ರೈತರಲ್ಲಿ “ಅರಿವಿನ ಕ್ರಾಂತಿ’ ಅನಿವಾರ್ಯ
Team Udayavani, Feb 11, 2018, 2:45 AM IST
ಮಾನವನ ಪ್ರತಿಯೊಂದು ಚಟುವಟಿಕೆಯಲ್ಲೂ ವಿಜ್ಞಾನ ತಂತ್ರಜ್ಞಾನಗಳ ಬಳಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗೀಗ ಶರವೇಗದಲ್ಲಿ ಹೆಚ್ಚಲಾರಂಭಿಸಿದೆ ಎನ್ನಬಹುದು. ವಿಜ್ಞಾನ ತಂತ್ರಜ್ಞಾನಗಳ ಬಳಕೆ ಎಲ್ಲ ವರ್ಗದ ಜನರ ಮತ್ತು ಜಾನುವಾರುಗಳ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿರುವುದೂ ಸರ್ವವೇದ್ಯ. ವಿವಿಧ ದೇಶಗಳಲ್ಲಿ ಜನಸಾಮಾನ್ಯರು ಅವರವರ ವ್ಯವಸ್ಥೆಯಲ್ಲಿ ಮತ್ತು ಉದ್ಯಮಗಳಲ್ಲಿ ಅವರವರ ಅರಿವು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ರೀತಿಯ ಲಾಭದಿಂದ ವಂಚಿತರಾದವರು ಬೇರಾರೂ ಅಲ್ಲ, ಭಾರತದ ರೈತರು ಎನ್ನು ವುದು ಆಶ್ಚರ್ಯಕರ ಸತ್ಯ ಸಂಗತಿಯಾಗಿದೆ. ಭಾರತ ದಾದ್ಯಂತ ಹಳ್ಳಿಯಿಂದ ದಿಲ್ಲಿಯವರೆಗೂ ರಾಜಕೀಯದಲ್ಲಿ ತೊಡಗಿರುವ ನಾಯಕರು, ಮೇಲ್ದರ್ಜೆಯ ಅಧಿಕಾರಿಗಳು ಮತ್ತು ವಿಶ್ವ ವಿದ್ಯಾಲಯ-ಮಹಾವಿದ್ಯಾಲಯಗಳ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು, ವರ್ತಕರು, ಕಲಾವಿದರು, ದಲ್ಲಾಳಿ ಮತ್ತು ಅಂತ ಹುದೇ ವೃತ್ತಿಯಲ್ಲಿರುವ ಮಧ್ಯವರ್ತಿಗಳು ವಿಜ್ಞಾನ ತಂತ್ರ
ಜ್ಞಾನದ ಪ್ರಯೋಜನ ಪಡೆಯುತ್ತಿರುವುದರಲ್ಲಿ ನಿಸ್ಸೀಮರೇ ಆಗಿದ್ದು ಮುಂಚೂಣಿಯಲ್ಲಿದ್ದಾರೆ. ಇದು ಸ್ವಾಗತಾರ್ಹ. ಇದಾವುದನ್ನೂ ಅಷ್ಟಾಗಿ ತಿಳಿಯದ ರೈತ ಕೇವಲ ನ್ಯಾಯಯುತ ಬೆಲೆಯೊಂದನ್ನು ಬೇಡುತ್ತಲೇ ಇದ್ದಾನೆ. ಪ್ರೊ| ಎಂ.ಎಸ್. ಸ್ವಾಮಿನಾಥನ್ ಅವರು ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ಸೂತ್ರಗಳನ್ನು ತಮ್ಮ ವರದಿಯಲ್ಲಿ ಸೂಚಿಸಿ ಜಾರಿಗೆ ತರಲು ಶಿಫಾರಸ್ಸು ಮಾಡಿ ದಶಕಗಳೇ ಕಳೆದಿವೆ. ಆದರೆ ವೈಜ್ಞಾನಿಕ ಬೆಲೆ ಇಂದಿಗೂ ಕನಸಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ರೈತರ ಒಂದಿಷ್ಟು ಸತ್ಯಾಂಶಗಳನ್ನು ಓದುಗರಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.
ಜನ ಜಾನುವಾರುಗಳ, ಮಾನವ ಕೋಟಿಯ ಉಸಿರು ಎಂದರೆ ರೈತ. ಯಾವುದೇ ಪ್ರಾಣಿಯ ದೇಹಕ್ಕೆ/ಶರೀರಕ್ಕೆ ಅಥವಾ ಸಸ್ಯದ ಉಳಿವು ಮತ್ತು ಬೆಳವಣಿಗೆಗೆ ಆಮ್ಲಜನಕ ಅವಶ್ಯಕವಿದ್ದಂತೆ. ಸ್ವಾರ್ಥಿ ಮಾನವ ಸುಖವಾದ ಪರಿಸರ, ಮನೆ, ಮಠ, ಆಹಾರ, ಹೊಟ್ಟೆ, ಬಟ್ಟೆ ಹೀಗೆ ತನ್ನ ಎಲ್ಲಾ ಸೌಕರ್ಯಗಳತ್ತ ಮಾತ್ರ ಹೆಚ್ಚು ಆಸಕ್ತಿಯಿಟ್ಟು ಇತರ ಜೀವಿಗಳ ಕಡೆಗೆ ಗಮನವಿಡಲು ಸಮಯವಿಲ್ಲದಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಂಡು ಜೀವಿಸುತ್ತಿದ್ದಾನೆ. ಪರಿಸರ, ಭೂಮಿ, ನೆಲ, ಜಲ, ಜನ ಜಾನು ವಾರು ಮತ್ತು ಇತರ ಜೀವಿಗಳತ್ತ ಸೂಕ್ತ ಗಮನವೀಯದ ಕಾರಣ ಮುಂದಿನ ದಿನಗಳಲ್ಲಿ ಸಂಭವಿಸ ಬಹುದಾದ ಗಂಭೀರ ಪರಿಣಾ ಮದ ಅರಿವಿಲ್ಲವಾಗಿದೆ ಮತ್ತು ಈಗಿನ ಜನ ಪ್ರತಿನಿಧಿಗಳೂ ಕೂಡ ಕೇವಲ ತಮ್ಮದೇ ಅನುಕೂಲಗಳು ಮತ್ತು ಸೌಲಭ್ಯಗಳನ್ನು ಉನ್ನತೀ ಕರಿಸುವುದರಲ್ಲಿಯೇ ಮಗ್ನರಾಗಿ ಕರ್ತವ್ಯವನ್ನು ಮರೆತಿ ದ್ದಾರೆ. ಪ್ರಜೆಗಳ ಒಳಿತಿಗಾಗಿ ಪರಿಣಾಮಕಾರಿ ನೀತಿ ನಿಯಮ ಗಳನ್ನು ಜಾರಿಗೆ ತರುವುದರತ್ತ ನಿರೀಕ್ಷಿತ ಆಸಕ್ತಿ ವಹಿಸುವುದರಲ್ಲಿ ವಿಫಲರಾಗಿದ್ದಾರೆ. ಇದೆಲ್ಲಾ ಭಯಂಕರ ಭವಿಷ್ಯದತ್ತ ಬೆರಳು ಮಾಡಿ ತೋರುತ್ತಿದೆ ಎಂದೇ ಹೇಳಬಹುದು. ಈ ಪ್ರವೃತ್ತಿಯಿಂದ ಮುಂದೆ ಸಂಭವಿಸಬಹುದಾದ ಪ್ರತಿಕೂಲ ಸನ್ನಿವೇಶಗಳತ್ತ ಗಮನ ಸೆಳೆಯುವಂತೆ ಹಾಗೂ ರೈತರ ಆತ್ಮಹತ್ಯೆ ತಡೆಯುವುದು. ಪರಿಸರ ಸಮತೋಲನ ಕಾಪಾಡುವಿಕೆ, ಕೃಷಿ ಭೂಮಿಯ ಫಲವ ತ್ತತೆ ಕಾಪಾಡುವುದು. ರೈತರ ಭೂಮಿಯಲ್ಲೇ ಕೃಷಿ ಒಳಸುರಿಗಳ ಉತ್ಪಾದನೆ, ಪೌಷ್ಟಿಕ ಆಹಾರ ಉತ್ಪಾದನೆಯ ಮೂಲಕ ಅಪೌಷ್ಟಿಕತೆ ಯಿಂದ ಸಾವನ್ನ ಪ್ಪುತ್ತಿರುವವರ ಸಂಖ್ಯೆಯನ್ನು ಇಳಿಸಬೇಕಾದತ್ತ ಸಂಶೋಧನೆ ಮತ್ತು ತಾಂತ್ರಿಕತೆಗಳತ್ತ ಗಮನ ಸೆಳೆಯುವ ಮತ್ತು ಸಂಬಂಧ ಪಟ್ಟವರನ್ನೆಲ್ಲಾ ಅವುಗಳ ಸಾರ್ಥಕ ಬಳಕೆಗೆ ಪ್ರೇರೇಪಿಸಿ ಆಕರ್ಷಿಸುವ ಉದ್ದೇಶದಿಂದ ಲೇಖನದಲ್ಲಿ ಒಂದಿಷ್ಟು ಮಾಹಿತಿಯನ್ನು ಕೊಡಲಾಗಿದೆ.
ಅನಾದಿಕಾಲದಿಂದಲೂ ಜಗತ್ತಿನಾದ್ಯಂತ ಆಹಾರ ಮತ್ತು ಅಹಾರೇತರ ಸಾಮಗ್ರಿಗಳನ್ನು ಉತ್ಪಾದಿಸಿ ಜನ ಜಾನುವಾರು
ಗಳ ಬೇಡಿಕೆ ಪೂರೈಸುವ ಸಂಪ್ರದಾಯ ಇಟ್ಟುಕೊಂಡು ಬಂದಿರುವ ಮನುಕುಲದ ಏಕೈಕ ಜೀವಿ ಎಂದರೆ “ರೈತ’. ಈ ಯೋಗಿ ಇಲ್ಲದೇ ಜಗತ್ತಿನಲ್ಲಿ ಏನೊಂದೂ ನಡೆಯಲಾರದು. ಅದರಲ್ಲೂ ಭಾರತದ ರೈತ/ಅನ್ನದಾತ, ಕಾಯಕ ಯೋಗಿ ಮತ್ತು ಅವನ ದುಡಿಮೆಯೇ ನಿಸ್ವಾರ್ಥ ಕಾಯಕಕ್ಕಾಗಿ ಎಂಬುದನ್ನು ಯಾರೇ ಆದರೂ ಅಲ್ಲಗಳೆಯುವಂತಿಲ್ಲÉ. ಅಧ್ಯಾತ್ಮದ ಚೌಕಟ್ಟಿನಲ್ಲಿ ದುಡಿಯುವುದು. ದುಡಿಮೆಯಿಂದ ಫಲಿಸಿದ ಆಹಾರ ಮತ್ತು ಆಹಾರೇತರ ಪದಾರ್ಥಗಳನ್ನು ಬಳಸಿ ಜನ, ಜಾನುವಾರುಗಳ ಹೊಟ್ಟೆ ತುಂಬಿಸು ವುದೇ ಅವನ ಸಂಪ್ರದಾಯ ಹಾಗೂ ಇಂದಿಗೂ ಅವನ ಪ್ರಥಮ ಆದ್ಯತೆಯಾಗಿದೆ. ಅದೇ ಅವನ ತೃಪ್ತಿ – ಸಂತೃಪ್ತಿಯ ಏಕೈಕ ಮೂಲ ಸೆಲೆಯಾಗಿದೆ. ಹಾಗಾಗಿ ಅವನಿಗೆ ಇತರ ವಿಷಯಗಳತ್ತ ಗಮನ ಹರಿಸುವ ಅವಕಾಶಗಳೇ ಇಲ್ಲ.
ರೈತರ ಸಾಮರ್ಥ್ಯವನ್ನು ಹಾಗೂ ಜನ – ಜಾನುವಾರುಗಳ ರೈತರ ಮೇಲಿನ ಅವಲಂಬನೆ, ಅವುಗಳನ್ನು ಅರಿಯುವ/ಅಳೆಯುವ ಸಂದರ್ಭ ಜಗತ್ತಿನ ಯಾವುದೇ ಭಾಗದಲ್ಲಿ ಈವರೆಗೆ ಒದಗಿ ಬಂದಿಲ್ಲ. ರೈತನ ದುಡಿಮೆ ಮತ್ತು ಕೊಡುಗೆ ಇತರರ ಅರಿವಿಗೆ ಬಂದಿಲ್ಲ; ಬರಬೇಕು ಎಂಬ ಕೊರಗೂ ನಿಸ್ವಾರ್ಥಿ ರೈತನಲ್ಲಿಲ್ಲ. ಇಂದಿಗೂ ದುಡಿಮೆಯೇ ಬದುಕಿನ ಧ್ಯೇಯ ಎಂದೇ ತಿಳಿದಿರುವ ಮಾನವ ಕುಲದ ಒಂದೇ ಒಂದು ವರ್ಗ ರೈತಾಪಿ ವರ್ಗ ಮಾತ್ರ. ಒಂದು ಕಾಲದಲ್ಲಿ ಒಂದು ತಪಸ್ಸೇ ಆಗಿದ್ದ ಈ ಕಾಯಕ ಯೋಗಿಯ ಪ್ರವೃತ್ತಿ ಅಕಾಲಿಕ. ಈಗಿನ ಬದಲಾದ ಸಂಸ್ಕೃತಿಗೆ ತಕ್ಕುದಲ್ಲ ಎಂದು ಹೇಳುವುದು ಅನಿವಾರ್ಯವಾಗಿದೆ. ಸಮಾಜದ ಎಲ್ಲಾ ವರ್ಗದಲ್ಲೂ ರೈತರಲ್ಲಿ ಸುಪ್ತವಾಗಿರುವ ಸಾಮರ್ಥ್ಯ, ಅವರ ಮಹತ್ವ ಇತರ ಸಾಮರ್ಥ್ಯಗಳ ಬಗ್ಗೆ ಸಮಾಜದ ಎಲ್ಲಾ ವರ್ಗದವರಿಗೂ ಬಗ್ಗೆ ಅರಿವು ಉಂಟು ಮಾಡಬೇಕು.
ರೈತರು ತಾವು ಉತ್ಪಾದಿಸಿದ ಯಾವುದೇ ಸರಕುಗಳನ್ನು ಒತ್ತಡದ ಮಾರಾಟದ ಪಿಡುಗಿನಿಂದ ವಿಮುಕ್ತಗೊಳಿಸಿ, ಅದಕ್ಕಾಗಿ ಅವಶ್ಯವಿರುವ “ಕೋಲ್ಡ್ ಚೈನ್’ ಸೌಲಭ್ಯಗಳನ್ನು ಅವಶ್ಯವಿರುವ ಎಲ್ಲಾ ಪಂಚಾಯತಿಗಳಲ್ಲಿ ಕಲ್ಪಿಸಬೇಕು. ಸಾಲ ಸೌಲಭ್ಯ ಸುಲಭವಾಗಿ ಸಾರ್ವಜನಿಕ ಬ್ಯಾಂಕುಗಳಿಂದ ದೊರಕುವಂತೆ ಮಾಡಿ ಖಾಸಗಿ ಲೇವಾದೇವಿಯವರ ಸುಲಿಗೆ, ಶೋಷಣೆ ಯಿಂದ ಪಾರು ಮಾಡಬೇಕು.
ವೈಜ್ಞಾನಿಕವಾಗಿ ಪರವಾನಗಿ ಪಡೆದಿರುವ ತಾಂತ್ರಿಕತೆಯನ್ನು ರೈತರು ಅಳವಡಿಸಿ ಅದರಿಂದ ಲಾಭ ಪಡೆಯುವಂತೆ ಬೇಕಾದ ನೀತಿ ನಿಯಮಗಳನ್ನು ರೂಪಿಸಬೇಕು. ಬಿ.ಟಿ. ಹತ್ತಿ, ಗಿಡ್ಡ ಭತ್ತ ಮತ್ತು ಗೋಧಿ ತಳಿಗಳಿಂದ ದೊರಕಿದ ಲಾಭ (ಹಸಿರು ಕ್ರಾಂತಿ), ಈಗೀಗ ಪ್ರಚಾರಕ್ಕೆ ಬರುತ್ತಿರುವ ಸಿರಿ ಧಾನ್ಯಗಳಲ್ಲೂ ಅಭಿವೃದ್ಧಿ ಪಡಿಸಿ ರೈತರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಾಕಷ್ಟು ಸಂಶೋಧನಾ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿ, ಅಧಿಕ ಇಳುವರಿ ತಳಿಗಳನ್ನು ಜನಪ್ರಿಯಗೊಳಿಸ ಬೇಕು. ಇತ್ತೀಚೆಗೆ ಸಾಂದ್ರ ಬೇಸಾಯ ಪದ್ಧತಿ, ಬಹು ಬೆಳೆ ಪದ್ಧತಿ. ಅಧಿಕ ಇಳುವರಿ ಪದ್ಧತಿಗಳಿಂದ ಸಾರವನ್ನು ಕಳೆದು ಕೊಳ್ಳುತ್ತಿ ರುವ ಮಣ್ಣಿನ ಫಲವತ್ತೆಯನ್ನು ಕಾಪಾಡಲು ಬೇಕಾದ ತಾಂತ್ರಿಕತೆಗಳ ಸಂಶೋಧನೆಗೆ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು.
ಶತಮಾನಗಳಿಂದ ರೈತರು ಸಾರ್ವಜನಿಕರ ಹಣ ಬಳಸದೇ ತಾವೇ ಸಂಶೋಧಿಸಿರುವ ಅನೇಕ ತಾಂತ್ರಿಕತೆಗಳ ಖಜಾನೆ ನಮ್ಮ ದೇಶ. 2010ರಲ್ಲಿ ಸುತ್ತೂರಿನಲ್ಲಿ ನಡೆದ 200 ರಾಷ್ಟ್ರ ಪ್ರಶಸ್ತಿ ವಿಜೇತ ರೈತರ ಸಮ್ಮೇಳನದಲ್ಲಿ ತಿಳಿದು ಬಂದ ಸತ್ಯಾಂಶ. ಇದಕ್ಕೆ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ರಾಷ್ಟ್ರದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರಕುವ ದಾಖಲೆಗಳೇ ಸಾಕ್ಷಿ. ಇದಾವುದರ ಕಡೆ ಸಂಬಂಧಪಟ್ಟವರು ಮತ್ತು ಮಾಧ್ಯಮಗಳು ಅಷ್ಟೊಂದು ಗಂಭೀರವಾಗಿ ಗಮನಹರಿಸಿ ಪ್ರಚಾರಕ್ಕೆ ತರದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇವುಗಳನ್ನು ಸಹ ವೈಜ್ಞಾನಿಕವಾಗಿ ಪರಿಶೀಲಿಸಿ ಸಾಕಷ್ಟು ಪ್ರಚಾರಗೊಳಿಸಿ ಜನಪ್ರಿಯಗೊಳಿಸಿ ಅವುಗಳ ಪ್ರಯೋಜನ ಪಡೆದುಕೊಳ್ಳಲು ಇದೀಗ ಪರ್ವಕಾಲ.
ಮಾಡಬೇಕಿರುವ ಕೆಲಸವನ್ನೇ ಮರೆತಿರುವ ವಿಸ್ತರಣಾ ವ್ಯವಸ್ಥೆಯನ್ನು ಸಾಕಷ್ಟು ಬಂಡವಾಳ ಒದಗಿಸಿ ಇಡೀ ವ್ಯವಸ್ಥೆಯನ್ನೇ ಪುನರಚಿಸಿ ಹೆಚ್ಚು ಪರಿಣಾಮಕಾರಿಯಾಗಿ ತಾಂತ್ರಿಕತೆ ಬದಲಾಯಿಸಲು ಆದ್ಯತೆ ಕೊಡಬೇಕು.
ದುರ್ಬಲಗೊಂಡಿರುವ ರೈತ ಸಂಘಟನೆಗಳನ್ನು 1970-80ರ ದಶಕದಲ್ಲಾದಂತೆ ಪುನರ್ ಸಂಘಟಿಸಿ ಅರ್ಥಪೂರ್ಣವಾಗಿ ಪ್ರಣಾಳಿಕೆಗಳನ್ನು ರಚಿಸಿ ಅನುಭಾವಿ ಮತ್ತು ಕೃಷಿ ವಿಜ್ಞಾನಿಗಳನ್ನು ಸದಸ್ಯರುಗಳನ್ನಾಗಿ ಮಾಡಿ ಅವರ ಸಲಹೆಗಳನ್ನು ಪಡೆಯಬೇಕು.
ರೈತರು ಇದೀಗ ಮಾರುಕಟ್ಟೆಯನ್ನು ಗಮನಿಸಿ ವೈವಿಧ್ಯಮಯ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ಬೆಳೆ ಇದ್ದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ ಎನ್ನುವ ಸಮಸ್ಯೆಗೆ ಇದುವೆ ಪರ್ಯಾಯ. ರೈತರು ಒಂದು ಅಥವಾ ಕೆಲವೇ ಬೆಳೆಗಳ ಮೇಲೆ ಅವಲಂಬಿತರಾಗದೆ ಬಹು ಬೆಳೆ, ಸಮಗ್ರ ಬೇಸಾಯ ಪದ್ಧತಿ ಅಳವಡಿಸುವುದು ಸೂಕ್ತ. ಅದರಲ್ಲೂ ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ ಹೀಗೆ ಸಾಧ್ಯವಿರುವ ಉಪ ಕಸುಬುಗಳನ್ನು ಒಳಗೊಂಡ ಸಾಂಪ್ರ ದಾಯಿಕ ಕೃಷಿಗೆ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನೂ ಸೇರಿಸಿಕೊಳ್ಳುವಂತಾಗಬೇಕು.
ಈಗಿನ ಸ್ಥಿತಿಯಲ್ಲಿ ರೈತ ಸಂಘಟನೆಗಿಂತ ಪ್ರಭಾವ ಬೀರಬಲ್ಲ ಯಾವುದೇ ಶಕ್ತಿ ಇಲ .É”ಫಾರ್ಮರ್ ಪವರ್’ ಬಳಸಿ ರೈತ ಸಂಘಟನೆಯಾದಾಗ ಮಾತ್ರ ರೈತರ ಈಗಿನ ಸ್ಥಿತಿಯನ್ನು ಸುಧಾರಿಸಲು ಸಾಧ್ಯ. “ಫಾರ್ಮರ್ ಪವರ್’ಅಂದರೆ ಇದುವರೆಗೂ ಬಳಕೆಯಾಗದೇ ಇರುವ ರೈತರಲ್ಲಿ ಅಡಗಿರುವ ಸಾಮರ್ಥ್ಯ ಒಂದಿದೆ. ಅದನ್ನು ಈಗ ಪ್ರಯೋಗಿಸಬೇಕಾಗಿದೆ. ಪ್ರಯೋಗಿಸಿ ಪ್ರಮಾಣೀಕರಿಸಬೇಕಾಗಿದೆ.
ಪ್ರೊ| ಎಂ. ಮಹದೇವಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.