ಟೈಟನ್‌ ಮೇಲೆ ಟೈಟಾನಿಕ್‌ ದುರಂತ ಛಾಯೆ

Team Udayavani, Jun 27, 2023, 7:26 AM IST

SUBMARINE

ಐವರು ಪ್ರವಾಸಿಗರೊಂದಿಗೆ ಟೈಟಾನಿಕ್‌ ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಟೈಟನ್‌ ಜಲಾಂತರ್ಗಾಮಿ, ನೀರಿನಲ್ಲೇ ಸ್ಫೋಟಗೊಂಡಿದೆ. ಜೂ.18ರಂದು ಕಾಣೆಯಾಗಿದ್ದ ಈ ನೌಕೆಯ ಬಗ್ಗೆ ಗುರುವಾರ ರಾತ್ರಿವರೆಗೂ ಹುಡುಕಾಟ ನಡೆಸಲಾಗುತ್ತಿತ್ತು. ಆದರೆ ಈ ನೌಕೆ ಸ್ಫೋಟವಾಗಿರಬಹುದು, ಅದರಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ಓಷನ್‌ಗೇಟ್‌ ಸಂಸ್ಥೆ ಹೇಳಿದೆ. ಹೀಗಾಗಿ ಈ ನೌಕೆ ದುರಂತ ಅಂತ್ಯ ಕಂಡಿದೆ. ಹಾಗಾದರೆ ಏನಿದು ಪ್ರವಾಸ? ಸಬ್‌ಮರ್ಸಿಬಲ್‌ ಅಂದರೇನು? ಇಲ್ಲಿದೆ ಮಾಹಿತಿ…

ಏನಿದು ಸಬ್‌ಮರ್ಸಿಬಲ್‌?

ಇದು ಒಂದು ರೀತಿ ಸಬ್‌ಮರೀನ್‌ ರೀತಿಯಲ್ಲೇ ರೂಪಿತವಾಗಿರುವ ಚಿಕ್ಕದಾದ ನೀರಿನೊಳಗೆ ಚಲಿಸುವಂಥ ವಾಹನ. ಆದರೆ, ಸಬ್‌ಮರೀನ್‌ನಲ್ಲಿ ಇರುವಂಥ ಆಯ್ಕೆಗಳು ಇದರಲ್ಲಿ ಇರುವುದಿಲ್ಲ. ಅಮೆರಿಕದ ಓಷನ್‌ಗೇಟ್‌ ಎಂಬ ಕಂಪೆನಿ ಈ ಸಬ್‌ಮರ್ಸಿಬಲ್‌ ಅನ್ನು ಹೊಂದಿದೆ. ಇದನ್ನು ಪ್ರವಾಸ ಮತ್ತು ಸಂಶೋಧನೆಗಾಗಿ ಬಳಕೆ ಮಾಡುತ್ತದೆ. ಕಂಪೆನಿಯೇ ಹೇಳಿಕೊಂಡಿರುವ ಪ್ರಕಾರ, ಟೈಟನ್‌ ಅನ್ನು ಅತ್ಯಂತ ಲಘು ಆಫ್ ದಿ ಶೆಲ್ಫ್ ಉಪಕರಣಗಳೊಂದಿಗೆ ಉತ್ಪಾದನೆ ಮಾಡಲಾಗಿದೆ. 6.7 ಮೀಟರ್‌ ಉದ್ದದ ಇದನ್ನು ಮೊದಲೇ ಹೇಳಿದ ಹಾಗೆ ಪ್ರವಾಸ, ಸಂಶೋಧನೆ, ದಾಖಲೆಗಳ ಸಂಗ್ರಹ, ಸಿನೆಮಾ ಮತ್ತು ಮಾಧ್ಯಮ ಸೃಷ್ಟಿ, ಸಮುದ್ರದ ಆಳದ ಅಧ್ಯಯನಕ್ಕೆ ಬಳಕೆ ಮಾಡಲಾಗುತ್ತದೆ.

ಸಬ್‌ಮರ್ಸಿಬಲ್‌ ಕಾರ್ಯಾಚರಣೆ ಹೇಗೆ?

ಟೈಟನ್‌ ಜಲಾಂತರ್ಗಾಮಿಯನ್ನು ಕಾರ್ಬನ್‌ ಫೈಬರ್‌ ಮತ್ತು ಟೈಟಾನಿಯಮ್‌ನಿಂದ ಮಾಡಲಾಗಿದೆ. ಇದರ ತೂಕ 10,432 ಗ್ರಾಂ. ಓಷನ್‌ಗೇಟ್‌ ವೆಬ್‌ಸೈಟ್‌ ಪ್ರಕಾರ, ಈ ಜಲಾಂತರ್ಗಾಮಿ 4,000 ಮೀಟರ್‌ ಆಳದ ವರೆಗೆ ಹೋಗಬಲ್ಲದು. ಅಲ್ಲದೆ ಪ್ರತೀ ಗಂಟೆಗೆ 5.5 ಮೈಲಿ ವೇಗದಲ್ಲಿ ಚಲಿಸುತ್ತದೆ. ಹಾಗೆಯೇ ಇದರಲ್ಲಿ ಐವರಿಗೆ ಮಾತ್ರ ಕುಳಿತುಕೊಳ್ಳಲು ಜಾಗವಿರುತ್ತದೆ. ಕುರ್ಚಿಗಳು ಸೇರಿದಂತೆ ಯಾವುದೇ ಉಪಕರಣಗಳು ಇರುವುದಿಲ್ಲ.

ನೆಲದಂತಿರುವ ಹಾಸಿನ ಮೇಲೆ ಕುಳಿತುಕೊಂಡಿರಬೇಕು. ಒಂದು ಕಡೆ ಪುಟ್ಟದಾದ ಕಿಟಕಿ ಇದ್ದು, ಇದರಿಂದ ಹೊರಗೆ ನೋಡಬಹುದು. 1,000 ಅಡಿ ಆಳಕ್ಕಿಳಿದ ಮೇಲೆ ಸೂರ್ಯನ ಬೆಳಕು ಕಾಣೆಯಾಗುತ್ತದೆ. ಆಗ ತನ್ನದೇ ಆದ ಬೆಳಕಿನೊಂದಿಗೆ ಇದು ಸಾಗುತ್ತದೆ. ಇದು ಸಂಪೂರ್ಣವಾಗಿ ಹೊರಗಿನ ಸಿಬ್ಬಂದಿಯ ಕಾರ್ಯಾಚರಣೆಯ ಮೇಲೆ ಅವಲಂಬಿತವಾಗಿರುತ್ತದೆ. ಇದರೊಳಗೆ ಐವರನ್ನು ಕಳುಹಿಸಿ, ಹೊರಗಿನಿಂದ ಬೋಲ್ಟ್ ಹಾಕಲಾಗಿರುತ್ತದೆ. ಜತೆಗೆ, ಒಬ್ಬರು ಕ್ಯಾಪ್ಟನ್‌ ಇದ್ದು ಅವರ ಕೈನಲ್ಲಿ ಗೇಮ್‌ ಕಂಟ್ರೋಲರ್‌ನಂಥ ಉಪಕರಣ ಇರುತ್ತದೆ.

ಸಬ್‌ಮರೀನ್‌ಗೂ, ಸಬ್‌ಮರ್ಸಿಬಲ್‌ಗ‌ೂ ಇರುವ ವ್ಯತ್ಯಾಸ

ಸಬ್‌ಮರೀನ್‌ ಎಂಬುದೇ ವಿಶಾಲಾರ್ಥದ ಪದ. ಇದನ್ನು ಬಹುತೇಕ ಸೇನೆಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದರೊಳಗೆ ಪವರ್‌ ಬ್ಯಾಕ್‌ಅಪ್‌ ಹೆಚ್ಚಿರುತ್ತದೆ. ಅಂದರೆ ಸಮುದ್ರದ ದಡದಿಂದ ನೀರಿನೊಳಗೆ ಹೋಗಿ, ವಾಪಸ್‌ ಬರುವಷ್ಟು ಇಂಧನವನ್ನು ಇದರಲ್ಲಿ ಸಂಗ್ರಹಿಸಿ ಇಡಬಹುದು. ಆದರೆ ಸಬ್‌ಮರ್ಸಿಬಲ್‌ ಪುಟಾಣಿ ಗಾತ್ರದಲ್ಲಿದ್ದು, ಇದರಲ್ಲಿನ ಇಂಧನ ಶಕ್ತಿಯೂ ಕಡಿಮೆ ಇರುತ್ತದೆ. ಜತೆಗೆ ಇದಕ್ಕೆ ಸ್ವತಂತ್ರವಾಗಿ ಇಂಧನವನ್ನು ಶೇಖರಿಸಿಟ್ಟುಕೊಳ್ಳುವ ಶಕ್ತಿ ಇರುವುದಿಲ್ಲ. ಯಾವಾಗಲೂ ಒಂದು ಹಡಗಿನೊಂದಿಗೆ ಸಂಪರ್ಕ ಹೊಂದಿರಬೇಕಾಗಿರುತ್ತದೆ. ಸದ್ಯ ನೀರಿನೊಳಗೇ ಸ್ಫೋಟವಾಗಿರುವ ಟೈಟನ್‌ ಸಬ್‌ಮರ್ಸಿಬಲ್‌, ಪೋಲಾರ್‌ ಪ್ರಿನ್ಸ್‌ ಎಂಬ ಹಡಗಿನ ಜತೆ ಸಂಪರ್ಕದಲ್ಲಿತ್ತು.

 ಸಬ್‌ಮರ್ಸಿಬಲ್‌ ಕಾರ್ಯಾಚರಣೆ ಹೇಗೆ?

ಟೈಟನ್‌ ಜಲಾಂತರ್ಗಾಮಿಯನ್ನು ಕಾರ್ಬನ್‌ ಫೈಬರ್‌ ಮತ್ತು ಟೈಟಾನಿಯಮ್‌ನಿಂದ ಮಾಡಲಾಗಿದೆ. ಇದರ ತೂಕ 10,432 ಗ್ರಾಂ. ಓಷನ್‌ಗೇಟ್‌ ವೆಬ್‌ಸೈಟ್‌ ಪ್ರಕಾರ, ಈ ಜಲಾಂತರ್ಗಾಮಿ 4,000 ಮೀಟರ್‌ ಆಳದ ವರೆಗೆ ಹೋಗಬಲ್ಲದು. ಅಲ್ಲದೆ ಪ್ರತೀ ಗಂಟೆಗೆ 5.5 ಮೈಲಿ ವೇಗದಲ್ಲಿ ಚಲಿಸುತ್ತದೆ. ಹಾಗೆಯೇ ಇದರಲ್ಲಿ ಐವರಿಗೆ ಮಾತ್ರ ಕುಳಿತುಕೊಳ್ಳಲು ಜಾಗವಿರುತ್ತದೆ. ಕುರ್ಚಿಗಳು ಸೇರಿದಂತೆ ಯಾವುದೇ ಉಪಕರಣಗಳು ಇರುವುದಿಲ್ಲ.

ನೆಲದಂತಿರುವ ಹಾಸಿನ ಮೇಲೆ ಕುಳಿತುಕೊಂಡಿರಬೇಕು. ಒಂದು ಕಡೆ ಪುಟ್ಟದಾದ ಕಿಟಕಿ ಇದ್ದು, ಇದರಿಂದ ಹೊರಗೆ ನೋಡಬಹುದು. 1,000 ಅಡಿ ಆಳಕ್ಕಿಳಿದ ಮೇಲೆ ಸೂರ್ಯನ ಬೆಳಕು ಕಾಣೆಯಾಗುತ್ತದೆ. ಆಗ ತನ್ನದೇ ಆದ ಬೆಳಕಿನೊಂದಿಗೆ ಇದು ಸಾಗುತ್ತದೆ. ಇದು ಸಂಪೂರ್ಣವಾಗಿ ಹೊರಗಿನ ಸಿಬ್ಬಂದಿಯ ಕಾರ್ಯಾಚರಣೆಯ ಮೇಲೆ ಅವಲಂಬಿತವಾಗಿರುತ್ತದೆ. ಇದರೊಳಗೆ ಐವರನ್ನು ಕಳುಹಿಸಿ, ಹೊರಗಿನಿಂದ ಬೋಲ್ಟ್ ಹಾಕಲಾಗಿರುತ್ತದೆ. ಜತೆಗೆ, ಒಬ್ಬರು ಕ್ಯಾಪ್ಟನ್‌ ಇದ್ದು ಅವರ ಕೈನಲ್ಲಿ ಗೇಮ್‌ ಕಂಟ್ರೋಲರ್‌ನಂಥ ಉಪಕರಣ ಇರುತ್ತದೆ.

ಟಿಕೆಟ್‌ ದರ ಎಷ್ಟು?

ಎಲ್ಲರೂ ಈ ಜಲಾಂತರ್ಗಾಮಿಯಲ್ಲಿ ಪ್ರವಾಸ ಹೋಗಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಗೆ 2 ಕೋಟಿ ರೂ. ದರವಿದೆ. ಹೀಗಾಗಿಯೇ ಟೈಟಾನಿಕ್‌ ನೋಡಲು ತೆರಳಿದ್ದವರೆಲ್ಲರೂ ಅತ್ಯಂತ ಶ್ರೀಮಂತರೇ. ಇದು ಒಟ್ಟು 8 ದಿನಗಳ ಪ್ರವಾಸ. ಮೊದಲಿಗೆ ದಡದಿಂದ ಪೋಲಾರ್‌ ಪ್ರಿನ್ಸ್‌ ಹಡಗಿನಲ್ಲಿ ಹೋಗಿ, ಅಲ್ಲಿಂದ ಈ ಟೈಟನ್‌ ಮೂಲಕ ಟೈಟಾನಿಕ್‌ ನೋಡಲು ಹೋಗಬೇಕು. ಟೈಟಾನಿಕ್‌ ನೋಡಲು ಹೋಗುವ ಅವಧಿ ಕೇವಲ 10 ಗಂಟೆ. ಇದರಲ್ಲಿ ಟೈಟಾನಿಕ್‌ ನೋಡಲು ಸಿಗುವ ಅವಧಿ ಕೇವಲ 20 ನಿಮಿಷ ಮಾತ್ರ. ಈ ಬಳಿಕ ಮತ್ತೆ ಹಡಗಿಗೆ ವಾಪಸ್‌ ಬರಬೇಕು.

ಟೈಟನ್‌ಗೆ ಏನಾಗಿರಬಹುದು?

ತಜ್ಞರ ಪ್ರಕಾರ, ಜಲಾಂತರ್ಗಾಮಿ ಪೂರ್ಣವಾಗಿ ಕುಸಿತ  ಕಂಡಿದೆ. ಅಂದರೆ ಸಾಗರದಡಿಯ ಒತ್ತಡವನ್ನು ತಡೆದುಕೊಳ್ಳಲಾಗದೆ, ಹೊರಗಿನ ಸಂಪರ್ಕ ಕಳೆದುಕೊಂಡ ತತ್‌ಕ್ಷಣವೇ ಅದು ಸಂಪೂರ್ಣವಾಗಿ ಜಜ್ಜಿಹೋದಂತೆ ಕುಸಿದಿದೆ. ಅಲ್ಲದೆ, ಅದರಲ್ಲಿದ್ದ ಐವರ ಶವಗಳು ಸಿಗುವ ಸಾಧ್ಯತೆಗಳೂ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಅಂದರೆ 4,000 ಅಡಿ ಆಳದಲ್ಲಿ ಪ್ರತೀ ಚದರ ಇಂಚಿಗೆ 5,600 ಪೌಂಡ್‌ನಷ್ಟು ಒತ್ತಡವಿರುತ್ತದೆ. ಈ ಒತ‚¤ಡವನ್ನು ತಡೆದುಕೊಳ್ಳುವುದು ಕಷ್ಟಕರ. ಕೇವಲ ಒಂದು ಮಿಲಿ ಸೆಕೆಂಡ್‌ನಲ್ಲಿ ಇಡೀ ಜಲಾಂತರ್ಗಾಮಿ ಕುಸಿದಿರುತ್ತದೆ ಎಂದು ಅಮೆರಿಕ ನೌಕಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಒಳಗಿರುವವರಿಗೆ ಏನೋ ಸಮಸ್ಯೆ ಇದೆ ಎಂಬುದು ಗೊತ್ತಾಗುವುದರೊಳಗೇ ಈ ಪ್ರಕ್ರಿಯೆ ನಡೆದಿರುತ್ತದೆ ಎಂದು ತಿಳಿಸಿದ್ದಾರೆ.

ತನಿಖೆ ನಡೆಯುವುದು ಹೇಗೆ?

ಸಾಮಾನ್ಯವಾಗಿ ವಿಮಾನ ಅಪಘಾತಗಳಾದಾಗ, ಅದರಲ್ಲಿನ ಬ್ಲ್ಯಾಕ್‌ ಬಾಕ್ಸ್‌ ಅನ್ನು ತೆಗೆದುಕೊಂಡು ತನಿಖೆ ನಡೆಸಲಾಗುತ್ತದೆ. ಈ ಮೂಲಕ ವಿಮಾನ ತಾಂತ್ರಿಕ ಸಮಸ್ಯೆಯಿಂದ ಅಪಘಾತಕ್ಕೀಡಾಯಿತೋ ಅಥವಾ ಪೈಲಟ್‌ನ ತಪ್ಪಿನಿಂದ ಈ ರೀತಿ ಆಗಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ. ಆದರೆ ಈ ಟೈಟನ್‌ ಜಲಾಂತರ್ಗಾಮಿಯಲ್ಲಿ ಅಂಥ ಯಾವುದೇ ಬ್ಲ್ಯಾಕ್‌ ಬಾಕ್ಸ್‌ ಆಗಲಿ, ಇತರೆ ಪರಿಕರಗಳಾಗಲಿ ಇಲ್ಲ.

ಹೀಗಾಗಿ ತನಿಖೆ ನಡೆಸುವುದು ಕಷ್ಟ. ಆದರೆ ಹಡಗಿನಿಂದ ಈ ನೌಕೆ ಸಂಪರ್ಕ ಕಳೆದುಕೊಂಡಿದ್ದು ಹೇಗೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಈ ಪ್ರಕರಣದ ಬಗ್ಗೆ ಯಾರು ತನಿಖೆ ನಡೆಸಬೇಕು ಎಂಬ ಕುರಿತಂತೆಯೂ ಗೊಂದಲಗಳಿವೆ. ಸಮುದ್ರದ ಆಳದಲ್ಲಿ ಈ ಘಟನೆ ನಡೆದಿದೆ. ಜತೆಗೆ ಸಾವನ್ನಪ್ಪಿದವರು ಬೇರೆ ಬೇರೆ ದೇಶದವರು. ಆದರೆ ಸದ್ಯ ಅಮೆರಿಕ ಕರಾವಳಿ ಪಡೆ ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಅವರೇ ತನಿಖೆ ನಡೆಸಬಹುದು ಎಂದು ಹೇಳಲಾಗುತ್ತಿದೆ.

 ಓಷನ್‌ಗೇಟ್‌ ಸಂಸ್ಥೆಯ ಬಗ್ಗೆ

ವಾಷಿಂಗ್ಟನ್‌ ಮೂಲದ ಓಷನ್‌ಗೇಟ್‌ ಎಂಬ ಕಂಪೆನಿ ಈ ಸಮುದ್ರದಾಳದ ಪ್ರವಾಸ ಆಯೋಜನೆ ಮಾಡುತ್ತಿದೆ. 2021ರ ಮೇಯಲ್ಲಿ ಅಮೆರಿಕದ ಕೋರ್ಟ್‌ನಲ್ಲಿ ಅರ್ಜಿ ಹಾಕಿಕೊಂಡಿದ್ದ ಇದು ಸಮುದ್ರದಾಳದಲ್ಲಿ 50 ಬಾರಿ ಟೈಟನ್‌ ಜಲಾಂತರ್ಗಾಮಿಯನ್ನು ಪರೀಕ್ಷಿಸಿದ್ದೇವೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಸುರಕ್ಷತಾ ನಿಯಮ ಗಳೊಂದಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿತ್ತು. ಅಲ್ಲದೆ, 2021-2022ರಲ್ಲಿ ಒಟ್ಟಾರೆಯಾಗಿ 46 ಮಂದಿ ಈ ಟೈಟನ್‌ನಲ್ಲಿ ಯಶಸ್ವಿ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿಸಿದೆ.ಓಷನ್‌ಗೇಟ್‌ ಸಂಸ್ಥೆಯು ಟೈಟನ್‌ ಜತೆಗೆ ಇನ್ನೂ ಎರಡು ಜಲಾಂತರ್ಗಾಮಿಗಳನ್ನು ಹೊಂದಿದೆ. ಆಂಟಿಪಾಡ್ಸ್‌ ಮತ್ತು ಸೈಕ್ಲಾಪ್ಸ್‌ ಎಂಬುದು ಅವುಗಳ ಹೆಸರು. ಆಂಟಿಪಾಡ್ಸ್‌ 1,000 ಅಡಿ ಮತ್ತು ಸೈಕ್ಲಾಪ್ಸ್‌ 1,600 ಅಡಿ ಕೆಳಗೆ ಹೋಗಬಲ್ಲವು.

ಕಾರ್ಯಾಚರಣೆ  ವೆಚ್ಚ ಯಾರದ್ದು?

ಟೈಟನ್‌ ಸಿಡಿದು ಹೋಗಿದೆ ಅಥವಾ ಅಪ್ಪಚ್ಚಿಯಾಗಿದೆ ಎಂಬುದು ಓಷನ್‌ಗೇಟ್‌ನವರ ಹೇಳಿಕೆ. ಅಲ್ಲದೆ ಅದರಲ್ಲಿದ್ದ ಐವರೂ ಸಾವನ್ನಪ್ಪಿದ್ದು, ಮೃತದೇಹ ಸಿಗುವ ಸಾಧ್ಯತೆಗಳು ತೀರಾ ಕಡಿಮೆ ಎಂಬ ಮಾತುಗಳಿವೆ. ಆದರೂ ಹುಡುಕಾಟ ನಡೆಯುತ್ತಲೇ ಇದೆ. ಇದರ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆ ಇದೆ. ಸದ್ಯ ಅಮೆರಿಕ ಮತ್ತು ಕೆನಡಾದ ಪ್ರಾಧಿಕಾರಗಳು ಹುಡುಕಾಟ ನಡೆಸುತ್ತಿವೆ. ಅಮೆರಿಕ ನೌಕಾಪಡೆಯ ಫ್ಲೈಅವೇ ಡೀಪ್‌ ಓಷಿಯನ್‌ ಸಾಲ್ವೇಜ್‌ ಸಿಸ್ಟಮ್‌ ಮತ್ತು ಫ್ರಾನ್ಸ್‌ನ ಡೀಪ್‌ ಡೈವ್‌ ರೋಬೋಟ್‌ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ತಜ್ಞರ ಪ್ರಕಾರ, ಈ ಕಾರ್ಯಾಚರಣೆಯ ಸಂಪೂರ್ಣ ವೆಚ್ಚ ಓಷನ್‌ಗೆàಟ್‌ ಕಂಪೆನಿಯದ್ದೇ ಆಗಿದೆ. ಆದರೆ ಭಾರೀ ಪ್ರಮಾಣದ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಮೆರಿಕ ಸರಕಾರವೇ ವೆಚ್ಚ ಭರಿಸುವ ಸಂದರ್ಭ ಬರಬಹುದು ಎಂಬ ಮಾತುಗಳಿವೆ.

ಮಿ. ಬೀಸ್ಟ್‌ಗೂ ಬಂದಿತ್ತಂತೆ ಆಫ‌ರ್‌

ಈಗ ನಾಶವಾಗಿರುವ ಟೈಟನ್‌ನಲ್ಲಿ ಪ್ರವಾಸ ಮಾಡುವಂತೆ ಖ್ಯಾತ ಯೂಟ್ಯೂಬರ್‌ ಮಿ. ಬೀಸ್ಟ್‌ ಗೂ ಆಹ್ವಾನ ಬಂದಿತ್ತಂತೆ. ಅವರೇ ಸೋಮವಾರ ಹೇಳಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ನನಗೆ ಟೈಟನ್‌ನಲ್ಲಿ ಪ್ರಯಾಣ ಮಾಡಲು ಬನ್ನಿ ಎಂದು ಕರೆದಿದ್ದರು. ಆದರೆ ನಾನು ನಿರಾಕರಿಸಿದೆ. ಅದರಲ್ಲಿ ಹೋಗಲು ನನಗೆ ಒಂದು ರೀತಿಯ ಭಯವಾಗಿತ್ತು. ಹೀಗಾಗಿಯೇ ಬೇಡವೆಂದೆ ಎಂದು ಟ್ವೀಟ್‌ ಮಾಡಿದ್ದಾರೆ ಮಿ. ಬೀಸ್ಟ್‌. ಅಂದ ಹಾಗೆ ಇವರಿಗೆ ಯೂಟ್ಯೂಬ್‌ನಲ್ಲಿ 162 ಮಿಲಿಯನ್‌ ಚಂದಾದಾರರಿದ್ದಾರೆ.

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.