Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ


Team Udayavani, Nov 18, 2024, 8:28 PM IST

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

ನವದೆಹಲಿ: ಅಮೇರಿಕ ಮತ್ತು ಭಾರತವು ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲೀನ ಸಂಬಂಧವನ್ನು ಹಂಚಿಕೊಂಡಿವೆ. ಬಾಲ್ಯ ಶಿಕ್ಷಣದಿಂದ ಹಿಡಿದು ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ವಿದ್ಯಾರ್ಥಿಗಳ ದ್ವಿಮುಖ ಸಂಚಾರ ಉತ್ತೇಜಿಸುವವರೆಗೆ ವ್ಯಾಪಕ ಶ್ರೇಣಿಯ ಉಪಕ್ರಮಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಿವೆ.

ಈ ನಿರಂತರ ಸಹಕಾರವು ಈಗ ವಿಮೆನ್ ಇನ್ ಸ್ಟೆಮ್ ಫೆಲೋಶಿಪ್ (Women in STEMM) (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮ್ಯಾಟಿಕ್ಸ್ ಮತ್ತು ಮೆಡಿಸಿನ್) ಯೋಜನೆಯ ಆರಂಭದೊಂದಿಗೆ ಇನ್ನಷ್ಟು ವಿಸ್ತರಿಸುತ್ತಿದೆ. ಇದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಗುಪ್ತಾ-ಕ್ಲಿನ್ಸ್ಕಿ ಇಂಡಿಯಾ ಸಂಸ್ಥೆ ಮತ್ತು ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಅಮೇರಿಕ-ಭಾರತ ಒಕ್ಕೂಟ (U.S.-India Alliance for Women’s Economic Empowerment) ನಡುವಿನ ಸಹಭಾಗಿತ್ವವಾಗಿದೆ. ಇದು ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿರುವ ಭಾರತದ ಮಹಿಳಾ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಅವರ STEMM ಕ್ಷೇತ್ರಗಳಲ್ಲಿ ನೇತಾರನನ್ನಾಗಿಸಲು ಸಬಲಗೊಳಿಸುವುದು ಮತ್ತು ಅಗತ್ಯ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ.

ಶಿಕ್ಷಣದಲ್ಲಿನ ಈ ಹೂಡಿಕೆಯು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತಿದೆ. ಇತ್ತೀಚಿನ ಓಪನ್ ಡೋರ್ಸ್ ವರದಿಯನ್ನು ಪ್ರಸ್ತಾಪಿಸಿದ ಭಾರತದಲ್ಲಿನ ಅಮೇರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು, 2009 ರಿಂದ ಇದೇ ಮೊದಲ ಬಾರಿಗೆ, ಭಾರತವು ಯಾವುದೇ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಅಮೇರಿಕಕ್ಕೆ ಕಳುಹಿಸಿದೆ ಎಂದರು! 2023/2024 ರಲ್ಲಿ 330,000 ಕ್ಕೂ ಹೆಚ್ಚು ಭಾರತೀಯರು ಅಮೇರಿಕದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು, ಇದು ಹಿಂದಿನ ವರ್ಷಕ್ಕಿಂತ 23 ಪ್ರತಿಶತ ಹೆಚ್ಚಳವಾಗಿದೆ.

ಓಪನ್ ಡೋರ್ಸ್ ವರದಿಯು ವಿವಿಧ ಹಂತಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ತೋರಿಸುತ್ತದೆ:
ಪದವೀಧರ ದಾಖಲಾತಿ: ಸುಮಾರು 197,000 ವಿದ್ಯಾರ್ಥಿಗಳು-ಕಳೆದ ವರ್ಷಕ್ಕಿಂತ 19 ಪ್ರತಿಶತ ಹೆಚ್ಚಳದೊಂದಿಗೆ, ಭಾರತವು ಎರಡನೇ ವರ್ಷಕ್ಕೆ ಅಂತರಾಷ್ಟ್ರೀಯ ಪದವೀಧರ ವಿದ್ಯಾರ್ಥಿಗಳ ಉನ್ನತ ಕಳುಹಿಸುವವರ ಸ್ಥಾನವನ್ನು ಉಳಿಸಿಕೊಂಡಿದೆ.
ಐಚ್ಛಿಕ ಪ್ರಾಯೋಗಿಕ ತರಬೇತಿ (OPT): OPT ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯು ಶೇಕಡಾ 41 ರಷ್ಟು ಏರಿಕೆಯಾಗಿ 97,556 ಕ್ಕೆ ತಲುಪಿದೆ. ಇದು ಅಮೆರಿಕಕ್ಕೆ ಪರಿಣಿತ ವೃತ್ತಿಪರರನ್ನು ಪೂರೈಸುವ ಪ್ರಮುಖ ಆಕರವಾಗಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ.

ಪದವಿಪೂರ್ವ ದಾಖಲಾತಿ: ಭಾರತದಿಂದ ಅಮೆರಿಕಕ್ಕೆ ಪದವಿಪೂರ್ವ ವ್ಯಾಸಂಗಕ್ಕೆ ತೆರಳುವವರ ಸಂಖ್ಯೆ 13 ಪ್ರತಿಶತದಷ್ಟು ಏರಿಕೆಯಾಗಿದ್ದು, 36,000 ವಿದ್ಯಾರ್ಥಿಗಳನ್ನು ತಲುಪಿದೆ.

ಈ ಹೆಚ್ಚಳವು ಕಳೆದ ಎರಡು ವರ್ಷಗಳಲ್ಲಿ U.S. ಉನ್ನತ ಶಿಕ್ಷಣದಲ್ಲಿ ಭಾರತದ ಮೇಲ್ಮುಖ ಪಥವನ್ನು ಒತ್ತಿಹೇಳುತ್ತದೆ, ಉನ್ನತ ವ್ಯಾಸಂಗ ಮತ್ತು ವೃತ್ತಿಪರ ಅವಕಾಶಗಳಲ್ಲಿ ಬಲವಾದ ಆಸಕ್ತಿ ಈ ಬೆಳವಣಿಗೆಗೆ ಕಾರಣ.

ಈ ವರ್ಷದ ಓಪನ್ ಡೋರ್ಸ್ ವರದಿಯು ಅಮೆರಿಕದ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುವ ತಾಣವಾಗಿ ಭಾರತವನ್ನು ಆಯ್ಕೆ ಮಾಡುವಲ್ಲಿ 300 ಪ್ರತಿಶತದಷ್ಟು ಹೆಚ್ಚಳವನ್ನು ತೋರಿಸುತ್ತದೆ. ಭಾರತದಲ್ಲಿ ಓದುತ್ತಿರುವ ಅಮೆರಿಕನ್ನರ ಸಂಖ್ಯೆ ಕೇವಲ ಒಂದು ವರ್ಷದಲ್ಲಿ 300 ರಿಂದ 1,300 ಕ್ಕೆ ಏರಿದೆ.

ಓಪನ್ ಡೋರ್ಸ್ ವರದಿಯ ಬಿಡುಗಡೆಯು ಅಂತರಾಷ್ಟ್ರೀಯ ಶಿಕ್ಷಣ ವಾರದ (IEW) ಆರಂಭವಾಗಿದ್ದು, ಇದು ಅಂತರರಾಷ್ಟ್ರೀಯ ಶಿಕ್ಷಣ ಮತ್ತು ವಿಶ್ವಾದ್ಯಂತ ವಿನಿಮಯದ ಪ್ರಯೋಜನಗಳ ಸಂಭ್ರಮಾಚರಣೆಯಾಗಿದೆ.

STEMM ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಯಭಾರಿ ಗಾರ್ಸೆಟ್ಟಿ, “ಇಂದು ನಾವು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಗುಪ್ತಾ-ಕ್ಲಿನ್ಸ್ಕಿ ಇಂಡಿಯಾ ಇನ್ಸ್ಟಿಟ್ಯೂಟ್ ನೇತೃತ್ವದಲ್ಲಿ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಅಮೇರಿಕ-ಭಾರತ ಒಕ್ಕೂಟದ ಉಪಕ್ರಮವಾದ “ವಿಮೆನ್ ಇನ್ STEM ಡೆವಲಪ್‌ಮೆಂಟ್ ಮತ್ತು ಮೆಡಿಸಿನ್ ಫೆಲೋಶಿಪ್‌” ಅಥವಾ “ವುಮೆನ್ ಇನ್ STEMM ಇಂಡಿಯಾ ಫೆಲೋಶಿಪ್” ಅನ್ನು ಪ್ರಾರಂಭಿಸಲು ಒಟ್ಟುಗೂಡಿದ್ದೇವೆ. ಈ ಕಾರ್ಯಕ್ರಮವು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಮತ್ತು ವೈದ್ಯಕೀಯ (STEMM) ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ, ಸಹಯೋಗ ಮತ್ತು ಲಿಂಗ ಸಮಾನತೆಯ ಜಾಗತಿಕ ಪ್ರಾಮುಖ್ಯತೆಯನ್ನು ನೆನಪಿಸುತ್ತದೆ. ಅಂತರಾಷ್ಟ್ರೀಯ ಶಿಕ್ಷಣ ವಾರದ ಹೊತ್ತಿನಲ್ಲೇ ವುಮೆನ್ ಇನ್ STEMM ಫೆಲೋಶಿಪ್‌ನ ಪ್ರಾರಂಭವು ಈ ಕ್ಷಣವನ್ನುಅರ್ಥಪೂರ್ಣ ಮತ್ತು ಹೆಚ್ಚು ವಿಶೇಷವಾಗಿಸುತ್ತದೆ. ಶಿಕ್ಷಣವು ಗಡಿಗಳಿಂದ ಸೀಮಿತವಾಗಿಲ್ಲ ಮತ್ತು ನಮ್ಮ ದೇಶಗಳು ಮತ್ತು ಸಂಸ್ಥೆಗಳ ನಡುವಿನ ಸಹಯೋಗವು ಜಾಗತಿಕ ಸವಾಲುಗಳನ್ನು ಪರಿಹರಿಸುವಲ್ಲಿ ಪ್ರಮುಖವಾಗಿದೆ ಎಂಬ ಸಮಾನ ನಂಬಿಕೆಯ ಸಂಭ್ರಮಾಚರಣೆ ಇದಾಗಿದೆ.”

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅಧ್ಯಕ್ಷ ರೊನಾಲ್ಡ್ ಜೆ. ಡೇನಿಯಲ್ಸ್, “ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದಲ್ಲಿ, ಜಾಗತಿಕ ಆವಿಷ್ಕಾರಗಳನ್ನು ಮುನ್ನಡೆಸಲು STEMM ನಲ್ಲಿ ಮಹಿಳೆಯರನ್ನು ಸಬಲಗೊಳಿಸುವುದು ಅತ್ಯಗತ್ಯ ಎಂದು ನಾವು ನಂಬುತ್ತೇವೆ. ವುಮೆನ್ ಇನ್ STEMM ಫೆಲೋಶಿಪ್ ಅನ್ನು ಯು.ಎಸ್. ಸ್ಟೇಟ್ ಡಿಪಾರ್ಟ್ಮೆಂಟ್ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ. ಭಾರತೀಯ ಮಹಿಳಾ ವಿಜ್ಞಾನಿಗಳು ನಿರ್ಣಾಯಕ ಸಂಶೋಧನಾ ಕೌಶಲ, ಮಾರ್ಗದರ್ಶಕರನ್ನು ಪಡೆಯಲು ಮತ್ತು ಜಾಗತಿಕ ನೆಟ್‌ವರ್ಕ್‌ಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಫೆಲೋಶಿಪ್ ತಮ್ಮ ಸಂಶೋಧನಾ ವೃತ್ತಿಯನ್ನು ಪ್ರಾರಂಭಿಸಲು ಮತ್ತು ಉಳಿಸಿಕೊಳ್ಳಲು ಅಗತ್ಯವಿರುವ ಬೆಂಬಲ, ತರಬೇತಿ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಈ ಕ್ಷೇತ್ರಗಳಲ್ಲಿ ಮಹಿಳೆಯರ ಬೆಳವಣಿಗೆಯನ್ನು ಮಿತಿಗೊಳಿಸುವ ಅಡೆತಡೆಗಳನ್ನು ಪರಿಹರಿಸುತ್ತದೆ. ಭಾರತದಲ್ಲಿ ಆರ್ & ಡಿ ಪರಿಸರ ವ್ಯವಸ್ಥೆಯನ್ನು ಮುನ್ನಡೆಸುವ ಹೆಚ್ಚು ಪ್ರಭಾವಶಾಲಿ ಭವಿಷ್ಯವನ್ನು ರೂಪಿಸುವ ಪ್ರತಿಭಾವಂತ ಮಹಿಳೆಯರನ್ನು ಬೆಂಬಲಿಸುವುದು ನಮ್ಮ ಹೆಮ್ಮೆ,” ಎಂದರು.

ಯು.ಎಸ್. ಮಿಷನ್ ಇಂಡಿಯಾವು ಪ್ರಾಥಮಿಕ ಶಾಲೆಯಿಂದ ವೃತ್ತಿ ಜೀವನದವರೆಗೆ ಯು.ಎಸ್.-ಭಾರತ ಶಿಕ್ಷಣ ಸಹಯೋಗಕ್ಕೆ ಬೆಂಬಲ ನೀಡುತ್ತಿದೆ, ಇದಲ್ಲದೆ ಉದ್ಯೋಗ ಮತ್ತು ಔಪಚಾರಿಕ ಆರ್ಥಿಕತೆಯಲ್ಲಿ ಮಹಿಳೆಯರ ಔಪಚಾರಿಕ ಸೇರ್ಪಡೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ.

ಯು.ಎಸ್. ಕಾನ್ಸುಲೇಟ್ ಜನರಲ್ ಮುಂಬೈ ಮತ್ತು ಡೆನ್ವರ್ ವಿಶ್ವವಿದ್ಯಾನಿಲಯವು ಉಚಿತ “ಅಂತರರಾಷ್ಟ್ರೀಕರಣದ ಡಿಜಿಟಲ್ ಮಾರ್ಗದರ್ಶಿ: ಯು.ಎಸ್.-ಭಾರತದ ಉನ್ನತ ಶಿಕ್ಷಣ ಸಂಸ್ಥೆ (HEI) ಸಹಯೋಗ ಮತ್ತು ಪಾಲುದಾರಿಕೆಗಳನ್ನು ಸರಳಗೊಳಿಸುವುದು” ಪ್ರಾರಂಭಿಸುತ್ತಿವೆ. ಈ ಮಾರ್ಗದರ್ಶಿಯು ಭಾರತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಯು.ಎಸ್. ಶೈಕ್ಷಣಿಕ ವ್ಯವಸ್ಥೆ, ಯು.ಎಸ್. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ತಮ್ಮ ಕ್ಯಾಂಪಸ್‌ಗಳನ್ನು ಅಂತರರಾಷ್ಟ್ರೀಕರಣಗೊಳಿಸುವ ಸಂಪನ್ಮೂಲಗಳು, ಯಶಸ್ವಿ ಸಹಯೋಗಕ್ಕಾಗಿ ಉತ್ತಮ ಅಭ್ಯಾಸಗಳು, ನೇಮಕಾತಿಯಲ್ಲಿ DEIA ಯ ಪ್ರಾಮುಖ್ಯತೆ ಮತ್ತು ವಿವಿಧ ರೀತಿಯ ಪಾಲುದಾರಿಕೆಗಳನ್ನು ನಿರ್ಮಿಸುವ ವಿಧಾನಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ಇದು ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿನಿಮಯ, ಪಠ್ಯಕ್ರಮದ ಅಭಿವೃದ್ಧಿ, ಸಂಶೋಧನೆ ಮತ್ತು ಡೇಟಾ ಹಂಚಿಕೆ ಮತ್ತಿತರ ಮಾಹಿತಿ ನೀಡುತ್ತದೆ.

ರಾಜಸ್ಥಾನದ ಬರಾನ್ ಮತ್ತು ತೆಲಂಗಾಣದ ಭೂಪಾಲಪಲ್ಲಿ ಜಿಲ್ಲೆಗಳಲ್ಲಿ ಮಕ್ಕಳು ಮತ್ತು ಕುಟುಂಬಗಳಿಗೆ ಮೂಲಭೂತ ಕಲಿಕೆ ಮತ್ತು ಸುರಕ್ಷಿತ ನೈರ್ಮಲ್ಯ ಅಭ್ಯಾಸಗಳನ್ನು ಹೆಚ್ಚಿಸಲು ಸೆಸೇಮ್ ವರ್ಕ್‌ಶಾಪ್ ಇಂಡಿಯಾ ಟ್ರಸ್ಟ್‌ನೊಂದಿಗೆ ಹೊಸ ಪಾಲುದಾರಿಕೆಯೊಂದಿಗೆ ಲರ್ನ್ ಪ್ಲೇ ಗ್ರೋ ಅನ್ನು ಪ್ರಾರಂಭಿಸುವುದರೊಂದಿಗೆ ಯು.ಎಸ್. ಏಜನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಅಂತರರಾಷ್ಟ್ರೀಯ ಶಿಕ್ಷಣ ವಾರವನ್ನು ಆಚರಿಸುತ್ತಿದೆ. ಈ ಉಪಕ್ರಮವು ಅಂಗನವಾಡಿ ಕೇಂದ್ರಗಳಲ್ಲಿ 20,000-25,000 ಮಕ್ಕಳೊಂದಿಗೆ ಸಂವಹನ ಮಾಡುವುದಲ್ಲದೆ ಸಾಮಾಜಿಕ ಮಾಧ್ಯಮದ ಮೂಲಕ ರಾಷ್ಟ್ರವ್ಯಾಪಿ 7.6 ದಶಲಕ್ಷ ಜನರನ್ನು ತಲುಪುತ್ತದೆ. ಈ ಉಪಕ್ರಮವು ಭಾರತದಲ್ಲಿ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕಾಗಿ ಯು.ಎಸ್. ಸರ್ಕಾರದ ದೀರ್ಘಾವಧಿಯ ಬದ್ಧತೆಯ ಮುಂದುವರಿದ ಭಾಗವಾಗಿದ್ದು, ಭಾರತ ಸರ್ಕಾರದ ಅರ್ಥೈಸಿಕೊಂಡು ಓದುವಿಕೆ ಮತ್ತು ಅಂಕಗಣಿತದ ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮ (NIPUN) ಭಾರತ್ ಮಿಷನ್‌ ಸಾರ್ವತ್ರಿಕ ಅಡಿಪಾಯದ ಸಾಕ್ಷರತೆ, ಅಂತರ್ಗತ ಶಾಲಾ ಪ್ರವೇಶ ಮತ್ತು ಲಿಂಗ-ಸಮಾನ ಶಿಕ್ಷಣ ಧ್ಯೇಯಗಳಿಗೆ ಹೊಂದಿಕೊಂಡಿದೆ.

ಎಜುಕೇಶನ್‌ಯುಎಸ್‌ಎ, ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್- ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಭಾರತವನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳಿಗೆ ಹಲವಾರು ಉಪಕ್ರಮಗಳು ಮತ್ತು ಸಂಪನ್ಮೂಲಗಳನ್ನು ನೀಡುವ ಮೂಲಕ ಯುಎಸ್ ಉನ್ನತ ಶಿಕ್ಷಣದ ಪ್ರವೇಶವನ್ನು ಉತ್ತೇಜಿಸುತ್ತದೆ. ಇತ್ತೀಚೆಗೆ ಪ್ರಾರಂಭಿಸಲಾದ EducationUSA ಇಂಡಿಯಾ ವೆಬ್‌ಸೈಟ್ (educationusa.in) ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡುವ ಸಾಧ್ಯತೆಗಳನ್ನು ಅನ್ವೇಷಿಸಲು ಸುಲಭವಾಗುವಂತೆ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ. ವಿದ್ಯಾರ್ಥಿಗಳು ಕಾಲೇಜು ಅಪ್ಲಿಕೇಶನ್ ಪ್ರಕ್ರಿಯೆಯ ಕುರಿತು ಇತ್ತೀಚಿನ ಮಾಹಿತಿಗಾಗಿ, iOS ಮತ್ತು Android ಸಾಧನಗಳಲ್ಲಿ ಉಚಿತವಾಗಿ ಲಭ್ಯವಿರುವ EducationUSA ಇಂಡಿಯಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಯುನೈಟೆಡ್ ಸ್ಟೇಟ್ಸ್ ನಲ್ಲಿ ಉನ್ನತ ಶಿಕ್ಷಣವನ್ನು ಯೋಜಿಸಲು ಇದು ತ್ವರಿತ ಮತ್ತು ಸುಲಭವಾದ ಮೊದಲ ಹೆಜ್ಜೆಯಾಗಿದೆ.

 

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !

ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !

Proba 3 Mission: ಕೃತಕ ಸೂರ್ಯ ಗ್ರಹಣಕ್ಕೆ ಮುಹೂರ್ತ! ಏನಿದು ಪ್ರೋಬಾ 3 ಯೋಜನೆ

Proba 3 Mission: ಕೃತಕ ಸೂರ್ಯ ಗ್ರಹಣಕ್ಕೆ ಸಿದ್ಧತೆ! ಏನಿದು ಪ್ರೋಬಾ 3 ಯೋಜನೆ?

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.