ಗೋಡೆಯ ಹಿಂದಿನ ಕಥೆ…


Team Udayavani, Aug 29, 2017, 9:11 AM IST

29-ANKANA-2.jpg

…ಅದೇ ಥರ ಇನ್ನೊಂದು ವೆಬ್‌ ತಾಣದಲ್ಲಿ ಮೆಕ್ಸಿಕೋದ ಹತ್ತು ರಾಜ್ಯಗಳನ್ನು ಅಪಾಯಕಾರಿ ಅಂತ ಘೋಷಿಸಲಾಗಿದೆ. 
ಆ ರಾಜ್ಯಗಳೆಲ್ಲಾ ಇರೋದು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಅಥವಾ ಮೆಕ್ಸಿಕೋದ ಬಲಗಡೆಯ ಸಮುದ್ರ ಗಡಿಯಲ್ಲಿ. ಈ ಹಿಂಸಾಕ್ರಾಂತ ರಾಜ್ಯಗಳಿಂದ ಅಮೆರಿಕಕ್ಕೆ ವಲಸೆ ಬರೋ ಮೆಕ್ಸಿಕನ್ನರ ತಡೆಯೋಕೆ ಅಂತಲೇ ಮೆಕ್ಸಿಕೋ- ಅಮೆರಿಕದ ಮಧ್ಯೆ ಗೋಡೆ ಕಟ್ಟೋಕೆ ಹೊರಟಿದ್ದು ಟ್ರಂಪು.

ಕಂಪೆನಿಯಿಂದ ಮೆಕ್ಸಿಕೋಗೆ (ಇಲ್ಲಿನ ಭಾಷೆಯಲ್ಲಿ ಮೆಹಿಕೊ)ಹೋಗೋ ಅವಕಾಶ ಸಿಕ್ಕಾಗ ಹೋಗಿ ಬಾ ಅಂದವರಿಗಿಂತ ಹೆದರಿಸಿದವರೇ ಹೆಚ್ಚು. ಮೆಕ್ಸಿಕೋದಿಂದ ಬರ್ತಿರೋ ವಲಸಿಗರಿಂದಲೇ ಅಮೆರಿಕದ ಆರ್ಥಿಕತೆ ಹಾಳಾಗುತ್ತೆ, ಅದನ್ನ ತಡೀಬೇಕೆಂದರೆ ಅಮೆರಿಕ-ಮೆಕ್ಸಿಕೋ ನಡುವೆ ಗೋಡೆಯೆಬ್ಬಿಸಬೇಕನ್ನೋ ಟ್ರಂಪ್‌ ಒಂದು ಕಡೆಯಾದರೆ, ಮೆಕ್ಸಿಕೋ ಅಂದರೆ ಡ್ರಗ್ಸ್‌ ಅನ್ನೋ ಭಾವವನ್ನ ಜನರ ಮನದಲ್ಲಿ ಬಿತ್ತಿದ್ದ “ನಾರ್ಕೋಸ್‌’ ಮುಂತಾದ ಸೀರಿಯಲ್ಲುಗಳು ಇನ್ನೊಂದೆಡೆ. ರಾತ್ರಿ ಪಾರ್ಟಿ ಮುಗಿಸಿಕೊಂಡು ಬರ್ತಿದ್ದ ಸಹೋದ್ಯೋಗಿಯೊಬ್ಬನ ನಿಲ್ಲಿಸಿದ್ದ ಕಾರಿನ ಗ್ಲಾಸೊಡೆದು ಲ್ಯಾಪ್‌ ಟ್ಯಾಪನ್ನು ಕದ್ದುಕೊಂಡು ಹೋಗಿದ್ರಂತೆ ಅನ್ನೋ ಸುದ್ದಿಗಳೂ ಸೇರಿ ಮೆಕ್ಸಿಕೋ ಅಂದರೆ ಸೇಫಲ್ಲ, ಸಾಯಂಕಾಲವಂತೂ ಹೊರಗೆ ಹೋಗೋ ಸುದ್ದಿಯೇ ಇಲ್ಲ ಅನ್ನುವಂತಹ ಭಾವವನ್ನು ಸೃಷ್ಟಿಬಿಟ್ಟಿದ್ದವು. ಆದರೆ ಇಲ್ಲಿ ಬಂದ ಮೇಲೆ ಕಂಡ ಸತ್ಯವೇ ಬೇರೆ

ಮಾಂಟೆರರಿ ಅನ್ನೋ ಮಾಯೆ:
ಮೆಕ್ಸಿಕೋದಲ್ಲಿ ಎಲ್ಲೆಡೆ ಡ್ರಗ್ಸ್‌ ಹಾವಳಿ ಅಂತ ಗೆಳೆಯರ ಮಾತು ಕೇಳಿ ಕೇಳಿ ರಸ್ತೆ ಬದೀಲೆಲ್ಲಾ ಡ್ರಗ್ಸ್‌ ಮಾರ್ತಾರೇನಪ್ಪ ಇಲ್ಲಿ, ಸಿಗರೇಟಿಗೂ ತುಟಿಯೊಡ್ಡದ ಜನ ಬದುಕೋದಾದ್ರೂ ಹೆಂಗೆ ಅನ್ನೋ ಭಯವಿತ್ತು ಶುರುವಲ್ಲಿ. ಆದ್ರೆ ಈ ಡ್ರಗ್ಸ್ನ್ನೋದು ರಸ್ತೆ ಬದೀಲಿ, ಗಲ್ಲಿ ಗಲ್ಲೀಲಿ ಮಾರೋ ಶುಂಠಿ ಪೆಪ್ಪರ್‌ವೆುಂಟಲ್ಲ ಅನ್ನೋ ವಾಸ್ತವದ ಅರಿವಾಗಿ, ಹೊರಗೆ ಓಡಾಡೋಕಿದ್ದ ಭಯ ಹೋಗೋಕೆ ಕೆಲ ದಿನಗಳು ಬೇಕಾದವು. ಮೊದಲೆರಡು ದಿನಗಳು ಜೆಟ್‌ ಲ್ಯಾಗಿನಿಂದ ಸಂಜೆ ಆರಕ್ಕೇ ನಿದ್ದೆಯೆಳೆಯುತ್ತಿದ್ದರಿಂದ ಹೇಗಿದ್ರೂ ಹೊರ ಹೋಗಿರಲಿಲ್ಲ. ಮೂರನೆಯ ದಿನ ಸಂಜೆ ನೋಡಿದ್ರೆ ಆ ಸಮಯದಲ್ಲೂ ಪಾರ್ಕಲ್ಲಿ ಜಾಗಿಂಗ್‌ ಮಾಡೋರು, ಶಾಪಿಂಗ್‌ ಮಾಡೋರು ಕಾಣಿ¤ದ್ರು. ಮೊದಲ ಕೆಲ ದಿನಗಳಿದ್ದ ಹೋಟೇಲಿನ ರೂಂಮೇಟು ಹೊರ ಹೋಗಬೇಕಾದ್ರೆ 50 ಪೆಸೋ(ಮೆಕ್ಸಿಕೋದ ದುಡ್ಡು)ಗಿಂತ ಜಾಸ್ತಿ ತಗೊಂಡು ಹೋಗ್ಬೇಡ. ಎಲ್ಲಿ ಯಾರು ಬರ್ತಾರೆ, ದೋಚಾ¤ರೆ ಅಂತ ಗೊತ್ತಿಲ್ಲ ಅಂತ ಹೆದರಿಸಿದ್ರೂ ಅಂತಹ ಪ್ರಸಂಗ ಎದುರಾಗಲಿಲ್ಲ. ನಾವಿದ್ದ ಏರಿಯಾದಲ್ಲಿ ಅಂತಹ ಘಟನೆಗಳಾದ ವಿವರಗಳೂ ದಕ್ಕಲಿಲ್ಲ. ನಾವಿದ್ದ ಮಾಂಟೆರರಿ ನಗರದ ಸ್ಯಾನ್‌ ಫ್ರಾನ್ಸಿಸ್ಕೋ ಏರಿಯಾದಿಂದ ಸ್ಯಾನ್‌ ಹೆರನಿಮೋ ಅನ್ನೋ ಪ್ರದೇಶದಲ್ಲಿದ್ದ ಅಪಾರ್ಟ್‌ಮೆಂಟಿಗೆ ಬದಲಾದ ಅನಂತರವಂತೂ ಮೆಕ್ಸಿಕೋ ಮತ್ತಷ್ಟು ಅಪ್ಯಾಯಮಾನವೆನಿಸತೊಡಗಿತು. ಸಂಜೆ ಎಂಟೂವರೆವರೆಗೂ ಬೆಳಕಿರೋ ಇಲ್ಲಿ ಏಳುಮುಕ್ಕಾಲರ ಮೇಲೇ ಪಾರ್ಕಿಗೆ ಜಾಗಿಂಗ್‌ ಬರೋ ಜನರು, ರಾತ್ರಿಯ ಬೆಳಕಿನಲ್ಲಿ ಒಂಭತ್ತೂವರೆ, ಹತ್ತರವರೆಗೂ ಜಾಗಿಂಗ್‌ ಮಾಡೋರು, ಫುಟ್‌ಬಾಲ್‌, ಬೇಸ್‌ ಬಾಲ್‌ ಆಡೋರು, ಕ್ಲಬ್ಬು ಪಬ್ಬು ಕೆಸಿನೋಗಳಲ್ಲಿ ಮಜಾ ಮಾಡುತ್ತಾ ಮಧ್ಯರಾತ್ರಿಯ ಮೇಲೆ ವಾಪಸ್‌ ಬರೋರು, 24 ಗಂಟೆ ತೆಗೆದಿರೋ ಆಕ್ಸೂ, 7-11 ಎಂಬೋ ಅಂಗಡಿಗಳು.. ಹೀಗೆ ಹತ್ತು ಹಲವು ಅಚ್ಚರಿಗಳು ಎದುರಾಗ್ತಿದುÌ. ಗೊತ್ತಿಲ್ಲದ ಶಹರವೊಂದರ ಬಗ್ಗೆಯಿದ್ದ ಭಯವನ್ನು ಇಂಚಿಂಚೇ ಹೋಗಲಾಡಿಸ್ತಿದುÌ. 

ಇಂಡಿಪೆಂಡೆನ್ಸಿಯ ಅನ್ನೋ ಡ್ರಗ್ಸ್‌ ಕೂಪ
ಹಂಗಂತಾ ಮೆಕ್ಸಿಕೋ ಅನ್ನೋದು ಸಖತ್‌ ಸೇಫ್‌ ಜಾಗವೆಂದೂ, ಇಂಟರ್ನೆಟ್ಟಲ್ಲಿ ನೀವು ಇದರ ಬಗ್ಗೆ ಓದಿರಬಹುದಾದ, ಜನರಿಂದ ಕೇಳಿರಬಹುದಾದ ಮಾತೆಲ್ಲಾ ಬೊಗಳೆಯೆಂದೂ ಅಲ್ಲ. ನಿಮ್ಮ ಎಚ್ಚರದಲ್ಲಿ ನೀವಿಲ್ಲದಿದ್ದರೆ ಎಲ್ಲಿ ಏನು ಬೇಕಾದ್ರೂ ಆಗಬಹುದು ಅನ್ನೋ ಸತ್ಯ ಇಲ್ಲೂ ಅನ್ವಯಿಸುತ್ತಾದರೂ ಮೆಕ್ಸಿಕೋಕ್ಕೆ ಕೆಟ್ಟ ಹೆಸರು ತಂದಿತ್ತ ಕೆಲ ಜಾಗಗಳ ಬಗ್ಗೆಯಾದ್ರೂ ಈ ಸಂದರ್ಭದಲ್ಲಿ ಹೇಳಲೇಬೇಕು. ಅವುಗಳಲ್ಲೊಂದು ಇಂಡಿಪೆಂಡೆನ್ಸಿಯ. ಅದಿರೋದು ಮೆಕ್ಸಿಕೋದ ಶ್ರೀಮಂತ ಶಹರಗಳಲ್ಲೊಂದಾದ ಮಾಂಟೆರೆರಿಯ ಪಕ್ಕದಲ್ಲೇ. ಹತ್ತೂಂಬತ್ತನೇ ಶತಮಾನದ ಕೊನೆ, ಇಪ್ಪತ್ತರ ಆದಿಯಲ್ಲಿ ಮಾಂಟೆರರಿಯನ್ನು ಕಟ್ಟಲು ಕಡಿಮೆ ಕೂಲಿಯ ಕೆಲಸದಾಳುಗಳ ಅವಶ್ಯಕತೆ ಬಿದ್ದಿತ್ತು. ಆಗ ಮೆಕ್ಸಿಕೋದ ಬೇರೆ ಭಾಗಗಳಿಂದ, ಮೆಕ್ಸಿಕೋದ ಹೊರಭಾಗದಿಂದಲೂ ತಂದ ಕೂಲಿಯಾಳುಗಳನ್ನ ಇಟ್ಟ ಜಾಗವೇ ಇಂಡಿಪೆಂಡೆನ್ಸಿಯ. ಮಾಂಟೆರರಿಯಲ್ಲಿ ಶ್ರೀಮಂತಿಕೆಯ ಪ‌ಳಪಳ‌ವಿದ್ದರೂ ಸಮೀಪದಲ್ಲೇ ಇರೋ ಇಂಡಿಪೆಂಡೆನ್ಸಿಯದಲ್ಲಿ ಇಂದಿಗೂ ಬಡತನದ ತಾಂಡವ. ಮಾಂಟೆರರಿಯಲ್ಲಿ ಎಲ್ಲಿಂದ ಎಲ್ಲಿಗಾದರೂ, ಎಷ್ಟೊತ್ತಿಗಾದರೂ ಸಿಗೋ ಉಬರು ಇಲ್ಲಿಗೆ ಬರೋಲ್ಲ. ಸರ್ಕಾರ, ಸೈನ್ಯ ಬಂತೆಂದರೆ ಅವರ ವಿರುದ್ಧ ಘೋಷಣೆ ಕೂಗೋ, ಕಲ್ಲೇಸೆಯೋ, ದೊಂಬಿಯೆಬ್ಬಿಸೋ ಯುವಕರು ಮತ್ತು ಅವರಿಗೆ ದುಡ್ಡು ಕೊಟ್ಟು ತಮ್ಮ ದಂಧೆಯನ್ನು ಸುಭದ್ರವಾಗಿಸಿಕೊಳ್ಳೋ ಡ್ರಗ್‌ ಗ್ಯಾಂಗಿನವರಿಗೆ ಸಿಕ್ಕಾಪಟ್ಟೆ ಕುಖ್ಯಾತಿ ಪಡೆದಿದೆ ಇದು. ಮಾಂಟೆಸರಿಯ ಸುತ್ತ ಯಾವ ಯಾವ ಜಾಗಗಳಿಗೆ ಹೋಗಬಹುದು ಅನ್ನೋ ಸುದ್ದಿ ಬಂದಾಗ ಈ ಜಾಗದ ಹೆಸರು ಹೇಳಿದ್ದ ಸಹೋದ್ಯೋಗಿಯೊಬ್ಬರು don’t go. you will die ಅಂತ ಎಚ್ಚರಿಸಿದ್ದರು! ಕಿತ್ತು ತಿನ್ನೋ ಬಡತನ, ಯೌವನದಲ್ಲೇ ಡ್ರಗ್ಸ್‌ ಗೀಳು ಹಚ್ಚಿಸಿಕೊಂಡ ಯುವಕರು, ಡ್ರಗ್ಸ್‌ ಮಾರೇ ಶೀಘ್ರವಾಗಿ ಶ್ರೀಮಂತಿಕೆ ಕಂಡ ಜನರಿಂದ ಅದನ್ನು ಉಳಿಸಿಕೊಳ್ಳೋ ಪ್ರಯತ್ನದಲ್ಲಿ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ, ಅವರಿಗಾಗೇ ಅಕ್ರಮ ಪಾರ..ಡ್ರಗ್ಸ್‌ ಗ್ಯಾಂಗುಗಳು, ಅವುಗಳ ನಡುವಿನ ಕಿತ್ತಾಟ, ರಕ್ತಪಾತ.. ಹೀಗೆ ಒಂದಕ್ಕೊಂದರ ಕೊಂಡಿ ಬೆಳೆದು ಇಲ್ಲಿಗೆ ಹೋಗಬೇಕೆಂದರೆ ಸ್ವಂತ ವಾಹನದಲ್ಲೇ ಹೋಗಬೇಕು, ಜೀವದ ಆಸೆಯಿರದಿದ್ದರೆ ಮಾತ್ರ ಹೋಗಬೇಕು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.

ಟ್ರಂಪ್‌ ಗೋಡೆ ಕಟ್ಟೋಕೆ ಹೊರಟಿದ್ದೇಕೆ?
ಮೆಕ್ಸಿಕೋದ 32 ರಾಜ್ಯಗಳನ್ನು ಅವುಗಳು ಪ್ರವಾಸಿಗರಿಗೆ ಎಷ್ಟು ಸುರಕ್ಷಿತ ಅನ್ನೋ ಮಾಹಿತಿಯನ್ನ ಅಮೆರಿಕದ ಪ್ರವಾಸಿಗರ ಸುರಕ್ಷತಾ ಮಾಹಿತಿಯನ್ನು ಕೊಡೋ ಇಲಾಖೆ ಬಿಡುಗಡೆ ಮಾಡಿದೆ. ಅದರಲ್ಲಿರೋ ಚಿಹುವಾಹುಹಾ, ಕೊವಾಹೈಲಾ, ಡುರಾಂಗೋ, ತಮಲೈಪಾಸ್‌ ರಾಜ್ಯಗಳಿಗೆ ಹೋಗಲೇಬೇಡಿ ಅನ್ನುತ್ತೆ. ಆ ನಾಲ್ಕೂ ರಾಜ್ಯಗಳಿರೋದು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ! ಅದೇ ಥರ ಇನ್ನೊಂದು ವೆಬ್‌ ತಾಣದಲ್ಲಿ ಮೆಕ್ಸಿಕೋದ ಹತ್ತು ರಾಜ್ಯಗಳನ್ನು ಅಪಾಯಕಾರಿ ಅಂತ ಘೋಷಿಸಲಾಗಿದೆ. ಆ ರಾಜ್ಯಗಳೆಲ್ಲಾ ಇರೋದು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಅಥವಾ ಮೆಕ್ಸಿಕೋದ ಬಲಗಡೆಯ ಸಮುದ್ರ ಗಡಿಯಲ್ಲಿ. ಈ ಹಿಂಸಾಕ್ರಾಂತ ರಾಜ್ಯಗಳಿಂದ ಅಮೆರಿಕಕ್ಕೆ ವಲಸೆ ಬರೋ ಮೆಕ್ಸಿಕನ್ನರ ತಡೆಯೋಕೆ ಅಂತಲೇ ಮೆಕ್ಸಿಕೋ-ಅಮೆರಿಕದ ಮಧ್ಯೆ ಗೋಡೆ ಕಟ್ಟೋಕೆ ಹೊರಟಿದ್ದು ಟ್ರಂಪು.

ಮೆಕ್ಸಿಕೋ-ಅಮೆರಿಕದ ನಡುವಿನ ಗೋಡೆ
ಆದರೆ ಇನ್ನೂ ಅಂತಹ ಗೋಡೆ ಕಟ್ಟದಿರುವುದು ಅದೃಷ್ಟವೇ ಸರಿ ಎನ್ನಬಹುದು. ಮಾಂಟೆರೆರಿಯಿಂದ ಅಮೆರಿಕಕ್ಕೆ ಕಾರಲ್ಲಿ ಹೋದರೆ
ನಾಲ್ಕು ಘಂಟೆ(200 ಕಿ.ಮೀ), ಅದೇ ಮೆಕ್ಸಿಕೋದ ರಾಜಧಾನಿ ಯಾದ ಮೆಕ್ಸಿಕೋ ನಗರಕ್ಕೆ ಹೋಗೋಕೆ 900 ಕಿ.ಮೀ ! ಸೂಕ್ತ ದಾಖಲೆಗಳಿದ್ದರೆ ಒಂದೂವರೆ ಎರಡು ಘಂಟೆಯ ಚೆಕ್ಕಿಂಗಿನ ನಂತರ ಅಮೆರಿಕಕ್ಕೆ ತೆರಳಬಹುದು ಅಂತ ಹಿಂದಿನ ವಾರ ಬೆಳಗ್ಗೆ ಅಮೆರಿಕಕ್ಕೆ ಹೋಗಿ ಬಿರಿಯಾನಿ ತಿಂದು ಸಂಜೆಗೆ ವಾಪಾಸ್ಸಾಗಿದ್ದ ಗೆಳೆಯರಿಬ್ಬರು ಹೇಳ್ತಾ ಇದ್ದರು! ತಮಾಷೆಯೆನಿಸಿದರೂ ಸತ್ಯ ಘಟನೆಯಿದು. ಮೆಕ್ಸಿಕೋದಲ್ಲಿ ಬ್ಯಾಂಕ್‌ ಅಕೌಂಟ… ಓಪನ್‌ ಮಾಡಬೇಕಿದ್ದರೆ ನಿಮ್ಮ ಇಲ್ಲಿನ ಆದಾಯವನ್ನು ಮೆಕ್ಸಿಕೋದಲ್ಲಿ ಮಾತ್ರ ಘೋಷಿಸ್ತೀರ ಅಥವಾ ಅಮೆರಿಕಕ್ಕೂ ತಿಳಿಸಬೇಕಾ ಅನ್ನೋ ಆಯ್ಕೆ ಕೊಡ್ತಾರೆ. ಕಿಲೋಮೀಟರಿಗೊಂದಾದ್ರೂ ಮೆಕ್ಸಿಕೋ ಪೆಸೋವಿನಿಂದ ಅಮೆರಿಕದ ಡಾಲರ್ರಿಗೂ, ಡಾಲರ್‌ನಿಂದ ಪೆಸೋಗೂ ಬದಲಾಯಿಸಿಕೊಡುವ ಎಕ್ಸ್‌ಚೇಂಜ್‌ ಕೇಂದ್ರಗಳಿವೆ. ಇಲ್ಲಿನ ಜನಕ್ಕೆ ಇಂಗ್ಲಿಷ್‌ ಬರದೇ ವ್ಯವಹಾರಗಳೆಲ್ಲಾ ಸ್ಪಾನಿಷಿನಲ್ಲೇ ಆದರೂ ಅಮೆರಿಕ ಅಂದರೆ ಒಂಥರಾ ಅಕ್ಕನ ಮನೆಯೆಂಬೋ ಭಾವವಿದೆ. ಮೆಕ್ಸಿಕೋದಿಂದ ನೇರವಾಗಿ ಭಾರತಕ್ಕೆ ದುಡ್ಡು ಕಳಿಸೋ ವ್ಯವಸ್ಥೆಯಿರದ ಕಾರಣ ನಾವಿಲ್ಲಿಂದ ಭಾರತಕ್ಕೆ ದುಡ್ಡು ಕಳಿಸಬೇಕಾದರೆ ಪೆಸೋವನ್ನು ಡಾಲರ್ರಾಗಿ ಪರಿವರ್ತಿಸಿ ಅದನ್ನು ಅಮೆರಿಕಕ್ಕೆ ಕಳಿಸಿ ಅಲ್ಲಿಂದ ಅದನ್ನು ರೂಪಾಯಿಯಾಗಿ ಪರಿವರ್ತಿಸಿ ಭಾರತಕ್ಕೆ ಕಳಿಸೋ ಸರ್ಕಸ್‌ ಮಾಡಬೇಕಿದೆ. ಭಾರತದ ಮಸಾಲೆ ಪದಾರ್ಥಗಳು ಬೇಕಿದ್ದರೂ ಮೊದಲು ಅದನ್ನು ಅಮೆರಿಕಕ್ಕೆ ತರಿಸಿ, ಅಲ್ಲಿಂದ ಮೆಕ್ಸಿಕೋಕ್ಕೆ ತರಿಸಿಕೊಳ್ಳಬೇಕಾದ ಅನಿವಾರ್ಯತೆ. ಎರಡು ದೇಶಗಳ ಮಧ್ಯೆ ಈ ಥರದ ಅದೆಷ್ಟೋ ಕೊಡುಕೊಳ್ಳುವಿಕೆಗಳು, ಆರ್ಥಿಕ ವ್ಯವಹಾರಗಳು ನಡೆಯುತ್ತಿದ್ದರೂ ಕೆಲ ರಾಜ್ಯಗಳಲ್ಲಿನ ಹಿಂಸಾಚಾರದಿಂದ ಮೆಕ್ಸಿಕೋವನ್ನೇ ಗಲಭೆಗ್ರಸ್ತ ಪ್ರದೇಶದಂತೆ ಕಾಣಿ¤ರೋ ದೊಡ್ಡಣ್ಣ, ಪ್ರಪಂಚದಲ್ಲಿ ಆ ಥರವೇ ಬಿಂಬಿಸ್ತಿದೆ. ಇದರಿಂದ ಇಲ್ಲಿ ತಮ್ಮ ಪಾಡಿಗಿರೋ ಜನಕ್ಕಾಗುತ್ತಿರೋ ನೋವು, ಹದಗೆಡುತ್ತಿರೋ ದೇಶಗಳ ನಡುವಿನ ಸಂಬಂಧಗಳು ಅಷ್ಟಿಷ್ಟಲ್ಲ. ಉದಾಹರಣೆಗೆ ವಿದೇಶ ಪ್ರಯಾಣ, ಅದೂ ಅಮೆರಿಕದ ಮೂಲಕ ಅಂದ್ರೆ ಹೌಹಾರ್ತಾರೆ ಇಲ್ಲಿನ ಜನ! ಭಾರತಕ್ಕೋ, ಜರ್ಮನಿಗೋ ಹೋಗಬೇಕಾದ ಸಂದರ್ಭ ಬಂದಾಗೆಲ್ಲಾ ಅಮೆರಿಕ ಮೂಲಕ ಹಾಯದ ವಿಮಾನಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಕೆಲ ಸಹೋ ದ್ಯೋಗಿಗಳು. ಯಾಕಪ್ಪಾ ಹೀಗೆ ಅಂದರೆ, ಅಲ್ಲಿಗೆ ಹೋಗೂದೂ ಬೇಡ, ಜೀತದಾಳುಗಳಂತೆ ನಡೆಸಿಕೊಳ್ಳೂದೂ ಬೇಡ ಅಂತಾರೆ! ವಾಸ್ತವದ ಗೋಡೆಯಿಲ್ಲದೇನೇ ಈ ಥ‌ರ. ಇನ್ನೇನಾದ್ರೂ ದೇಶ ಗಳ ನಡುವೆ ಗೋಡೆಯೆದ್ದು ಬಿಟ್ಟರೆ ಮುಗಿದೇ ಹೋಯ್ತು. ಮನಮ ನಗಳ ಒಡೆಯೋ ಅಂತಹ ಗೋಡೆ ಎಂದೆಂದೂ ಏಳದಿರಲಿ, ದೇಶ ದೇಶಗಳ ನಡುವೆ ಶಾಂತಿ-ಸೌಹಾರ್ದ ಮಿತ್ರತ್ವಗಳು ನೆಲಸಲೆಂಬ ಸದಾಶೆಯಿಂದ ಸದ್ಯಕ್ಕೊಂದು ವಿರಾಮ.

ಪ್ರಶಸ್ತಿ ಪಿ. ಸಾಗರ

ಟಾಪ್ ನ್ಯೂಸ್

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.