ನೆಟ್‌ ಇಲ್ಲದಿದ್ದರೂ ನೀಟಾಗಿ ಕಾಣುತ್ತೆ ಟಿವಿ


Team Udayavani, May 7, 2018, 2:40 AM IST

tv.jpg

ಮೊಬೈಲ್‌ನಲ್ಲಿ ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಬೇಕಾಗುತ್ತದೆ. ಇದನ್ನು ಟಿವಿಯಲ್ಲಿ ನೋಡಬೇಕು ಎಂದಾದರೆ ಮತ್ತು ಕೋಟ್ಯಂತರ ಜನರು ಡೇಟಾ ಬಳಸಿ ಟಿವಿ ವೀಕ್ಷಿಸಬೇಕು ಎಂದಾದರೆ ಅದಕ್ಕೆ ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯವನ್ನು ಸಿದ್ಧಪಡಿಸಬೇಕು. ಟವರ್‌ನಿಂದ ಟವರ್‌ಗೆ ಒಎಫ್ಸಿ ಜಾಲವನ್ನು ಇನ್ನಷ್ಟು ಹೆಚ್ಚಿಸಬೇಕು.

ಒಂದೆರಡು ವರ್ಷದ ಹಿಂದೆ ಮೊಬೈಲ್‌ನಲ್ಲಿ ಒಂದು ಜಿಬಿ ಡೇಟಾಗೆ 350 ರೂಪಾಯಿ ಕೊಡುತ್ತಾ, ಯೂಟ್ಯೂಬ್‌ನಲ್ಲಿ ಒಂದು ವಿಡಿಯೋ ನೋಡುವಾಗಲೂ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದ ಜನ ಮುಂದೊಂದು ದಿನ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಎಚ್‌ಡಿ ಟಿವಿ ನೋಡುವಷ್ಟು ಶ್ರೀಮಂತರಾಗುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲವೇನೋ! ಆದರೆ ಅದಂತೂ ಈಗ ಸಾಧ್ಯವಾಗಿದೆ. ಆದರೆ ಜನ ಶ್ರೀಮಂತರಾಗಿದ್ದು ಅಷ್ಟು ಹಣ ಕೊಡುವ ಮಟ್ಟಿಗಲ್ಲ, ಬದಲಿಗೆ ಟೆಲಿಕಾಂ ಕಂಪನಿಗಳು ಅಷ್ಟು ಪ್ರಮಾಣದ ಡೇಟಾ ಕೊಡುತ್ತಿವೆ. ಅಷ್ಟೇ ಅಲ್ಲ, ಟೆಲಿಕಾಂ ಕಂಪನಿಗಳು ತಂತ್ರಜ್ಞಾನದಲ್ಲಿ ದಿನ ದಿನವೂ ಒಂದೊಂದೇ ಹೆಜ್ಜೆ ಮುಂದಿಡುತ್ತಲೂ ಇವೆ. ಟೆಲಿಕಾಂ ವಲಯಕ್ಕೆ ಎಲ್‌ಟಿಇ ಮತ್ತು ವಾಯ್ಸ ಓವರ್‌ ಎಲ್‌ಟಿಇ ಎಂಬ ಟೆಕ್ನಾಲಜಿಯನ್ನು ಅವಧಿಗೂ ಮೊದಲೇ ಪರಿಚಯಿಸಿದ ಮುಖೇಶ್‌ ಅಂಬಾನಿಯ ಜಿಯೋ ಈಗ, ಟಿವಿ ನೆಟ್‌ವರ್ಕ್‌ಗೂ ಕೈ ಹಾಕಿದೆ. 

ಈಗಾಗಲೇ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ಟಿವಿ ಆ್ಯಪ್‌ ಮೂಲಕ ಮೊದಲ ಹಂತದಲ್ಲಿ ಯಶಸ್ವಿಯೂ ಆಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸಲು ಮೂಲಸೌಕರ್ಯ ಮಿತಿಗಳು ಅಡ್ಡಿಯಾಗುತ್ತಿವೆ. ಅಂದರೆ ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಬೇಕಾಗುತ್ತದೆ. ಇದನ್ನು ಟಿವಿಯಲ್ಲಿ ನೋಡಬೇಕು ಎಂದಾದರೆ ಮತ್ತು ಕೋಟ್ಯಂತರ ಜನರು ಡೇಟಾ ಬಳಸಿ ಟಿವಿ ವೀಕ್ಷಿಸಬೇಕು ಎಂದಾದರೆ ಅದಕ್ಕೆ ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯವನ್ನು ಸಿದ್ಧಪಡಿಸಬೇಕು. ಟವರ್‌ನಿಂದ ಟವರ್‌ಗೆ ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ ಜಾಲವನ್ನು ಇನ್ನಷ್ಟು ಹೆಚ್ಚಿಸಬೇಕು. ಟವರ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು.

ಇಷ್ಟೆಲ್ಲ ವೆಚ್ಚ ಮಾಡುವ ಬದಲು, ಇಂಟರ್‌ನೆಟ್‌ ಅಗತ್ಯವೇ ಇಲ್ಲದೆ ಮೊಬೈಲ್‌ ನೆಟ್‌ವರ್ಕ್‌ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಇಎಂಬಿಎಂಎಸ್‌ ಎಂಬ ಇನ್ನೊಂದು ತಂತ್ರಜ್ಞಾನವನ್ನು ಬಳಸಿದರೆ ಹೇಗೆ ಎಂಬ ಯೋಚನೆ ಈಗ ಜಿಯೋಗೆ ಹೊಕ್ಕಿದೆ. ಟೆಲಿಕಾಂ ನೆಟ್‌ವರ್ಕನ್ನೇ ಒನ್‌ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನವಿದು. ಮೊಬೈಲ್‌ ಕಮ್ಯೂನಿಕೇಶನ್‌ ಮತ್ತು ರೇಡಿಯೋ ಅಥವಾ ಟಿವಿ ಕಮ್ಯೂನಿ ಕೇಶನ್‌ ವಿಧಾನದ ಮೂಲದಲ್ಲೇ ವ್ಯತ್ಯಾಸವಿರುತ್ತದೆ. ಅಂದರೆ ಮೊಬೈಲ್‌ ಕಮ್ಯೂನಿಕೇಶನ್‌ ಟು ವೇ ಆಗಿದ್ದರೆ, ಟಿವಿ ಒನ್‌ ವೇ ಆಗಿರುತ್ತದೆ. ನಾವು ಮೊಬೈಲ್‌ನಲ್ಲಿ ಟವರ್‌ನಿಂದ ಡೇಟಾ ಸ್ವೀಕರಿಸುತ್ತೇವೆ ಹಾಗೂ ಕಳುಹಿಸುತ್ತೇವೆ.

ಇದನ್ನು ಯೂನಿಕಾಸ್ಟ್‌ ಎನ್ನುತ್ತೇವೆ. ಆದರೆ ಟಿವಿಯಲ್ಲಿ ನಾವು ಡೇಟಾವನ್ನು ಪಡೆಯುತ್ತೇವಷ್ಟೇ, ಕಳುಹಿಸುವುದಿಲ್ಲ. ಅಂದರೆ ಒಮ್ಮೆ ಒಂದು ಟ್ರಾನ್ಸ್‌ಪಾಂಡರ್‌ ಅಥವಾ ಟ್ರಾನ್ಸ್‌ಮಿಟರ್‌ ಸಂಕೇತಗಳನ್ನು ಕಳುಹಿಸಿದ ಮೇಲೆ ಅವು ಯಾವೇ ಸಂಕೇತಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಇದರಿಂದ ಅವುಗಳ ಸಾಮರ್ಥ್ಯ ಹೆಚ್ಚಿರುತ್ತದೆ. ಆದರೆ ಟೆಲಿಕಾಂನ ಅಗತ್ಯಗಳು ಬೇರೆ. ಹೀಗಾಗಿ ಟೆಲಿಕಾಂ ಟವರ್‌ಗಳಲ್ಲಿರುವ ಟ್ರಾನ್ಸ್‌ಮಿಟರ್‌ಗಳು ಸಂಕೇತಗಳನ್ನು ಸ್ವೀಕರಿಸಬೇಕು ಹಾಗೂ ಕಳುಹಿಸಬೇಕು. ಟೆಲಿಕಾಂ ನೆಟ್‌ವರ್ಕ್‌ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುತ್ತೇವೆಂದಾದರೆ ಈ ಒನ್‌ ವೇ ಕಮ್ಯೂನಿಕೇಶನ್‌ ಸಾಕಲ್ಲವೇ ಎಂಬ ಪ್ರಶ್ನೆ ಎದುರಾದಾಗಲೇ ಇಎಂಬಿಎಂಎಸ್‌ ತಂತ್ರಜ್ಞಾನ ಹುಟ್ಟಿಕೊಂಡಿತ್ತು. ಇದು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಟೆಲಿಕಾಂ ನೆಟ್‌ವರ್ಕ್‌ ಸಾಮರ್ಥ್ಯವನ್ನು ದುಪ್ಪಟ್ಟಾ ಗಿಸುವ ಹೈಬ್ರಿಡ್‌ ಟೆಕ್ನಾಲಜಿ. ಇದು ಇನ್ನೂ ಪ್ರಾಯೋಗಿಕ ಹಂತ ದಲ್ಲೇ ಇದೆ. ಕಳೆದ ತಿಂಗಳು ಅಮೆರಿಕದಲ್ಲಿ ಕಾರುಗಳ ನ್ಯಾವಿಗೇಶನ್‌ ಮತ್ತು ಸಂವಹನಕ್ಕಾಗಿ ಈ ತಂತ್ರಜ್ಞಾನವನ್ನು ನೋಕಿಯಾ ಪ್ರಯೋಗ ನಡೆಸಿದೆ.

ಇದೀಗ ಜಿಯೋ ಕೂಡ ಈ ತಂತ್ರಜ್ಞಾನದ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಇಂಟರ್‌
ನೆಟ್‌ ಇಲ್ಲದೇ ಟಿವಿ ವೀಕ್ಷಿಸಬಹುದು. ಇದಕ್ಕೆ ಜಿಯೋ ಹೋಮ್‌ ಟಿವಿ ಎಂದು ಹೆಸರಿಸಲಾಗುತ್ತದೆ ಎಂದು ಹೇಳಲಾಗಿದೆಯಾದರೂ, ಅಂತಿಮವಾಗಿ ಅದಕ್ಕೆ ಯಾವ ಹೆಸರು ಹಾಗೂ ರೂಪ ಕೊಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಈ ಹಿಂದೆ ಬ್ರಾಡ್‌ಕಾಸ್ಟ್‌ ಎಂಬ ಆಂಡ್ರಾಯ್ಡ ಅಪ್ಲಿಕೇಶನ್‌ ಬಳಸಿ ಪರೀಕ್ಷೆ ನಡೆಸಲಾ ಗುತ್ತಿತ್ತು. ಆದರೆ ಈ ತಂತ್ರಜ್ಞಾನ ಟಿವಿ ವಲಯದಲ್ಲಿ ಕ್ರಾಂತಿಕಾರಕ ವಂತೂ ಹೌದು. ಇದೇ ಇಎಂಬಿಎಂಎಸ್‌ ತಂತ್ರಜ್ಞಾನ ಬಳಸಿ ಕೊಂಡು ಸೆಟ್‌ ಟಾಪ್‌ ಬಾಕ್ಸ್‌ ತಯಾರಿಸಿ ಟಿವಿಗೆ ಕನೆಕ್ಟ್ ಮಾಡಿದರೆ, ಅತ್ಯದ್ಭುತ ಕ್ಲಾರಿಟಿ ಚಾನೆಲ್‌ಗ‌ಳನ್ನು ನಾವು ಟಿವಿಯಲ್ಲಿ ನೋಡಬಹುದು. ಈ ಹಿಂದೆ ಜಿಯೋ ಡಿಟಿಎಚ್‌ ಕೂಡ ಮಾರು ಕಟ್ಟೆಗೆ ಬರಲಿದೆ ಎಂದು ಸುದ್ದಿಹಬ್ಬಿತ್ತಾದರೂ, ಅದರ ವಾಸ್ತವಾಂಶ ಇನ್ನೂ ಖಚಿತಪಟ್ಟಿಲ್ಲ. ಆದರೆ ಬ್ರಾಡ್‌ಬ್ಯಾಂಡ್‌ ಸೇವೆಯಂತೂ ಕೆಲವು ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಇತರ ನಗರಗಳಿಗೆ ಶೀಘ್ರದಲ್ಲೇ ಪರಿಚಯಿಸಲ್ಪಡಲೂಬಹುದು.

ಈ ಇಎಂಬಿಎಂಎಸ್‌ ಇನ್ನೊಂದು ಅನುಕೂಲವೆಂದರೆ ಒಂದೇ ಟವರ್‌ನಡಿ ಸಾವಿರಾರು ಜನರು ಕೂತು ಒಂದೇ ಸಮನೆ ಎಚ್‌ಡಿ ಕಂಟೆಂಟ್‌ ನೋಡಿದರೂ ನೆಟ್‌ವರ್ಕ್‌ ಸ್ಲೋ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಜತೆಗೆ ಜಿಯೋ ಟಿವಿಯಂತೂ ಭಾರಿ ಸದ್ದು ಮಾಡುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಈಗಿರುವ ಡಿಟಿಎಚ್‌ ಕಂಪನಿಗಳು ಮತ್ತು ಕೇಬಲ್‌ ಕಂಪನಿಗಳು ಕಣ್ಣು, ಕಿವಿ ಮುಚ್ಚಿಕೊಂಡು ಕೂತಿರಲಾರವು.

ಇನ್ನು, ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಾರ ಕ್ಕೊಂದಾದರೂ ಹೊಸ ಸ್ಮಾರ್ಟ್‌ಫೋನ್‌, ಹೊಸ ಗ್ಯಾಜೆಟ್‌ ಬಿಡುಗಡೆಯಾಗುತ್ತದೆ. ಅಂಥ ಉತ್ಪನ್ನಗಳ ಮೇಲೆ ಒಮ್ಮೆ ಕಣ್ಣುಹಾಯಿಸಿ, ಹೇಗಿದೆ ಎಂದು ನಮ್ಮ ಓದುಗರಿಗೆ ತಿಳಿಸುವ ಪ್ರಯತ್ನ ಇಲ್ಲಿದೆ.

ಮಧ್ಯಮ ಶ್ರೇಣಿಯ ನೋಕಿಯಾ 7 ಪ್ಲಸ್‌
ಹಿಂದೊಂದು ಕಾಲದಲ್ಲಿ ಮೊಬೈಲ್‌ ಮಾರುಕಟ್ಟೆಯನ್ನು ಆಳಿದ್ದ ನೋಕಿಯಾ ಬ್ರಾಂಡ್‌ ಅನ್ನು ಎಚ್‌ಎಂಡಿ ಗ್ಲೋಬಲ್‌ ಎಂಬ ಫಿನ್ಲಂಡ್‌ ಕಂಪನಿ ಖರೀದಿಸಿ, ಕಳೆದ ವರ್ಷ ಆರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಈ ವರ್ಷ ಇನ್ನಷ್ಟು ಸರಣಿಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ 7 ಪ್ಲಸ್‌ ಕೂಡ ಒಂದು. ಸದ್ಯ 25,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್‌ ನೋಡುವುದಕ್ಕಂತೂ ಚೆನ್ನಾಗಿದೆ. ಇದು ಅಲ್ಯೂಮಿನಿಯಂನಿಂದ ಮಾಡಿದ್ದರೂ ಕೈಯಲ್ಲಿ ಹಿಡಿದರೆ ಲೋಹದ ಭಾವ ಉಂಟಾಗುವುದಿಲ್ಲ. ಪ್ಲಾಸ್ಟಿಕ್‌ನಿಂದ ಮಾಡಿದ ಫೋನ್‌ ಕೈಯಲ್ಲಿ ಹಿಡಿದಂತಿದೆ. ಹಿಂಭಾಗದಲ್ಲಿ ನೋಕಿಯಾ ಹಾಗೂ ಆಂಡ್ರಾಯ್ಡ ಒನ್‌ ಲೋಗೋ, ಮೇಲ್ಭಾಗದಲ್ಲಿ ಡ್ಯುಯೆಲ್‌ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಇದೆ. ಬಲಭಾಗದಲ್ಲಿ ಪವರ್‌ ಹಾಗೂ ವಾಲ್ಯೂಮ್‌ ಬಟನ್‌ಗಳು ಹಾಗೂ ಎಡಬದಿಗೆ  ಡ್ಯುಯೆಲ್‌ ಸಿಮ್‌ ಸ್ಲಾಟ್‌ಗಳಿವೆ.

ಡಿಸ್‌ಪ್ಲೇ ವಿಷಯದಲ್ಲಿ 7 ಪ್ಲಸ್‌ ಅಷ್ಟೇನೂ ಗಮನಾರ್ಹವಾಗಿಲ್ಲ. 6 ಇಂಚು ಫ‌ುಲ್‌ ಎಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌ ಇದ್ದು, 1080/2160 ಪಿಕ್ಸೆಲ್‌ ರೆಸೊಲ್ಯುಶನ್‌ ಇದೆ. ಈ ಶ್ರೇಣಿಯ ಫೋನ್‌ಗಳಲ್ಲಿ ಇದು ಸಾಮಾನ್ಯವಾದರೂ, ಸಾಮಾನ್ಯ ಕೆಲಸಕ್ಕೆ ತೊಂದರೆ ಯಿಲ್ಲ. ಆದರೆ ನಿರೀಕ್ಷಿಸಿದಷ್ಟು ಕಲರ್‌ಫ‌ುಲ್‌ ಹಾಗೂ ಆಕರ್ಷಕ ಸ್ಕ್ರೀನ್‌ ಏನೂ ಅಲ್ಲ. ಹಾಗಂತ ಕಳಪೆಯೂ ಅಲ್ಲ. ಸ್ವಲ್ಪ ಹಳೆಯ ಆವೃತ್ತಿಯ ಕೊರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 3 ಇದರಲ್ಲಿದೆ. ಇನ್ನೊಂದು ಆಕರ್ಷಕ ಸಂಗತಿಯೆಂದರೆ ಸ್ಕ್ರೀನ್‌ ಮೇಲೆ ಎರಡು ಬಾರಿ ಟ್ಯಾಪ್‌ ಮಾಡಿದರೆ ಸ್ಕ್ರೀನ್‌ ಬೆಳಗುತ್ತದೆ. ಸ್ಕ್ರೀನ್‌ ಬೆಳಗಿಸಲು ಪವರ್‌ ಬಟನ್‌ ಒತ್ತುವ ಶ್ರಮ ಕಡಿಮೆಯಾಗುತ್ತದೆ.

ಹೊಸ ಆವೃತ್ತಿಯ ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರಾಗನ್‌ 660 ಪ್ರೋಸೆಸರ್‌ ಇದೆ. ಹೀಗಾಗಿ ಭಾರಿ ಗೇಮ್‌ಗಳನ್ನು ಯಾವುದೇ ಕಿರಿಕಿರಿ ಇಲ್ಲದೇ ಆಡಬಹುದು. 4ಜಿಬಿ ಎಲ್‌ಪಿಡಿಡಿಆರ್‌4 ರ್ಯಾಮ್‌ ಕೂಡ ಇದ್ದು, ಪ್ರೋಸೆಸರ್‌ಗೆ ಪೂರಕವಾಗಿದೆ. ಇತರ ಕಂಪನಿಗಳ ಯೂಸರ್‌ ಇಂಟರ್‌ಫೇಸ್‌ನಲ್ಲಿದ್ದಂತೆ ಇದರಲ್ಲಿ ಯಾವ ಹೆಚ್ಚುವರಿ ಗಿಮಿಕ್‌ಗಳೂ ಇಲ್ಲ. ಸ್ಟಾಕ್‌ ಆಂಡ್ರಾಯ್ಡನ ಯುಐ ಹಾಗೆಯೇ ಇದೆ. 7 ಪ್ಲಸ್‌ನಲ್ಲಿ ಮೆಚ್ಚಿಕೊಳ್ಳುವ ಒಂದು ಪ್ರಮುಖ ಸಂಗತಿಯೆಂದರೆ ಕ್ಯಾಮೆರಾ. ಝೀಸ್‌ ಆಪ್ಟಿಕ್ಸ್‌ನೊಂದಿಗೆ 12 ಎಂಪಿ ಹಾಗೂ 13 ಎಂಪಿ ಹಿಂಬದಿ ಕ್ಯಾಮೆರಾ ಇವೆ. 1.7 ಅಪರ್ಚರ್‌ ಇದ್ದುದರಿಂದ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯಬಹುದು. ಮುಂಬದಿ 16 ಎಂಪಿ ಕ್ಯಾಮೆರಾ ಸೆಲ್ಫಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಮುಂದಿನ ಮತ್ತು ಹಿಂದಿನ ಕ್ಯಾಮೆರಾಗಳೆರಡನ್ನೂ ಬಳಸಿ ಫೋಟೋ ತೆಗೆಯುವ ಬೋತಿ ಸೌಲಭ್ಯ ಕೂಡ ಇದೆ.

3800 ಎಂಎಎಚ್‌ ಬ್ಯಾಟರಿ ಈ ಶ್ರೇಣಿಯಲ್ಲೇ ಮೊದಲನೆ ಯದು. 30 ಸಾವಿರ ರೂ.ಕೆಳಗಿನ ಹ್ಯಾಂಡ್‌ಸೆಟ್‌ಗಳಲ್ಲಿ ಇಷ್ಟು ದೀರ್ಘ‌ಬಾಳಿಕೆ ಕ್ಯಾಮೆರಾ ಸಿಗುವುದು ದುಸ್ತರ. 12 ಗಂಟೆಗಳವರೆಗೆ ನಿರಂತರ ಬಳಕೆ ಮಾಡಿದರೂ ಬ್ಯಾಟರಿ ಬಾಳಿಕೆ ಬರುತ್ತದೆ. ಆದರೆ ಬ್ಯಾಟರಿ ಸೆಟ್ಟಿಂಗ್ಸ್‌ ಮಾಡಿಕೊಂಡರೆ ಸೀಮಿತ ಬಳಕೆಯಲ್ಲಿ 2 ದಿನಗಳವರೆಗೂ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸಾಮಾನ್ಯ ಬಳಕೆಗೆ ಈ ಸ್ಮಾರ್ಟ್‌ಫೋನ್‌ ಸೂಕ್ತ. 18:9 ಆಸ್ಪೆಕ್ಟ್ ರೇಶಿಯೋ ಆಕರ್ಷಕವಾಗಿದೆ, ಆಪರೇಟಿಂಗ್‌ ಸಿಸ್ಟಂ ನೀಟಾಗಿದೆ ಹಾಗೂ ಪ್ರೋಸೆಸರ್‌ ಜಬರ್‌ದಸ್ತಾಗಿದೆ. ಕ್ಯಾಮೆರಾ ಹಾಗೂ ಬ್ಯಾಟರಿ ಬಗ್ಗೆ ಮಾತಿಲ್ಲ. ಆದರೆ 20 ರಿಂದ 22 ಸಾವಿರದವರೆಗಿನ ದರವಿದ್ದರೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸುತ್ತಿತ್ತು.

– ಕೃಷ್ಣ ಭಟ್‌

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.