ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…


Team Udayavani, Nov 1, 2024, 10:15 AM IST

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಕನ್ನಡವನ್ನು ಮಾತಾಡುವ ಜನರಿದ್ದ ಭಾಗಗಳನ್ನು ಒಟ್ಟುಗೂಡಿಸಿ  ಅದಕ್ಕೆ ರಾಜ್ಯದ ಸ್ವರೂಪ ಕೊಟ್ಟಾಗ ಅದರ ಹೆಸರು “ವಿಶಾಲ  ಮೈಸೂರು ರಾಜ್ಯ’ ಎಂದಾಗಿತ್ತು! ಅದರ ಬದಲಿಗೆ “ಕರ್ನಾಟಕ’  ಎಂದು ಮರು ನಾಮಕರಣವಾಗಲು ನಡೆದ ಹೋರಾಟ,  ಅದಕ್ಕಿದ್ದ ರಾಜಕೀಯ/ ಆಡಳಿತಾತ್ಮಕ ಹಿನ್ನೆಲೆ ಕುರಿತ  ಮಾಹಿತಿಪೂರ್ಣ ಬರಹವಿದು…

ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಕನ್ನಡ ನಾಡು, ಟಿಪ್ಪು ಸುಲ್ತಾನ್‌ನ ಮರಣದ ನಂತರ ಬ್ರಿಟಿಷರು ಮಾಡಿದ 5 ಪ್ರಾಂತ್ಯಗಳು, 16 ಸಂಸ್ಥಾನಗಳಲ್ಲಿ ಹರಿದು ಹಂಚಿಹೋಯಿತು. ವಿವಿಧ ಆಡಳಿತ ಘಟಕಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರನ್ನು ಒಂದು ಆಡಳಿತ ಘಟಕವಾಗಿಸಿ ಕನ್ನಡಿಗರ ಸದಭಿಮಾನದ ಗೂಡು ಆಗಿಸಲು ನಡೆದ ಕರ್ನಾಟಕ ಏಕೀಕರಣ ಆಧುನಿಕ ಇತಿಹಾಸದಲ್ಲಿ ವಿಶಿಷ್ಟವಾದದ್ದು.

ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿದಾಗ, ಕೇಂದ್ರ ಸರ್ಕಾರ ರಚಿಸಿದ್ದ ಫ‌ಜಲ್‌ ಆಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗ, ಕರ್ನಾಟಕ ರಾಜ್ಯ ರಚನೆಯ ಅಗತ್ಯವನ್ನು ಎತ್ತಿ ಹಿಡಿಯಿತು. ಭಾರತ ಸರ್ಕಾರ ಭಾಷಾವಾರು ರಾಜ್ಯದ ರಚನೆಯನ್ನು ಒಪ್ಪಿದ್ದರಿಂದ ನವೆಂಬರ್‌ 1, 1956ರಂದು “ವಿಶಾಲ ಮೈಸೂರು’ ಎನ್ನುವ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಕನ್ನಡಿಗರು ಹೋರಾಟ ಮಾಡಿದ್ದು ಕರ್ನಾಟಕಕ್ಕಾಗಿ. ಆದರೆ ಮೈಸೂರು ಪ್ರಾಂತ್ಯದ ಜನ “ಕರ್ನಾಟಕ’ ಎಂಬ ಹೆಸರಿಗೆ ಒಪ್ಪದೇ ಇದ್ದುದರಿಂದ 19 ಜಿಲ್ಲೆಗಳುಳ್ಳ “ಮೈಸೂರು ರಾಜ್ಯ’ವಾಯಿತು.

ಮೈಸೂರು ಹೆಸರಿಗಾಗಿ ಪಟ್ಟು:

“ಕರ್ನಾಟಕ’ ಎಂಬ ಹೆಸರು ವಿಶೇಷವಾಗಿ ಉತ್ತರ ಕರ್ನಾಟಕದ ಕನ್ನಡಿಗರಲ್ಲಿ ಅಂತರ್ಗತವಾಗಿತ್ತು. 1956 ಏಪ್ರಿಲ್‌ 2ರಂದು ರಾಜ್ಯದ ಹೆಸರಿಗೆ ಸಂಬಂಧಿಸಿದಂತೆ ಮತಗಣನೆಗೆ ಹಾಕಲಾಯಿತು. ಅನೇಕ ಕಾಂಗ್ರೆಸ್ಸಿಗರು (ಮೈಸೂರಿನವರು) “ಕರ್ನಾಟಕ’ ಎಂಬ ಹೆಸರಿಗೆ ವಿರುದ್ಧವಾಗಿ ಮತ ಚಲಾಯಿಸುವುದಾಗಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರು “ಕರ್ನಾಟಕ’ ಹೆಸರನ್ನು ಬೆಂಬಲಿಸಿ, “ಹಳೇ ಮೈಸೂರಿನ ಕಾಂಗ್ರೆಸ್‌ ಸದಸ್ಯರು ವಿರುದ್ಧ ಮತ ಚಲಾಯಿಸಿದರೂ, ಸಮಾಜವಾದಿಗಳು ಗೊತ್ತುವಳಿ ಪರ ಮತ ಹಾಕುವರು. ಗೊತ್ತುವಳಿ ಬಿದ್ದು ಹೋಗುವುದೆಂಬ ಭಯಕ್ಕೆ ಅವಕಾಶವಿಲ್ಲ. ಅದು ಬಹುಮತದಿಂದ ಪಾಸಾಗುವಂತೆ ನೋಡಿಕೊಳ್ಳುವೆ’ ಎಂದಿದ್ದನ್ನು ರಾವ್‌ ಬಹದ್ದೂರ ಉಲ್ಲೇಖೀಸಿದ್ದಾರೆ.

ನಾಮಕರಣ ಮಸೂದೆಯ ಮೇಲೆ ನಡೆದ ಚರ್ಚೆಗಳ ಸಂದರ್ಭದಲ್ಲಿ ಮೈಸೂರು ವಾದಿಗಳು “ಮೈಸೂರು’ ಹೆಸರನ್ನು ಬದಲಿಸಲು ಹೊರಟರೆ, ಹಿಂದಿನಿಂದಲೂ ಹೊರಡಿಸಿರುವ ಶಾಸನಗಳ ಹೆಸರನ್ನು ಬದಲಿಸಬೇಕಾದ ತೊಡಕುಗಳಿವೆ ಎಂದು ತಕರಾರು ತೆಗೆದರು. ಆಗ ಕೆಂಗಲ್‌ ಹನುಮಂತಯ್ಯನವರು, “ಅದೇನು ದೊಡ್ಡ ಸಮಸ್ಯೆಯಲ್ಲ, ಕೇವಲ ಒಂದು ಹಾಳೆಯ ಮಸೂದೆಯನ್ನು ಮಂಡಿಸಿ, ಎಲ್ಲೆಲ್ಲಿ ಮೈಸೂರು ಎಂದಿದೆಯೋ ಅಲ್ಲೆಲ್ಲಾ “ಕರ್ನಾಟಕ’ ಎಂದು ಓದುವಂತೆ ದಾಖಲಿಸಿದರೆ ಸಾಕು’ ಎಂಬುದಾಗಿ ಉತ್ತರಿಸಿದರು. ಆದರೆ ಕೊನೆಗೆ ಉಳಿದದ್ದು ಮೈಸೂರು ಎಂಬ ಹೆಸರೇ.

ಬಹಿರಂಗ ಅಸಮಾಧಾನ:

ಕನ್ನಡ ನಾಡನ್ನು “ವಿಶಾಲ ಮೈಸೂರು ರಾಜ್ಯ’ವೆಂದು ಕರೆದದ್ದರಿಂದ ಮೈಸೂರಿಗರಿಗೆ ಮಾತ್ರ ಖುಷಿಯಾಗಿತ್ತು. ಉಳಿದ ಜನರು ಅದನ್ನು ಇಷ್ಟಪಟ್ಟಿರಲಿಲ್ಲ. ಶತಮಾನಗಳಿಂದ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದ್ದ “ಕರ್ನಾಟಕ’ವನ್ನು ಉಳಿಸಿಕೊಳ್ಳದೇ ಹೋದದ್ದು ಸ್ವಾಭಿಮಾನಕ್ಕೆ ನೀಡಿದ ಪೆಟ್ಟು ಎಂದೇ ಕೆಲವರು ನೊಂದುಕೊಂಡರು. ಆಲೂರು ವೆಂಕಟರಾಯರು, ಜಯದೇವಿತಾಯಿ ಲಿಗಾಡೆ, ಕೃಷ್ಣ ಕಲ್ಲೂರ ಮೊದಲಾದವರು ಅಸಮಾಧಾನವನ್ನು ಬಹಿರಂಗವಾಗಿಯೇ ಪ್ರಕಟಿಸಿದರು. ಆಲೂರರು, 1956 ನವೆಂಬರ್‌ 1ರ ಸಂದೇಶದಲ್ಲಿ “ಈಗ ವಿಶಾಲ ಮೈಸೂರು ರಾಜ್ಯವೆಂದು ತಪ್ಪಾಗಿ ಹೆಸರಿಸಲ್ಪಟ್ಟ ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ, ಆರೋಗ್ಯವಂತವಾಗಲಿ ಮತ್ತು ಭಾಗ್ಯವಂತವಾಗಲಿ’ ಎಂದು ಹರಸಿ, ಕರ್ನಾಟಕವೆಂದೇ ಕರೆಯಲು ಕರೆಕೊಟ್ಟರು.

ದೊಡ್ಡಮೇಟಿ ಅಂದಾನಪ್ಪ ಅವರು ಶಾಸಕರಿಗೆಲ್ಲ ಕರ್ನಾಟಕದ ಹೆಸರಿನ ಮಹತ್ವ, ಇತಿಹಾಸಗಳ ಬಗ್ಗೆ ಮಾಹಿತಿ ನೀಡುವ “ಕರ್ನಾಟಕ’ ಎಂಬ ಪುಸ್ತಕ ಕೊಟ್ಟು, ಈ ಪುಸ್ತಕ ಓದಿ ವಾಸ್ತವ ಚರಿತ್ರೆ ಅರಿತು ಹೆಸರಿನ ಬಗ್ಗೆ ನಿರ್ಣಯಿಸುವಂತೆ ಮನವಿ ಮಾಡಿದರು. ನಂತರ 1957 ಸೆಪ್ಟೆಂಬರ್‌ 30ರಂದು ಸದನದಲ್ಲಿ ಪ್ರಸ್ತಾವನೆ ಮಂಡಿಸಿದ್ದರು. ಎರಡು ದಿನ ಚರ್ಚೆ ನಡೆಯಿತು. ಆದರೆ, ಯಾವುದೇ ನಿರ್ಣಯವಾಗಲಿಲ್ಲ. “ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಆಗುವವರೆಗೆ ನನಗೆ ವಿಶ್ರಾಂತಿಯೇ ಇಲ್ಲ’ ಎಂದು ಹೇಳುತ್ತಿದ್ದ ದೊಡ್ಡಮೇಟಿಯವರು ಛಲ ಬಿಡದ ತ್ರಿವಿಕ್ರಮನಂತೆ ವಿಧಾನಸಭೆ ಅಧಿವೇಶನ ನಡೆದಾಗಲೆಲ್ಲಾ ಸದನದಲ್ಲಿ ಗೊತ್ತುವಳಿ ಮಂಡಿಸುತ್ತಲೇ ಇದ್ದರು.

ಹೆಸರಾಯಿತು ಕರ್ನಾಟಕ…

ನಾಡಿನಾದ್ಯಂತ ಇದ್ದ ಕರ್ನಾಟಕ ಸಂಘಗಳು, ವಿಶೇಷವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜು, ಕರ್ನಾಟಕ ಮಕ್ಕಳ ಕೂಟ, ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ… ಹೀಗೆ ಎಲ್ಲ ರಂಗಗಳಲ್ಲಿ “ಕರ್ನಾಟಕ’ ಎಂಬ ಹೆಸರು ಕಾಣುತ್ತಿತ್ತು. ಕನ್ನಡ ಚಳುವಳಿಗಾರರಾದ ಅನಕೃ, ಮ. ರಾಮಮೂರ್ತಿ, ವಾಟಾಳ್‌ ನಾಗರಾಜ್‌ ರಾಜ್ಯದ ಹೆಸರನ್ನು “ಕರ್ನಾಟಕ’ ಎಂದು ಬದಲಿಸುವುದನ್ನೇ ತಮ್ಮ ಧ್ಯೇಯವಾಗಿಸಿಕೊಂಡಿದ್ದರು. ಸಾಹಿತ್ಯ ಸಮ್ಮೇಳನಗಳಲ್ಲಿ ರಾಜ್ಯದ ಹೆಸರು “ಕರ್ನಾಟಕ’ ಎಂದು ಬದಲಿಸುವಂತೆ ನಿರ್ಣಯ ತೆಗೆದುಕೊಳ್ಳುತ್ತಿತ್ತು.

1969ರ ಜನವರಿ 14ರಂದು ಮದ್ರಾಸ್‌ ಎಂದಿದ್ದ ಹೆಸರು ತಮಿಳುನಾಡು ಎಂದು ಬದಲಾದ ಮೇಲೆ ವಿಶಾಲ ಮೈಸೂರು ರಾಜ್ಯ, “ಕರ್ನಾಟಕ’ವಾಗಿ ಬದಲಾಗ­ಬೇಕೆಂಬ ಚಳುವಳಿಗೆ ಹೆಚ್ಚಿನ ಶಕ್ತಿ ಬಂದಿತು. 1972ರಲ್ಲಿ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆದರು. ಅರಸರಿಗೆ ಆಪ್ತರಾಗಿದ್ದ ಖ್ಯಾತ ಕಾದಂಬರಿಕಾರ, ಕನ್ನಡ ಚಳುವಳಿ ಮುಖಂಡ ತರಾಸು, ನೇರವಾಗಿ ಅವರನ್ನು ಕಂಡು ಮನವಿ ಪತ್ರ ಕೊಟ್ಟರು. “ಸ್ವಾತಂತ್ರ್ಯ ಬಂದು 25 ವರ್ಷ ತುಂಬುತ್ತದೆ. ಈ ವೇಳೆಯಲ್ಲಾದರೂ ರಾಜ್ಯಕ್ಕೆ ಸೂಕ್ತ ಹೆಸರಿಡಬೇಕು. ಇಲ್ಲದಿದ್ದರೆ ಇನ್ನೆಂದೂ ಆಗುವುದಿಲ್ಲ’ ಎಂದರು. ಮೊದಲು “ಕರ್ನಾಟಕ’ದ ಹೆಸರನ್ನು ವಿರೋಧಿಸಿದ್ದ ಅರಸು, ಬಹು ಜನರ ಭಾವನೆಗೆ ಸ್ಪಂದಿಸಿ ಪ್ರಜಾಪ್ರಭುತ್ವದ ತತ್ವವನ್ನು ಗೌರವಿಸಿದರು.

ಕರ್ನಾಟಕದ ಇತಿಹಾಸ… ಕರ್ನಾಟಕ ಎಂಬ  ಪದ ಎಲ್ಲಿ ಉಗಮವಾಯಿತು? ಅದರ ಹಿನ್ನೆಲೆ ಏನು?:

ಕರ್ನಾಟಕದ ಹೆಸರು ಪುರಾಣ ಕಾಲದಿಂದಲೂ ಇದೆ. ವ್ಯಾಸ ಮಹಾಭಾರತದ ಸಭಾಪರ್ವ ಮತ್ತು ಭೀಷ್ಮಪರ್ವಗಳಲ್ಲಿ ಈ ಎರಡು ಪದ್ಯಗಳಲ್ಲಿ ಕರ್ನಾಟಕದ ಉಲ್ಲೇಖವಿದೆ.

ಕರ್ಣಾಟಾ ಕಾಂಸಾಕುಟ್ಪಾಶ್ಚ

ಪದ್ಮಜಾಲಾಃ ಸತೀನರಾಃ

(ಮಹಾಭಾರತ, ಸಭಾಪರ್ವ, 78-98)

  

ಅಥಾಪರೆ ಜನಪದಾಃ ದಕ್ಷಿಣಾಃ ಭರತರ್ಷ ದ್ರವಿಡಾಃ,

ಕೇರಲಾಃ ಪ್ರಾಚ್ಯಾಃ ವನವಾಸಿಕಾಃ |

ಕರ್ಣಾಟಕಾ ಮಹಿಷಕಾಃ

ವಿಕಲ್ಪಾ ಮೂಷಕಾಸ್ತಥಾಃ

ಝಿಲ್ಲಿಕಾಃ ಕುಂತಲಾಶೆòವ

ಸೌಹೃದಾ ನಭಕಾನನಾಃ||

(ಮಹಾಭಾರತ, ಭೀಷ್ಮಪರ್ವ, 9 : 58-59)

2ನೇ ಶತಮಾನದಲ್ಲಿ ರಚಿತವಾದ ಶೂದ್ರಕನ “ಮೃತ್ಛಕಟಿಕ’ದಲ್ಲಿ ಕರ್ಣಾಟಕದ ಹೆಸರಿದೆ (ಕರ್ಣಾಟ ಕಲಹಂ ಪ್ರಯೋಗಂ ಕರೋಮಿ- ಅಂಕ-6 ಪದ್ಯ 20-21), ಆದರೆ, ಆ ಕಾಲದಲ್ಲಿ ಕರ್ನಾಟಕವನ್ನು ಆಳುತ್ತಿದ್ದ ಶಾತವಾಹನರ ಶಾಸನಗಳಲ್ಲಾಗಲಿ, ಗ್ರಂಥಗಳಲ್ಲಾಗಲಿ ಕರ್ಣಾಟಕದ ಹೆಸರು ಎಲ್ಲಿಯೂ ಬರುವುದಿಲ್ಲ.

ಹರ್ಷ ಮಹಾರಾಜ ತನ್ನ ಸೈನ್ಯ ಸಮೇತ ಪುಲಿಕೇಶಿ ಸಾಮ್ರಾಜ್ಯದ ಮೇಲೆ ದಾಳಿ ಮಾಡುತ್ತಾನೆ. 618-619ರಲ್ಲಿ, ನರ್ಮದಾ ನದಿಯ ತಟದಲ್ಲಿ ನಡೆದ ಈ ಕದನದಲ್ಲಿ ಹರ್ಷವರ್ಧನನ ಸೈನ್ಯ ಪುಲಿಕೇಶಿಯ ಸೈನ್ಯದ ಮುಂದೆ ಸೋತು ಸುಣ್ಣವಾಗುತ್ತದೆ. ಆ ಕಾಲಕ್ಕೆ ಯಾರಿಂದಲೂ ಸೋಲಿಸಲು ಅಸಾಧ್ಯವಾದ ಕಾರಣ ಪುಲಿಕೇಶಿಯ ಸೈನ್ಯ “ಕರ್ಣಾಟ ಬಲಂ ಅಜೇಯಂ’ ಎಂದು ವರ್ಣಿಸಲ್ಪಟ್ಟಿದೆ. ಮೈಸೂರು ಒಡೆಯರು ತಮ್ಮನ್ನು “ಶ್ರೀಮದ್‌ ಕರ್ನಾಟಕ ರತ್ನ ಸಿಂಹಾಸನಾಧೀಶ್ವರ’ ಎಂದು ಕರೆದುಕೊಂಡಿದ್ದಾರೆ.

ಕುವೆಂಪು ಮೂಲಕ ನವ ಚೈತನ್ಯ :

“ಬಹಳ ಕಾಲದಿಂದಲೂ ಭೌಗೋಳಿಕವಾಗಿ ಬೇರೆ ಬೇರೆ ಹೆಸರಿದ್ದು, ಬಹು ರಾಜ್ಯಗಳಲ್ಲಿ ಹಂಚಿ ಹೋಗಿದ್ದಾಗಲೂ, ಯಾವ ಪ್ರದೇಶವನ್ನು ಕವಿಗಳು, ದಾಸ ಸಾಹಿತಿಗಳು, ಮತ ಪ್ರಚಾರಕರು, ಇತಿಹಾಸಕಾರರು, ಮಹಾಜನರು, ವಿದೇಶಿ ಪ್ರವಾಸಿಗರು “ಕರ್ನಾಟಕ’ ಎಂದು ಕರೆದು, ಅದನ್ನೊಂದು ಮಂತ್ರವನ್ನಾಗಿ ಮಾಡಿ, ಅದಕ್ಕೆ ಶಕ್ತಿ ನೀಡದ್ದಾರೆಯೋ ಆ ಪ್ರದೇಶಕ್ಕೆ “ಕರ್ನಾಟಕ’ ಎಂಬ ಹೆಸರು ಅತ್ಯಂತ ಸಮಂಜಸವಾಗಿದೆ’ ಎನ್ನುವ ಮೂಲಕ ರಾಜ್ಯಕ್ಕೆ “ಕರ್ನಾಟಕ’ ಎಂದು ಮರು ನಾಮಕರಣ ಮಾಡಬೇಕು ಎಂಬ ಆಂದೋಲನಕ್ಕೆ ಕುವೆಂಪು ಅವರು ಹೊಸ ಚೈತನ್ಯ ತಂದುಕೊಟ್ಟರು.

ರಾ.ನಂ. ಚಂದ್ರಶೇಖರ, ಚಿಂತಕರು,  ಕನ್ನಡ ಹೋರಾಟಗಾರರು

ಟಾಪ್ ನ್ಯೂಸ್

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

ಹೊಸ ಸೇರ್ಪಡೆ

BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!

BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್‌ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.