ಈ ಆಡಂಬರ, ದುಂದುವೆಚ್ಚ ನಮಗಾಗಿ ಅಲ್ಲ; ಪ್ರತಿಷ್ಠೆಗಾಗಿ
Team Udayavani, Mar 18, 2017, 10:20 PM IST
ಆಧುನಿಕತೆ ತೀವ್ರಗೊಳ್ಳುತ್ತಿದ್ದಂತೆ ಜನರ ಆಸೆಗಳ ತೀವ್ರತೆಯೂ ಹೆಚ್ಚುತ್ತಿದೆ. ನಮ್ಮ ಆರೋಗ್ಯ, ಸಂತೋಷ, ಸಮಾಧಾನ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಎಲ್ಲವನ್ನೂ ಮರೆತು ನಾವು ಶ್ರೀಮಂತರು ಎಂದು ಬಿಂಬಿಸಲು ಬಯಸುತ್ತಿದ್ದೇವೆ. ನಾವು ಮಾಡುತ್ತಿರುವುದೆಲ್ಲ ನಮಗಾಗಿ ಅಲ್ಲ; ನಮ್ಮ ಸ್ಥಾನಮಾನ ಹಾಗೂ ಘನತೆಗಾಗಿ.
ನನ್ನ ಮೊದಲ ಮಗಳು ಸಣ್ಣ ಮಗುವಾಗಿದ್ದಾಗ ಕೆಲವು ಫ್ರಾಕುಗಳನ್ನು ಹಾಕಿಸುವಾಗ ಬಹಳ ಕಿರಿಕಿರಿ ಮಾಡುತ್ತಿದ್ದಳು. ಆದರೆ ಕಾಟನ್‌ನ ಸಾದಾ ಅಂಗಿಗಳನ್ನು ಹಾಕುವಾಗ ಯಾವುದೇ ರಗಳೆ ಇರುತ್ತಿರಲಿಲ್ಲ. ನನಗೂ ಕಾಟನ್ ಸೀರೆಗಳು, ಸಿಂಪಲ್ ಆಗಿರುವ ಸೀರೆಗಳು ಇಷ್ಟ. ಆದರೆ ವರ್ಷದಲ್ಲಿ ಕೆಲವು ಹಬ್ಬಗಳು, ಮದುವೆಗಳು ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದಲ್ಲ! ಕಂಫರ್ಟಬಲ್ ಅಂತ ಸಾದಾ ಬಟ್ಟೆ ಧರಿಸಿದರೆ, ಮಕ್ಕಳಿಗೆ ಸಾದಾ ಬಟ್ಟೆ ಹಾಕಿಸಿದರೆ ಜನ ವಿಚಿತ್ರವಾಗಿ ನೋಡುತ್ತಾರೆ. ಅಂತಹ ವಿಶೇಷ ಸಂದರ್ಭಗಳಿಗೋಸ್ಕರ ಅನಿವಾರ್ಯವಾಗಿ ಗ್ರ್ಯಾಂಡ್ ಆಗಿರುವ ಬಟ್ಟೆಗಳನ್ನು ಖರೀದಿಸುತ್ತಿ¨ªೆ. ಇಂತಹ ಬಟ್ಟೆಗಳು ಸಾಮಾನ್ಯ ದಿನಗಳಲ್ಲಿ ಧರಿಸಲು ಸೂಕ್ತವೆನಿಸುತ್ತಿರಲಿಲ್ಲ. ಜತೆಗೆ ಅವು ಹಾಳಾಗುವ ಭಯ ಬೇರೆ. ಜೋಪಾನವಾಗಿ ತೆಗೆದಿಟ್ಟರೂ ಇನ್ನೊಂದು ಹಬ್ಬ ಅಥವಾ ವಿಶೇಷ ಸಂದರ್ಭಕ್ಕೆ ಇದು ಹಳತೆನಿಸಿ ಹೊಸ ಬಟ್ಟೆ ಖರೀದಿಸಬೇಕಾಗುತ್ತಿತ್ತು. ಬಟ್ಟೆ ಖರೀದಿಸುವುದು ಅಗತ್ಯವೆಂಬುದಕ್ಕಿಂತ, ಉಳಿದವರು ಏನು ತಿಳಿದುಕೊಂಡಾರು ಎಂಬುದಕ್ಕೋಸ್ಕರ ಎಂದು ನನಗನಿಸಿತು.
ನಮ್ಮ ಬಟ್ಟೆ, ಚಪ್ಪಲಿ, ಬ್ಯಾಗ್ ಇನ್ನಿತರ ವಸ್ತುಗಳನ್ನು ನಾವು ಖರೀದಿಸುವುದು ಅಗತ್ಯಕ್ಕಾಗಿಯಷ್ಟೇ ಆಗಿರದೇ, ಪ್ರದರ್ಶನಕ್ಕಾಗಿ ಆಗಿರುತ್ತದೆ. ನಿಜವಾದ ಸಿರಿವಂತರು ಮಾಡುವ ಆಡಂಬರವನ್ನು ಅನುಕರಿಸುವ ಇತರರು ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬಂತೆ ವರ್ತಿಸುತ್ತಾರೆ. ಹುಟ್ಟುಹಬ್ಬ, ನಾಮಕರಣ, ನಿಶ್ಚಿತಾರ್ಥ, ಮದುವೆ, ಹೀಗೇ ಕಾರ್ಯಕ್ರಮ ಯಾವುದೇ ಇರಲಿ, ತಮ್ಮ ಊರಿನಲ್ಲಿ ಇದುವರೆಗೆ ನಡೆದುದಕ್ಕಿಂತ ಆಡಂಬರಪೂರ್ಣವಾಗಿರಬೇಕು ಎಂದು ಬಯಸುವ ಜನ ಪರಸ್ಪರ ಪೈಪೋಟಿಯಿಂದ ಖರ್ಚು ಮಾಡುತ್ತಾರೆ. ಅನಂತರ ಕೆಲವರು ಆ ಖರ್ಚಿನಿಂದಾದ ಆರ್ಥಿಕ ಹೊರೆಯನ್ನು ಸರಿದೂಗಿಸಲು ಪಡಬಾರದ ಬಾಧೆ ಪಡುತ್ತಾರೆ.
ಅನುಕರಣೆಯ ಆಮಿಷ
ಇತ್ತೀಚೆಗೆ ಒಂದು ಶವಸಂಸ್ಕಾರ ಕಾರ್ಯಕ್ರಮಕ್ಕೆ ಹೋಗಿ¨ªೆವು. ತೀರಿಕೊಂಡವರ ಮಗ, ಸೊಸೆ ಅಮೆರಿಕದಲ್ಲಿದ್ದಾರೆ. ಉಳಿದ ಮಕ್ಕಳೆಲ್ಲರೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಬಂದ ಒಬ್ಬರನ್ನೂ ಬಿಡದೇ ಎಲ್ಲರ ಫೋಟೋ, ವೀಡಿಯೋ ತೆಗೆದರು. ಶವಸಂಸ್ಕಾರಕ್ಕಾಗಿ ಚರ್ಚಿಗೆ ಹೋಗುವುದು, ಚರ್ಚಿನ ಪ್ರಾರ್ಥನೆ, ಶವಸಂಸ್ಕಾರ, ಕೊನೆಗೆ ಜನ ಚದುರಿ ಹೋಗುವವರೆಗಿನ ಎಲ್ಲ ಕ್ಷಣಗಳನ್ನೂ ವಿವಿಧ ಆ್ಯಂಗಲ್‌ಗಳಿಂದ ಸೆರೆಹಿಡಿಯಲು ಫೋಟೋಗ್ರಾಫರ್, ವೀಡಿಯೋಗ್ರಾಫರ್‌ಗಳು ಅತ್ತಿತ್ತ ಓಡಿ ಸುಸ್ತಾದರು. ಈ ಅಬ್ಬರದಲ್ಲಿ ಅಲ್ಲಿ ಸೂತಕದ ಛಾಯೆಯ ಬದಲು ಸಂಭ್ರಮದ ವಾತಾವರಣದ ಪ್ರತೀತಿ ಮೂಡಿದ್ದು ಸುಳ್ಳಲ್ಲ.
ಈಗೀಗ ಜನರು ಮದುವೆ ರಿಸೆಪ್ಷನ್‌ನಂತಹ ಕಾರ್ಯಕ್ರಮಗಳನ್ನು ರಾತ್ರಿಯ ವೇಳೆ ಇಟ್ಟುಕೊಳ್ಳುತ್ತಿ¨ªಾರೆ. ಅದರಲ್ಲೂ ಓಪನ್ ಗ್ರೌಂಡಲ್ಲಿ ಅತ್ಯದ್ಭುತವೆನಿಸುವ ಲೈಟಿಂಗÕ…, ಇನ್ನಿತರ ಅಲಂಕಾರಗಳು, ಒಂದೊಂದು ಕುಟುಂಬಕ್ಕೆ ಪ್ರತ್ಯೇಕ ಪ್ರತ್ಯೇಕ ಆಸನ ವ್ಯವಸ್ಥೆ. ಆ ರೌಂಡ್ ಟೇಬಲ್ ಹಾಗೂ ಕುರ್ಚಿಗಳಿಗೂ ಅಂದದ ಅಲಂಕಾರದ ಕವರ್‌ಗಳು, ಹೂ ಗುತ್ಛಗಳು. ಎಲ್ಲರೂ ಕುಳಿತಾದ ಕೂಡಲೇ ಸಾಫr… ಡ್ರಿಂಕÕ…, ಬಗೆಬಗೆಯ ಮದ್ಯಗಳು, ಚಿ…, ಕರಿದ ಗೋಡಂಬಿ, ಕಟ್ಲೆಟ್, ಕಬಾಬ್‌ಗಳು ಸರಬರಾಜಾಗುತ್ತವೆ. ಸಾವಿರಾರು ರೂಪಾಯಿ ಸಂಭಾವನೆ ಒಪ್ಪಿಕೊಂಡು ಬಂದಿರುವ ಕಾರ್ಯಕ್ರಮ ನಿರ್ವಾಹಕ, ಓಪನ್ ಬಾರ್‌ನಿಂದ ನಿಮಗಿಷ್ಟವಾದುದನ್ನು ಮನಸೋ ಇಚ್ಛೆ ಕುಡಿಯಿರಿ ಎಂದು ಸೂಚನೆ ಕೊಡುತ್ತಾನೆ. ಈ ಮಧ್ಯೆ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡಿನವರ ಸಂಗೀತ ಅಥವಾ ಡ್ಯಾÕ… ಟ್ರೂಪಿನ ಡ್ಯಾÕ… ಪ್ರದರ್ಶನಗೊಳ್ಳುತ್ತಿರುತ್ತದೆ. ಇವನ್ನೆಲ್ಲ ಆಸ್ವಾದಿಸುತ್ತಾ ಬಣ್ಣಬಣ್ಣದ ಬೆಳಕುಗಳ ಮಾಯಾಲೋಕದಲ್ಲಿ ಮೈಮರೆತಿರುವಾಗ ಆ ಶುಭ ಸಮಾರಂಭದ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳು ಪೂರ್ಣಗೊಂಡಿರುತ್ತವೆ. ಕೊನೆಗೆ ಊಟದ ಕರೆ ಬಂದಾಗ ಅತಿಥಿಗಳಿಗೆ ಆಯ್ಕೆಯ ಗೊಂದಲ ಮೂಡಿಸುವಷ್ಟು ಐಟಂಗಳನ್ನು ಅಲ್ಲಿ ಜೋಡಿಸಿರುತ್ತಾರೆ. ಕಲಾತ್ಮಕವಾಗಿ ಜೋಡಿಸಿದ ಹಣ್ಣು, ತರಕಾರಿಗಳ ಸಲಾಡನ್ನು ಸೆಲ್ಫ್ ಸರ್ವ್ ಮಾಡಿಕೊಂಡು ಮುಂದೆ ಹೋದರೆ ಸ್ಪೆಷಲ್ ಡಿಶ್‌ಗಳ ಸಾಲೇ ಮುಂದಿರುತ್ತದೆ. ಕುತೂಹಲಕ್ಕಾಗಿಯಾದರೂ ಎಲ್ಲವನ್ನೂ ಹಾಕಿಸಿಕೊಂಡು ತಿನ್ನಲಾರಂಭಿಸಿದರೆ ಕೊನೆಗೂ ಅರ್ಧದಷ್ಟು ಅಲ್ಲೇ ಉಳಿದಿರುತ್ತದೆ. ಅದನ್ನು ವೇ… ಬಾಕ್ಸಿಗೆ ಹಾಕಿ, ಐಸ್ ಕ್ರೀಂ, ಫ್ರುಟ್ ಸಲಾಡ್, ಸ್ವೀಟ್ ಎಲ್ಲ ತಿಂದು ಶುಭಹಾರೈಸಿ ಹೊರಡಲನುವಾದರೆ ಥ್ಯಾಂಕ್ಯೂ ಕಾರ್ಡ್ ಜತೆ ಒಂದು ಸಣ್ಣ ಸ್ವೀಟ್ ಬಾಕ…. ಲಕ್ಷಗಳು ಅಥವಾ ಕೋಟಿ ರೂಪಾಯಿ ಖರ್ಚಿನ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಮುಂದೆ ತಮ್ಮ ಮನೆಯ ಕಾರ್ಯಕ್ರಮವನ್ನೂ ಇದೇ ತರ ಮಾಡಬೇಕೆಂದು ಮನಸ್ಸಲ್ಲೇ ಸ್ಕೆಚ್ ಹಾಕಿಕೊಳ್ಳುತ್ತಾರೆ. ಅಕ್ರಮವೋ ಸಕ್ರಮವೋ, ಅಂತೂ ತಮ್ಮಲ್ಲಿರುವ ಅಪಾರ ಆಸ್ತಿಯ ಒಂದಂಶ ವ್ಯಯಿಸಿ ಶ್ರೀಮಂತರು ಮಾಡಿದ ಈ ಆಡಂಬರದ ಅನುಕರಣೆ ಮಾಡಲು ಮಧ್ಯಮ ವರ್ಗದವರು ನಿರ್ಧರಿಸುತ್ತಾರೆ. ಆಡಂಬರ ಮಾಡಲು ಹೋಗಿ ಅದರ ಖರ್ಚಿನ ಸಾಲ ತೀರಿಸಲಾಗದೇ ಅನಂತರ, ಮದುವೆಯಾಗಿ ಬಂದ ಹೆಣ್ಣಿನ ಆಭರಣ ಅಡವಿಡುವವರು, ಮಾರುವವರು ಕೂಡ ಇದ್ದಾರೆ.
ಎಲ್ಲವೂ ಪ್ರತಿಷ್ಠೆಗಾಗಿ, ನಮಗಾಗಿ ಅಲ್ಲ
ಸಣ್ಣ ಅಂಗಡಿಗಳಲ್ಲಿ ಗುಣಮಟ್ಟದ ಹಾಗೂ ತಾಜಾ ವಸ್ತುಗಳಿದ್ದರೂ ಅಲ್ಲಿ ಕೊಳ್ಳದೇ, ಮಾಲ್‌ಗಳಿಗೆ ಹೋಗಿ ಹೆಚ್ಚು ಬೆಲೆ ತೆತ್ತು ಖರೀದಿಸುವ ಪ್ರತಿಷ್ಠೆ ನಮ್ಮದು. ವಾರಕ್ಕೊಮ್ಮೆ ಹೊರಗಡೆ ಅಂದರೆ ಪ್ರಖ್ಯಾತ ಹೋಟೆಲಿಗೆ ಹೋಗಿ ಊಟ ಮಾಡುವುದು, ಪಾರ್ಕ್, ಬೀಚ್, ಸಿನೆಮಾ ಎಂದು ಸುತ್ತಾಡುವುದು ಕೂಡ ಕೇವಲ ನಮ್ಮ ಸಂತೋಷಕ್ಕಲ್ಲ; ನಾಲ್ಕು ಜನರ ಮುಂದೆ ಪ್ರದರ್ಶಿಸಲಿಕ್ಕೆ. ಕಡಿಮೆ ಹಣವಿ¨ªಾಗ ಸೈಕಲಿಗೆ ತೃಪ್ತಿ ಪಟ್ಟವನು ಅನಂತರ ಬೈಕಿಗೆ ಬದಲಾಗುತ್ತಾನೆ. ಆರ್ಥಿಕ ಸ್ಥಿತಿ ಸ್ವಲ್ಪ ಸುಧಾರಿಸಿದಾಗ ಕಾರು ಕೊಳ್ಳುವ ಆತ ಬಳಿಕ ಹಣ ಹೆಚ್ಚಾದಂತೆ ಹೆಚ್ಚು ದುಬಾರಿ ವಾಹನಗಳತ್ತ ಆಕರ್ಷಿತನಾಗುತ್ತಾನೆ. ಬಾಡಿಗೆ ಮನೆ ಅಥವಾ ಗುಡಿಸಲಿನಲ್ಲಿ ಬದುಕುವವನಿಗೆ ಸಣ್ಣದಾದ ಸ್ವಂತ ಮನೆ ಬೇಕೆಂಬ ಆಸೆಯಿರುತ್ತದೆ. ಸಣ್ಣ ಮನೆಯಿರುವವರಿಗೆ ಅತ್ಯಾಧುನಿಕ ಸೌಲಭ್ಯಗಳಿರುವ ಬಹುಮಹಡಿ ಮನೆಯ ಆಸೆ. ಯುವಜನರು ಪಬ್, ಐಸ್ ಕ್ರೀಂ ಪಾರ್ಲರ್, ರೆಸ್ಟೋರೆಂಟ್ ಎಂದು ಸುತ್ತಾಡಿ ಆಡಂಬರ ಪ್ರದರ್ಶಿಸಲು ಬಯಸುತ್ತಾರೆ. ಆಡಂಬರ ಒಂದು ಚಟವಾದಾಗ ಅದಕ್ಕೆ ಹಣ ಹೊಂದಿಸುವುದು ಸವಾಲೆನಿಸುತ್ತದೆ. ಶೋಕಿ ಜೀವನಕ್ಕಾಗಿ ದರೋಡೆಗೆ ಇಳಿದ ದಂಪತಿ, ಆಡಂಬರಕ್ಕಾಗಿ ಕಳ್ಳತನದ ಹಾದಿ ಹಿಡಿದವರು ಇತ್ಯಾದಿ ಶೀರ್ಷಿಕೆಯ ಸುದ್ದಿಗಳು ಈಗೀಗ ಹೆಚ್ಚುತ್ತಿವೆ. ಕೊಲೆ, ದರೋಡೆ, ಮೋಸ, ವಂಚನೆ, ಲಂಚಗುಳಿತನ ಈ ಎಲ್ಲವುಗಳ ಹಿಂದೆಯೂ ಪ್ರೇರಕಶಕ್ತಿಯಾಗಿರುವುದು ಆಡಂಬರದ ಮೋಹ.
ಆಡಂಬರದ ಹಿಂದೆ ಬಿದ್ದು
ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮುಂತಾದ ಹೈಟೆಕ್ ಸಿಟಿಗಳಲ್ಲಿ ಆಡಂಬರದ ಜೀವನಕ್ಕೆ ಹಣ ಹೊಂದಿಸಲಿಕ್ಕಾಗಿ ಯುವತಿಯರು ಒಂದೆರಡು ತಿಂಗಳಿಗೊಮ್ಮೆ ಹಲವು ಸಾವಿರ ರೂಪಾಯಿಗಳಿಗೆ ತಮ್ಮ ಅಂಡಾಣುವನ್ನು ಮಾರುತ್ತಿದ್ದಾರೆ ಎಂಬ ವರದಿಯನ್ನು ಕೆಲವು ಸಮಯದ ಹಿಂದೆ ಅನ್ಯಭಾಷಾ ಪತ್ರಿಕೆಯೊಂದರಲ್ಲಿ ಓದಿ¨ªೆ. ಹಾಗೆಯೇ ಯುವಕರು ಹಾಗೂ ಯುವತಿಯರು ರಹಸ್ಯವಾಗಿ ಹೈಟೆಕ್ ವೇಶ್ಯೆಯರಾಗಿ ದುಡಿದು ಹಣ ಸಂಪಾದಿಸುತ್ತಿದ್ದಾರೆ ಎಂದೂ ಓದಿ¨ªೆ. ಅಸಹ್ಯ ಹಾಗೂ ಭಯಾನಕವಾದ, ಜಿಗುಪ್ಸೆ ಹುಟ್ಟಿಸುವ ಅದೆಷ್ಟೋ ಹಣ ಸಂಪಾದನೆಯ ಮಾರ್ಗಗಳನ್ನು ಜನ ಹುಡುಕುತ್ತಿದ್ದಾರೆ. ಆಧುನಿಕತೆ ತೀವ್ರಗೊಳ್ಳುತ್ತಿದ್ದಂತೆ ಜನರ ಆಸೆಗಳ ತೀವ್ರತೆಯೂ ಹೆಚ್ಚುತ್ತಿದೆ. ನಮ್ಮ ಆರೋಗ್ಯ, ಸಂತೋಷ, ಸಮಾಧಾನ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಎಲ್ಲವನ್ನೂ ಮರೆತು ನಾವು ಶ್ರೀಮಂತರು ಎಂದು ಬಿಂಬಿಸಲು ಬಯಸುತ್ತಿದ್ದೇವೆ. ನಾವು ಮಾಡುತ್ತಿರುವುದೆಲ್ಲ ನಮಗಾಗಿ ಅಲ್ಲ, ನಮ್ಮ ಸ್ಥಾನಮಾನ ಹಾಗೂ ಘನತೆಗಾಗಿ. ಬದುಕು ನಮ್ಮದು, ದುಡಿಮೆ ನಮ್ಮದು. ಆಡಂಬರದ ಹಿಂದೆ ಬಿದ್ದು ಸಾಲದ ಕೂಪದಲ್ಲಿ ಬಿದ್ದು ಒದ್ದಾಡುವಾಗ ಯಾರೂ ನಮ್ಮ ನೆರವಿಗೆ ಬರುವುದಿಲ್ಲ. ಆಗ ಒಣಪ್ರತಿಷ್ಠೆಯಿಂದ ಎತ್ತಿಹಿಡಿದ ನಮ್ಮ ತಲೆ, ಬಹುವಾಗಿ ತಗ್ಗಿಸಬೇಕಾಗುತ್ತದೆ. ನಮ್ಮ ಈ ಇಗೊ ಈ ರೀತಿ ಮುಂದುವರಿಯುತ್ತಿದ್ದರೆ ದುಂದುವೆಚ್ಚಗಳು ಎಂದೂ ಕಡಿಮೆಯಾಗುವುದಿಲ್ಲ. ಹಣದ ಅಪವ್ಯಯ, ವಸ್ತುಗಳ ಅಪವ್ಯಯ, ಪರಿಸರ ಮಾಲಿನ್ಯ ಇವೆಲ್ಲ ಪೆಡಂಭೂತವಾಗಿ ಬೆಳೆಯುತ್ತಲೇ ಹೋಗುತ್ತವೆ. ಇನ್ನೊಬ್ಬರ ಕಣ್ಣುಕುಕ್ಕಿಸಲು ಏನೇನೋ ಕಸರತ್ತು ಮಾಡುವ ಬದಲು, ನಮ್ಮ ಸಾಮರ್ಥ್ಯಕ್ಕನುಗುಣವಾಗಿ, ನಮ್ಮ ಆತ್ಮಸಾಕ್ಷಿಗೆ ಮೋಸ ಮಾಡದೇ ಬದುಕುವುದು ಒಳಿತಲ್ಲವೇ?
ಜೆಸ್ಸಿ ಪಿ. ವಿ., ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.