ಜಾಗತಿಕ ಜ್ಞಾನ ಆರ್ಥಿಕತೆಯ ಉತ್ತುಂಗಕ್ಕೇರುವ ಸಾಧನ
Team Udayavani, Aug 17, 2021, 6:30 AM IST
ಈ ವರ್ಷದ ಜುಲೈ 8ರಂದು ನಾನು ಶಿಕ್ಷಣ ಸಚಿ ವಾಲಯದ ಉಸ್ತುವಾರಿ ವಹಿಸಿಕೊಂಡೆ. ಸಚಿವಾಲಯ ದಲ್ಲಿ ಎದೆಗುಂದಿಸುವ ಮತ್ತು ಉತ್ತೇಜಿಸುವ ಕೆಲಸ ಕಾರ್ಯಗಳಿವೆ. ಇದಕ್ಕೆ ಈ ಸಚಿವಾಲಯಕ್ಕಿರುವ ಐತಿ ಹಾಸಿಕ ಮಹತ್ವ ಮಾತ್ರವಲ್ಲದೆ 34 ವರ್ಷಗಳ ಅನಂತರ ಮತ್ತು 21ನೇ ಶತಮಾನದ ಮೊದಲ ಶಿಕ್ಷಣ ನೀತಿ ಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಅನುಷ್ಠಾನವೂ ಕಾರಣವಾಗಿದೆ.
ಎನ್‌ಇಪಿ-2020 ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ದೂರಗಾಮಿ ಪರಿಣಾ ಮವನ್ನು ಬೀರುವ ಒಂದು ದಾಖಲೆ. ಆ ಮೂಲಕ ರಾಷ್ಟ್ರದ ಭವಿಷ್ಯವನ್ನು ಅದರ ಆಂತರಿಕ ಸ್ಥಿತಿಸ್ಥಾಪಕತ್ವ ಮತ್ತು ವರ್ಧಿತ ಸಂಪನ್ಮೂಲಗಳು ಹಾಗೂ ಜಾಗತಿಕವಾಗಿ ಅದರ ಸ್ಥಾನವನ್ನು ಮರು ರೂಪಿಸುತ್ತದೆ. ನಾನು ಪೂರ್ಣ ಜವಾಬ್ದಾರಿ ಯೊಂದಿಗೆ ಈ ಹೇಳಿಕೆ ನೀಡುತ್ತಿದ್ದೇನೆ. ಮೋದಿ ಸರಕಾರಕ್ಕೆ ಇದೊಂದು ಮಾರ್ಗದರ್ಶಿ ತತ್ವ, ಪವಿತ್ರ ಪಠ್ಯ ವಾಗಿದೆ, ಲಕ್ಷಾಂತರ ಯುವ ಜನರ ಆಶಯ ಮತ್ತು ಆಕಾಂಕ್ಷೆಗಳನ್ನು ನನಸಾಗಿಸುವ ಸಾಧನವಾಗಿದೆ, ಗುಣ ಮಟ್ಟ, ಸಮಾನತೆ, ಲಭ್ಯತೆ ಮತ್ತು ಕೈಗೆಟಕು ವಿಕೆಯ ತತ್ವಗಳ ಮೇಲೆ ಇದನ್ನು ರೂಪಿಸಲಾಗಿದೆ.
ಎನ್‌ಇಪಿ-2020ರಲ್ಲಿನ ಈ ಕೆಳಗಿನ ವೈಶಿಷ್ಟ್ಯಗಳ ಆಧಾರದ ಮೇಲೆ ನಾನು ನನ್ನ ವಾದವನ್ನು ಮಂಡಿಸು ತ್ತಿದ್ದೇನೆ. ಆದರೂ ಈ ನೀತಿಯಲ್ಲಿ ಇತರ ಹಲವು ಅತ್ಯಾಧುನಿಕ ಅಂಶಗಳಿವೆ.
ಮೊದಲನೆಯದಾಗಿ, ಈ ನೀತಿಯ ಮೂಲಕ, ನಾವು ಶಾಲಾ ಪೂರ್ವದಿಂದ ಪ್ರೌಢಾವಸ್ಥೆಯವರೆಗೆ ಅಂತರ್ಗತ ಶಿಕ್ಷಣಕ್ಕೆ ನಿರ್ದಿಷ್ಟವಾಗಿ ಒತ್ತು ನೀಡುವ ಮೂಲಕ ಮಗುವಿಗೆ ಅತ್ಯಂತ ಅನುಕೂಲಕರ ವಾತಾವರಣವನ್ನು ಒದಗಿಸುತ್ತೇವೆ. ಹೊಸ 5+3+3+4 ಶಾಲಾ ಶಿಕ್ಷಣ ವ್ಯವಸ್ಥೆಯ ಮೂಲಕ ಎನ್‌ಇಪಿ ಮೋಜಿನ ಕಲಿಕೆ ಯೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಔಪಚಾರಿಕ ಶಾಲೆ ಗಳಿಗೆ ಸಿದ್ಧಪಡಿಸುತ್ತದೆ.
ಎರಡನೆಯದಾಗಿ, ಮೊದಲ ವೈಶಿಷ್ಟ್ಯದ ಮುಂದು ವರಿಕೆಯಾಗಿ, ಕೌಶಲ ಮತ್ತು ಶಾಲಾ ಶಿಕ್ಷಣ, ಪಠ್ಯಕ್ರಮ ಮತ್ತು ಪಠ್ಯೇತರ, ಮಾನವಿಕ ಮತ್ತು ವಿಜ್ಞಾನಗಳ ನಡುವಿನ ಬಿಗಿಯಾದ ವರ್ಗೀಕರಣಗಳು ಬಹು ಶಿಸ್ತೀಯ, ಪರಿಕಲ್ಪನಾ ತಿಳುವಳಿಕೆ ಮತ್ತು ವಿಮಶಾìತ್ಮಕ ಚಿಂತನೆಯನ್ನು ಉತ್ತೇಜಿಸುತ್ತವೆ. ಇದು ಸೃಜನಶೀಲತೆಯ ಸಂಯೋಜಿತ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಚಿತ್ರಕಲೆಯೊಂದಿಗೆ ಗಣಿತ. ವಿದ್ಯಾರ್ಥಿ ಗಳು ಎದುರಿಸುವ ಹಲವಾರು ಒತ್ತಡದ ಅಂಶಗಳನ್ನು ನಿವಾರಿಸಲು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಅಂಕಪಟ್ಟಿಗೆ ಬದಲಾಗಿ ಸಮಗ್ರ ಪ್ರಗತಿ ಪತ್ರ ನೀಡಲಾಗುತ್ತದೆ, ಇದು ಕೌಶಲ್ಯ, ದಕ್ಷತೆ, ಸಾಮರ್ಥ್ಯ ಮತ್ತು ಇತರ ಪ್ರತಿಭೆಗಳ ಮೌಲ್ಯಮಾಪನವನ್ನು ಹೊಂದಿರುತ್ತದೆ.
ಪ್ರೌಢಶಾಲೆಯ ಪ್ರತೀ ಮಗು ವೃತ್ತಿಪರ ಶಿಕ್ಷಣ ಪಡೆಯುತ್ತದೆ. ಅದು 6ನೇ ತರಗತಿಯಿಂದ ಪ್ರಾರಂಭವಾಗುತ್ತದೆ ಮತ್ತು ಇಂಟರ್ನ್ ಶಿಪ್ ಒಳಗೊಂಡಿರುತ್ತದೆ. ಪ್ರತೀ ಎಕ್ಸಿಟ್ ಪಾಯಿಂಟ್‌ಗೆ ಸೂಕ್ತವಾದ ಪ್ರಮಾಣೀಕರಣ ದೊಂದಿಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಹು ಪ್ರವೇಶ ಮತ್ತು ನಿರ್ಗಮನದ ಆಯ್ಕೆಗಳಿರುತ್ತವೆ.
ಶಾಲಾ ಶಿಕ್ಷಣಕ್ಕಾಗಿ ಡಿಜಿಟಲ್ ಮೂಲಸೌಕರ್ಯವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ತತ್ವಗಳು, ಮಾನ ದಂಡಗಳು ಮತ್ತು ಮಾರ್ಗಸೂಚಿಗಳ ಗುಂಪಾಗಿ ರುವ ಅಂತರ್ ಕಾರ್ಯಾಚರಣೆಯ ಎನ್‌ಡಿಇಎಆರ್ ರಚಿಸಲಾಗುವುದು.
ಈ ತಿಂಗಳ ಆರಂಭದಲ್ಲಿ ಮುಂದಿನ ಐದು ವರ್ಷ ಗಳವರೆಗೆ ವಿಸ್ತರಿಸಿ ಘೋಷಿಸಲಾದ 2.94 ಲಕ್ಷ ಕೋಟಿ ರೂ. ವೆಚ್ಚದ ಸಮಗ್ರ ಶಿಕ್ಷಾ ಯೋಜನೆ 2.0 ಅನ್ನು ಸಹ ಎನ್‌ಡಿಇಎಆರ್ ಸುಗಮ ಗೊಳಿಸುತ್ತದೆ. ಇದು ಶಾಲಾ ಪೂರ್ವದಿಂದ 12ನೇ ತರಗತಿಯ ವರೆಗೆ 11.6 ಲಕ್ಷ ಶಾಲೆಗಳು, 15.6 ಕೋಟಿ ವಿದ್ಯಾರ್ಥಿಗಳು ಮತ್ತು 57 ಲಕ್ಷ ಸರಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಒಳಗೊಂಡಿರುತ್ತದೆ. ಹಣಕಾಸು ನೆರವನ್ನು ಡಿಬಿಟಿ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು.
ಉನ್ನತ ಶಿಕ್ಷಣ ಕ್ಷೇತ್ರಕ್ಕಾಗಿ, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ) ಸ್ಥಾಪಿಸಲಾಗಿದೆ. ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಗಳಿಸಿದ ಎಲ್ಲ ಶೈಕ್ಷಣಿಕ ಅರ್ಹತೆಗಳ ಡಿಜಿಟಲ್ ಸಂಗ್ರಹವನ್ನು ಇದು ಸುಗಮಗೊಳಿಸುತ್ತದೆ, ಇದರಲ್ಲಿ ವೃತ್ತಿಪರ ಮತ್ತು ಶೈಕ್ಷಣಿಕ ತರಬೇತಿಯೂ ಸೇರಿ ರುತ್ತವೆ. ವಿದ್ಯಾರ್ಥಿಯು ವಿವಿಧ ಹಂತಗಳಲ್ಲಿ ನಿರ್ಗ ಮಿಸಿದರೆ ನೀಡಲಾಗುವ ಅಂಕಗಳನ್ನು ಅಂತಿಮ ಪದವಿ ರೂಪಕ್ಕೆ ವರ್ಗಾಯಿಸಬಹುದು. ಇದು ಬಹಳ ಮುಖ್ಯ ವಾಗಿ, ಪಾಲುದಾರ ವಿದೇಶಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಸೆಮಿಸ್ಟರ್ ಮುಗಿಸಲು ವಿದೇಶಿ ವಿಶ್ವವಿದ್ಯಾನಿಲಯ ಗಳೊಂದಿಗೆ ಅವಳಿ ವ್ಯವಸ್ಥೆಗಳಿಗೆ ಸಹಾಯ ಮಾಡುತ್ತದೆ.
ಅಲ್ಲದೆ, ಕಾನೂನು ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಹೊರತುಪಡಿಸಿ ದೇಶಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತದ ಉನ್ನತ ಶಿಕ್ಷಣ ಮಂಡಳಿ ಎಂಬ ಏಕೈಕ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದು “ಸರಳವಾದ ಆದರೆ ಬಿಗಿಯಾದ’ ನಿಯಂತ್ರಕ ಚೌಕಟ್ಟನ್ನು ಖಚಿತಪಡಿಸುತ್ತದೆ.
ಶ್ರವಣ ದೋಷವಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮ ಸಾಮಗ್ರಿಗಳ ಭಾರತೀಯ ಸಂಕೇತ ಭಾಷೆ (ಐಎಸ್‌ಎಲ್)ಯ ಅಭಿವೃದ್ಧಿಯೊಂದಿಗೆ ಮಾಧ್ಯಮ ಭಾಷೆಯಾಗಿ ಮಾತೃಭಾಷೆ/ ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಸಕ್ರಿಯಗೊಳಿಸಲು ತ್ರಿಭಾಷಾ ನೀತಿಯ ಭಾಷಾ ಪ್ರಾವೀಣ್ಯದ ಹಲವು ಮಾರ್ಗಗಳ ಮೂಲಕ ಎನ್‌ಇಪಿ ಜ್ಞಾನದ ಆರ್ಥಿಕತೆಯನ್ನು ಸೃಷ್ಟಿಸುತ್ತದೆ.
ಎನ್‌ಇಪಿ-2020 ಅನುತ್ಪಾದಕ ಅಡೆತಡೆಗಳನ್ನು ಮುರಿಯುವ ಮೂಲಕ ಮಗುವಿನ ಅತ್ಯುನ್ನತ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ನೀತಿಯು ಜಾಗತಿಕವಾಗಿ ಶಿಕ್ಷಣ ವ್ಯವಸ್ಥೆಗಳ ಇತಿಹಾಸದಲ್ಲಿ ಅತಿದೊಡ್ಡ ಸಮಾಲೋಚನ ಪ್ರಕ್ರಿಯೆಯ ಅನಂತರ ರೂಪುಗೊಂಡಿದೆ ಮತ್ತು ಭಾರತವನ್ನು ಜ್ಞಾನ ಆರ್ಥಿಕತೆಯ ಉತ್ತುಂಗಕ್ಕೆ ತಲುಪಿಸಲು ನಮ್ಮ ನಾಯಕತ್ವದ ಸಂಕಲ್ಪ ಮತ್ತು ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ನಾವೀಗ ಭಾರತದ ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಹೊಸ ನೀತಿ ಇಂದು 5ರಿಂದ 15 ವರ್ಷದೊಳಗಿರುವ ಮಕ್ಕಳು ಮತ್ತು 30ರಿಂದ 40 ವರ್ಷ ವಯಸ್ಸಿನ ಗರಿಷ್ಠ ಉತ್ಪಾದಕ ವಯಸ್ಸಿನವರಲ್ಲಿ ನಾವು 100 ವರ್ಷಗಳ ಸ್ವಾತಂತ್ರ್ಯ ಆಚರಿಸುವ ವೇಳೆಗೆ ಅಳಿಸಲಾಗದ ಛಾಪು ಮೂಡಿಸಿರುತ್ತದೆ. ವೈಜ್ಞಾನಿಕ ಚಿಂತನೆ, ವಿಮರ್ಶಾತ್ಮಕ ಧೋರಣೆ ಮತ್ತು ಮಾನವತಾವಾದವನ್ನು ಆಧರಿಸಿದ ಮಾನವ ಸಂಪದವನ್ನು ರೂಪಿಸುವ ಈ ಪ್ರಕ್ರಿಯೆಯಲ್ಲಿ ಭಾಗವಾಗಿರುವುದು ನನ್ನ ಸೌಭಾಗ್ಯವಾಗಿದೆ.
ಧರ್ಮೇಂದ್ರ ಪ್ರಧಾನ್,ಕೇಂದ್ರ ಶಿಕ್ಷಣ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.