ಸಶಕ್ತ ಸ್ಥಳೀಯಾಡಳಿತದಿಂದ ದೇಶದ ಉನ್ನತಿ
Team Udayavani, Aug 19, 2021, 6:10 AM IST
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ನಮ್ಮ ನಾಯಕರ ಮುಂದೆ ಸ್ವತಂತ್ರ ಭಾರತದ ಪುನರುತ್ಥಾನ ಮತ್ತು ಏಳಿಗೆಗೆ ನೂರಾರು ಯೋಜನೆಗಳು, ಕಲ್ಪನೆ ಗಳಿದ್ದವು. ಇವೆಲ್ಲವನ್ನೂ ಸಾಕಾರ ಗೊಳಿಸುವ ಮೊದಲ ಹೆಜ್ಜೆ ಯಾಗಿ ದೇಶಕ್ಕೊಂದು ಸಮಗ್ರ ವಾದ ಸಂವಿಧಾನವನ್ನು ಡಾ| ಬಾಬು ರಾಜೇಂದ್ರ ಪ್ರಸಾದ್ ಹಾಗೂ ಡಾ| ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವ ದಲ್ಲಿ ರಚಿಸಲಾಯಿತು. ಕಾಲಕಾಲಕ್ಕೆ ತಕ್ಕಂತೆ ಸಂವಿಧಾನಕ್ಕೆ ಕೆಲವೊಂದು ಅಗತ್ಯ ತಿದ್ದುಪಡಿಗಳನ್ನು ತಂದು ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಾ ಬಂದಿದೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 74 ವರ್ಷಗಳು ಪೂರ್ಣಗೊಂಡಿದ್ದು ಇದೀಗ ಅಮೃತ ಮಹೋತ್ಸವ ವರ್ಷಕ್ಕೆ ಮುಂದಡಿ ಇರಿಸಿದೆ. ಆದರೆ ಈ 74 ವರ್ಷಗಳ ಹಾದಿಯಲ್ಲಿ ಒಮ್ಮೆ ಹಿಂದಿರುಗಿ ನೋಡಿದಾಗ ನಾವು ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದೆನಿಸುವುದು ಸಹಜ. ಆದರೂ 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ದೇಶ ಸಾಧಿಸಿರುವ ಪ್ರಗತಿಯನ್ನು ನಾವೆಂದಿಗೂ ನಿರ್ಲಕ್ಷಿಸಲಾಗದು.
ಪ್ರಜಾಪ್ರಭುತ್ವದಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಬಹಳ ಮಹತ್ವವಿದೆ. ದೇಶದಲ್ಲಿ ಸ್ಥಳೀಯಾಡಳಿತ ವ್ಯವಸ್ಥೆಗೆ ಬಹಳ ಪ್ರಾಮುಖ್ಯ ನೀಡಬೇಕಾಗಿತ್ತು. ಸಂವಿಧಾನದ ಅಧ್ಯಾಯ (ಆರ್ಟಿಕಲ್) 40ರಲ್ಲಿ ಗ್ರಾಮ ಪಂಚಾಯತ್‌ಗೆ ಸಂಪೂರ್ಣ ಆಡಳಿತ ನಡೆಸಲು ಅಧಿಕಾರ ನೀಡಬೇಕೆಂದು ತೀರ್ಮಾನಿಸ ಲಾಗಿತ್ತು. ಆದರೆ ಸರಕಾರ ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ರೂಪಿಸುವಲ್ಲಿ ವಿಫಲವಾಯಿತು. ಈ ಹಿನ್ನಲೆಯಲ್ಲಿ ಹೇಳುವುದಾ ದರೆ ನಾವು ಸಾಕಷ್ಟು ಪ್ರಗತಿ ಯಾಗಿಲ್ಲ ಎಂಬುದನ್ನು ಅಲ್ಲಗಳೆಯಲಾಗದು.
ಸರಕಾರದ ಏಳಿಗೆಗೆ ಪೂರಕವಾಗಿ ಸ್ಥಳೀಯಾಡಳಿತ ವ್ಯವಸ್ಥೆಗೆ ಬೆಂಬಲ ನೀಡಲು ಹಾಗೂ ಪ್ರೋತ್ಸಾಹಿ ಸಲು, 1992ರಲ್ಲಿ ಸಂವಿ ಧಾನಕ್ಕೆ 73 ಮತ್ತು 74ನೇ ತಿದ್ದುಪಡಿಯನ್ನು ತರ ಲಾಗಿತ್ತು. ಈ ತಿದ್ದುಪಡಿ ಯನ್ವಯ ದೇಶದಲ್ಲಿ 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆ 1993ರ ಪ್ರಕಾರ ಗ್ರಾಮ ಪಂಚಾಯತ್, ತಾಲೂಕು ಪಂಚಾ ಯತ್, ಜಿಲ್ಲಾ ಪಂಚಾಯತ್ ಎನ್ನುವ 3 ಹಂತಗಳ ಪಂಚಾಯತ್‌ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಪ್ರಕಾರ ಗ್ರಾ. ಪಂ.ಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಸ್ಥಳೀಯವಾಗಿ ನಿಧಿಗಳನ್ನು ಕ್ರೋಡೀಕರಣ ಮಾಡಲು ಅವಕಾಶ ನೀಡ ಲಾಯಿತು. ಉಳಿದಂತೆ ಜಿಲ್ಲಾ ಹಾಗೂ ತಾ. ಪಂ.ಗಳು ಕೇವಲ ಕೇಂದ್ರ ಹಾಗೂ ರಾಜ್ಯದ ಅನುದಾನವನ್ನು ಅವಲಂಬಿಸಬೇಕಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕುಡಿ ಯುವ ನೀರಿನ ಪೂರೈಕೆ, ಸ್ವತ್ಛತೆ, ವಸತಿ ಯೋಜನೆ, ಫಲಾನುಭವಿಗಳನ್ನು ಗುರುತಿಸುವುದು ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳ ದುರಸ್ತಿ ಕಾರ್ಯ ಪಂಚಾಯತ್‌ನ ಪ್ರಮುಖ ಕರ್ತವ್ಯವಾಗಿದೆ. ಆದರೆ ಈ ಎಲ್ಲ ಕಾರ್ಯಗಳು ವ್ಯವಸ್ಥಿತ ರೀತಿ ನಡೆಯುತ್ತಿಲ್ಲ.
ಹಳ್ಳಿಗಳ ದೇಶವಾಗಿರುವ ಭಾರತದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಎಲ್ಲ ಗ್ರಾ.ಪಂ. ಗಳು ಸ್ವಾವ ಲಂಬಿಯಾಗಲು ಈಗಿಂದಲೇ ಯೋಜನೆ ರೂಪಿಸುವುದು ಅಗತ್ಯ. ಇನ್ನು 10-15 ವರ್ಷಗಳಲ್ಲಿ ಪ್ರತೀ ಗ್ರಾ.ಪಂ.ನಲ್ಲೂ ಮೂಲ ಸೌಕರ್ಯಗಳಿಗೆ ಜಾಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದುದ ರಿಂದ ಪ್ರತೀ ಗ್ರಾ.ಪಂ. ಕನಿಷ್ಠ 3-4 ಎಕ್ರೆ ಪ್ರದೇಶ ವನ್ನಾದರೂ ಮೀಸಲಿಡುವುದು ಅಗತ್ಯವಾಗಿದೆ.
ನವ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಕೆಲವು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸಿದ್ಧತೆ ಮಾಡಿರುವುದು ಸಂತೋಷದ ವಿಚಾರ. ಪ್ರಮುಖವಾಗಿ ಅಮೃತ ಗ್ರಾ.ಪಂ.ಯೋಜನೆ, ಗ್ರಾಮೀಣ ವಸತಿ ಯೋಜನೆ ಮುಂತಾದ ಯೋಜನೆಗಳು ಹಾಗೂ ಆರ್ಥಿಕ ನೆರವನ್ನು ನೀಡುವ ಘೋಷಣೆ ಮಾಡಿದೆ. ಈ ಎಲ್ಲ ಯೋಜನೆಗಳು ಅನುಷ್ಠಾನಕ್ಕೆ ಬಂದಲ್ಲಿ ಭಾರತದ ಭವಿಷ್ಯಉತ್ತಮವಾಗಿ, ದೇಶ ಸಶಕ್ತವಾದೀತೆಂದು ಭಾವಿಸಬಹುದಾಗಿದೆ. ಸ್ವತಂತ್ರ ಭಾರತದ ಶತಮಾನೋತ್ಸವದ ವೇಳೆಗೆ ಸ್ಥಳೀಯ ಸಂಸ್ಥೆಗಳು ಸಶಕ್ತವಾಗಿ ಭಾರತ ಆರ್ಥಿಕವಾಗಿ ಚೈತನ್ಯ ಗೊಂಡು ವಿಶ್ವಗುರುವಾಗಿ ಮೇಳೈಸಲಿ. ಅದಕ್ಕಾಗಿ ಸ್ಥಳೀಯ ಸಂಸ್ಥೆಗಳನ್ನು ಇನ್ನಷ್ಟು ಉದ್ದೀಪನಗೊಳಿಸುವ ಕಾರ್ಯ ನಡೆಯಲಿ.
ಎ. ಜಿ. ಕೊಡ್ಗಿ
ಮಾಜಿ ಶಾಸಕರು , ಮಾಜಿ ಅಧ್ಯಕ್ಷರು,
3ನೇ ರಾಜ್ಯ ಹಣಕಾಸು ಆಯೋಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.