ಉದ್ಯೋಗದಲ್ಲಿ ಕೌಶಲಾಭಿವೃದ್ಧಿ ಸಂಸ್ಥೆಗಳ ಪಾತ್ರ
Team Udayavani, Apr 14, 2022, 6:35 AM IST
ಕೌಶಲ ಎಂಬುದು ಒಂದು ನಿರ್ದಿಷ್ಟ ಸಮಯ, ಶಕ್ತಿ ಅಥವಾ ಎರಡರೊಳಗೆ ಉತ್ತಮ ಕಾರ್ಯಗತ ಗೊಳಿಸುವಿಕೆಯೊಂದಿಗೆ ನಿರ್ಧರಿಸಿದ ಫಲಿತಾಂಶಗಳೊಂದಿಗೆ ಕ್ರಿಯೆಯನ್ನು ಮಾಡಲು ಕಲಿತ ಸಾಮರ್ಥ್ಯವಾಗಿದೆ. ತಾಂತ್ರಿಕ ಕೌಶಲಗಳು ಎಂದು ಕರೆಯಲ್ಪಡುವ ಕಠಿನ ಕೌಶಲಗಳು, ಪ್ರಕ್ರಿಯೆಗಳು, ಕಾರ್ಯವಿಧಾನಗಳು ಹಾಗೂ ತಂತ್ರಗಳನ್ನು, ಒಂದು ನಿರ್ದಿಷ್ಟ ಚಟುವಟಿಕೆ ಗಳಲ್ಲಿ ತಿಳಿವಳಿಕೆ ಮತ್ತು ಪ್ರಾವೀಣ್ಯವನ್ನೂ ಒಳ ಗೊಂಡಿರುತ್ತದೆ. ಈ ಕೌಶಲಗಳು ಒಬ್ಬರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಮೃದು ಕೌಶಲಗಳಿಗಿಂತ ಭಿನ್ನವಾಗಿ ಸುಲಭವಾಗಿ ಪ್ರಮಾಣೀಕರಿಸಲ್ಪಡುತ್ತದೆ.
ಕೌಶಲಗಳು ಹೊಸದೇನಲ್ಲವಾಗಿದ್ದು ಹಿಂದೆಯೂ ಕೌಶಲದ ಬಳಕೆ ಇತ್ತು ಎಂಬುದಕ್ಕೆ ಸಾಕಷ್ಟು ಉದಾಹರಣೆ, ನಿದರ್ಶನಗಳನ್ನು ನಮ್ಮ ಪುರಾಣ, ಇತಿಹಾಸದಲ್ಲಿ ಕಾಣಬಹುದು. ಹಿಂದಿನ ನಾಗರಿಕರು ತಾಮ್ರ, ಕಂಚು, ಸೀಸ ಮತ್ತು ತವರದಂತಹ ಲೋಹ ಗಳ ಬಳಕೆಯಲ್ಲಿ ಪರಿಣತರಾಗಿದ್ದರು ಎಂಬುದಕ್ಕೆ ನೃತ್ಯಗಾರ್ತಿಯರ ಕಂಚಿನ ಪ್ರತಿಮೆಗಳು, ವೈಯಕ್ತಿಕ ಮುದ್ರೆಗಳು ಸಾಕ್ಷಿಯಾಗಿವೆ. ಅದಲ್ಲದೆ ಸಮರ ಕೌಶಲ ವಿದ್ಯೆಗಳಲ್ಲಿ ಒಂದಾದ ಧನುರ್ವಿದ್ಯೆಗಳಲ್ಲಿ ನಮ್ಮ ಪೂರ್ವಿಕರು ಪರಿಣತರಾಗಿದ್ದರು ಎಂಬುದಕ್ಕೆ ಮಹಾ ಭಾರತ ದಲ್ಲಿ ಬರುವ ಅರ್ಜುನನ ಕಥೆಯೇ ಸಾಕ್ಷಿ. ಸತುಲೋಹ ಭಟ್ಟಿ ಇಳಿಸುವ ಕ್ಲಿಷ್ಟ ಪ್ರಕ್ರಿಯೆಯೂ ಪ್ರಾಚೀನ ಭಾರತೀಯರಿಗೆ ಗೊತ್ತಿತ್ತು ಎಂಬುದು ಹೊಸದೇನಲ್ಲ. ಕೌಶಲಾಭಿವೃದ್ಧಿ ಎಂದರೆ ಯುವಕರಲ್ಲಿ ಕೌಶಲದ ಅಂತರವನ್ನು ಗುರುತಿಸುವ ಮತ್ತು ಅವರಿಗೆ ಕೌಶಲ ತರಬೇತಿ ಮತ್ತು ಉದ್ಯೋಗದ ಪ್ರಯೋಜ ನಗಳನ್ನು ಒದಗಿಸುವ ಪ್ರಕ್ರಿಯೆಯಾಗಿದೆ. ಕೌಶಲಾಭಿ ವೃದ್ಧಿಯು ಉದ್ಯೋಗ ಆಧಾರಿತವಾಗಿರಬೇಕು ಮತ್ತು ಮಾರುಕಟ್ಟೆ ಚಾಲಿತವಾಗಿರಬೇಕು.
ಕೌಶಲಾಭಿವೃದ್ಧಿ ಸಂಸ್ಥೆಗಳು ಪರಿಕರ ಮತ್ತು ನಿಖರವಾದ ಉತ್ಪಾದನ ತಂತ್ರಜ್ಞಾನಕ್ಕೆ ಸಂಬಂಧಿಸಿದ ತರಬೇತಿ, ಉತ್ಪಾದನೆ, ಸಂಶೋಧನ ಅಭಿವೃದ್ಧಿ ಮತ್ತು ಸಲಹಾ ಸೇವೆಗಳಲ್ಲಿ ಅಂತಾರಾಷ್ಟ್ರೀಯ ಶ್ರೇಷ್ಠತೆಯ ಕೇಂದ್ರವಾಗಿ ಹೊರಹೊಮ್ಮುವ ಪರಿಕಲ್ಪನೆಯಿಂದ ಅಂತಿಮ ಉತ್ಪನ್ನದವರೆಗಿನ ದೃಷ್ಟಿಕೋನ ಹೊಂದಿರ ಬೇಕು. ತರಬೇತಿಯಲ್ಲಿನ ಕೌಶಲಗಳನ್ನು ನಿರಂತರವಾಗಿ ಸುಧಾರಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಜಗತ್ತಿನ ಮುಂಚೂಣಿಯಲ್ಲಿರುವ ಗುರಿಗಳನ್ನು ಹೊಂದಿರಬೇಕು. ಅದಲ್ಲದೆ ಉದ್ಯೋಗ ಕೌಶಲ ಹೊಂದಿರುವ ಯುವಕರಿಗೆ ತಾಂತ್ರಿಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು, ಅಂತಾರಾಷ್ಟ್ರೀಯ ಗುಣಮಟ್ಟದ ಪರಿಕರಗಳನ್ನು ಒದಗಿಸುವ ಮೂಲಕ ತಾಂತ್ರಿಕ ಉನ್ನತೀಕರಣದಲ್ಲಿ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ನುರಿತ ಕಾರ್ಯಪಡೆಯನ್ನು ಒದಗಿಸುವ ಉದ್ದೇಶಗಳನ್ನು ಹೊಂದಿರಬೇಕಾಗುತ್ತದೆ.
ವಿಶ್ವ ಕೌಶಲಾಭಿವೃದ್ಧಿ ಕೇಂದ್ರದ ಮಾಹಿತಿ ಪ್ರಕಾರ, ಅತೀ ಹೆಚ್ಚಿನ ನುರಿತ ಕಾರ್ಯಪಡೆ ಹೊಂದಿರುವ ದೇಶಗಳಲ್ಲಿ ದಕ್ಷಿಣ ಕೊರಿಯಾ, ಜಪಾನ್, ಜರ್ಮನಿ, ಇಂಗ್ಲೆಂಡ್, ಅಮೆರಿಕ ಮುಂಚೂಣಿಯಲ್ಲಿದ್ದರೆ ಭಾರತವು ಕೇವಲ ಶೇ.4.69ರಷ್ಟು ನುರಿತ ಕಾರ್ಯ ಪಡೆಯನ್ನು ಹೊಂದಿದೆ. ಭಾರತದಂತಹ ಅಭಿವೃದ್ಧಿ ಪಥದಲ್ಲಿ ಮುಂದುವರಿಯುವಂತಹ ದೇಶದ ಪ್ರಮುಖ ಸಮಸ್ಯೆಗಳೆಂದರೆ-
- ಪ್ರವೇಶ ಮತ್ತು ಪೂರ್ಣಗೊಳಿಸುವಿಕೆ: ಶಿಕ್ಷಣ ಅಥವಾ ತರಬೇತಿ ಕಾರ್ಯಕ್ರಮಗಳಿಗೆ ಸೇರಲು ಬಯಸುವ ಅನೇಕ ವಿದ್ಯಾರ್ಥಿಗಳು ತಮ್ಮ ಅಧ್ಯಯನ ವನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸುವುದು.
- ಗುಣಮಟ್ಟ : ಶಿಕ್ಷಣದ ಗುಣಮಟ್ಟ ಕೌಶಲಾಭಿ ವೃದ್ಧಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಅನೇಕ ದೇಶಗಳಲ್ಲಿ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ವ್ಯವಸ್ಥೆಗಳು ಗುಣಮಟ್ಟದ ಭರವಸೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿದೆ.
- ಪ್ರಸ್ತುತತೆ: ತಾಂತ್ರಿಕ ಮತ್ತು ಔದ್ಯೋಗಿಕ ಶಿಕ್ಷಣ ಮತ್ತು ತರಬೇತಿ ಯುವಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಉತ್ತಮ ಸಂಬಳದ ಉದ್ಯೋಗ ಗಳಿಗಾಗಿ ಸ್ಪರ್ಧಿಸುವ ಕೌಶಲಗಳನ್ನು ನೀಡುತ್ತದೆ. ಆದರೆ ಸ್ಥಳೀಯ ಉದ್ಯೋಗದಾತರನ್ನು ತೊಡಗಿಸಿ ಕೊಳ್ಳುವ ವಿಷಯದಲ್ಲಿ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.
- ದಕ್ಷತೆ: ಆಡಳಿತ, ಹಣಕಾಸು ಮತ್ತು ಗುಣಮಟ್ಟದ ಭರವಸೆಗೆ ಸಂಬಂಧಿಸಿದ ಸವಾಲುಗಳು ಕೌಶಲಾಭಿವೃದ್ಧಿ ಕಾರ್ಯಕ್ರಮಗಳ ದಕ್ಷತೆಯ ಮೇಲೂ ಪರಿಣಾಮ ಬೀರುತ್ತದೆ. ಅನಗತ್ಯವಾಗಿ ಹೆಚ್ಚಿನ ವೆಚ್ಚಗಳು, ಅನಾನು ಕೂಲಕರ ಅವಕಾಶಕ್ಕೆ ದಾರಿ ಮಾಡಿಕೊಡುತ್ತದೆ.
ಈ ಮೇಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕೆಳಗಿನ ಕಾರ್ಯವಿಧಾನಗಳನ್ನು ಅಳವಡಿಸಿ ಕೊಳ್ಳಬಹುದು:
- ಆರಂಭದಲ್ಲಿ ತಾಂತ್ರಿಕ ಅರಿವಿನ ನಡವಳಿಕೆ ಮತ್ತು ಡಿಜಿಟಲ್ ಕೌಶಲಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಕ್ಕಳನ್ನು ಆರಂಭಿಕ ಹಂತದಲ್ಲಿಯೇ ಕೌಶಲಕ್ಕೆ ಸಜ್ಜುಗೊಳಿಸುವುದು. ಇದು ಅನಂತರದ ಯಶಸ್ಸಿಗೆ ಚೌಕಟ್ಟನ್ನು ರಚಿಸಿದಂತಾಗುತ್ತದೆ.
- ಸ್ಪಷ್ಟ ಕಲಿಕೆಯ ಮಾನದಂಡಗಳು, ಉತ್ತಮ ಶಿಕ್ಷಕರು, ಸಾಕಷ್ಟು ಸಂಪನ್ಮೂಲಗಳು ಮತ್ತು ಸರಿಯಾದ ನಿಯಂತ್ರಕ ಪರಿಸರದೊಂದಿಗೆ ಬಲವಾದ ವ್ಯವಸ್ಥೆ ಯನ್ನು ನಿರ್ಮಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳು ಕಲಿಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳವುದು.
- ಉದ್ಯೋಗಪೂರ್ವ ಮತ್ತು ಉದ್ಯೋಗ ತರಬೇತಿ ಕಾರ್ಯಕ್ರಮಗಳು ಹಾಗೂ ಸಂಸ್ಥೆಗಳಿಗೆ ಸರಿಯಾದ ಪ್ರೋತ್ಸಾಹವನ್ನು ಅಭಿವೃದ್ಧಿಪಡಿಸುವ ಮೂಲಕ ಉದ್ಯೋಗ ಸಂಬಂಧಿತ ಕೌಶಲಗಳನ್ನು ನಿರ್ಮಿಸುವುದು.
- ಜ್ಞಾನ ಮತ್ತು ಸೃಜನಶೀಲತೆಯಲ್ಲಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ವಾತಾವರಣವನ್ನು ಸೃಷ್ಟಿಸುವ ಮೂಲಕ ಹೂಡಿಕೆಗಳನ್ನು ಉದ್ಯಮಶೀಲತೆ ಮತ್ತು ನವೀನತೆಯನ್ನು ಉತ್ತೇಜಿಸುವುದು.
- ಹೆಚ್ಚು ಹೊಂದಿಕೊಳ್ಳುವ, ದಕ್ಷ ಮತ್ತು ಸುರಕ್ಷಿತ ಕಾರ್ಮಿಕ ಚಲನಶೀಲತೆ ಮತ್ತು ಕೆಲಸದ ಹೊಂದಾ ಣಿಕೆಯನ್ನು ಸುಲಭಗೊಳಿಸುವುದು.
-ಅದಲ್ಲದೆ ಕೌಶಲಮಾಪನ ಕಾರ್ಯಕ್ರಮಗಳನ್ನು ಕೈಗೊಂಡು ಸಮೀಕ್ಷೆಗಳ ಮೂಲಕ ಕೌಶಲ ಕಾರ್ಯ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವ ಬಗ್ಗೆ ನಿಖರವಾಗಿ ತಿಳಿದುಕೊಳ್ಳುವುದು.
-ಜಾಗತಿಕ ಪಾಲುದಾರಿಕೆಗಳನ್ನು ಉತ್ತೇಜಿಸುವ ಮೂಲಕ ವಿಶ್ವಾದ್ಯಂತ ಕೌಶಲಾಭಿವೃದ್ಧಿಯನ್ನು ಕಾರ್ಯಗತ ಗೊಳಿಸುವುದು ಹಾಗೂ ಆರ್ಥಿಕ ಸೇರ್ಪಡೆಗಾಗಿ ಸರಕಾರಗಳು, ನೀತಿನಿರೂಪಕರು, ಅಭಿವೃದ್ಧಿ ಪಾಲುದಾರರು, ಸರಕಾರೇತರ ಸಂಶೋಧನ ಸಂಸ್ಥೆಗಳನ್ನು ಒಳಗೊಂಡಿರುವ ಜಾಗತಿಕ ಸಂಕೀರ್ಣ ವ್ಯವಸ್ಥೆಗಳನ್ನು ಸ್ಥಾಪಿಸುವುದು.
ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಸಂಸ್ಥೆಯಾದ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ನಿಖರವಾದ ಉಪಕರಣಗಳ ಮೂಲಕ ಉದ್ಯಮಕ್ಕೆ ಸೇವೆ ಸಲ್ಲಿಸುತ್ತಿದ್ದು ಟೂಲ್ ಆ್ಯಂಡ್ ಡೈ ತಯಾರಿಕ ಕ್ಷೇತ್ರಕ್ಕೆ ಉತ್ತಮ ತರಬೇತಿ ಪಡೆದ ಕುಶಲಕರ್ಮಿಗಳನ್ನು ಒದಗಿಸುತ್ತಿದೆ. ಭಾರತ ಸರಕಾರದಿಂದ ಮಾನ್ಯತೆ ಪಡೆದ ವೈಜ್ಞಾನಿಕ ಮತ್ತು ಸಂಶೋಧನ ಸಂಸ್ಥೆಯಾಗಿದ್ದು ವಿಶ್ವಾದ್ಯಂತ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯ ಬಗ್ಗೆ ಸಂಪೂರ್ಣ ಅರಿವು ಹೊಂದಿದ್ದು ಹ್ಯಾಂಡ್ಸ್ ಆನ್ ಟ್ರೆçನಿಂಗ್ ಪರಿಕಲ್ಪನೆಯನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿದೆ.
ಈಟಿಟಿಸಿಯು ಅಂತಾರಾಷ್ಟ್ರೀಯ ಗುಣಮಟ್ಟದ ಉಪಕರಣಗಳನ್ನು ತರಬೇತಿ ಪಡೆದ ಸಿಬಂದಿ, ಪರಿಕರಗಳು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಲಹೆ ನೀಡುವ ಮೂಲಕ ಕೈಗಾರಿಕೆಗಳ ಸಂಬಂಧಿತ ವಿಭಾಗಗಳ ಸಮಗ್ರ ಅಭಿವೃದ್ಧಿಯ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿದೆ. ಇದರೊಂದಿಗೆ ಕೈಗಾರಿಕೆಗಳಿಂದಾಗುವ ಪರಿಸರ ಮಾಲಿನ್ಯ, ಇಂಗ್ಲೀಷ್ ಸಂವಹನ ವಿಷಯ ಗಳನ್ನು ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ. ಭವಿಷ್ಯದಲ್ಲಿ ಟೂಲಿಂಗ್, ಏರೋಸ್ಪೇಸ್ ಘಟಕಗಳು ಮತ್ತು ಅವುಗಳ ಅಸೆಂಬ್ಲಿಗಳಲ್ಲಿನ ಕ್ಲಿಷ್ಟ ಯೋಜನೆಗಳ ಮೇಲೆ ಹೆಚ್ಚು ಗಮನಹರಿಸಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳ ಅಭಿವೃದ್ಧಿಯನ್ನು ಬೆಂಬಲಿಸುವ ಗುರಿಯನ್ನೂ ಹೊಂದಿದೆ.
-ಯತೀಶ್ ರಾವ್, ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.