ಭಾರತದಲ್ಲಿ ನವೋದ್ಯಮಗಳ ಸಂಕ್ರಾಂತಿ
Team Udayavani, May 14, 2022, 11:15 AM IST
ಭಾರತದ ಅಭಿವೃದ್ಧಿಯಲ್ಲಿ ಸ್ಟಾರ್ಟ್ ಅಪ್ (ನವೋದ್ಯಮ)ಗಳು ಮಹತ್ತರವಾದ ಪಾತ್ರ ವನ್ನು ವಹಿಸುತ್ತಿವೆ. ಯುವ ಹಾಗೂ ಪ್ರತಿ ಭಾವಂತ ಉದ್ಯಮಿಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳನ್ನು ಆರಂಭಿಸಿ ಪ್ರಗತಿಯನ್ನು ಕಾಣುತ್ತಿದ್ದಾರೆ. ಅಮೆರಿಕ ಮತ್ತು ಚೀನವನ್ನು ಹೊರತುಪಡಿಸಿದರೆ ಅತೀ ಹೆಚ್ಚು ನವೋದ್ಯ ಮಗಳಿರುವುದು ಭಾರತದಲ್ಲೇ . ಪ್ರಸ್ತುತ ಭಾರತದಲ್ಲಿ ಸುಮಾರು 68,000 ಸ್ಟಾರ್ಟ್ ಅಪ್ ಗಳು ಕಾರ್ಯಾಚರಿಸುತ್ತಿವೆ.
2013- 14ರಲ್ಲಿ ಭಾರತದಲ್ಲಿ ಸುಮಾರು 400 ರಿಂದ 800 ಸ್ಟಾರ್ಟ್‌ಅಪ್ ಗಳು ಇದ್ದವು. 2021ರಲ್ಲಿ ಭಾರತದಲ್ಲಿ 14,000 ಸ್ಟಾರ್ಟ್‌ಅಪ್ ಗಳು ರೂಪು ಗೊಂಡಿವೆ. ಸ್ಟಾರ್ಟ್‌ಅಪ್ ಗಳನ್ನು ಅವುಗಳ ಮೌಲ್ಯದ ಮೇಲೆ ವರ್ಗೀಕರಿಸ ಲಾಗಿದೆ. ಒಂದು ಸ್ಟಾರ್ಟ್‌ಅಪ್‌ನ ಮೌಲ್ಯವು ದಶಲಕ್ಷ(ಮಿಲಿಯನ್) ಡಾಲರ್‌ಗಳನ್ನು ದಾಟಿ ದರೆ ಅದನ್ನು ಮಿನಿಕಾರ್ನ್ ಸ್ಟಾರ್ಟ್‌ಅಪ್ ಎಂದು ಗುರುತಿಸಲಾಗುತ್ತದೆ. ಮಿನಿಕಾರ್ನ್ ಸ್ಟಾರ್ಟ್ ಅಪ್ ತನ್ನ ಮೌಲ್ಯವನ್ನು 900 ಮಿಲಿ ಯನ್ ಡಾಲರ್‌ಗಳಿಗೆ ವೃದ್ಧಿಸಿಕೊಂಡು ಇನ್ನೇನು ಬಿಲಿಯನ್(ಶತಕೋಟಿ) ಡಾಲರ್‌ಗಳಿಗೆ ತಲುಪಲಿದೆ ಎನ್ನುವ ಸ್ಥಿತಿಯ ಸ್ಟಾರ್ಟ್ ಅಪ್‌ಗಳನ್ನು ಸೂನಿಕಾರ್ನ್ ಸ್ಟಾರ್ಟ್‌ಅಪ್‌ಗಳು ಎಂದು ಕರೆಯಲಾಗುತ್ತದೆ.
ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ ಸ್ಟಾರ್ಟ್‌ಅಪ್ ಗಳನ್ನು ಯುನಿಕಾರ್ನ ಸ್ಟಾರ್ಟ್‌ಅಪ್‌ಗಳು ಎಂದು ಕರೆಯಲಾಗುತ್ತದೆ. 10 ಬಿಲಿ ಯನ್ ಡಾಲರ್ ಮೌಲ್ಯವನ್ನು ತಲುಪಿದ ಸ್ಟಾರ್ಟ್ ಅಪ್‌ಗಳನ್ನು ಡೆಕಾಕಾರ್ನ್ ಹಾಗೂ 100 ಬಿಲಿಯನ್ ಮೌಲ್ಯವನ್ನು ತಲುಪಿದ ನವೋದ್ಯಮಗಳನ್ನು ಹೆಕ್ಟಾಕಾರ್ನ್ ಸ್ಟಾರ್ಟ್
ಅಪ್‌ಗಳೆಂದು ಗುರುತಿಸಲಾಗುತ್ತದೆ.
ಭಾರತದ ಓಪನ್ ಮನಿ ನಿಯೋಬ್ಯಾಂಕ್ ಹೆಸರಿನ ಸ್ಟಾರ್ಟ್‌ಅಪ್ ತನ್ನ ಮೌಲ್ಯವನ್ನು ಬಿಲಿಯನ್ ಡಾಲರ್‌ಗಳಿಗೆ ಏರಿಸಿಕೊಳ್ಳುವುದ ರೊಂದಿಗೆ ಭಾರತದ ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳ ಸಂಖ್ಯೆ 100ನ್ನು ತಲುಪಿದೆ. ಇದು ಸಣ್ಣ ಸಾಧನೆಯಲ್ಲ. ಭಾರತದಲ್ಲಿರುವ ಯುನಿ ಕಾರ್ನ್ ಸ್ಟಾರ್ಟ್‌ಅಪ್‌ಗಳು ಮೌಲ್ಯವನ್ನು ಒಟ್ಟು ಸೇರಿಸಿದಾಗ ಅದು ಸರಿ ಸುಮಾರು 332 ಶತಕೋಟಿ ಡಾಲರ್ ಅನ್ನು ತಲುಪುತ್ತದೆ. ಇದನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದಾಗ ಈ ಮೊತ್ತವು 25 ಲ.ಕೋ.ರೂ. ಗಳಿಗೆ ಸರಿಸಮಾನವಾಗುತ್ತದೆ. ಜಾಗತಿಕ ವಾಗಿ ಅಮೆರಿಕ ಮತ್ತು ಚೀನಗಳ ಅನಂತರ ಅತೀ ಹೆಚ್ಚು ಯುನಿಕಾರ್ನ್ ಸ್ಟಾರ್ಟ್‌ಅಪ್ ಗಳು ಇರುವುದೂ ಭಾರತದಲ್ಲೇ . 2021ರಲ್ಲಿ ಕೊರೊನಾ ಎರಡನೆಯ ಅಲೆಯ ನಡುವೆಯೂ ಭಾರತದ 44 ಸ್ಟಾರ್ಟ್‌ಅಪ್ ಗಳು ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳಾಗಿ ಪರಿವರ್ತನೆ ಹೊಂದಿರುವುದು ಭಾರತದ ನವೋದ್ಯಮಗಳ ಯಶಸ್ಸಿನ ಕಥೆಯನ್ನು ಹೇಳುತ್ತವೆ. 2025ರಲ್ಲಿ ಭಾರತದ ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳ ಸಂಖ್ಯೆ 250ಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಕ್ಲಿಯರ್ ಟ್ಯಾಕ್ಸ್, ಜ್ಯುಪಿಟರ್, ರಾಪಿಡೋ ಮೊದಲಾದ 26 ನವೋದ್ಯಮಗಳು ಸೂನಿಕಾರ್ನ್ ಸ್ಟಾರ್ಟ್‌ಅಪ್ ಆಗಿ ರೂಪೀಕರಣಗೊಂಡಿದ್ದು ಮುಂದಿನ ಕೆಲವೇ ತಿಂಗಳುಗಳಲ್ಲಿ ಅವುಗಳು ತಮ್ಮ ಮೌಲ್ಯವನ್ನು ಶತಕೋಟಿ ಡಾಲರ್‌ಗಳಿಗೆ ಏರಿಸಿಕೊಂಡು ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳಾಗಿ ಬದಲಾಗಲಿವೆ. ಫ್ಲಿಪ್ ಕಾಟರ್, ಬೈಜೂಸ್, ನೈಕಾ ಹಾಗೂ ಸ್ವಿಗ್ಗಿ ಗಳು ತಲಾ 10 ಬಿಲಿಯನ್ ಡಾಲರಿಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿ ಡೆಕಾಕಾರ್ನ್ಗ ಗಳಾಗಿ ಪರಿವರ್ತನೆ ಹೊಂದಿವೆ.
ಭಾರತವಿಂದು ಯುನಿಕಾರ್ನ್ ಸ್ಟಾರ್ಟ್‌ಅಪ್‌ಗ ಳ ಹಾಟ್‌ಸ್ಪಾಟ್ ಆಗಿ ಬೆಳೆಯುತ್ತಿರುವುದು ಆಕಸ್ಮಿಕವಲ್ಲ. ಭಾರತದ ಮೂಲಭೂತ ವ್ಯವಸ್ಥೆಗಳಲ್ಲಾಗುತ್ತಿರುವ ಸುಧಾರಣೆಯು ನವೋದ್ಯಮಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಿವೆ.
ಯುವಕರು ಉದ್ದಿಮೆಗಳನ್ನು ಆರಂಭಿಸಲು ಅನುಕೂಲವಾಗುವಂತೆ 2015ರಲ್ಲಿ ಭಾರತ ಸರಕಾರವು ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯನ್ನು ಆರಂಭಿಸಿತು. ಹೊಸ ಉದ್ಯಮಿಗಳಿಗೆ ಮೂರು ವರ್ಷಗಳ ಕಾಲ ಉಚಿತವಾಗಿ ಕಚೇರಿ, ಇಂಟರ್ನೆಟ್, ವಿದ್ಯುತ್, ಪೀಠೊಪಕರಣಗಳನ್ನು ಒದಗಿಸುವ ಸ್ಟಾರ್ಟ್ ಅಪ್ ಸೆಂಟರ್‌ಗಳನ್ನು ದೇಶದೆಲ್ಲೆಡೆ ತೆರೆಯಲಾಯಿತು. ಪ್ರಸ್ತುತ ದೇಶದಲ್ಲಿ 326ಕ್ಕಿಂತಲೂ ಹೆಚ್ಚು ಸ್ಟಾರ್ಟ್ ಅಪ್ ಗಳಿವೆ. ನವೋದ್ಯಮಿಗಳಿಗೆ ಉದ್ಯಮವನ್ನು ಬೆಳೆಸಲು ಸಹಾಯಕ ವಾಗುವಂತೆ ಮೂಲಧನವನ್ನೂ ಸರಕಾರದ ವತಿಯಿಂದ ಕೊಡಲಾಗುತ್ತಿದೆ. ಮುದ್ರಾ ಸಾಲದಂತಹ ಯೋಜನೆಗಳೂ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಗೆ ಪೂರಕವಾಗಿ ಮೂಡಿ ಬಂದವು. ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಡಿಯಲ್ಲಿ ಆರಂಭವಾದ ನವೋದ್ಯಮಗಳ ಆದಾಯಕ್ಕೆ ಮೂರು ವರ್ಷಗಳಲ್ಲಿ ಕಾಲ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತಿದೆ. ಈ ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಆಂಜೆಲ್ ಇನ್ವೆಸ್ಟರ್‌ಗಳಿಗೂ ಈ ಹೂಡಿಕೆಯಿಂದ ಬಂದ ಲಾಭಾಂಶದ ಮೇಲೆ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ಈ ಪ್ರೋತ್ಸಾಹಕಗಳು ಹಾಗೂ ಸುಧಾರಣೆಗಳ ಪರಿಣಾಮ ವಾಗಿ ಯುವಕರು ನವೋದ್ಯಮ ಗಳತ್ತ ಆಕರ್ಷಿತರಾದರು. ಆಂಜೆಲ್ ಇನ್ವೆಸ್ಟರ್‌ಗಳು ಕೂಡ ಈ ನವೋದ್ಯಮಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದರು.
2013-14 ರ ಅವಧಿಯಲ್ಲಿ ಭಾರತವು ವಿಶ್ವಬ್ಯಾಂಕ್ ಬಿಡುಗಡೆ ಮಾಡುವ ಉದ್ಯಮ ಸ್ನೇಹೀ ರಾಷ್ಟ್ರಗಳ ಪಟ್ಟಿ “ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ನಲ್ಲಿ 142 ನೇ ಸ್ಥಾನದಲ್ಲಿತ್ತು. ಭಾರದಲ್ಲಿ ಸುಧಾರಿಸಲ್ಪಟ್ಟ ರಸ್ತೆ, ವಿದ್ಯುತ್, ನೀರು ಮೊದಲಾದ ಮೂಲಸೌಕರ್ಯಗಳು, ಕೇಂದ್ರ ಸರಕಾರದ ಮಟ್ಟದಲ್ಲಿ ಇಳಿಮುಖ ವಾದ ಭ್ರಷ್ಟಾಚಾರ, ಓಬೀರಾಯನ ಕಾಲದ ಕಾನೂನುಗಳನ್ನು ಸುಧಾರಣೆ ಮಾಡಿದ್ದು, ಚುರುಕುಗೊಂಡ ಸರಕಾರಿ ಆಡಳಿತ ವ್ಯವಸ್ಥೆ ಇವೇ ಮೊದಲಾದವುಗಳಿಂದಾಗಿ ಭಾರತವು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯಲ್ಲಿ 79 ಸ್ಥಾನಗಳನ್ನು ಏರಿ ಜಾಗತಿಕವಾಗಿ 63ನೇ ಸ್ಥಾನಕ್ಕೆ ತಲುಪಿತು. ಭಾರತದಲ್ಲಿ ಸುಲಲಿತ ವ್ಯವಹಾರಕ್ಕೆ ಪೂರಕವಾದ ವಾತಾವರಣವು ರೂಪುಗೊಂಡ ಪರಿಣಾಮವಾಗಿ ವಿದೇಶೀ ಹೂಡಿಕೆದಾರರು ಭಾರತದ ನವೋದ್ಯಮಗಳಲ್ಲೂ ಹೂಡಿಕೆಯನ್ನು ಮಾಡಲು ಆರಂಭಿಸಿದರು. 2021ನೇ ಇಸವಿಯಲ್ಲಿ ಭಾರತದ ಸ್ಟಾರ್ಟ್‌ಅಪ್‌ಗಳು 42 ಶತಕೋಟಿ ಡಾಲರ್‌ಗಳಷ್ಟು ನೇರ ವಿದೇಶೀ ಹೂಡಿಕೆಯನ್ನು ಆಕರ್ಷಿಸಿವೆ.
ಭಾರತದಲ್ಲಿ ಬದಲಾದ ಹೂಡಿಕೆ ಮತ್ತು ಉದ್ಯಮಾವಕಾಶವನ್ನು ಪ್ರತಿಭಾವಂತ ಹಾಗೂ ಯುವಕರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಭಾರತದಲ್ಲಿರುವ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳ ಸ್ಥಾಪಕರು ದೊಡ್ಡ ಆರ್ಥಿಕ ಹಿನ್ನೆ ಲೆಯ ಮನೆಗಳಿಂದ ಬಂದವರಲ್ಲ. ಬಹಳಷ್ಟು ಜನರು ಕೆಳ ಹಾಗೂ ಮಧ್ಯಮ ವರ್ಗದ ಆರ್ಥಿಕ ಹಿನ್ನೆಲೆಯಿಂದ ಬಂದವರು. ಗ್ರಾಮೀಣ ಹಿನ್ನೆಲೆಯಿಂದ ಬಂದವರೂ ಇದ್ದಾರೆ. ಪೇಟಿಎಂನ ಸ್ಥಾಪಕರಾದ ವಿಜಯ್ ಶಂಕರ ಶರ್ಮಾ ಅವರು ಉತ್ತರ ಪ್ರದೇಶದ ಅಲೀಘರ್‌ನ ಶಾಲಾ ಅಧ್ಯಾಪಕರ ಮಗ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿಂದಿ ಮಾಧ್ಯಮದಲ್ಲೇ ಪಡೆದವರು. ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಬೈಜೂಸ್‌ನ ಸ್ಥಾಪಕರಾದ ಬೈಜೂ ರವೀಂದ್ರನ್ ಅವರ ತಾಯಿ ವೃತ್ತಿಯಲ್ಲಿ ಗಣಿತ ಅಧ್ಯಾಪಿಕೆಯಾಗಿದ್ದರು. ನೈಕಾದ ಸ್ಥಾಪಕಿ ಫಲ್ಗುಣಿ ನಾಯರ್ ಅವರು ಸಣ್ಣ ಬೇರಿಂಗ್ ತಯಾರಕರ ಮಗಳು. ಓಯೋ ರೂಮ್ಸ್ ನ ಸ್ಥಾಪಕ ರಿತೇಶ್ ಅಗರ್ವಾಲ್ ಒಡಿಶಾದ ಸಣ್ಣ ವ್ಯಾಪಾರಿಯ ಮಗ. ಭಾರತದ ಸ್ಟಾರ್ಟ್‌ಅಪ್ ಹಾಗೂ ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳನ್ನು ನಡೆಸುತ್ತಿರುವವರಲ್ಲಿ ಬಹಳಷ್ಟು ಜನರು ಐಐಟಿ, ಐಐಎಂ, ಎಂಜಿನಿಯರಿಂಗ್ ಪದವೀಧರರಿದ್ದಾರೆ. ಕರ್ನಾಟಕದ ಬೆಂಗಳೂರು ಸ್ಟಾರ್ಟ್‌ಅಪ್‌ಗಳ ಆಕರ್ಷಣೆಯ ತಾಣವಾಗಿ ಬೆಳೆಯುತ್ತಿದ್ದು ಭಾರತದ 100 ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳಲ್ಲಿ 40 ಸ್ಟಾರ್ಟ್‌ಅಪ್‌ಗಳ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
-ಗಣೇಶ್ ಭಟ್, ವಾರಣಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.