ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ!

ಇಂದು ದತ್ತಾತ್ರೇಯ ಜಯಂತಿ

Team Udayavani, Dec 26, 2023, 6:00 AM IST

1-saddasd

ಎಲ್ಲ ಅಪರಾಧಗಳನ್ನು ನಾಶ ಮಾಡುವವನೂ, ಎಲ್ಲ ಪಾಪಗಳನ್ನು ಪರಿಹರಿಸುವ ದೇವರುಗಳ ದೇವರಾದ ಗುರು ದತ್ತಾತ್ರೇಯನಿಗೆ ನಮಸ್ಕಾರ ಎಂದು ಪ್ರಾರ್ಥನಾ ಸ್ತೋತ್ರ- ಸರ್ವ ಅಪರಾಧ ನಾಶಾಯ ಸರ್ವ ಪಾಪ ಹರಾಯಚ|ದೇವ ದೇವಾಯ ದೇವಾಯ ಶ್ರೀ ದತ್ತಾತ್ರೇಯ ನಮೋಸ್ತುತೆ||

ದತ್ತಾತ್ರೇಯ ಅಥವಾ ಶ್ರೀದತ್ತಾ ತ್ರಿಮೂರ್ತಿಗಳ ಅಂಶವುಳ್ಳವನು. ದತ್ತ ಅಂದರೆ ನೀಡಲಾದ ಅತ್ರೇಯ – ತಂದೆ ಅತ್ರಿ ಮಹರ್ಷಿಗಳ ಉಲ್ಲೇಖ. ಅದ್ದರಿಂದ ದತ್ತಾತ್ರೇಯ. ನಾಥ ಪಂಥದನ್ವಯ ದತ್ತಾತ್ರೇಯ ಶಿವನ ಅವತಾರ. ಆದಿಗುರು. ಆದಿನಾಥ ಸಂಪ್ರದಾಯದವರಿಗೆ ಮೊದಲ ಗುರು. ದತ್ತಾತ್ರೇಯನು ಮಾರ್ಗಶಿರ ಮಾಸದಲ್ಲಿ ಜನ್ಮವೆತ್ತಿದನು. ಅವನು ಹರಿಹರಾತ್ಮಕಂ ವಂದೇ. ಅವನು ತ್ರೆಲೋಕ್ಯ ಲೋಕ ವಂದಿತನು. ಅವನು ನಿಷ್ಕಲ ನಿರ್ಗುಣ ರೂಪನು. ಭೂತಗಳ ಈಶನು. ಬ್ರಹ್ಮಲೋಕದ ಈಶನು. ಶಂಖಚಕ್ರ ಗಧಾದರನು. ಪಾಣಿಪಾತ್ರಧರನು. ಅವನು ನಿರ್ಮಲ ನೀಲವರ್ಣದವನು. ಸುಲೋಚನ. ವಿಶಾಲಾಕ್ಷನು. ಕೃಪಾ ನಿಧಿ. ಸರ್ವರೋಗಹರನು. ಕ್ಷರಾಕ್ಷರ ಸ್ವರೂಪನು. ಅವನು ಶತ್ರುನಾಶಕರನು. ಜ್ಞಾನವಿಜ್ಞಾನದಾಯಕನು. ಸರ್ವಪಾಪ ಗಳನ್ನು ಶಮನ ಮಾಡುವವನು ದತ್ತಾತ್ರೇಯನು. ಆದ್ದರಿಂದ ಅವನು ತ್ತೈಲೋಕ ವಂದಿತನು. ಹೀಗೆ ದತ್ತಾತ್ರೇಯ ಕುರಿತಾದ ಅನೇಕ ಶ್ಲೋಕಗಳಲ್ಲಿ ಅವನ ಗುಣಸ್ವರೂ ವಿಶೇಷಣಗಳು ಸ್ತುತಿಸಲ್ಪಟ್ಟಿವೆ.

ಅತ್ರಿ ಮಹರ್ಷಿ ಅನಸೂಯರಲ್ಲಿ ಜನಿಸಿದ ದತ್ತಾ ತ್ರೇಯ, ವರಸಿದ್ಧಿಯಿಂದ ಅವತರಿಸಿದನು. ತ್ರಿಮೂರ್ತಿ ಗಳ ಅಂಶವನ್ನು ಹೊತ್ತ ಪುತ್ರನು ತನಗೆ ಕರುಣಿಸುವಂತೆ ಅನಸೂಯ ಘೋರ ತಪಸ್ಸನ್ನಾಚರಿಸಿದ ಫ‌ಲವೇ ದತ್ತಾತ್ರೇಯ. ಅವಳ ತಪೋ ಪರೀಕ್ಷೆ ಮಾಡಲು ಸರಸ್ವತಿ, ಲಕ್ಷ್ಮೀ, ಪಾರ್ವತಿಯರು ತಮ್ಮ ಪತಿಯಂದಿರಾದ ತ್ರಿಮೂರ್ತಿಗಳನ್ನು ಕಳಿಸಿದರಂತೆ. ಇದನ್ನರಿತ ಅನಸೂಯಳು ತನ್ನ ಮಂತ್ರಸಿದ್ಧಿಯಿದ ತ್ರಿಮೂರ್ತಿಗಳು ಮೂರು ಮುದ್ದು ಮಗುಗಳಾಗಿ ರೂಪಾಂತರಗೊಡು ಪ್ರಕಟಗೊಂಡರಂತೆ. ಆ ಸಮಯದಲ್ಲಿ ಕುಟೀರಕ್ಕೆ ಆಗಮಿಸಿದ ಅತ್ರಿ ಮುನಿ ಮೂರು ಮಕ್ಕಳಿಗೆ ಒಂದು ದೇಹ ಮೂರು ಮುಖ ಆರು ಕರಗಳುಳ್ಳ ಮಗುವನ್ನಾಗಿ ಪರಿವರ್ತಿಸಿದನು. ಅವನೇ ದತ್ತಾತ್ರೇಯ ಸ್ವರೂಪನಾದನು.

ಅದ್ವೆ„ತ ವೇದಾಂತದ ಮೇರು ಕೃತಿ ತ್ರಿಪುರ ರಹಸ್ಯವನ್ನು ರಚಿಸಿ ಪರಶುರಾಮರಿಗೆ ನೀಡಿದವನು ದತ್ತಾತ್ರೇಯ ಎಂದು ನಂಬಿಕೆ. ಅಥರ್ವವೇದದಲ್ಲಿ ಬರುವ ದತ್ತಾತ್ರೇಯ ಉಪನಿಷದ್‌ ಬಹಳ ಪ್ರಸಿದ್ಧ. ಅದರಲ್ಲಿ ದತ್ತಾತ್ರೇಯನು ತನ್ನ ಅನುಯಾಯಿಗಳು, ಭಕ್ತರಿಗೆ ಮೋಕ್ಷ ಕರುಣಿಸುವ ಸಲುವಾಗಿ ಮಗು, ಹುಚ್ಚ, ರಾಕ್ಷಸನ ರೂಪವನ್ನು ಧರಿಸಿದನು ಎಂಬ ವರ್ಣನಾ ಶ್ಲೋಕಗಳಿವೆ. ಪ್ರಾಚೀನ ತಂತ್ರ ಪಂಥದಲ್ಲಿ ದತ್ತಾತ್ರೇಯನಿಗೆ ಒಂದೇ ತಲೆ ಎಂದು ಉಲ್ಲೇಖ. ನಾಥ ಸಂಪ್ರದಾಯದಲ್ಲಿ ದತ್ತಾತ್ರೇಯನ ಆರಾಧನೆ ಯನ್ನು ಆರಂಭಿಸಿದವನು ಗೋರಕ್ಷನಾಥನು. ಕಳೆದ 900 ವರ್ಷಗಳಿಂದ ಮೂರು ಮುಖಗಳ ದತ್ತಾತ್ರೇಯನನ್ನು ಪೂಜಿಸುವ ಸಂಪ್ರದಾಯ ಬಂದಿದೆ. ಕೆಲವು ಉಲ್ಲೇಖ ಗಳಂತೆ ದತ್ತಾತ್ರೇಯ ಕಾಶ್ಮೀರದ ಕಾಡಿನಲ್ಲಿ ಅಮರನಾಥದ ಸನಿಹ ಜನಿಸಿದ ಎಂದಿದೆ. ಪರಮ ಪದವನ್ನು ಅರಸುತ್ತಾ ಎಳೆಯ ದತ್ತಾತ್ರೇಯ ಮನೆಯನ್ನು ತ್ಯಜಿಸಿ, ಬೀಡಾಡಿ ಯಂತೆ, ಅಲೆಮಾರಿಯಾಗಿದ್ದುಕೊಂಡು ಗುಜರಾತ್‌, ಮಹಾರಾಷ್ಟ್ರ, ಉ.ಕರ್ನಾಟಕ ಆಂಧ್ರದ ಭಾಗಗಳಲ್ಲಿ ಸಂಚರಿಸಿದ್ದನಂತೆ. ಕರ್ನಾಟಕದ ಗಾಣಗಾಪುರ ದತ್ತಾತ್ರೇ ಯ ಕ್ಷೇತ್ರ ಅತೀ ಪ್ರಸಿದ್ಧ. ಅಲ್ಲೇ ದತ್ತಾತ್ರೇಯನಿಗೆ ಜ್ಞಾನೋ ದಯವಾಯಿತು ಎಂಬ ನಂಬಿಕೆ.

ದತ್ತಾತ್ರೇಯ ರೂಪದರ್ಶನ
ದತ್ತಾತ್ರೇಯ ಶಿವನ ಅವತಾರ ಎಂದು ಶೈವರು, ಬಳಿಕ ವೈಷ್ಣವರು ಆತ ವಿಷ್ಣುವಿನ ಅವತಾರ ಎಂದು ಸಮರ್ಥಿಸಿಕೊಂಡರು. ಶಿವ ವಿಷ್ಣು ಅಂತಿಮವಾಗಿ ಪರಬ್ರಹ್ಮಸ್ವರೂಪವೇ. ಆದ್ದರಿಂದ ದತ್ತಾತ್ರೇಯ ಇಂದಿಗೂ ತ್ರಿಮೂರ್ತಿಸ್ವರೂಪಿಯಾಗಿ ಪೂಜಿಸಲ್ಪಡುತ್ತಾನೆ. ದತ್ತಾ ತ್ರೇಯನನ್ನು ವಿವಿಧ ರೂಪಗಳಲ್ಲಿ ಚಿತ್ರಿಸಲಾಗಿದೆ. ಮೂರು ಮುಖ, ಮಾಲೆ, ಕಮಂಡಲು ಧರಿಸಿರುವ ಕೆಳಗಿನ ಎರಡು ಕೈ, ಡಮರು, ತ್ರಿಶೂಲ ಧರಿಸಿರುವ ಮಧ್ಯದ ಎರಡು ಕೈ, ಶಂಖ, ಚಕ್ರ ಧರಿಸಿರುವ ಮೇಲ್ಗಡೆಯ ಎರಡು ಕೈಗಳು, ಹೀಗೆ ಆರು ಕೈಗಳು. ನಾಲ್ಕು ಶ್ವಾನಗಳು ಮತ್ತು ಒಂದು ಗೋವನ್ನು ಹೊಂದಿರುವ ರೂಪ ಸಾಮಾನ್ಯವಾಗಿದೆ. ಮೂರು ಮುಖಗಳು ತ್ರಿಮೂರ್ತಿಗಳು, ಮೂರು ಗುಣಗಳು, ಸತ್ವರಜೋತಮೋಗುಣಗಳ ಸಂಕೇತ. ಪರಮಗುರುವಿನಲ್ಲಿ ತ್ರಿಗುಣಗಳಿರಬೇಕು. ಆದ್ದರಿಂದ ದತ್ತಾತ್ರೇಯ ಪರಮ ಗುರು ಎಂದೇ ಪೂಜನೀಯ. ಶಂಖ, ಚಕ್ರ, ಗಧಾ, ತ್ರಿಶೂಲ, ಕಮಂಡಲು, ಭಿಕ್ಷಾಪಾತ್ರೆಯು, ನಾದ, ಕಾಲಚಕ್ರ, ಅಹಂಕಾರವನ್ನು ತ್ಯಜಿಸುವುದು, ಇಡಾ ಪಿಂಗಳ, ಸುಶುಮ್ನ, ಜೀವವನ್ನು ಭರಿಸುವುದು, ಅಹಂನ್ನು ಭಿಕ್ಷೆ ನೀಡುವುದು ಇತ್ಯಾದಿ ವಿವಿಧ ಸಂಕೇತಗಳು.

ಶ್ರೀ ದತ್ತಾತ್ರೇಯ ಷೋಡಶಾವತಾರ ಚರಿತೆಯಲ್ಲಿ ದತ್ತಾತ್ರೇಯನ 16 ಅವತಾರಗಳನ್ನು ಹೇಳುತ್ತಾರೆ. ಯೋಗಿರಾಜ, ಅತ್ರಿವರದ, ದತ್ತಾತ್ರೇಯ, ಕಾಲಾಗ್ನಿ ಶಮನ, ಯೋಗಿಜನವಲ್ಲಭ, ಲೀಲಾವಿಶ್ವಂಭರ, ಸಿದ್ಧರಾಜ, ಧ್ಯಾನಸಾಗರ, ವಿಶ್ವಂಭರವಧೂತ, ಮಾಯಾಮುಕ್ತ ವಧೂತ, ಮಾಯಾಯುಕ್ತವಧೂತ, ಆದಿಗುರು, ಶಿವಗುರು ದತ್ತಾತ್ರೇಯ, ದೇವದೇವೇಶ್ವರ, ದಿಗಂಬರ, ಶ್ರೀಕೃಷ್ಣ ಶ್ಯಾಮ ಕಮಲನಯನ.
ಅವಧೂತಗೀತೆ ದತ್ತಾತ್ರೇಯ ವಿರಚಿತವಾದ ಪ್ರಸಿದ್ಧ ಗ್ರಂಥ. ಅದನ್ನು ದತ್ತಾತ್ರೇಯ ಗೀತೆ, ದತ್ತಗೀತಾ ಯೋಗ ಶಾಸ್ತ ಮತ್ತು ವೇದಾಂತಸಾರ ಎಂದೂ ಕರೆಯುವುದಿದೆ. ಆಧ್ಯಾತ್ಮಿಕವಾಗಿ ಮುಕ್ತ ಅಥವಾ ವಿಮೋಚನೆಗೊಂಡ ವ್ಯಕ್ತಿಯ ಸ್ವಭಾವ ಮತ್ತು ಸ್ಥಿತಿಯನ್ನು ತಿಳಿಸುತ್ತದೆ. ಅ.ಗೀತೆಯು ಅವಧೂತರ ಆಧ್ಯಾತ್ಮಿಕ ಪ್ರಯಾಣವನ್ನು ವಿವರಿಸುತ್ತಾ, ಸನ್ಯಾಸಿಗೆ 24 ಗುರುಗಳು ಸಹಾಯ ಮಾಡಿದರು ಎಂದು ಹೇಳುತ್ತದೆ.

ಭಾಗವತದಲ್ಲಿ ದತ್ತಾತ್ರೇಯನ ಉಲ್ಲೇಖ:
ಭಾಗವತ ಏಕಾದಶಸ್ಕಂದದಲ್ಲಿ ದತ್ತಾತ್ರೇಯನ ಕುರಿತಾಗಿ- ­
ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್‌|
ಅವಧೂತಸ್ಯ ಸಂವಾದಂ ಯದೋರಮಿಸತೇಜಸ||
ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತಾರೆ. ಆ ಇತಿಹಾಸವು ಪರಮ ತೇಜಸ್ವೀ ಅವಧೂತ ದತ್ತಾತ್ರೇಯ ಮತ್ತು ಯದುರಾಜನ ಸಂವಾದ ರೂಪದಲ್ಲಿದೆ.
ಅವಧೂತಂ ದ್ವಿಜಂ ಕಂಚಿಚ್ಚರಂತಮಕುತೋಭಯಮ್‌|
ಕವಿಂ ನಿರೀಕ್ಷ್ಯ ತರುಣಂ ಯದುಃ ಪಪ್ರತ್ಛ ಧರ್ಮವಿತ್‌||
ಒಮ್ಮೆ ಧರ್ಮದ ಮರ್ಮಜ್ಞನಾದ ಯದುರಾಜನು ಓರ್ವ ತ್ರಿಕಾಲದರ್ಶಿ ತರುಣ ಅವಧೂತ ಬ್ರಾಹ್ಮಣನು ನಿರ್ಭಯನಾಗಿ ಸಂಚರಿಸುವುದನ್ನು ನೋಡಿದನು. ಅವನು ಅವಧೂತನಲ್ಲಿ ಪ್ರಶ್ನಿಸಿದನು.
ಯದುರಾಜ ದತ್ತಾತ್ರೇಯ ಸಂವಾದರೂಪದಲ್ಲಿದೆ ­ ದತ್ತಾತ್ರೇಯರೂಪೀ ಬ್ರಾಹ್ಮಣನು, ನಾನು ನನ್ನ ಬುದ್ಧಿ ಯಿಂದ ಹಲವಾರು ಗುರುಗಳನ್ನು ಆಶ್ರಯಿಸಿದ್ದೇನೆ. ಆ ನನ್ನ ಗುರುಗಳು – ಭೂಮಿ, ವಾಯು, ಆಕಾಶ, ಜಲ, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಟಾವು, ಸಮುದ್ರ, ಪತಂಗ, ದುಂಬಿ, ಜೇನುನೊಣ, ಆನೆ, ಜೇನು ತೆಗೆಯುವವನು, ಜಿಂಕೆ, ಮೀನು, ಪಿಂಗಳವೇಶ್ಯೆ, ಕುರರಪಕ್ಷಿ, ಮಗು, ಕುಮಾರೀ, ಬಾಣವನ್ನು ತಯಾರಿಸುವವನು, ಸರ್ಪ, ಜೇಡಹುಳ, ಭೃಂಗ ಕೀಟ ಇತ್ಯಾದಿ 24 ಗುರುಗಳು. ಆ 24 ಗುರುಗಳಿಂದ ಕಲಿತ ವಿದ್ಯೆಯನ್ನು ತಿಳಿಸುತ್ತೇನೆ ಎಂದು ದತ್ತಾತ್ರೇಯ ವಿವರಿಸುತ್ತಾ ಕೊನೆಗೆ ಈ ವಿಧವಾಗಿ ನನಗೆ ವೈರಾಗ್ಯ ಉಂಟಾಯಿತು, ಅಂತಕರಣದಲ್ಲಿ ವಿಜ್ಞಾನದ ಪ್ರಕಾಶ ಹರಡಿಕೊಂಡಿತು. ಈಗ ನಾನು ಅಹಂಕಾರವನ್ನು ಬಿಟ್ಟು ಈ ಭೂತಲದಲ್ಲಿ ಸ್ವತ್ಛಂದವಾಗಿ ವಿಹರಿಸುತ್ತೇನೆ. ಒಬ್ಬನೇ ಗುರುವಿನಿಂದ ಪಡೆದ ಜ್ಞಾನ ಅಪೂರ್ಣ. ಆಳವಾದ ಬುದ್ಧಿಯುಳ್ಳ ಅವಧೂತ ದತ್ತಾತ್ರೇಯರು ಎಂದೇ ಭಗವಂತ ಉದ್ಧವನಿಗೆ ತಿಳಿಸುತ್ತಾನೆ.

ಜಲಂಚಾರು ರಘುಪತಿ ತಂತ್ರಿ, ಉಡುಪಿ

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.