ದೇಶದ ಅರ್ಥ ವ್ಯವಸ್ಥೆಯ ಆಧಾರ ಸ್ತಂಭಗಳು ಸದೃಢ
Team Udayavani, Sep 7, 2022, 6:25 AM IST
ಆರ್ಥಿಕ ಹಿಂಜರಿತ, ಬಿಕ್ಕಟ್ಟು ಜಗತ್ತಿನ ಅನೇಕ ದೇಶಗಳನ್ನು ಬಾಧಿಸುತ್ತಿದೆ. ನೆರೆಯ ಶ್ರೀಲಂಕಾದಲ್ಲಿ ಉಂಟಾದ ಪರಿಸ್ಥಿತಿ ಕಣ್ಣಮುಂದೆಯೇ ಇದೆ. ಭಾರತದ ಕಥೆಯೇನು – ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆರು ಅಂಶಗಳಲ್ಲಿ ವಿಶ್ಲೇಷಿಸಿದ್ದಾರೆ.
ಮಣಿಪಾಲ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಎಪ್ರಿಲ್‌ನಲ್ಲಿ ಗರಿಷ್ಠ ಮಟ್ಟದಲ್ಲಿತ್ತು, ಆ ಬಳಿಕ ಕ್ರಮೇಣ ಕಡಿಮೆಯಾಗುತ್ತ ಬಂದಿದೆ. ಜುಲೈಯಲ್ಲಿ ಅದು ಶೇ. 6.7 ಆಗಿತ್ತು. ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಕೊಂಚ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರದ ಬಿಸಿ ಇನ್ನಷ್ಟು ಶಮನಗೊಳ್ಳಲಿದೆ ಎಂದು ದಾಸ್ ಅಭಯ ನೀಡಿದ್ದಾರೆ.
ಎಪ್ರಿಲ್-ಜೂನ್ ತ್ತೈಮಾಸಿಕ ದಲ್ಲಿ ದೇಶದ ಆರ್ಥಿಕ ಪ್ರಗತಿಯು ನಿರೀಕ್ಷೆಗಿಂತ ಹಿಂದುಳಿದಿತ್ತು ಮತ್ತು ಶೇ. 13.5 ದರ ಹೊಂದಿತ್ತು. ಮುಂದಿನ ದಿನಗಳಲ್ಲಿ ಆರ್‌ಬಿಐಯ ಹಣಕಾಸು ನೀತಿ ಪರಿಸ್ಥಿತಿಯ ಮೇಲೆ ನಿಗಾ ಇರಿಸ ಲಿದೆ, ಜಾಗರೂಕತೆಯನ್ನು ಹೊಂದಿರಲಿದೆಯಲ್ಲದೆ ಬೆಲೆ ಸ್ಥಿರತೆಯನ್ನು ಖಾತರಿಪಡಿಸುವ ಜತೆಗೆ ಪ್ರಗತಿಯನ್ನು ಬೆಂಬಲಿಸ ಲಿದೆ ಎಂದು ದಾಸ್ ಹೇಳಿದ್ದಾರೆ.
ದೇಶದ ಮ್ಯಾಕ್ರೊ ಇಕನಾಮಿಕ್ ಮೂಲಭೂತ ಅಂಶಗಳು ಸದೃಢ ವಾಗಿವೆ. ದೇಶ ದೃಢ ಹೆಜ್ಜೆಗಳನ್ನು ಇರಿಸುತ್ತ ಪ್ರಗತಿಯ ಹಾದಿಯಲ್ಲಿ ಸಾಗಲಿದೆ ಎನ್ನುವ ಭರವಸೆಗೆ ದಾಸ್ ಅವರ ಆರು ಅಂಶಗಳ ವಿಶ್ಲೇಷಣೆ ಪೂರಕವಾಗಿದೆ.
1. 2022ರಲ್ಲಿ ಇತರ ದೇಶಗಳು ಆರ್ಥಿಕ ಹಿಂಜರಿತ ಅಥವಾ ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ ಅನುಭವಿಸಿದರೂ ಭಾರತ ಅತ್ಯಂತ ಕ್ಷಿಪ್ರವಾಗಿ ಪ್ರಗತಿ ಹೊಂದಲಿದೆ ಎಂಬ ಗ್ರಹಿಕೆ ಎಲ್ಲೆಡೆ ಇದೆ. 2022ರ ಜುಲೈ ಬಳಿಕ ದೇಶಕ್ಕೆ ಹೂಡಿಕೆ ಒಳಹರಿ ವಿನಲ್ಲಿ ಆಗಿರುವ ಹೆಚ್ಚಳ ಇದನ್ನು ಶ್ರುತಪಡಿಸುತ್ತಿದೆ. ಆಗಸ್ಟ್‌ನಲ್ಲಿ 750 ಕೋಟಿ ಡಾಲರ್‌ಗೂ ಹೆಚ್ಚು ಹೂಡಿಕೆ ಹರಿದುಬಂದಿದ್ದು, ಇದು ಜುಲೈಗಿಂತ 16 ಪಟ್ಟು ಹೆಚ್ಚು.
2ಕೊರೊನಾ ಮತ್ತು ರಷ್ಯಾ- ಉಕ್ರೇನ್ ಯುದ್ಧದ ಬಳಿಕ ಏರಿಕೆಯಾಗಿದ್ದ ಉತ್ಪನ್ನಗಳ ಬೆಲೆ ಇಳಿಕೆಯಾಗುತ್ತಿದೆ ಮತ್ತು ಸರಬರಾಜು ವ್ಯವಸ್ಥೆಯ ಮೇಲೆ ಇದ್ದ ಒತ್ತಡ ಕಡಿಮೆ ಯಾಗಿದೆ. 2022ರಲ್ಲಿ ವರ್ಷ ಪೂರ್ತಿ ಕಚ್ಚಾತೈಲದ ಪ್ರತೀ ಬ್ಯಾರಲ್‌ಗೆ 105 ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದ್ದರೂ ಆಗಸ್ಟ್ ನಲ್ಲಿ ಅದು 97.4 ಡಾಲರ್‌ಗೆ ಇಳಿದಿದೆ. ಹಣದುಬ್ಬರವು ನಮ್ಮ ಆಮದು-ರಫ್ತು ಪಾಲು ದಾರ ಅನೇಕ ದೇಶಗಳಿಗಿಂತ ಕಡಿಮೆಯೇ ಇದೆ.
3. ಗ್ರಾಹಕ ಉತ್ಪನ್ನಗಳ ನಿರೀಕ್ಷಿತ ಬೆಲೆಯಲ್ಲಿಯೂ ಇಳಿಕೆ ಯನ್ನು ಅಂದಾಜಿಸಲಾಗಿದೆ.
4. ಜಾಗತಿಕವಾಗಿ ಆಹಾರ ಧಾನ್ಯ ಗಳ ಕೊರತೆ ಮತ್ತು ಬೆಲೆ ಯೇರಿಕೆ ಕಂಡುಬರುತ್ತಿದ್ದರೂ ಭಾರತದಲ್ಲಿ ಅವುಗಳ ದಾಸ್ತಾನು ಸಾಕಷ್ಟಿದೆ. ಇದರಿಂದ ದೇಶೀಯವಾಗಿ ಆಹಾರ ಧಾನ್ಯಗಳ ಸರಬರಾಜು ಮತ್ತು ಬೆಲೆ ಸ್ಥಿರವಾಗಿರುವುದು ಸಾಧ್ಯ. ಆಹಾರ ಭದ್ರತೆ ಚೆನ್ನಾಗಿರಲಿದೆ.
5. ಆಗಸ್ಟ್ 26ರ ವರೆಗಿನ ಅಂಕಿ ಅಂಶಗಳಂತೆ ಭಾರತ 56,100 ಕೋಟಿ ಡಾಲರ್ ವಿದೇಶೀ ವಿನಿಮಯ ದಾಸ್ತಾನು ಹೊಂದಿದೆ. ಇದು ಬಾಹ್ಯ ಆರ್ಥಿಕ ಆಘಾತಗಳಿಂದ ರಕ್ಷಿಸಲಿದೆ.
6. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಆರೋಗ್ಯಯುತವಾಗಿದೆ. ಬಂಡವಾಳ ಮತ್ತು ಮುನ್ನೇರ್ಪಾಟುಗಳು ಚೆನ್ನಾಗಿವೆ, ಆಸ್ತಿಗಳ ಗುಣಮಟ್ಟ ಉತ್ತಮವಾಗಿದೆ. ಇದು ಆರ್ಥಿಕ ಸ್ಥಿರತೆಗೆ ಆಧಾರ ಸ್ತಂಭವಾಗಿದ್ದು, ಆರ್ಥಿಕ ಮಾರುಕಟ್ಟೆಯ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.