ವರ್ತಮಾನ ಸಾಹಿತ್ಯ ಘಟ್ಟಕ್ಕೆ ಚಳವಳಿಯ ಹಂಗಿಲ್ಲ


Team Udayavani, Nov 1, 2021, 6:00 AM IST

ವರ್ತಮಾನ ಸಾಹಿತ್ಯ ಘಟ್ಟಕ್ಕೆ ಚಳವಳಿಯ ಹಂಗಿಲ್ಲ

ಕೋವಿಡ್‌ ಜಗತ್ತನ್ನು ತಲ್ಲಣಗೊಳಿಸಿದ್ದು ಮಾತ್ರವಲ್ಲ, ಇದು ಮನುಕುಲದ ರೋಗಗ್ರಸ್ತ ಸ್ಥಿತಿಯ ಪ್ರತಿಫಲನದಂತೆ, ಮನುಷ್ಯ ಸಂಬಂಧಗಳ ಮರು ನಿರಚನೆಗೆ ಒತ್ತಾಯಿಸುವ ಸ್ಥಿತಿ ನಿರ್ಮಾಣ ಮಾಡಿಬಿಟ್ಟಿತ್ತು. ಸಹಜವಾಗಿಯೇ ಈ ವಿಷಮತೆ ಸಾಹಿತ್ಯದ ಮೂಲದ್ರವ್ಯವೆಂಬಂತೆ ಕಳೆದೆರಡು ವರ್ಷಗ ಳಲ್ಲಿ ಸಾಲು ಸಾಲು ಕೃತಿಗಳು ಹೊರಬಂದವು. ಸೂಕ್ಷ್ಮವಾಗಿ ಗಮನಿಸಿದವರಿಗೆ ನಮ್ಮ ಸಾಹಿತ್ಯಾಭಿವ್ಯಕ್ತಿ ಈ ಬಗೆಯ ಸರಕಿಗಾಗಿ ಎಷ್ಟು ದಿನಗಳಿಂದ ಕಾದು ಕುಳಿತಿದೆಯೋ ಎನ್ನಿಸಿದರೆ ಅದು ಅಚ್ಚರಿಯೇನಲ್ಲ. ಚಳವಳಿ ಗಳಿಲ್ಲದ ಈ ಕಾಲಘಟ್ಟವನ್ನು ಆಧುನಿಕೋತ್ತರವೆಂಬ ಹೆಸರಿನಲ್ಲಿ ನಿರ್ವಚಿಸುವ ಪ್ರಯತ್ನಗಳು ಬಹುತೇಕವಾಗಿ ನಡೆದಿವೆಯಾದರೂ ಅದಕ್ಕೊಂದು ಸ್ಪಷ್ಟ ದಿಕ್ಸೂಚಿ ದೊರೆತಂತೆ ಕಾಣುತ್ತಿಲ್ಲ. ಈ ಹಿಂದೆ ಅಡಿಗೋತ್ತರ, ನವ್ಯೋತ್ತರ ಎಂಬ ಮಾತುಗಳು ಚಾಲ್ತಿಗೆ ಬರುವ ಹೊತ್ತಿಗೆ ಅದು ಬಂಡಾಯ, ದಲಿತ, ಸ್ತ್ರೀ ವಾದಿ ಮುಂತಾದವುಗಳ ಉಗಮದ, ವ್ಯಾಖ್ಯಾನದ ಮುನ್ನುಡಿ ಬರೆದವು. ಈಗ ಈ ಚಳವಳಿಗಳೂ ಚರಿತ್ರೆಯ ಭಾಗವಾಗಿ ಹೋಗಿವೆ. ಹಾಗಾದರೆ ಯಾವ ಸಾಹಿತ್ಯ ಚಳವಳಿಯ ಉಗಮಕ್ಕಾಗಿ ನಮ್ಮ ಸಾಹಿತ್ಯ ಸಂದರ್ಭ ಕಾದು ನಿಂತಿದೆ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಖಂಡಿತ ಸುಲಭದ ಮಾತಲ್ಲ.

ಕನ್ನಡದಲ್ಲಿ ಸೃಷ್ಟಿಯಾಗುತ್ತಿರುವ, ಜಗತ್ತಿನ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬರುತ್ತಿರುವ ಕಳೆದೆರಡು ಮೂರು ದಶಕಗಳ ಸಾಹಿತ್ಯ ಕೃತಿಗಳನ್ನು ಗಮನಿಸಿದ ಯಾರಿಗೂ ವೇದ್ಯವಾಗುವ ಮುಖ್ಯ ವಿಚಾರವೆಂದರೆ ಕಾಲದ ಸದ್ದನ್ನು ಸಾಹಿತ್ಯ ಕೃತಿಯ ಮೂಲಕ ಹಿಡಿಯಲು ಸೃಜನಶೀಲತೆ ಎದುರಿಸುತ್ತಿರುವ ಬಹುಬಗೆಯ ಬಿಕ್ಕಟ್ಟುಗಳು. ನಮ್ಮ ಸಾಮಾಜಿಕ-ರಾಜಕೀಯ ವಿಷಮತೆಗಳು ಒಂದು ಬಗೆಯ ಅಸ್ಪಷ್ಟತೆಯಲ್ಲೇ ಮನುಷ್ಯನ ಬದುಕನ್ನು ಅಸಹನೀಯಗೊಳಿಸುತ್ತಿವೆ. ಇಪ್ಪತ್ತೂಂದನೆಯ ಶತಮಾನದಲ್ಲಿ ಮನುಕುಲದ ಬದುಕಿನ ದಿಕ್ಸೂಚಿಯನ್ನು ಗ್ರಹಿಸುವುದಕ್ಕೆ ಸರಿಯಾದ ಅಳತೆ ಗೋಲುಗಳೇ ದೊರಕದಂತಾಗಿದೆ. ಎಲ್ಲವನ್ನೂ ಒಂದು ಅಂತರ ಮತ್ತು ಅನುಮಾನದಿಂದಲೇ ಒಳಗೊಳ್ಳಬೇಕಾದ ಸಾಹಿತ್ಯವನ್ನೇ ಅನುಮಾನದಿಂದ ನೋಡುವಂತಾಗಿರುವ ಕಾಲದಲ್ಲಿ ನಾವಿದ್ದೇವೆ. ಉಗ್ರವಾದ, ಧಾರ್ಮಿಕ ಮೂಲಭೂತವಾದ, ಕೋಮುವಾದಗಳ ಪ್ರತಿಬಿಂಬ ದಿನದಿಂದ ದಿನಕ್ಕೆ ವಿಸ್ತಾರ ಪಡೆಯುತ್ತಿದೆ.

ಹಿಂದೆ ಸಾಹಿತ್ಯದ ಕೇಂದ್ರವೆನಿಸಿದ್ದ ಅಕಾಡೆಮಿಕ್‌ ವಲಯ ಆರೋಪ ಪ್ರತ್ಯಾರೋಪಗಳ ಅಸಹಿಷ್ಣುತೆಯಲ್ಲಿ ಕೊಚ್ಚಿಹೋಗುತ್ತ ‘ಬಾಯಿಬಡುಕ’ತನದ ವಕ್ತಾರ ಕೇಂದ್ರವಾಗುವ ಅಪಾಯದಲ್ಲಿದೆ. ಅಕಾಡೆಮಿಕ್‌ ವಲಯಗಳಾಚೆಗಿರುವ ಬರಹಗಾರರು ಸಾಹಿತ್ಯ ಕೇಂದ್ರದ ಪರಿಧಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯೇ. ಅವಗಣನೆಗೊಳಗಾದ ಎಷ್ಟೋ ವೃತ್ತಿ ನೆಲೆಗಳಲ್ಲಿರುವ ಲೇಖಕರ ಬರಹಗಳು ಕನ್ನಡ ಸಾಹಿತ್ಯಧಾರೆಗೆ ಹೊಸ ಆಯಾಮಗಳನ್ನು ಜೋಡಿಸುತ್ತಿದೆ. ಮೌನದ ಚಿಪ್ಪೊಡೆದು ಮಾತು ಹೊಮ್ಮಿ ಬರುತ್ತಿರುವುದಕ್ಕೆ ಸಾಹಿತ್ಯ ಚಳವಳಿಗಳೆಂಬ ರನ್‌ ವೇಗಳೇ ಬೇಕಿಲ್ಲವೆಂಬುದು ಸತ್ಯವಾದರೂ ತಾಳಮೇಳವಿಲ್ಲದ ಆರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಎಷ್ಟೋ ದನಿಗಳಿಗೆ ಕಸುವು ತುಂಬಲು ಸಾಹಿತ್ಯ ಚಳವಳಿಗಳು ಅಗತ್ಯವೇನೋ ಎಂಬ ಅಭಿಪ್ರಾಯ ಮೂಡುವುದು ಸುಳ್ಳೇನಲ್ಲ.
ಆಧುನಿಕ ರಾಷ್ಟ್ರೀಯತೆಯ ಭಾವನೆಯು ಚಲನಶೀಲ ಚಿಂತನೆಯ ಭಾಗವಾಗಿ ಕಾಣಿಸಿಕೊಳ್ಳುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಚಿಂತಿಸಿ, ಕೈಬರಹದ ಮೂಲಕ ಕೃತಿ ನಿರ್ಮಾಣ ಮಾಡುವ ಕಾಲ ಬದಿಗೆ ಸರಿದು, ಬುದ್ದಿ ಬೆರಳಿಗಿಳಿದು, ಕೀಲಿಮಣೆಯ ಮೇಲಾಡುವ ಮುದ್ರೆಯ ಅಚ್ಚು ಸಾಹಿತ್ಯವಾಗಿ ಪ್ರತಿಫಲಿಸುತ್ತಿರುವ ಕಾಲದಲ್ಲಿ ‘ಸಾಮಾಜಿಕ ತಂತ್ರಜ್ಞಾನ’ದ ಪ್ರಶ್ನೆ ಮುನ್ನೆಲೆಗೆ ಬಂದಿರುವುದು ಸಹಜವಾಗಿಯೇ ಇದೆ. ವೈಜ್ಞಾನಿಕ ಪರಿವೇಷದಿಂದ ಪ್ರಕಟಗೊಂಡ ತಂತ್ರಜ್ಞಾನಕ್ಕೀಗ ಸಾಮಾಜಿಕ ಸ್ವರೂಪ ಪ್ರಾಪ್ತವಾಗಿರುವುದು ಗಮನಾರ್ಹ ಸಂಗತಿ. ಟ್ರಾಫಿಕ್‌ ಸಿಗ್ನಲ್‌ನಲ್ಲಿ ಅಪವ್ಯಯವಾಗುತ್ತಿದ್ದ ಅವಧಿಯಲ್ಲಿಯೇ ಸಾಹಿತ್ಯಸೃಷ್ಟಿಗೆ ತೆರೆದುಕೊಳ್ಳುವ ಪರ್ಯಾಯ ದಾರಿಯ ಬಗ್ಗೆ ಸಾಫ್ಟ್‌ವೇರ್‌ ಜಗತ್ತಿನಿಂದ ಬಂದು ಜನಪ್ರಿಯತೆ ಸಂಪಾದಿಸಿರುವ ನಮ್ಮ ಲೇಖಕರೊಬ್ಬರು ಬರೆದುಕೊಂಡಿದ್ದು ಇಲ್ಲಿ ನೆನಪಾಗುತ್ತಿದೆ. ಈ ಹಿನ್ನೆಲೆಯಲ್ಲೇ “ಏಕ ರೂಪತೆ’ಯ ಬಗ್ಗೆ ಮಾತನಾಡುತ್ತಿರುವ ಆಧುನಿಕ ರಾಷ್ಟ್ರೀಯತೆಯ ಕಲ್ಪನೆಗಳನ್ನು, ಅಪಕಲ್ಪನೆಗಳನ್ನು ಮಾವು ಅನೇಕ ಆಯಾಮಗಳಿಂದ ಅರ್ಥಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ:ಜಮ್ಮು- ಕಾಶ್ಮೀರ: 3 ವಾರದಲ್ಲಿ 25 ಶಂಕಿತರ ಬಂಧನ: ಎನ್‌ಐಎ

ವರ್ಷವೊಂದಕ್ಕೆ ಪ್ರಕಟವಾಗುತ್ತಿರುವ ಹಲವು ಸಾವಿರ ಕನ್ನಡ ಪುಸ್ತಕಗಳು, ಲೇಖಕರು ಆಯ್ದುಕೊಳ್ಳುತ್ತಿರುವ ವಸ್ತು ವಿನ್ಯಾಸ ಕನ್ನಡ ಸಾಹಿತ್ಯದ ಬಹುತ್ವದ ಮತ್ತೂಂದು ಮಜಲನ್ನು ಬಹುಮುಖೀಯಾಗಿ ದರ್ಶನ ಮಾಡಿಸುತ್ತಿವೆ. ಇಸಂಗೆ ತಕ್ಕ ಸಾಹಿತ್ಯ ಕೃತಿಗಳನ್ನು ಬರೆದು ಕೊಡಬಲ್ಲ ಹತ್ತು ಕೈಗಳ ರಾವಣಾಸುರ ಲೇಖಕರ ಹಾವಳಿ ಒಂದೆಡೆಯಾದರೆ, ಒಂದು ಪ್ರಕಾರಕ್ಕೇ ಲೇಖಕರನ್ನು ಬ್ರಾಂಡ್‌ ಮಾಡಿ ಗಜಲ್‌ ಕವಿ, ಹಾಯುRಗಳ ಕವಿ, ಪ್ರಗಾಥ ಸಾರ್ವಭೌಮ ಎಂಬ ಲೇಬಲ್‌ಗ‌ಳನ್ನು ಹಚ್ಚಿ ಕೂರಿಸುವ ವಿಮರ್ಶಕರ ಹಾವಳಿ ಮತ್ತೂಂದು ಕಡೆ. ನಮ್ಮ ವಿಮಶಾì ಲೋಕ ಕನ್ನಡದ ಮಹತ್ವದ ಅನೇಕ ಪ್ರತಿಭಾವಂತರನ್ನು ಚರ್ಚಿಸುವ ಉಮೇದನ್ನೇ ತೋರುತ್ತಿಲ್ಲ. ಯಾರನ್ನು ಓದುವುದು, ಯಾವುದರ ಬಗ್ಗೆ ಬರೆಯುವುದು ಎಂಬ ಇತಿಮಿತಿಗಳ ಬಿಕ್ಕಟ್ಟಿನ ನಡುವೆಯೇ ದಿನ ಬೆಳಗಾದರೆ ಪ್ರಕಟವಾಗುವ ಸಾಹಿತ್ಯ ಪ್ರಶಸ್ತಿಗಳ ಭರಾಟೆ ಓದುಗರ ದಿಕ್ಕು ತಪ್ಪಿಸುವ ಮತ್ತೂಂದು ತೊಡಕಾಗಿಬಿಟ್ಟಿವೆ. ಯಾವ ಯಾವ ಪ್ರಶಸ್ತಿಯನ್ನು ಹೇಗೆ ಗಿಟ್ಟಿಸಿಕೊಳ್ಳಬೇಕೆಂಬ ಖಯಾಲಿಗೆ ಬಿದ್ದು ಅನೇಕರು ತಮ್ಮ ಸೃಜನಶೀಲತೆ ಯನ್ನು ನಿರ್ಲಜ್ಜೆಯಿಂದ ಒತ್ತೆಯಿಟ್ಟು ಕರಪ್ಟ್ ಆಗುತ್ತಿರುವುದು ತೀರಾ ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಜತೆಗೆ ಅವಸರದ ಪ್ರತಿಕ್ರಿಯೆಗಳ ಹಾವಳಿ ಯಂತೂ ತಡೆಯದಷ್ಟಿವೆ. ವಿದ್ಯು ನ್ಮಾನ ಮಾಧ್ಯಮಗಳ ವೇಗಕ್ಕೆ ತಕ್ಕ ವಿಮರ್ಶೆಗಳ, ಅಭಿಪ್ರಾಯಗಳ ಒಟ್ಟಿಲು ಕಣ್ಣಿಗೆ ರಾಚುತ್ತಿರುತ್ತವೆ. ಹೊಸ ಬರಹಗಾ ರರಿಗೆ ಈ ಬಗೆಯ ತೀವ್ರತೆ ಹೆಚ್ಚಿರುವುದು ಸಹಜ ವಾದರೂ ಹಿರಿಯ ಲೇಖಕರೂ ಹಿಂದೆ ಬಿದ್ದಿಲ್ಲ. ಓದಿ ಮೆಚ್ಚಿದವರ ಅಭಿಪ್ರಾಯಗಳನ್ನು, ಸ್ಪಂದನೆಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು, ತಮ್ಮ ಕೃತಿಗಳ ಬಗೆಗೆ ತಾವೇ ಚರ್ಚೆಗಳನ್ನು ಆಯೋಜಿಸುವ ವರೆಗೂ ಈ ಪ್ರವೃತ್ತಿಗಳು ಪ್ರತಿನಿತ್ಯ ಎಡತಾಕುತ್ತಿವೆ. ವಿವಿಧ ಪ್ರಕಾರ ಗಳಲ್ಲಿ ಪ್ರಕಟವಾಗುವ ಮುಖ್ಯ ಕೃತಿಗಳತ್ತ ಓದುಗರ ಗಮನ ಸೆಳೆಯಲು ಒಂದು ಮಟ್ಟಿನ ಪ್ರಚಾರ ಅನಿವಾರ್ಯ ವೆಂಬುದು ನಿಜವಾದರೂ ಅದು ನಿರ್ಲಜ್ಜ ಹಂತದೆಡೆಗೆ ಸಾಗಿದಾಗ ಆತಂಕವಾಗುವುದೂ ಕೂಡ ಅಷ್ಟೇ ನಿಜ.

ಪ್ರಯೋಗಶೀಲತೆ ದೃಷ್ಟಿಯಿಂದ ಗಮನಿಸಿದಾಗ ಹೊಸಕಾಲದ ಬೆಳೆ ಹುಲುಸಾಗಿಯೇ ಇದೆ. ಮಹಾಕಾವ್ಯ, ಖಂಡಕಾವ್ಯ, ಗಜಲ್‌, ಹನಿ ಗವಿತೆಗಳು, ದ್ವಿಪದಿ ಮುಂತಾದವು ಗಂಭೀರ ಕವಿತೆಗಳೊಂದಿಗೆ ಹೆಚ್ಚು ರಚಿತಗೊಳ್ಳುತ್ತಿರುವುದು, ಅದರಲ್ಲಿಯೂ ಯುವ ತಲೆಮಾರಿನವರ ಇಂಥ ಪ್ರಯೋಗಶೀಲತೆಗೆ ತೆರೆದು ಕೊಂಡಿರುವುದು ಕನ್ನಡದಮಟ್ಟಿಗೆ ವಿಶೇಷ ಸಂಗತಿಯಾಗಿದೆ. ಸಾಹಿತ್ಯಾಭಿವ್ಯಕ್ತಿಗೆ ಮುಂದಾಗುವವರನ್ನು ಹೆಚ್ಚಾಗಿ ಕಾವ್ಯವೇ ಹಿಡಿದಿಟ್ಟುಕೊಳ್ಳುವುದು ಎಂದಿನಿಂದಲೂ ಚಾಲ್ತಿಯಲ್ಲಿರುವ ಸಂಗತಿ ಯಾದರೂ ಸಾಹಿತ್ಯವಲಯದಲ್ಲಿ ಕಾವ್ಯ ರಚಿಸುವವರಿಗೆ ಹೆಚ್ಚು ಆದರ ದೊರೆಯುತ್ತಿರುವುದು ಗಮನಾರ್ಹ. ಬೇರೆ ಪ್ರಕಾರಗಳಿಗೆ ಕಾವ್ಯದ ಅನಂತರದ ಸ್ಥಾನ ನೀಡುವ ಪರಿಪಾಠವನ್ನು ಅಘೋಷಿತ ವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಕವಿಯೆನಿಸಿ ಕೊಳ್ಳುವವರಿಗೆ ಕಿಮ್ಮತ್ತು ಜಾಸ್ತಿ. ಕಾವ್ಯದ ಅನಂತರ ಸಣ್ಣಕಥೆ, ಕಾದಂಬರಿ, ಲಲಿತ ಪ್ರಬಂಧ, ನಾಟಕ, ವಿಮರ್ಶೆ, ಅನುವಾದ ಮುಂತಾದವುಗಳ ಸರದಿ. ಇಲ್ಲಿಯೂ ಸಂಶೋಧನೆ, ಭಾಷಾ ವಿಜ್ಞಾನ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ನಿಘಂಟು- ವಿಶ್ವಕೋಶ ಗಳ ಸಂಪಾದನೆಯಂತಹ ಶಾಸ್ತ್ರ ಸಾಹಿತ್ಯಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವವರ ಸಾಧನೆ ಮಸುಕಾಗಿದೆ. ಹೊಸ ತಲೆಮಾರಿ ನವರಲ್ಲಿ ಈ ಕ್ಷೇತ್ರಗಳತ್ತ ಆಕರ್ಷಿತರಾಗುವವರ ಸಂಖ್ಯೆಯೂ ಗಣನೀಯವಾಗಿ ಕ್ಷೀಣಿಸಿದೆ. ಒಂದು ಭಾಷೆಯ ಬೆಳವಣಿಗೆಯಲ್ಲಿ ಸೃಜನಶೀಲ ಸಾಹಿತ್ಯದ ಕೊಡುಗೆಯಷ್ಟೇ ಶಾಸ್ತ್ರ ಸಾಹಿತ್ಯದ ಪಾತ್ರವೂ ಇರುತ್ತದೆಂಬುದನ್ನು ನಾವು ಮರೆಯುವಂತಿಲ್ಲ. ವಿದ್ವತ್‌ ವಲಯದ ವಿಕಾಸದ ದಾರಿಗಳನ್ನು ನಾವಿನ್ನೂ ಹುಡುಕಿಕೊಂಡಿಲ್ಲ.

ನಮ್ಮ ಕಾಲದ ಬಹುಮುಖ್ಯ ಕೊರತೆ ಎಂದರೆ ಅದು ಬರಹಗಳಲ್ಲಿ ಸಾಂತ್ವನ ಸಂಯಮದ ಗೈರುಹಾಜರಿ. ‘ಅವಸರವೂ ಸಾವಧಾನದ ಬೆನ್ನೇರಿದೆ,’ ಎಂಬ ಕವಿವಾಣಿ ಮರೆತೇ ಹೋಗಿದೆ. ಇದರಿಂದಾಗಿ ಸುದೀರ್ಘ‌ ರಚನೆಯ ವ್ಯವಧಾನ ಕಣ್ಮರೆ ಯಾಗು ತ್ತಿದೆ. ವರ್ಷ ವರ್ಷವೂ ಹೊಸ ಪ್ರಕಟನೆ ಬರದಿದ್ದರೆ ನಾನೆಲ್ಲಿ ಅಮಾನ್ಯವೆ ನಿಸಿವೆನೋ ಎಂಬ ಆತಂಕದಲ್ಲಿ ಆಗುತ್ತಿರುವ ಗರ್ಭ ಪಾತವೇ ಹೆಚ್ಚಾಗಿ, ಸಾರ್ಥಕ ಫಲಿತಗಳು ಕಾಣದಾಗುತ್ತಿವೆ. ಕಾಲ ಧರ್ಮವೇ ಈ ವೇಗ ಪಡೆದಿರುವಾಗ ನಮ್ಮನ್ನು ಹಿಡಿದು ನಿಲ್ಲಿಸಿ ಓದಿಸಿಕೊಳ್ಳುವ ಕೃತಿಗಳನ್ನು ನಿರೀಕ್ಷಿಸುವುದು ಕಷ್ಟಕರವೆನಿಸಿದೆ.

ಕನ್ನಡದ ಸಂಸ್ಕೃತಿಯನ್ನು ಸಮಗ್ರ ಸ್ವರೂಪದಲ್ಲಿ ಕಾಣಿಸಬಲ್ಲ (ಹಾಗೆಂದರೇನು ಎಂಬ ಪ್ರಶ್ನೆಯನ್ನೂ ಎದುರಿಸಿಕೊಂಡು) ಕೃತಿ ರಚನೆಯ ಸವಾಲು ನಮ್ಮ ಲೇಖಕರ ಎದುರಿಗಿದೆ. ಕಾಲವೇ ಅಂತಹ ಲೇಖಕರನ್ನು ಹುಟ್ಟುಹಾಕಬಲ್ಲುದು ಎಂಬುದೊಂದು ಸಮಾಧಾನದ ಮಾತು. ಸಾರಾಂಶ ವಿಮರ್ಶೆಯ ಮಾದರಿಗಳು ಕನ್ನಡದಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕುವಷ್ಟು ಸಶಕ್ತವಾಗದಿರುವುದೂ ಕೂಡ ದೊಡ್ಡ ಕೊರತೆಯೇ. ನಮ್ಮ ನಡುವಿನ ದೊಡ್ಡ ಚಿಂತಕರು ಹೊಸ ಮಾಧ್ಯಮಗಳ ಭರಾಟೆಯಲ್ಲಿ ಮೌನವಾಗಿಬಿಟ್ಟಿದ್ದಾರೆ. ಇಸಂಗಳು, ಎಡ-ಬಲ- ಮಧ್ಯಮ ಮಾರ್ಗದ ಪಂಥ ವಕ್ತಾರಿಕೆಗಳು ಅಭಿಪ್ರಾಯ ರೂಪಿಸುವ ಶಕ್ತಿ ಕೇಂದ್ರಗಳಾಗಿವೆ.

ಈ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ನಮ್ಮನ್ನು ಸಂತೈಸುವ, ಬದುಕನ್ನು ಸಹನೀಯಗೊಳಿಸುವ ಸಾಹಿತ್ಯ ಸೃಷ್ಟಿಯ ಸಂದರ್ಭಕ್ಕಾಗಿ ನಾಡು ಕಾದು ಕುಳಿತಿದೆ. ಬದುಕಲು ಹೋರಾಡ ಬೇಕಾದ ಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ ಸಾಹಿತ್ಯದ ಮೂಲದ್ರವ್ಯಕ್ಕೇನೂ ಕೊರತೆಯಿಲ್ಲ. ಅವನ್ನು ಕಲಾತ್ಮಕತೆಯಿಂದ ದುಡಿಸಿಕೊಳ್ಳುವ ಸಂಕಲ್ಪಶಕ್ತಿಯ ಕೊರತೆಯನ್ನು ನಮ್ಮ ಲೇಖಕರು ದಿಟ್ಟತನದಿಂದ ನಿವಾರಿಸಿಕೊಳ್ಳುವುದಕ್ಕೆ ಯಾವ ಚಳವಳಿ ಗಾಗಿಯೂ ಕಾದು ಕುಳಿತುಕೊಳ್ಳಬೇಕಾಗಿಲ್ಲ.

– ಡಾ| ಎಚ್‌. ಎಸ್‌. ಸತ್ಯನಾರಾಯಣ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.