ಕಳೆದ ಸಮಯ, ಆಡಿದ ಮಾತು ಮತ್ತೆ ಬಾರದು
Team Udayavani, Aug 17, 2022, 6:15 AM IST
ನ ಮ್ಮ ನಿತ್ಯ ಜೀವನದಲ್ಲಿ ಸಮಯಕ್ಕೆ ಅಮೂಲ್ಯ ಸ್ಥಾನವನ್ನು ನೀಡಲಾಗಿದೆ. ಎಲ್ಲ ಮಾನವರಿಗೆ ಒಂದು ನಿರ್ದಿಷ್ಟ ಧ್ಯೇಯ, ಗುರಿ ಇರುತ್ತದೆ. ತನ್ನ ಜೀವಿತದ ಸ್ಪಷ್ಟವಾದ ಗುರಿಯನ್ನು ತಿಳಿದಿರಬೇಕು. ಓಡುವ ಕಾಲವನ್ನು ನಮಗೆ ನಿಲ್ಲಿಸಲು ಸಾಧ್ಯವಿಲ್ಲ. ನಾವೂ ಅದರ ಗತಿಗೆ ಅನುಗುಣವಾಗಿ ನಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು. ಸುಮ್ಮನೆ ಕಾಲಹರಣ ಮಾಡಿದರೆ ನಮ್ಮ ಅತೀ ಅಮೂಲ್ಯ ಸಮಯಗಳನ್ನು ನಾವೇ ಹಾಳು ಮಾಡಿಕೊಂಡತೆ. ಒಮ್ಮೆ ಕಳೆದು ಹೋದ ಸಮಯ ಎಂದೂ ಮತ್ತೆ ಬರುವುದಿಲ್ಲ. ಮಾತು ಹಾಗೆಯೇ. ಒಮ್ಮೆ ಆಡಿದರೆ ಮುಗಿಯಿತು. ಅದನ್ನು ಬದಲಾಯಿಸಲು ಅಥವಾ ಅಳಿಸಲು ಸಾಧ್ಯವಿಲ್ಲ. ಕೋಪದಿಂದ ಒಮ್ಮೆ ಆಡಿದ ಮಾತು ಎದುರಿಗಿರುವವರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದುಕೊಂ ಡಿರಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆಯಿದೆ. ನಾವು ಆಡಿದ ಮಾತನ್ನು ನಾವು ಮರೆತುಬಿಡಬಹುದು. ಆದರೆ ಕೇಳಿದ ಕಿವಿಗಳು ಎಂದೂ ಮರೆಯಲು ಅಸಾಧ್ಯ. ಆದ್ದರಿಂದ ಮಾತನಾಡುವ ಮೊದಲು ಯೋಚಿಸಿ ಮಾತನಾಡೋಣ. ಇದರಿಂದ ನಮಗೂ ನೆಮ್ಮದಿ, ಸಂಬಂಧಗಳೂ ಉಳಿದುಕೊಳ್ಳುತ್ತವೆ.
ಸಮಯ ಎಂಬುವುದು ಮಾನವನಿಗೆ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಸಸ್ಯಗಳಲ್ಲೂ ನಾವು ಕಾಣಬಹುದು. ಬೆಳಗ್ಗೆ ಬೇಗನೆ ಏಳುವುದು, ಸಂಜೆಯಾದಂತೆ ಗೂಡು ಸೇರುವುದು ಪ್ರಾಣಿಪಕ್ಷಿಗಳಲ್ಲಾದರೆ, ಸಮಯಕ್ಕೆ ಸರಿಯಾಗಿ ಬೆಳೆ ಕೊಡುವುದು ಸಸ್ಯಗಳಲ್ಲಿ ನಾವು ಕಾಣಬಹುದು. ನಿತ್ಯ ಜೀವನದಲ್ಲಿ ನಾವು ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ಈ ಜಗತ್ತೇ ಸಮಯಕ್ಕೆ ಶರಣಾಗಿದೆ. ಸೂರ್ಯೋ ದಯ, ಸೂರ್ಯಾಸ್ತ ಸಮಯಕ್ಕೆ ಸರಿಯಾಗಿಯೇ ಆಗುತ್ತದೆ. ನಮ್ಮಲ್ಲಿ ಕೆಲವರಿಗೆ ಸಮಯ ಸಾಕಾಗು ವುದಿಲ್ಲ. ಕೆಲವರಿಗೆ ಸಮಯವೇ ಹೋಗು ವುದಿಲ್ಲ. ಇನ್ನೂ ಕೆಲವರು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಕಳೆದ ಸಮಯ, ಬಿಟ್ಟ ಬಾಣ, ಆಡಿದ ಮಾತು ಎಂದಿಗೂ ಹಿಂದಿರುಗಿ ಬರುವುದಿಲ್ಲ. ಈ ದಿನ ಹೋಯಿತೆಂದರೆ ನಮ್ಮ ಆಯುಷ್ಯದ ಒಂದು ದಿನ ಕಡಿಮೆಯಾಯಿತು ಎಂದು ಲೆಕ್ಕ ಹಾಕಬೇಕು. ಆದ್ದರಿಂದ ನಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯ ಬಾರದು. ಸದಾ ಕ್ರೀಯಾ ಶೀಲರಾ ಗಿರಬೇಕು. ವಿದ್ಯಾರ್ಥಿ ಯಾದವನಂತೂ ನಿರ್ದಿಷ್ಟವಾದ ಗುರಿ ಹೊಂದಿರಬೇಕು. ನಾಳೆ ಬರೆಯುವ, ನಾಳೆ ಓದುವ ಎಂದು ಸಮಯ ವ್ಯರ್ಥವಾಗಿ ಕಳೆಯಬಾರದು. ಇಂದಿನ ದಿನ ಸುದಿನ, ನಾಳೆಯ ದಿನ ಕಠಿನ ಎಂದು ತಿಳಿದಿರಬೇಕು. ವಿದ್ಯಾರ್ಥಿ ಜೀವನದಲ್ಲಿ ವಿಶ್ರಾಂತಿ ಬೇಕಾದರೆ ಅವನ ಕೆಲಸದಲ್ಲಿ ಬದಲಾವಣೆ ಮಾಡುವುದು. ಓದುವುದು ಸಾಕಾದರೆ ಬರೆಯುವುದು, ಇಲ್ಲವೇ ಕಲಿತದ್ದನ್ನು ನೆನಪಿಸಿಕೊಳ್ಳುವುದು ಹೀಗೆ ಸಮಯ ವ್ಯರ್ಥ ಮಾಡದೆ ಸದಾ ಕ್ರಿಯಾಶೀಲರಾಗಿರಬೇಕು. ಬಿಡುವಿನ ವೇಳೆಯಲ್ಲಿ ವೇಳೆಯಲ್ಲಿ ಸಮಯವನ್ನು ವ್ಯರ್ಥ ಮಾಡದೆ ಕೆಲವು ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಪುಸ್ತಕ ಓದುವುದು, ಚಿತ್ರಕಲೆ, ಸಂಗೀತ, ಆಟೋಟಗಳ ಹವ್ಯಾಸ ಬೆಳೇಸಿಕೊಳ್ಳಬಹುದು. ಯದ್ಧಶಾಲೆ ಶಸ್ತ್ರ ಅಭ್ಯಾಸವಾಗಬಾರದು. ಅಂದರೆ ಯುದ್ಧ ಆರಂಭವಾದ ಬಳಿಕ ಶಸ್ತ್ರ ಅಭ್ಯಾಸ ಮಾಡುವುದಲ್ಲ. ಮೊದಲೇ ಕಲಿತಿರಬೇಕು. ಹಾಗೆಯೇ ಪರೀಕ್ಷೆ ಆರಂಭವಾದ ಬಳಿಕ ಓದುವುದಲ್ಲ. ದಿನಾ ಸಮಯವನ್ನು ಹಾಳು ಮಾಡದೆ ಓದಬೇಕು, ಕಷ್ಟಪಡ ಬೇಕು. ಸಮಯ ಓಡುತ್ತದೆ. ನಾವು ಸಮಯಕ್ಕೆ ಸರಿಯಾಗಿ ಅದೇ ಗತಿಯಲ್ಲಿ ಓಡುವುದನ್ನು ಅಭ್ಯಾಸ ಮಾಡಿ ಕೊಳ್ಳಬೇಕು.
ಒಮ್ಮೆ ಹೂದೋಟದಲ್ಲಿ, ಒಮ್ಮೆ ಶಾಸ್ತ್ರದಲ್ಲಿ, ಒಮ್ಮೆ ಸಂಸಾರದಲ್ಲಿ ಮತ್ತೂಮ್ಮೆ ಮೌನದಲಿ ಬ್ರಹ್ಮಾನು ಭವಿಯಾಗೋ ಮಂಕುತಿಮ್ಮ ಎಂದು ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಬಿಡುವಿನ ಸಮಯದಲ್ಲಿ ಒಳ್ಳೆಯ ಚಟುವಟಿಕೆಗಳಲ್ಲಿ ಹರಿಯಬಿಡದಿದ್ದರೆ ಒಳ್ಳೆಯ ವಿಚಾರ ವ್ಯರ್ಥವಾಗಿ ಕೆಟ್ಟ ವಿಚಾರದಲ್ಲಿ ತೊಡಗಿ ನಮ್ಮನ್ನು ನಾವು ಹಾಳು ಮಾಡಿಕೊಳ್ಳುತ್ತೇವೆ. ಆದ್ದರಿಂದ ಎಲ್ಲರೂ ಬಿಡುವಿನ ಸಮಯವನ್ನು ಸದು ಪಯೋಗಪಡಿಸಿಕೊಳ್ಳಬೇಕು.
ಮುತ್ತು ಜಾರಿದರೆ ಸಿಗಬಹುದೇನೋ ಆದರೆ ಮಾತು ಒಮ್ಮೆ ನಾಲಗೆಯಿಂದ ಜಾರಿದರೆ ಹೋಯಿತು. ಕೋಪದಿಂದ ಮಾತನಾಡಿದ ನಮಗೂ ಕೊರಗು, ಕೇಳಿಸಿಕೊಂಡ ಕಿವಿಗಳೂ ನೋವು. ಜತೆಗೆ ಸಂಬಂಧಗಳು ಹಳಸಿ ಹೋಗುತ್ತದೆ. ಆದ್ದರಿಂದ ನಾವು ಕೋಪಗೊಳ್ಳದೆ ತಾಳ್ಮೆಯಿಂದ ಏನು ಮಾತನಾಡುತ್ತೇವೆ ಎಂದು ಯೋಚಿಸಿ ಮಾತನಾಡಿದರೆ ಎಲ್ಲರಿಗೂ ಉತ್ತಮ.
-ದೇವರಾಜ್ ರಾವ್ ಮಟ್ಟು, ಕಟಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.