ಬ್ಯಾಂಕುಗಳ ಪ್ರಗತಿಗಾಗಿ ಕೆ.ಕೆ.ಪೈ ಪ್ರತಿಪಾದಿಸಿದ ಮೌಲ್ಯ
Team Udayavani, Jun 26, 2018, 3:30 AM IST
ಕೆ.ಕೆ. ಪೈಯವರು ಇತರ ಸಂಸ್ಥೆಗಳಲ್ಲೂ ನೌಕರರ ಸಹ ಭಾಗಿತ್ವದ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು. ಒಂದು ಶಾಲೆ ಯಲ್ಲಿ ಅಟೆಂಡರ್‌ನಿಂದ ಹಿಡಿದು ಮುಖ್ಯೋಪಾಧ್ಯಾ ಯರವರೆಗೂ ಸಹಭಾಗಿತ್ವ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯ ಎನ್ನುತ್ತಿದ್ದರು. ಅವರು ಇತರರ ಸಹಭಾಗಿತ್ವ ಪ್ರತಿಪಾದಿಸಿದ್ದು ಮಾತ್ರವಲ್ಲ, ತಾವೂ ಸೇವೆ ಸಲ್ಲಿಸಿದ ಎಲ್ಲ ಸಂಸ್ಥೆಗಳಲ್ಲಿ ವೈಯಕ್ತಿಕ ಸಹಭಾಗಿತ್ವ ತೋರಿಸಿದರು.
ಕೆ.ಕೆ. ಪೈಯವರ ಜನ್ಮದಿನವಾದ ಇಂದು ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿದ್ದಾಗ ಸಂಸ್ಥೆಯ ಪ್ರಗತಿಗೆ ಬಳಸಿದ ಸಹಭಾಗಿತ್ವ ತಂತ್ರದ ಕುರಿತಾಗಿ ಬರೆಯುತ್ತಿದ್ದೇನೆ. ಕೆ.ಕೆ. ಪೈ ತಮ್ಮ ಕೊನೆಯ ಕೆಲವು ಭಾಷಣ, ಚರ್ಚೆ ಮತ್ತು ಸಂಭಾಷಣೆಗಳಲ್ಲಿ ಬ್ಯಾಂಕುಗಳಲ್ಲಿ ವರ್ಷ ದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ನೌಕರರ ಸಹಭಾಗಿತ್ವದ ಕುರಿತಾಗಿ ಕಳವಳ ವ್ಯಕ್ತಪಡಿಸುತ್ತಿದ್ದರು. ಯಾವುದೇ ಸಂಸ್ಥೆಯ ಪ್ರಗತಿ ಆ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರ ಹೃತೂ³ರ್ವಕ ಸಹಭಾಗಿತ್ವವನ್ನು ಅವಲಂಬಿಸಿರುತ್ತದೆ ಎಂದು ಕೆ.ಕೆ. ಪೈ ಯಾವಾಗಲೂ ಹೇಳುತ್ತಿದ್ದರು.
ಯಾವುದೇ ಸಂಸ್ಥೆಯಿರಲಿ – ಅದು ಬ್ಯಾಂಕಾ ಗಿರಲಿ, ಶಾಲೆಯಾಗಿರಲಿ, ಕಾಲೇಜು ಆಗಿರಲಿ ಅಥವಾ ವಿಶ್ವವಿದ್ಯಾ ನಿಲಯವೇ ಆಗಿರಲಿ – ಅದರ ಸರ್ವತೋಮುಖ ಅಭಿವೃದ್ಧಿ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಬದ್ಧತೆ, ಸಹಭಾಗಿತ್ವ ಮತ್ತು ಅವರಲ್ಲಿರುವ ಸಂಸ್ಥಾನಿಷ್ಠೆ ಇತ್ಯಾದಿಗಳನ್ನು ಹೊಂದಿ ಕೊಂಡಿರುತ್ತದೆ ಎಂಬುದು ಕೆ.ಕೆ. ಪೈಯವರ ನಂಬಿಕೆಯಾಗಿತ್ತು.
ಪೂರಕ ವಾತಾವರಣ
ಕೆ.ಕೆ. ಪೈಯವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧ್ಯಕ್ಷರಾಗಿದ್ದ ಕಾಲ ದಲ್ಲಿ ಬ್ಯಾಂಕಿನ ಕೆಲಸ-ಕಾರ್ಯಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮತ್ತು ಗ್ರಾಹಕ ಸೇವೆ ಒದಗಿಸುವ ಪ್ರಕ್ರಿಯೆಯಲ್ಲಿ ನೌಕರರ ಸಹಭಾಗಿತ್ವ ಹೆಚ್ಚಿಸಲು ಶ್ರಮಿಸಿದರು. ಸಹಭಾಗಿತ್ವದ ಹೆಚ್ಚಳಕ್ಕೆ ಬೇಕಾದ ಪೂರಕ ವಾತಾವರಣವನ್ನು ಕೂಡ ಕೆ.ಕೆ. ಪೈ ಸೃಷ್ಟಿಸಿ ಕೊಂಡಿದ್ದರು. ಸ್ಥಳೀಯ ಜನರ ಭಾಷೆ ಗೊತ್ತಿರುವ ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ, ನೌಕರರಿಗೆ ಬ್ಯಾಂಕಿನೊಂದಿಗೆ ವೈಯಕ್ತಿಕ ಸಂಬಂಧ ಬೆಳೆಯಲು ಪೂರಕವಾಗುವ ರೀತಿಯ ನೌಕರ ನಿರ್ವಹಣಾ ವ್ಯವಸ್ಥೆ ನೌಕರರು ವ್ಯಕ್ತಪಡಿಸುವ ಅಭಿಪ್ರಾಯ, ಸಲಹೆ ಸೂಚನೆಗಳಿಗೆ ಲಕ್ಷ್ಯ ಮತ್ತು ನೌಕರರ ವೈಯಕ್ತಿಕ ಕಷ್ಟ ಸಮಸ್ಯೆ ಮತ್ತು ತೊಂದರೆಗಳಿಗೆ ಸ್ಪಂದನೆ, ಇತ್ಯಾದಿಗಳನ್ನು ನಿರ್ವಹಣೆಯಲ್ಲಿ ಅಳವಡಿಸಿಕೊಂಡು ನೌಕರರ ಸಹಭಾಗಿತ್ವ ಬೆಳೆಸಲು ಆಗ ಪ್ರಯತ್ನ ನಡೆಯುತ್ತಿತ್ತು. ಇದರ ಫಲವಾಗಿ ಬ್ಯಾಂಕು ಠೇವಣಿ ಶೇಖರಣೆ, ಸಾಲ ನೀಡಿಕೆ ಮತ್ತು ಲಾಭಗಳಿಕೆಯೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಫಲಿತಾಂಶ ಗಳಿಸುತ್ತಿತ್ತು. ಇದು ತನ್ನ ಬ್ಯಾಂಕು ಮತ್ತು ತಾನು ಈ ಸಂಸ್ಥೆಯಲ್ಲಿ ಇನ್ನು 20-25 ವರ್ಷ ಇರುತ್ತೇನೆ ಮತ್ತು ತನ್ನ ಬ್ಯಾಂಕು ಬೆಳೆಯಬೇಕು, ಉತ್ತಮ ಸಾಧನೆ ತೋರಿಸಬೇಕು ಎಂಬ ಭಾವನೆ ಪ್ರತಿ ನೌಕರನಲ್ಲೂ ಇತ್ತು. ಬ್ಯಾಂಕು ಅಭಿವೃದ್ಧಿ ಪಥದಲ್ಲಿ ಸಾಗಿ ಬಲಿಷ್ಠವಾಗಿ ಬೆಳೆದರೆ ಅದರೊಂದಿಗೆ ತನಗೂ ಬೆಳೆಯುವ ಮತ್ತು ವಿವಿಧ ಹುದ್ದೆಗಳಿಗೆ ಭಡ್ತಿಯನ್ನು ಪಡೆಯುವ ಅವಕಾಶ ಲಭ್ಯವಾಗುತ್ತದೆ ಎಂಬ ನಂಬಿಕೆ ಎಲ್ಲ ನೌಕರರಲ್ಲೂ ಇರುತ್ತಿತ್ತು. ಎಲ್ಲ ನೌಕರರೂ ಸಂಸ್ಥಾನಿಷ್ಠೆ ಹೊಂದಿ ದ್ದರು. ಎಲ್ಲರೂ ಬ್ಯಾಂಕನ್ನು ತಮ್ಮ ಬ್ಯಾಂಕೆಂದು ಪ್ರೀತಿಸುತ್ತಿದ್ದರು. ಪ್ರತಿ ನೌಕರರಿಗೂ ಬ್ಯಾಂಕ್ ಸರ್ವಸ್ವವಾಗಿತ್ತು ಮತ್ತು ಬ್ಯಾಂಕಿನಲ್ಲಿ ಆತನಿಗೆ ಅಂತಹ “ಸ್ಟೇಕ್’ ಇತ್ತು. ಇವೆಲ್ಲವೂ ನಿಜವಾದ ಸಹಭಾಗಿ ತ್ವದ ಫಲ ಅಥವಾ ಪರಿಣಾಮ.
ಹೆಮ್ಮೆ ಪಡುವ ಅವಕಾಶ
ಆಗ ಸಿಂಡಿಕೇಟ್ ಬ್ಯಾಂಕಿನಲ್ಲಿ “ಎಲ್ಲ ನೌಕರರೂ ಇದು ತಮ್ಮ ಬ್ಯಾಂಕ್ ಎಂದು ಹೆಮ್ಮೆ ಪಡುವಂತೆ ಮಾಡಲು ಅವಕಾಶಗಳನ್ನು ನೀಡಲಾಗುತ್ತಿತ್ತು. ನೌಕರರ ವೈಯಕ್ತಿಕ ಸಾಧನೆಗಳನ್ನು ಗೃಹ ಪತ್ರಿಕೆಯಾದ “ಜಯಂಟ್’ (GAINT)ನಲ್ಲಿ ಪ್ರಕಟಿಸಲಾಗುತ್ತಿತ್ತು. ನೌಕರರ ಮದುವೆ ಅವರ ಮಕ್ಕಳ ಉಪನಯನ ಅಥವಾ ಮದುವೆ, ನೌಕರರು ಆಗಿಂದಾಗ ಪಾಸಾಗುತ್ತಿದ್ದ ಪರೀಕ್ಷೆ ಮತ್ತು ಪಡೆಯುತ್ತಿದ್ದ ಪದವಿಗಳು, ವೈಯಕ್ತಿಕ ಸಾಧನೆಗಳು ಇತ್ಯಾದಿಗಳ ಕುರಿತು ಜಯಂಟ್ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿತ್ತು. ನೌಕರರ ಲೇಖನಗಳ ಪ್ರಕಟನೆಗೂ ಅವಕಾಶಗಳಿದ್ದವು.
ಭಾವಚಿತ್ರಗಳನ್ನೂ ಹಾಕಲಾಗುತ್ತಿತ್ತು. ಬ್ಯಾಂಕಿನ ಸಾಧನೆಗಳ ಕುರಿತಾಗಿಯೂ ಈ ಪತ್ರಿಕೆಗೆ ಮಾಹಿತಿ ನೀಡಲಾಗುತ್ತಿತ್ತು. ಗೃಹ ಪತ್ರಿಕೆಯಿಂದಾಗಿ ನೌಕರರಲ್ಲಿ ಐಕ್ಯತೆಯೂ ಹೆಚ್ಚುತ್ತಿತ್ತು.
ಕೆ.ಕೆ. ಪೈಯವರು ಇತರ ಸಂಸ್ಥೆಗಳಲ್ಲಿ ಕೂಡ ನೌಕರರ ಸಹ ಭಾಗಿತ್ವದ ಅವಶ್ಯಕತೆಯನ್ನು ಒತ್ತಿ ಹೇಳುತ್ತಿದ್ದರು. ಒಂದು ಶಾಲೆಯಲ್ಲಿ ಅಟೆಂಡರ್, ಗುಮಾಸ್ತನಿಂದ ಹಿಡಿದು ಮುಖ್ಯೋಪಾಧ್ಯಾಯರವರೆಗೂ ಎಲ್ಲರ ಸಹಭಾಗಿತ್ವ ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯ ಎಂದು ಕೆ.ಕೆ. ಪೈ ಹೇಳುತ್ತಿದ್ದರು. ಶಾಲೆಯಲ್ಲಿ ಹೊಸ ಸೇರ್ಪಡೆಗಾಗಿ ವಿದ್ಯಾರ್ಥಿಗಳನ್ನು ತರುವಲ್ಲಿ, ಉನ್ನತ ಪರೀಕ್ಷಾ ಫಲಿತಾಂಶಗಳಿಕೆಗೆ ಬೇಕಾದ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸುವಲ್ಲಿ ಪಾಠೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚು ಹೆಚ್ಚು ಭಾಗವಹಿಸುವಂತೆ ಮಾಡುವಲ್ಲಿ ಆಟೋಟಗಳಲ್ಲಿ ಮತ್ತು ಪಂದ್ಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿ ಭಾಗವಹಿಸುವಂತೆ ಮಾಡುವಲ್ಲಿ ಎಲ್ಲರೂ ಸಹಭಾಗಿತ್ವ ವಹಿಸಬೇಕೆಂದು ಕೆ.ಕೆ. ಪೈ ಹೇಳುತ್ತಿದ್ದರು.
ಸಹಭಾಗಿ ಮಾದರಿ
ಕೆ.ಕೆ. ಪೈ ಇತರರ ಸಹಭಾಗಿತ್ವವನ್ನು ಪ್ರತಿಪಾದಿಸಿದ್ದು ಮಾತ್ರವಲ್ಲ, ತಾವು ಕೂಡ ತಮ್ಮ ವೈಯಕ್ತಿಕ ಸಹಭಾಗಿತ್ವವನ್ನು ತಾನು ಸೇವೆ ಸಲ್ಲಿಸಿದ ಎಲ್ಲ ಸಂಸ್ಥೆಗಳಲ್ಲಿ ಬಹಳಷ್ಟು ತೋರಿಸಿದರು. ಸಿಂಡಿಕೇಟ್ ಬ್ಯಾಂಕಿನಲ್ಲಿರುವಾಗ ಕೆ.ಕೆ. ಪೈ ಬ್ಯಾಂಕಿನ ಕೆಲಸ ಕಾರ್ಯಗಳಲ್ಲಿ ತಮ್ಮ ಅಚಲವಾದ ಬದ್ಧತೆ ಮತ್ತು ಕರ್ತವ್ಯ ನಿಷ್ಠೆಯನ್ನು ತೋರಿಸಿ ಆ ಮೂಲಕ ಇತರ ಎಲ್ಲಾ ನೌಕರರಿಗೆ ಮಾದರಿಯಾದರು. ಉತ್ತಮ ಸಹಭಾಗಿತ್ವದ ಒಂದು ಉತ್ತಮ ಮಾದರಿ ಅವರಾದರು. ಇಂದಿನ ಕೆಲಸ ಇಂದೇ ಮುಗಿಸುವ ತತ್ವಕ್ಕೆ ಬಲವಾಗಿ ಅಂಟಿಕೊಂಡಿದ್ದ ಕೆ.ಕೆ. ಪೈ ವಾರದ ಎಷ್ಟೋ ದಿನ ರಾತ್ರಿ 12 ಗಂಟೆಯವರೆಗೆ ಮತ್ತು ಹಲವಾರು ಸಲ ಮೂರುವರೆಯಿಂದ ನಾಲ್ಕು ಗಂಟೆಯವರೆಗೆ ಮತ್ತು ಕೆಲವೊಮ್ಮೆ ಇಡೀ ರಾತ್ರಿ ಕೆಲಸ ಮಾಡಿ ಮರುದಿನ ಬೆಳಿಗ್ಗೆ ಆರು ಗಂಟೆಗೆ ಮನೆಗೆ ಹೋದದ್ದೂ ಇದೆ. ಹಾಗಾಗಿ ಕೆ.ಕೆ. ಪೈಯವರ ಕಾಲದಲ್ಲಿ ಎಲ್ಲ ನೌಕರರು ತಮ್ಮ ಕೆಲಸದ ಅವಧಿ ಮೀರಿ ದುಡಿಯುತ್ತಿದ್ದರು. ಬ್ಯಾಂಕಿನ ಎಲ್ಲ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮತ್ತು ಗ್ರಾಹಕ ಸೇವೆಯಲ್ಲಿ ಎಲ್ಲರ ಹೃತೂ³ರ್ವಕ ಸಹಭಾಗಿತ್ವ ಎದ್ದು ಕಾಣುತ್ತಿತ್ತು.
1960ರ ಮತ್ತು 1970ರ ದಶಕಗಳಲ್ಲಿ ಬ್ಯಾಂಕುಗಳಲ್ಲಿದ್ದ ನೌಕರರ ಸಹಭಾಗಿತ್ವ ಇಂದು ಬೇಕಾಗಿದೆ ಎಂದು 2008ರಲ್ಲಿ ಒಮ್ಮೆ ಮಾತಾಡುತ್ತಾ ಕೆ.ಕೆ. ಪೈ ಹೇಳಿದ್ದರು. ಅನುತ್ಪಾದಕ ಸಾಲಗಳ ಮೊತ್ತ ಮತ್ತು ದಾಮಾಶಯ ಮಿತಿಮೀರಿ ಬೆಳೆಯುತ್ತಿರುವ ಈಗಿನ ದಿನಗಳಲ್ಲಿ ನೌಕರರ ಸಹಭಾಗಿತ್ವ ವೃದ್ಧಿಸದಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕಿನ ಮತ್ತು ಸರಕಾರದ ಉಪಕ್ರಮಗಳಷ್ಟೇ ಫಲ ನೀಡುವುದು ಕಷ್ಟ ಎಂದು ಕೆ.ಕೆ. ಪೈ ಹೇಳುತ್ತಿದ್ದರು.
ಕಾರ್ಯಾಚರಣಾ ವೈಪರೀತ್ಯಗಳು
ನೌಕರರ ಸಹಭಾಗಿತ್ವ ಕ್ಷೀಣಿಸಲು ಬ್ಯಾಂಕುಗಳ ಕೈಗಾರಿಕಾ ಸಂಬಂಧ ವಿಭಾಗಗಳ (Industrial Relations Departments) ಮತ್ತು ಜಾಗೃತ ವಿಭಾಗಗಳ (Vigilance Departments) ಕಾರ್ಯಾಚರಣಾ ವೈಪರೀತ್ಯಗಳು ಬಹಳಷ್ಟು ಕಾರಣವಾಗಿವೆ ಎಂಬುದು ಕೆ.ಕೆ. ಪೈಯವರ ಅಭಿಪ್ರಾಯವಾಗಿತ್ತು. ಎಲ್ಲೆಡೆ ಭಯದ ವಾತಾವರಣ ಸೃಷ್ಟಿಸಿ ಯಾರೂ ನಿರ್ಧಾರ ತೆಗೆದುಕೊಳ್ಳ ದಂತೆ ಮಾಡಲಾಗಿದೆ. ಭಯದಿಂದ ಯಾವ ಅಧಿಕಾರಿಯೂ ಯಾವ ಉತ್ತಮ ಗ್ರಾಹಕನಿಗೂ ಸಾಲ ಮಂಜೂರು ಮಾಡಲು ಧೈರ್ಯ ಮಾಡುವುದಿಲ್ಲ. ಪ್ರಭಾವಿಗಳಿಗೆ ಮೇಲಿನಿಂದ ಬರುವ ನಿರ್ದೇಶನ-ಸೂಚನೆಗಳಿಂದಾಗಿ ಸಾಲ ದೊರೆಯುತ್ತದೆ. ಇದರಿಂದಾಗಿ ಪ್ರಭಾವ-ಆಧಾರಿತ ಸಾಲ ವಿತರಣೆಯಾಗಿ, ಉತ್ತಮ ಸಾಲಗಳು ಹೆಚ್ಚುತ್ತಿಲ್ಲ. ಇದು ಪ್ರಗತಿಗೆ ಮಾರಕ ಎಂದು ಕೆ.ಕೆ. ಪೈ ವಿವರಿಸುತ್ತಿದ್ದರು.
ಅವರು ತನ್ನ ಲೇಖನವೊಂದನ್ನು ಓದಿ ನನಗೆ ಪತ್ರವೊಂದರಲ್ಲಿ ಹೀಗೆ ಬರೆದರು. “The so-called vigilance Department in every bank is a great inhibiting force for all honest and good performers among officers and educatives. If vigilance cases are analysed you will find small fries being harassed , charge sheated and prosecuted and serious cases of corruption, for queries and frauds causing heavy losses to banks are ignored or taken up for investigation after long delays and never quickely dealt with’
“ಐಬಿಎ’ ಕಾರ್ಯಾಚರಣೆ
ಕೆ.ಕೆ. ಪೈ ಭಾರತೀಯ ಬ್ಯಾಂಕುಗಳ ಒಕ್ಕೂಟ (IBA) ಕಾರ್ಯಾ ಚರಣೆ ಕೂಡ ತೃಪ್ತಿಕರವಾಗಿಲ್ಲ ಮತ್ತು ಅದು ನೌಕರರ ಸಹಭಾಗಿತ್ವ ವರ್ಧನೆಗೆ ಪೂರಕವಾಗಿಲ್ಲ ಎಂದು ಹೇಳುತ್ತಿದ್ದರು. ನೌಕರರ ಬದ್ಧತೆ ಮತ್ತು ಸಹಭಾಗಿತ್ವ ವೃದ್ಧಿಗೆ ಮತ್ತು ಒಟ್ಟಾರೆ ಬ್ಯಾಂಕಿಂಗ್ ಸ್ಥಿತಿ ಸುಧಾರಣೆಗೆ ಈ ಸಂಸ್ಥೆ ಏನೂ ಮಾಡಿಲ್ಲ ಎಂದು ಕೆ.ಕೆ. ಪೈ ಬೇಸರ ವ್ಯಕ್ತ ಪಡಿಸುತ್ತಿದ್ದರು. ಅವರು ಈ ಸಂಸ್ಥೆಯ ಕಾರ್ಯಾಚರಣೆಯ ಕುರಿತಾಗಿ ಹೀಗೆ ಬರೆದರು: “The Indian Banks Association has already became absolute and outlived its purpose except for concluding liparite settlements with AIBEA and salary negotiations. with All India Bank officers Association etc. it has done nothing to improve the leaving situation in the country in any manner. It has failed to secure commitment of bank employer to higher productivity. It has failed to get firm commitment of employees to give efficient and courtous survice to customers. There is absolutely no involvement of employees in true spirit in which we expected them to serve after nationalisation’ಇಂದು ಇದು ತಮ್ಮ ಬ್ಯಾಂಕು ಎಂಬ ಪ್ರೀತಿ ಯಾವ ನೌಕರರಿಗೂ ಇಲ್ಲ. ತಾನು ಈ ಬ್ಯಾಂಕಿಗೆ ಸೇರಿದವ ಎಂಬ ಭಾವನೆ ಯಾವ ನೌಕರನಿಗೂ ಇಲ್ಲ ಎಂದು ಕೆ.ಕೆ. ಪೈ ಬೇಸರ ವ್ಯಕ್ತ ಪಡಿಸುತ್ತಿದ್ದರು.
ಮರೆತ ಮಾನವ ಸಂಬಂಧಗಳು
ನೌಕರರ ನಿರ್ವಹಣಾ ವಿಭಾಗಗಳು ಮಾನವ ಸಂಬಂಧಗಳನ್ನೇ ಮರೆತಿವೆ. ನೌಕರರ ಕಷ್ಟ ಸುಖ ಕಷ್ಟ ಕಾರ್ಪಣ್ಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಈ ವಿಭಾಗಗಳು ವಿಫಲವಾಗಿವೆ. ಕನಿಕರ ಅನುಕಂಪ ಇವುಗಳಿಗೆ ಈ ವಿಭಾಗಗಳಲ್ಲಿ ಸ್ಥಾನವೇ ಇಲ್ಲ. ನೌಕರರ ಸಹಭಾಗಿತ್ವಗಳಿಸುವಲ್ಲಿ ನೆರವಾಗಬಲ್ಲ ಎಲ್ಲಾ ಅಂಶಗಳೂ ಈ ವಿಭಾಗಗಳಿಗೆ ಈಗ ಗೌಣ ಎಂದು ಕೆ.ಕೆ. ಪೈ ಹೇಳುತ್ತಿದ್ದರು.
ಬ್ಯಾಂಕುಗಳ ಪ್ರಗತಿಗಾಗಿ ನೌಕರರ ಸಾಮೂಹಿಕ ಸಹಭಾಗಿತ್ವ ಇಂದು ಅತಿಮಹತ್ವದ್ದಾಗಿದೆ. ಸಹಭಾಗಿತ್ವ ಗಳಿಕೆಯಲ್ಲಿ ನೆರವಾಗ ಬಲ್ಲ ಮಾನವ ಅಂಶವನ್ನು ಬದಿಗಿಟ್ಟು ಸಹಭಾಗಿತ್ವಗಳಿಸಲು ಸಾಧ್ಯವಿಲ್ಲ. ಆದುದರಿಂದ ನೌಕರ ನಿರ್ವಹಣಾ ವಿಭಾಗಗಳು ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಮಾನವ ಅಂಶಕ್ಕೆ ಅತಿ ಹೆಚ್ಚಿನ ಮಹತ್ವ ನೀಡಬೇಕು ಎಂದು ಕೆ.ಕೆ. ಪೈ ಹೇಳುತ್ತಿದ್ದರು.
“Personnal Departments have to reorient thin approach and adopt a pro-active human resource management system in the place of existing reactive system in the place of existing reactive” ಎಂದು ಕೆ.ಕೆ. ಪೈ ಅಭಿಪ್ರಾಯಪಟ್ಟಿದ್ದರು.
ಬ್ಯಾಂಕುಗಳ ಅನುತ್ಪಾದಕ ಸಾಲ ಸೊತ್ತುಗಳ ದಾಮಾಶಯ 2017ರ ಜೂನ್ ಆಂತ್ಯದ ವೇಳೆಗೆ ಶೇ. 10.21ನ್ನು ತಲುಪಿತ್ತು. ಅದಕ್ಕಿಂತ ಮೊದಲಿನ ವರ್ಷದ ಜೂನ್ ಅಂತ್ಯದ ವೇಳೆಗೆ ಅದು ಶೇ. 8.42ರಷ್ಟಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಡಿಸೆಂಬರ್ 2017ರ ಹಣಕಾಸಿನ ಸ್ಥಿರತೆಯ ವರದಿ ಪ್ರಕಾರ ಈಗ ಅನುತ್ಪಾದಕ ಸೊತ್ತುಗಳ ದಾಮಾಶಯ ಶೇ. 12.2ರಷ್ಟಿದೆ. ಒಟ್ಟು ಸಾಲ ಸೊತ್ತುಗಳ ಶೇ. 24-25ರಷ್ಟು ಅನುತ್ಪಾದಕ ಸಾಲಗಳಿರುವ ಕೆಲವು ಬ್ಯಾಂಕುಗಳೂ ಇವೆ. ಅನುತ್ಪಾದಕ ಸಾಲಗಳ ಬಿಕ್ಕಟ್ಟು ಸೇರಿದಂತೆ ಕೆಲವು ಗಂಭೀರ ಸಮಸ್ಯೆಗಳನ್ನು ಹೊಂದಿರುವ 11 ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪಿ.ಸಿ.ಎ. ಚೌಕಟ್ಟಿನಲ್ಲಿರಿಸಿದೆ ಮತ್ತು ಆ ಮೂಲಕ ಆ ಬ್ಯಾಂಕುಗಳ ಸ್ಥಿತಿ ಸುಧಾರಣೆಗೆ ಯತ್ನಿಸಲಾಗುತ್ತಿದೆ. ಇಂತಹ ಸಮಸ್ಯೆಗಳಿರುವ ಇನ್ನೂ ಕೆಲವು ಬ್ಯಾಂಕ್‌ಗಳನ್ನು ಕೂಡ ಪಿ.ಸಿ.ಎ. ಚೌಕಟ್ಟಿಗೆ ತರುವ ಸಾಧ್ಯತೆಯಿದೆ. ಹೆಚ್ಚಿನ ಸಾರ್ವಜನಿಕ ರಂಗದ ಬ್ಯಾಂಕುಗಳು ಅನುತ್ಪಾದಕ ಸಾಲಗಳ ಸಮಸ್ಯೆಯೊಂದಿಗೆ ನಷ್ಟವನ್ನು ಅನುಭವಿ ಸುತ್ತಿವೆ. ಕುಗ್ಗುತ್ತಿರುವ ಉತ್ಪಾದಕತೆ ಮತ್ತು ಕರಗುತ್ತಿರುವ ಬಂಡವಾಳದೊಂದಿಗೆ ಕುಗ್ಗುತ್ತಿರುವ ಬೆಳವಣಿಗೆಯ ಸಮಸ್ಯೆ ಈ ಬ್ಯಾಂಕುಗಳ ಭವಿಷ್ಯವನ್ನೇ ಕೆಡಿಸುತ್ತಿವೆ. ಈ ಪರಿಸ್ಥಿತಿಯಲ್ಲಿ ಇಂದು ಎಲ್ಲಾ ಬ್ಯಾಂಕುಗಳಲ್ಲಿ ನೌಕರರ ಸಹಭಾಗಿತ್ವಕ್ಕೆ ಅತೀ ಹೆಚ್ಚಿನ ಮಹತ್ವ ನೀಡಬೇಕಾದ ಅವಶ್ಯಕತೆಯಿದೆ. ಸರಕಾರ ಮತ್ತು ಭಾರತೀಯ ರಿಸರ್ವ್‌ಬ್ಯಾಂಕ್ ಬ್ಯಾಂಕ್‌ಗಳ ಆರೋಗ್ಯದ ಸುಧಾರಣೆಗೆ ತೆಗೆದು ಕೊಳ್ಳುವ ಕ್ರಮಗಳು ಅನುಷ್ಠಾನದೊಂದಿಗೆ ಈ ಬ್ಯಾಂಕುಗಳಲ್ಲಿರುವ ಎಲ್ಲಾ ನೌಕರರ ಹೃತೂ³ರ್ವಕ ಸಹಭಾಗಿತ್ವವನ್ನು ಹೆಚ್ಚಿಸಲು ಬೇಕಾದ ಕ್ರಮಗಳ ಅಳವಡಿಕೆ ಕೂಡ ಅತ್ಯಗತ್ಯ.
– ಡಾ| ಕೆ.ಕೆ. ಅಮ್ಮಣ್ಣಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.