ಜೀವನದಲ್ಲಿ ನಂಬಿಕೆಯ ಬಲವೇ ನಮಗೆ ಬೆಂಬಲ

Team Udayavani, Oct 1, 2022, 5:45 AM IST

ಜೀವನದಲ್ಲಿ ನಂಬಿಕೆಯ ಬಲವೇ ನಮಗೆ ಬೆಂಬಲ

ಬೇರೆಯವರಿಗೆ ನೀನು ಕೊಡುವ ಅತೀದೊಡ್ಡ ಉಡುಗೊರೆ ಎಂದರೆ ಭರವಸೆ – ಹೀಗೆ ಭರವಸೆಯಿಂದ ನಂಬಿಕೆ ಮೂಡಿಸುವುದು. “Leader is a dealer in hope” ಆಸೆಗೆ ಊರು ಗೋಲು ನೀಡುವವನೇ ನಾಯಕ. ತನ್ನ ಬಗ್ಗೆ ತಾನು ಹೊಂದಿರುವ ವಿಶ್ವಾಸ ಅಥವಾ “ನಂಬಿಕೆಯೇ’ ಆತ್ಮವಿಶ್ವಾಸ ಎನಿಸಿಕೊಳ್ಳುತ್ತದೆ. ಆ ನಂಬಿಕೆಯು ಸದೃಢ  ವಾಗಿದ್ದು ನಮ್ಮ ವ್ಯಕ್ತಿತ್ವ, ಕ್ರಿಯಾ ಶೀಲತೆಗಳು ಪೂರಕವಾಗಿದ್ದಾಗ ಯಶಸ್ಸು ನಮ್ಮ ಹಿಂಬಾಲಕ, ನಾವೇ ನಾಯಕರು.ಆಸ್ತಿಕನು ದೇವರಲ್ಲಿ ಇಡುವ ನಂಬಿ ಕೆಯೇ ಭಕ್ತಿ. “ನಂಬಿ ಕೆಟ್ಟವ ರಿಲ್ಲವೋ ರಂಗಯ್ಯನ’ ಎಂದು ದಾಸರು ಹಾಡಿರುವುದು ಇದಕ್ಕೊಂದು ನಿದರ್ಶನ. ಹೀಗೆ ನಂಬಿಕೆಯ ಮುಖಗಳು ಹಲವಾರು.

ನೂರಾರು ಸಂಬಂಧಗಳಲ್ಲಿ, ಅದರಲ್ಲೂ ಪತಿ -ಪತ್ನಿಯರ ನಡುವೆ ಪ್ರೀತಿ ಯೊಂದಿಗೆ ನಂಬಿಕೆಯೂ ಪ್ರಧಾನವೇ. “Mother is the truth, father is the faith’ ಎಂಬ ಮಾತು ನಿತ್ಯಸತ್ಯ. ಸಾರ್ವಕಾಲಿಕ. ತಾಯಿಯು ತನ್ನನ್ನು “ಅಮ್ಮ’ ಎಂಬ ಎರಡಕ್ಷರಗಳಿಂದ ಪರಿಚಯಿಸಿಕೊಳ್ಳುತ್ತ, ಹಾಗೆಯೇ ಕರೆಸಿಕೊಳ್ಳುತ್ತ, ತಂದೆಯನ್ನು ಪರಿಚಯಿಸುತ್ತ “ಅಪ್ಪ’ ಎಂದು ಸಂಬೋಧಿಸಲು ಕಲಿಸಿಕೊಡುತ್ತಾಳೆ. ಮಗುವಿಗೆ ಅಮ್ಮನೇ ಮೊದಲ ಗುರು, ಅವಳ ಪಾಠದ ಪರಿಯೇ ಅನುಪಮ. ಮುಂದೆ ಮಗುವು ಬದುಕನ್ನು ಕಟ್ಟಿಕೊಳ್ಳಲು ದಾರಿದೀಪವಾಗುವ ಹತ್ತು ಹಲವು ನಂಬಿಕೆಗಳಿಗೆಲ್ಲ ಈ ಪ್ರಾರಂಭಿಕ ಸಂಬಂಧ ತಿಳಿಸಿಕೊಡುವ “ಅಮ್ಮ – ಅಪ್ಪ’ – ಎಂಬೀ ಪದಗಳೇ ಅಡಿಗಲ್ಲು. ಹೀಗೆ ನಂಬಿಕೆಯ ತಳಹದಿಯ ಮೇಲೆ ಪ್ರೀತಿ ಸೌಧ ನಿರ್ಮಿಸಿ ಮಗುವನ್ನು ಬೆಳೆಸುತ್ತಾರೆ ಹೆತ್ತವರು. ಮುಂದೆ ಬದುಕಿನಲ್ಲಿ ಎದುರಾಗುವ ಹತ್ತಾರು ಸಮಸ್ಯೆಗಳ ನಿವಾರಣೆಗೂ ವ್ಯವಹಾರಗಳಿಗೂ ನಂಬಿಕೆಯೇ ಪ್ರಧಾನ ಪಂಚಾಂಗವಾಗಿ ಒದಗಿ ಬರುತ್ತದೆ.

ತಾನು ನಂಬಿಕೊಂಡದ್ದನ್ನು ಕ್ರಿಯಾರೂಪಕ್ಕೆ ಇಳಿಸಿ ದೃಢಚಿತ್ತದಿಂದ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳುವವನೇ ಕರ್ಮಯೋಗಿ. ಇಂಥವರಿಗೆ ಜೀವನವೇ ಪ್ರಯೋಗ ಶಾಲೆ.

ಕೆಲವೊಮ್ಮೆ ನಂಬಿಕೆ, ಅಪನಂಬಿಕೆಗಳಿಗೆ ತಾಕಲಾಟ ಆಗುವುದಿದೆ. ವಿಜ್ಞಾನಿ ಯೊಬ್ಬ ನಿಗೆ ದೇವರ ಅಸ್ತಿತ್ವದ ಬಗ್ಗೆ ಒಂದಿಷ್ಟೂ ನಂಬಿಕೆ ಇರಲಿಲ್ಲ. ಆ ಬಗ್ಗೆ ಅವನಿಂದ ಸದಾ ಅಪನಂಬಿಕೆಯ ಅಪಸ್ವರಗಳೇ. “ದೇವರಿದ್ದರೆ ಕಣ್ಣಿಗೇಕೆ ಕಾಣಿಸುತ್ತಿಲ್ಲ ?’ ಎಂಬುದೇ ಅವನ ಸಂಶಯ. ಗೆಳೆಯರು ಆಗ “ನಿನಗೆ ಮೆದುಳು ಇದೆಯಲ್ಲ? ಅದು ನಿನಗೆ ಕಾಣುತ್ತಿದೆಯೇ, ಅದು ನಿನ್ನ ಸಕಲ ಕಾರ್ಯಗಳನ್ನೂ ನಿಯಂತ್ರಿಸುತ್ತಿದೆಯಲ್ಲ? ಹಾಗೆಯೇ ಅಗೋ ಚರನಾದರೂ ದೇವನೂ ಸಕಲ ಕಾರ್ಯ ಕಾರಣನು…’ ಎಂದು ತಿಳಿ ಹೇಳು ತ್ತಿದ್ದರು. ಆದರೂ ಅವನದು ನಕಾರಾತ್ಮಕ ಧೋರಣೆಯೇ. ಅಂಥವನು ಒಮ್ಮೆ ತೀವ್ರ ರೋಗಗ್ರಸ್ತನಾದಾಗ ಭಯಗೊಂಡು “ಓ ದೇವರೇ ನನ್ನನ್ನು ಕಾಪಾಡು… ನೀನು ಇದ್ದರೆ’ ಎಂದು ಆಗಾಗ ಮೌನ ಪ್ರಾರ್ಥನೆ ಸಲ್ಲಿಸುತ್ತಿದ್ದನಂತೆ!

ನಮಗೆ ನಮ್ಮಲ್ಲೇ ಗಟ್ಟಿ ನಂಬಿಕೆ ಇರಬೇಕು. ಆಗ ಅದೇ ನಮಗೆ ಸ್ಫೂರ್ತಿಯಾಗುತ್ತದೆ. ರಾಮಾಯಣ ದಲ್ಲಿನ ಮಹಾ ಬಲಶಾಲಿ ಹನುಮಂತನಿಗೆ ತನ್ನ ಆಗಾಧ ದೈಹಿಕ ಶಕ್ತಿಯ ಅರಿವಿರಲಿಲ್ಲ. ಜಾಂಬವಂತನು ಅದನ್ನು ತಿಳಿ ಹೇಳಿ ಅವ ನನ್ನು ಪ್ರೋತ್ಸಾಹಿಸಿದಾಗ, ಹನುಮಂತನು ಅಗಾಧ ವಾದ ಸಾಗರೋಲ್ಲಂಘನಕ್ಕೆ ಸಿದ್ಧನಾದ. ಅಲ್ಲದೆ ಜಯಶಾಲಿಯೂ ಆದದ್ದು ರೋಚಕ ಕಥೆ. ಆದರೆ ಸ್ವನಂಬಿಕೆಯೂ ಅತಿ ಯಾದರೆ ಜಂಭವಾಗಿ ಹಾನಿ, ಕಡಿಮೆ ಇದ್ದರೆ ಕೀಳರಿಮೆ, ಅದರಿಂದ ಅವನತಿಗೂ ಒಳಗಾಗಬಹುದು. ಇಲ್ಲಿ ವಿವೇಕ, ಮುಂದಾಲೋಚನೆಗಳು ಕೆಲಸ ಮಾಡಬೇಕು. ಏಕಲವ್ಯನು ದೃಢ ನಂಬಿಕೆ ಯಿಂದ ತಾನಾಗಿ ಬಿಲ್ವಿದ್ಯೆ ಕಲಿತರೂ ಗುರು ದ್ರೋಣಾಚಾರ್ಯರಿಗೆ ಗೌರವದಿಂದ ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೇ ನೀಡಿ ಧೀಮಂತ ಶಿಷ್ಯನೆಂದು ಪುರಾಣ ಪ್ರಸಿದ್ಧನಾದ.
ನಮ್ಮ ಸ್ವಾತಂತ್ರ್ಯ ಶಿಲ್ಪಿ ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಪಥದಲ್ಲಿ ಅಚಲ ನಂಬಿಕೆಯಿರಿಸಿ, ಒಂದಿಷ್ಟೂ ವಿಚಲಿತರಾಗದೆ ಕಾರ್ಯಶೀಲರಾಗಿ ಜಯ ಗಳಿಸಿದ್ದು, ವಿದೇಶಗಳಲ್ಲೂ ಪ್ರಚಲಿತ ವಿರುವ ಸುರಮ್ಯ ಕಥೆ.
ಬಾಲ್ಯದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡಿಗೆ ಕಲಿಯುವ ಮಗುವಿನಿಂದ ಹಿಡಿದು ಹೆಜ್ಜೆಗಳೇ ಒಜ್ಜೆಯಾಗುವ ವೃದ್ಧಾಪ್ಯದ ವರೆಗಿನ ಪ್ರತೀ ಹಂತದಲ್ಲೂ ನಂಬಿಕೆಯ ಬಲವೇ ನಮಗೆ ಬೆಂಬಲವಾಗಿರಲಿ.

- ಸುಶೀಲಾ ಆರ್‌. ರಾವ್‌, ಉಡುಪಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.