನಲ್ಲಿ ಅನೇಕ ಬಾರಿ ಉಪಯೋಗಕ್ಕೆ ಬರುತ್ತಿರುವ ಆಧುನಿಕ ತಂತ್ರಜ್ಞಾನ ಸಾಧನ-ಸಾಧನೆ ಎನ್ನಲಡ್ಡಿಯಿಲ್ಲ. ಬ್ಯಾಂಕ್ ಖಾತೆಯಲ್ಲಿ ಹಣ ಮತ್ತು ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ದೈನಂದಿನ ವ್ಯವಹಾರ, ಪ್ರಯಾಣ, ಪ್ರವಾಸ, ಖರ್ಚು-ವೆಚ್ಚ ಎಲ್ಲವೂ ಚಿಟಿಕೆ ಹೊಡೆದಷ್ಟು ಸಲೀಸು. ವ್ಯವಹಾರಕ್ಕೆ ಚಿಲ್ಲರೆ ಹುಡುಕುವ ಪ್ರಮೇಯವಿಲ್ಲ. ಜನನಿಬಿಡ ಪ್ರದೇಶದಲ್ಲಿ ಪರ್ಸ್, ದುಡ್ಡು ಕಳೆದುಕೊಳ್ಳುವ ಆತಂಕವೂ ಇಲ್ಲ.
ಕ್ಯುಆರ್ ಕೋಡ್ ಬಗೆಗಿನ ಒಂದಷ್ಟು ವಿವರಗಳನ್ನು ನೋಡೋಣ. ಇದು ಕ್ವಿಕ್ ರೆಸ್ಪಾನ್ಸ್ ಕೋಡ್ ಪದದ ಸಂಕ್ಷಿಪ್ತ ರೂಪ. ಆಟೊಮೋಟಿವ್ ಕೈಗಾರಿಕ ವಿಭಾಗದ ಅಗತ್ಯತೆ ಪೂರೈಸುವ ಉದ್ದೇಶದಿಂದ ಜಪಾನಿನ ಡೆನ್ಸೊ ವೇವ್ ಹೆಸರಿನ ಸಂಸ್ಥೆ 1994ರಲ್ಲಿ ಈ ತಂತ್ರಜ್ಞಾನ ಸಂಶೋಧಿಸಿ ಬಳಸಲು ಆರಂಭ ಮಾಡಿತು.
2015ರ ಅನಂತರ ಎಲ್ಲೆಡೆ ಮೊಬೈಲ್ ನೆಟ್‌ವರ್ಕ್ ವೃದ್ಧಿಸಿ, ಸ್ಮಾರ್ಟ್ ಫೋನ್ ಮತ್ತು ಆನ್‌ಲೈನ್ ವ್ಯವಹಾರಕ್ಕೆ ಇಡೀ ಜಗತ್ತು ತೆರೆದುಕೊಳ್ಳುತ್ತಿದ್ದಂತೆ ಈ ಕ್ಯುಆರ್ ಕೋಡ್ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ಬಹಳ ವೇಗವಾಗಿ ಪಸರಿಸಿತು. ಹಲವಾರು ವ್ಯವಹಾರಗಳು, ವಿವಿಧ ಕ್ಷೇತ್ರಗಳ ಅಗತ್ಯತೆ ಮತ್ತು ಜೀವನವನ್ನು ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಕ್ಯುಆರ್ ಕೋಡ್ ತಂತ್ರಜ್ಞಾನ ಉಪಯುಕ್ತವಾದ ಭಾರೀ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ಕೇಂದ್ರ ಸರಕಾರದ ನೀತಿಗಳು ಮತ್ತು ದೇಶದೆಲ್ಲೆಡೆ ಆನ್‌ಲೈನ್ ವ್ಯವಹಾರಕ್ಕೆ ಬೇಕಾದ ಮೂಲ ಸೌಕರ್ಯಗಳ ಅಭಿವೃದ್ಧಿ, ಉತ್ತೇಜನದ ಮೂಲಕ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಕ್ಯುಆರ್ ಕೋಡ್ ಕೇಂದ್ರಿತ ವ್ಯವಹಾರ ಹೆಚ್ಚು ಚಾಲ್ತಿಯಲ್ಲಿದೆ. ಮತ್ತದು ಬದುಕಿನ ದಿನಚರಿಯ ಅವಿಚ್ಛಿನ್ನ ಅಂಗವಾಗಿದೆ.
ಈ ಕ್ಯುಆರ್ ಕೋಡ್‌ಗಳನ್ನು ನಮಗರಿವಿರದ ಹಲವು ರೀತಿಗಳಲ್ಲಿ ಬಳಸಲಾಗುತ್ತದೆ. ಕೋರ್ಟ್‌ಗ ಳಲ್ಲಿ ನಡೆಯುವ ಪ್ರಕರಣಗಳಲ್ಲಿ, ವಿವಿಧ ಕೋರ್ಟ್ ಗಳ ಇ-ಕೋರ್ಟ್ ಜಾಲತಾಣಗಳಲ್ಲಿ ಕ್ಯುಆರ್ ಕೋಡ್ ಬಳಸಿ ಪ್ರಕರಣದ ಎಲ್ಲ ವಿವರಗಳನ್ನು ಪಡೆಯಬಹುದು. ಅಲ್ಲಿ ಪ್ರತಿಯೊಂದು ಪ್ರಕರಣಕ್ಕೂ ವಿಶಿಷ್ಟ ಕ್ಯುಆರ್ ಕೋಡ್ ಲಭ್ಯವಿದೆ. “ಎಲ್ ಪಿಜಿ ಸಿಲಿಂಡರ್ ನಿರ್ವಹಣೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮತ್ತೂ ಜನಸ್ನೇಹಿಯಾಗಿ ಸಲು ಇದೇ ಕ್ಯುಆರ್ ಕೋಡ್ ತಂತ್ರಜ್ಞಾನವನ್ನು ದೇಶದಾದ್ಯಂತ ಹಂತ ಹಂತವಾಗಿ ಬಳಸುವ ಮಾತುಕತೆಗಳು ಅಂತಿಮ ಹಂತದಲ್ಲಿವೆ.
ತಿಂಗಳ ಹಿಂದೆ ಸಂಪನ್ನಗೊಂಡ ಪ್ರಜಾಪ್ರಭುತ್ವದ ಅತೀ ದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆ ಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 99 ಕೋಟಿ ಮತದಾರರಿಗೆ ಕ್ಯುಆರ್ ಕೋಡ್ ಹೊಂದಿರುವ ವೋಟರ್ ಸ್ಲಿಪ್‌ಗ್ಳನ್ನು ವಿತರಿಸಲಾಯಿತು. ಇದರ ಮುಖಾಂತರ ಮತದಾರರು ತಮ್ಮ ಮತಗಟ್ಟೆಯ ವಿಳಾಸ ಮತ್ತಿತರ ಎಲ್ಲ ವಿವರಗಳನ್ನು ಒಂದು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಡೆಯಲು ಮಾಡಿದ ಚೆಂದದ ವ್ಯವಸ್ಥೆ ಇದು. ಸಾರ್ವಜನಿಕ ಮತ್ತು ಸರಕಾರಿ ವಲಯದಲ್ಲಿ ಇಷ್ಟು ದೊಡ್ಡ ಯೋಜನೆ ಸಾಧ್ಯವಾಗಿಸಿ ಯಶಸ್ವಿಯಾದದ್ದು ದೊಡ್ಡ ಗರಿಮೆಯೇ ಸರಿ.
ಕಳೆದ ದೀಪಾವಳಿ ಸಮಯದಿಂದ ದೇಶದ ಹಲವಾರು ರಾಜ್ಯಗಳು ಕೇವಲ ಹಸುರು ಪಟಾಕಿ ಉತ್ಪಾದಿಸಿ ಮಾರಾಟ ಮತ್ತು ಸಿಡಿಸಲು ಅನುಮತಿ ನೀಡಿದ್ದು ಬಹಳ ದೊಡ್ಡ ವಿವಾದ ಮತ್ತು ಸುದ್ದಿಯಾಗಿತ್ತು. “ಯಾವ್ಯಾವ ಪಟಾಕಿ ಪೆಟ್ಟಿಗೆಗಳು ಹಸುರು ಪಟಾಕಿ ಪ್ರಭೇದಗಳು ಎಂದು ಹೇಗೆ ದೃಢೀಕರಿಸುವುದು?’ ಎಂದು ಚಿಂತೆಯಲ್ಲಿ ಇದ್ದ ಅಧಿಕಾರಿಗಳಿಗೆ ಹೊಳೆದದ್ದು ಮತ್ತು ನೆರವಾದದ್ದು ಇದೇ ಕ್ಯುಆರ್ ಕೋಡ್! ಸರಕಾರ ಹಸುರು ಪಟಾಕಿ ಎಂದು ತಿಳಿಯಲು ಮತ್ತು ಪತ್ತೆ ಹಚ್ಚಲು ಪಟಾಕಿ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ತನ್ನ ಪೋರ್ಟಲ್‌ನಲ್ಲಿ ಕಡ್ಡಾಯ ನೋಂದಣಿ ಮಾಡುವಂತೆ ಆದೇಶ ಹೊರಡಿಸಿತು. ಎಲ್ಲ ಅಧಿಕೃತ ನೋಂದಣಿದಾರರಿಗೆ ವಿಶಿಷ್ಟ ಕ್ಯುಆರ್ ಕೋಡ್‌ಗಳನ್ನು ನೀಡಿ ಪಟಾಕಿ ಪೆಟ್ಟಿಗೆಗಳ ಮೇಲೆ ಕಡ್ಡಾಯವಾಗಿ ಮುದ್ರಿಸುವಂತೆ ಫರ್ಮಾನು ಹೊರಡಿಸಿತು. ನಕಲಿ, ಅನಧಿಕೃತ ಮತ್ತು ಪರಿಸರಕ್ಕೆ ಹೆಚ್ಚು ಮಾರಕ ಪಟಾಕಿಗಳನ್ನು ಸುಲಭದಲ್ಲಿ ಪತ್ತೆಹಚ್ಚಲು ಇದು ಸಹಕಾರಿಯಾಯಿತು. ಖರೀದಿಸಲು ಬಯಸಿದ ಪಟಾಕಿ ಪೆಟ್ಟಿಗೆಯ ಮೇಲಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಜನಸಾಮಾನ್ಯರಿಗೆ ನಕಲಿ-ಅಸಲಿ ಪಟಾಕಿಯ ಮಾಹಿತಿ ದೃಢೀಕರಿಸುವಲ್ಲಿ ಈ ತಂತ್ರಜ್ಞಾನ ನೆರವಾಯಿತು.
ಪ್ರಕಟಿತ ಮಾಹಿತಿಗಳ ಪ್ರಕಾರ, ಪ್ರತಿಯೊಬ್ಬರ ಬ್ಯಾಂಕ್ ಖಾತೆ ಮತ್ತು ಪೇಮೆಂಟ್ ಬ್ಯಾಂಕ್ ಖಾತೆಗಳ ಮತ್ತು ಇತರ ಎಲ್ಲ ವ್ಯವಹಾರಗಳ ಕ್ಯುಆರ್ ಕೋಡ್ ಸೇರಿದಂತೆ ದೇಶದಲ್ಲಿ ಉಪಯೋಗದಲ್ಲಿ (ಚಲಾವಣೆಯಲ್ಲಿ!) ಇರುವ ಒಟ್ಟು ಕ್ಯುಆರ್ ಕೋಡ್‌ಗಳ ಸಂಖ್ಯೆ ಅಂದಾಜು 400 ಕೋಟಿಗಳಿಗೂ ಹೆಚ್ಚು! ಇವೆಲ್ಲವೂ ನೋಡಲು ಒಂದೇ ರೀತಿ ಕಂಡರೂ ಇದರಲ್ಲಿ ಪ್ರತಿಯೊಂದು ಕ್ಯುಆರ್ ಕೋಡ್ ಕೂಡ ಅನನ್ಯ-ವಿಶಿಷ್ಟ (ಯುನಿಕ್)! ಅಬ್ಟಾ ಈ ತಂತ್ರಜ್ಞಾನ ಸಂಶೋಧಿಸಿ, ಈ ಮಟ್ಟಕ್ಕೆ ಬೆಳೆದು ನಿಂತು, ಜನರಿಗೆ ಈ ವ್ಯಾಪ್ತಿಯಲ್ಲಿ ಉಚಿತ ಸೇವೆ ಒದಗಿಸುವ ಪರಿ ನಿಜಕ್ಕೂ ಅಚ್ಚರಿ.
ಬ್ಯಾಂಕ್‌ಗಳ ಒಕ್ಕೂಟದ ಮಾಹಿತಿಯ ಪ್ರಕಾರ ದೇಶದಾದ್ಯಂತ ಇರುವ ಬ್ಯಾಂಕ್ ಖಾತೆಗಳು ಮತ್ತು ಎಟಿಎಂಗಳಿಗೆ ಹೋಲಿಸಿದರೆ ಕೊರೊನಾ ಕಾಲಘಟ್ಟದ ಅನಂತರದ ಕಾಲದಲ್ಲಿ ಜನರು ವರ್ಷದಿಂದ ವರ್ಷಕ್ಕೆ (Year on Year) ವ್ಯವಹಾರಕ್ಕೆ ನಗದು ಬಳಸುವ ಪ್ರಮಾಣ ಅಂದಾಜು ಶೇ.4-ಶೇ.5 ಕಡಿಮೆಯಾಗುತ್ತಿದೆ. ಜನರ ಖರ್ಚಿನ ಅಭ್ಯಾಸ (spending habit) ದಿನೇದಿನೆ ಜಾಸ್ತಿಯಾಗುತ್ತಿರುವ ಪರಿಣಾಮ ಕ್ಯುಆರ್ ಕೋಡ್ ತಂತ್ರಜ್ಞಾನ ಸೇರಿದಂತೆ ಆನ್‌ಲೈನ್ ವಹಿವಾಟಿನ ಸಂಖ್ಯೆ (ಮೊತ್ತ ಅಲ್ಲ) ವರ್ಷದಿಂದ ವರ್ಷಕ್ಕೆ ಸುಮಾರು ಶೇ. 5.5- ಶೇ.6 ವೃದ್ಧಿಸುತ್ತಿದೆ. ದೇಶದಾದ್ಯಂತ ನಡೆಯುವ ಐದು ವಹಿವಾಟುಗಳಲ್ಲಿ ಮೂರು ವಹಿವಾಟು ಆನ್‌ಲೈನ್ ಮೂಲಕ ಮತ್ತು ಆ ಮೂರರಲ್ಲಿ ಎರಡು ಕ್ಯುಆರ್ ಕೋಡ್ ಆಧಾರಿತ! ಅಂದರೆ ದೇಶದ ಒಟ್ಟು ವ್ಯವಹಾರಗಳ ಸಂಖ್ಯೆಯ (ಮೊತ್ತ ಅಲ್ಲ) ಅಂದಾಜು ಶೇ.40 ವ್ಯವಹಾರಗಳು ಕ್ಯುಆರ್ ಕೋಡ್ ಬಳಸಿ ಆಗುತ್ತಿವೆ. ಇದಕ್ಕೆ ಬಳಸಲ್ಪಡುವ ತಂತ್ರಜ್ಞಾನ, ಸರ್ವರ್, ಅಂತರ್ಜಾಲ, 24/7 ಆವರ್ತನದಲ್ಲಿ ಬೆಂಬಲಿಸುವ ತಂಡ… ಹೀಗೆ ಅಬ್ಟಾ ಇದೊಂದು ಯಾರೂ ಇನ್ನೂ ಸರಿಯಾಗಿ ಊಹಿಸದ, ಶೋಧಿಸದ, ಖನನ ಮಾಡಿರದ ದೊಡ್ಡ ತಂತ್ರಜ್ಞಾನ ಆಧಾರಿತ ಮಾರುಕಟ್ಟೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ಕಲಿಯುತ್ತಿರುವವರಿಗೆ ಈ ಕ್ಷೇತ್ರ ಸಂಶೋಧನೆಗೆ ತೆರೆದಿಟ್ಟ ಅವಕಾಶಗಳು ಆಗಸದಷ್ಟು. ಪೇಮೆಂಟ್ ಬ್ಯಾಂಕ್‌ಗಳು ಪ್ರವರ್ಧಮಾನಕ್ಕೆ ಬಂದುದರ ನೇರ, ಗುರುತರ ಮತ್ತು ಧನಾತ್ಮಕ ಪರಿಣಾಮವಿದು.
ಕೊನೆಯದಾಗಿ: ಕಲಿಯುಗದ ತಂತ್ರಜ್ಞಾನ, ಇಂಟರ್‌ನೆಟ್ ಆಧಾರಿತ ಬದುಕಿನ “ಜಾಲತಾಣ ಪಯಣ’ದಲ್ಲಿ “ಬಿಟ್ಟೇನೆಂದರೂ ನಮ್ಮನ್ನು ಬಿಡದು ನೋಡು ಈ ಮಾಯೆ; ಕ್ಯುಆರ್ ಕೋಡ್ ಎಂಬ ತಂತ್ರಾಂಶ-ತಂತ್ರಜ್ಞಾನದ ಛಾಯೆ’. ಜಗದ ನಾಳೆಗಳ ವಿದ್ಯಮಾನಗಳ ಕುರಿತ ಭವಿಷ್ಯದ ಊಹನೆ ಕಷ್ಟಸಾಧ್ಯ; ಆದರೆ ಕ್ಯುಆರ್ ಕೋಡ್ ತಂತ್ರಜ್ಞಾನದ ನಾಳೆಗಳ ಭವಿಷ್ಯ ಮತ್ತಷ್ಟು ವಿಸ್ತರಿಸಲಿದೆ ಮತ್ತು ಉಜ್ವಲವಾಗಿರಲಿದೆ!
– ರವೀ ಸಜಂಗದ್ದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.