ಇಂದು ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ

ಮಾದಕ ಪದಾರ್ಥಗಳ ದಾಸರಾಗದಿರಲಿ ಯುವಜನತೆ

Team Udayavani, Jun 26, 2023, 7:46 AM IST

mdma

ಒಂದು ದೇಶದ ಅಭಿವೃದ್ಧಿಯನ್ನು ನಿರ್ಧರಿಸುವಲ್ಲಿ ಹಾಗೂ ದೇಶದ ಅಭಿವೃದ್ಧಿ ವ್ಯವಸ್ಥೆಯ ಪ್ರಕ್ರಿಯೆಯಲ್ಲಿ ಅಲ್ಲಿನ ಮಾನವ ಸಂಪನ್ಮೂಲ ಕೂಡ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಇದ್ದಾರೆ. ಇದು ದೇಶದ ಅಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿದ್ದು ಯುವಜನತೆ ಹಾದಿತಪ್ಪದಂತೆ ನೋಡಿಕೊಳ್ಳಬೇಕಿದೆ.

ಕಳೆದೊಂದು ದಶಕದಿಂದೀಚೆಗೆ ದೇಶ ಅಭಿವೃದ್ಧಿ ಪಥದಲ್ಲಿ ದಾಪುಗಾಲಿ ಡುತ್ತಿದೆ. ಇದೇ ವೇಗದಲ್ಲಿ ಸಾಗಿದ್ದೇ ಆದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣನಾಗಿ ಹೊರಹೊಮ್ಮುವು ದರಲ್ಲಿ ಅನುಮಾನವೇನಿಲ್ಲ. ಸುಸ್ಥಿರ ಸರಕಾರ, ಸರಕಾರದ ನೀತಿಗಳು, ಅಭಿವೃದ್ಧಿ ಯೋಜನೆಗಳಿಂದಾಗಿ ಇವೆಲ್ಲವೂ ಸಾಧ್ಯ ವಾಗಿದೆ.

ಅದರಲ್ಲೂ ಮುಖ್ಯವಾಗಿ ದೇಶದ ಯುವ ಸಂಪ ನ್ಮೂಲವನ್ನು ಸಮರ್ಥವಾಗಿ ಕ್ರೋಡೀಕರಿಸಿ ಅದನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿರುವುದರಿಂದ ಇವೆಲ್ಲ ವನ್ನೂ ಸಾಧ್ಯವಾಗಿಸಿದೆ. ಸಹಜವಾಗಿಯೇ ದೇಶದ ಬೆಳವಣಿಗೆಯ ನಾಗಾಲೋಟ ಇಡೀ ಪ್ರಪಂಚವೇ ಭಾರತದತ್ತ ಹಿಂದಿರುಗಿ ನೋಡುವಂತೆ ಮಾಡಿದೆ. ಆದರೆ ದೇಶದ ಇಂದಿನ ವಾಸ್ತವ ಚಿತ್ರಣವನ್ನು ಬಹಳ ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ದೇಶದ ಯುವಜನತೆ ಮಾದಕ ವ್ಯಸನ, ಮದ್ಯಪಾನದ ಕಡೆ ಮುಖ ಮಾಡುತ್ತಿರುವುದು ಬಹಳ ಕಳವಳಕಾರಿ ಸಂಗತಿ, ಜತೆಗೆ ಅಭಿವೃದ್ಧಿಯತ್ತ ದೇಶದ ಧಾವಂತಕ್ಕೆ ಎಲ್ಲೋ ಒಂದು ಕಡೆ ಬಹುದೊಡ್ಡ ತಡೆಯಾಗಿ ಪರಿಣಮಿಸು ತ್ತಿರುವುದಂತೂ ಸತ್ಯ.

ನಮ್ಮ ದೇಶಕ್ಕೆ ಹೆಚ್ಚು ಸೈನಿಕರನ್ನು ಧಾರೆ ಎರೆಯುವ, ಕೃಷಿ ವ್ಯವಸ್ಥೆಗೆ ಹೇರಳವಾಗಿ ಕೊಡುಗೆ ನೀಡುವ, ಗೋಧಿಯ ಕಣಜ, ಪಂಚ ನದಿಗಳ ನಾಡು ಎಂಬ ಖ್ಯಾತಿಯ ಪಂಜಾಬ್‌, ದೇಶದಲ್ಲಿ ಅತೀ ಹೆಚ್ಚು ( ಸಮೀಕ್ಷೆಯ ಪ್ರಕಾರ ಶೇ.80ರಷ್ಟು )ಮಾದಕ ವ್ಯಸನಿಗಳನ್ನು ಹೊಂದಿದ ರಾಜ್ಯ ಎಂಬುದು ಮತ್ತೂಂದು ಆಯಾಮದ ದುರಂತ ಕಥೆ. ಒಂದು ಕಡೆ ಭಾರತ, ನೆರೆಯ ದೇಶಗಳಾದ ಪಾಕಿಸ್ಥಾನ, ಚೀನದೊಂದಿಗೆ ಗಡಿ ವಿವಾದ ಹೊಂದಿದ್ದು, ಈ ದೇಶಗಳು ಪದೇಪದೆ ಸುಖಾಸುಮ್ಮನೆ ಇನ್ನಿಲ್ಲದ ತಕರಾರುಗಳನ್ನು ತೆಗೆಯುವ ಮೂಲಕ ಭಾರತದ ಪಾಲಿಗೆ ಹೊರೆಯಾಗಿ ಪರಿಣಮಿಸಿವೆ. ಇದೇ ವೇಳೆ ಮದ್ಯ ಮತ್ತು ಮಾದಕವಸ್ತುಗಳ ಅಕ್ರಮ ಸಾಗಾಟ ಹಾಗೂ ಜಾಲಗಳು, ಇಲ್ಲಿ ಸದ್ದಿಲ್ಲದೆ ಕಾರ್ಯಾಚರಿಸುತ್ತಿದ್ದು ಇಡೀ ದೇಶದ ಯುವಜನತೆಯನ್ನು ಮಾದಕ ವ್ಯಸನಿಗಳಾಗುವಂತೆ ಮಾಡುವ ಮೂಲಕ ಪರೋಕ್ಷ ದಾಳಿ ಮಾಡುತ್ತಿರುವುದನ್ನು ನಾವು ದೇಶದ ಹಿತದೃಷ್ಟಿಯಿಂದ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.

ಇಂದು ಸಮಾಜದಲ್ಲಿ ನಡೆಯುವ ಅದೆಷ್ಟೋ ಸಮಾಜ ಘಾತಕ ಕಾರ್ಯಗಳ ಹಿಂದೆ ಮಾದಕ ಮತ್ತು ಮದ್ಯವ್ಯಸನದ ಕರಿನೆರಳು ಇರುವುದನ್ನು ಕಾಣುತ್ತಲೇ ಬಂದಿದ್ದೇವೆ. ಈ ವ್ಯಸನ ಗಳ ಕಾರಣದಿಂದಾಗಿ ಜನರು ತಮ್ಮ ಮಾನಸಿಕ ಆರೋಗ್ಯದ ಸ್ಥಿಮಿತವನ್ನು ಕಳೆದುಕೊಂಡು, ಸರಿ-ತಪ್ಪುಗಳ ವಿವೇಚನೆಯೇ ಇಲ್ಲದೇ ದುಷ್ಕೃತ್ಯದಲ್ಲಿ ಶಾಮೀಲಾಗಿ ತಮ್ಮ ಜೀವನವನ್ನೇ ಹಾಳುಗೆಡವಿಕೊಳ್ಳುತ್ತಿರುವುದು ಮಾತ್ರವಲ್ಲದೆ ತಮ್ಮ ಮತ್ತು ಸಂತ್ರಸ್ತ ಕುಟುಂಬಗಳನ್ನು ಶಾಶ್ವತವಾಗಿ ನೋವಿನ ಮಡುವಿನಲ್ಲಿ ಮುಳಗುವಂತೆ ಮಾಡುತ್ತಾರೆ.

ಮಾದಕವ್ಯಸನಿ ಯುವಜನರನ್ನು ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ, ಮುಂದಾಲೋಚನೆಯ ಕೊರತೆ, ದಿಢೀರ್‌ ತೀರ್ಮಾನಗಳನ್ನು ಕೈಗೊಳ್ಳುವಂಥ ಸಮಸ್ಯೆಗಳು ಕಾಡುತ್ತಿವೆ. ಅಷ್ಟು ಮಾತ್ರವಲ್ಲದೆ ಮಾದಕ ಪದಾರ್ಥಗಳ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು, ಅಪರಾಧ ಕೃತ್ಯಗಳು ಸಂಭವಿಸುತ್ತವೆ. ಕ್ಷಣಿಕ ಸುಖಕ್ಕಾಗಿ ಮಾದಕ ಪದಾರ್ಥ ಗಳ ಸೇವನೆಯ ದಾಸರಾಗುವ ಮೂಲಕ ತಮ್ಮ ವೈಯಕ್ತಿಕ ಬದುಕನ್ನು ಹಾಳುಮಾಡಿಕೊಳ್ಳುವುದೇ ಅಲ್ಲದೆ ತಮ್ಮನ್ನು ನಂಬಿಕೊಂಡು ಬದುಕುತ್ತಿರುವವರ ಪಾಲಿಗೆ ಕಂಟಕಪ್ರಾಯ ರಾಗಿ ಪರಿಣಮಿಸುತ್ತಾರೆ.

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಪ್ರತಿಯೋರ್ವರು ಸದಾ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು, ಪ್ರಕೃತಿಯ ವಿರುದ್ಧ ದಿಕ್ಕಿನಲ್ಲಿ ಸಾಗುವ ಸ್ಪರ್ಧಾತ್ಮಕ ಸನ್ನಿವೇಶಗಳು, ಹೊಂದಾಣಿಕೆಯ ಕೊರತೆಗಳು, ಕೌಟುಂಬಿಕ ವ್ಯವಸ್ಥೆಯ ಸಮಸ್ಯೆಗಳು, ಹಿರಿಯರ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರುವ ಪ್ರಸಂಗಗಳು, ಅತಿಯಾದ ನಿರೀಕ್ಷೆಗಳು, ಮಾನವೀಯ ಮೌಲ್ಯದ ತಿಳಿವಳಿಕೆಯ ಕೊರತೆ, ಕ್ಷಣದಲ್ಲಿ ಫ‌ಲಿತಾಂಶ ಸಿಗಬೇಕೆಂಬ ದುರಾಸೆಯ ಹಂಬಲ, ಪರಿಶುದ್ಧತೆ ಕಳೆದುಕೊಂಡ ಸ್ನೇಹ, ಬಾಂಧವ್ಯ…ಹೀಗೆ ವಿವಿಧ ಕಾರಣಗಳಿಂದಾಗಿ ಜನರು ಮದ್ಯ ಮತ್ತು ಮಾದಕವಸ್ತುಗಳ ದಾಸರಾಗುತ್ತಿದ್ದಾರೆ. ಇನ್ನು ನಗರದಿಂದ ಬಲು ದೂರ ಇದ್ದು ಮುಗ್ಧತೆಯ ತೊಟ್ಟಿಲು ಎನಿಸಿಕೊಂಡ ಹಳ್ಳಿಗಳಿಗೂ ಕೂಡ ಮಾದಕವಸ್ತುಗಳು ತನ್ನ ಅಜಾನುಬಾಹುಗಳನ್ನು ಚಾಚಿರುವುದು ಅಲ್ಲಿನ ಶಾಂತ ವಾತಾವರಣವನ್ನು ಕದಡಿದೆ.

ಆಚರಣೆ, ಸಂಭ್ರಮ, ಖುಷಿ, ಮೋಜು-ಮಸ್ತಿಗಳ ಹೆಸರಿನಲ್ಲಿ ನಡೆಯುವ ಮದ್ಯ, ಮಾದಕ ಪದಾರ್ಥಗಳ ಸೇವನೆ ಪರೋಕ್ಷವಾಗಿ ನಮ್ಮ ಸಮಾಜ ಮತ್ತು ದೇಶವೆಂಬ ಕುಟುಂಬದ ಯುವ ಸದಸ್ಯರ ಮೇಲೆ ನಾವೇ ದಾಳಿ ಮಾಡುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನವೂ ನಮ್ಮಲ್ಲಿರದಿರುವುದು ವಿಪರ್ಯಾಸವೇ ಸರಿ. ಇಂದು ಸಮಾಜದಲ್ಲಿ ನಡೆಯುವ ಕೆಲವು ಪ್ರತಿಭಟನೆ, ಹೋರಾಟ, ಚುನಾವಣ ಪ್ರಕ್ರಿಯೆಗಳಲ್ಲೂ ಮದ್ಯ, ಮಾದಕ ವಸ್ತುಗಳ ಪೂರೈಕೆ ಸರಾಗವಾಗಿ ನಡೆಯುತ್ತಿದೆ. ಇವೆಲ್ಲವನ್ನು ಗಮನಿಸಿದಾಗ ಮದ್ಯ ಮತ್ತು ಮಾದಕ ವ್ಯಸನದ ವಿರುದ್ಧದ ಜಾಗೃತಿ, ಹೋರಾಟಗಳೆಲ್ಲವೂ ಕೇವಲ ನೆಪಮಾತ್ರಕ್ಕೆ ಎಂಬಂತೆ ಭಾಸವಾಗುತ್ತಿದೆ. ಈ ವಿಚಾರದಲ್ಲಿ ಆಳುವವರಿಂದ ಹಿಡಿದು ಜನಸಾಮಾನ್ಯನ ವರೆಗೆ ಪ್ರತಿಯೋರ್ವರು ಸ್ವವಿಮರ್ಶೆ ಮಾಡಿಕೊಳ್ಳಲೇಬೇಕಿದೆ.

ಒಂದು ರಾಷ್ಟ್ರವನ್ನು ಸೋಲಿಸಬೇಕಾದರೆ ಕೇವಲ ಯುದ್ಧ ಮಾಡಿ ಸೋಲಿಸಬೇಕಾಗಿಲ್ಲ ಬದಲಾಗಿ ಅಲ್ಲಿನ ಆರ್ಥಿಕ, ಮಾನವ ಸಂಪನ್ಮೂಲದ ಮೇಲೆ ಪರೋಕ್ಷವಾಗಿ ಸವಾರಿ ಮಾಡಿದರೆ ಅದು ತನ್ನ ನೈಜ ಸತ್ವವನ್ನು ಕಳೆದುಕೊಳ್ಳುತ್ತದೆ ಎಂಬ ಮಾತಿದೆ. ಹೀಗಾಗಿ ಶತ್ರು ರಾಷ್ಟ್ರಗಳು, ಉಗ್ರರು, ಮಾದಕ ಪದಾರ್ಥಗಳ ಕಳ್ಳಸಾಗಣೆ ಜಾಲವನ್ನು ದೇಶದಲ್ಲಿ ವಿಸ್ತರಿಸುವ ಷಡ್ಯಂತ್ರವನ್ನು ಮಾಡುತ್ತಲೇ ಬಂದಿದ್ದಾರೆ. ದೇಶದ ಜನತೆ ಅದರಲ್ಲೂ ಮುಖ್ಯವಾಗಿ ಯುವಜನತೆ ಈ ಷಡ್ಯಂತ್ರಕ್ಕೆ ಬಲಿಬೀಳದೆ ಮಾದಕ ವಸ್ತುಗಳ ಸೇವನೆಯಿಂದ ದೂರವುಳಿಯಬೇಕಿದೆ. ತನ್ಮೂಲಕ ತಮ್ಮ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಬೇಕಿದೆ. ಯುವಜನತೆಯ ಮೇಲೆ ಭರವಸೆ, ನಿರೀಕ್ಷೆಯ ಬೆಳಕನ್ನು ಒಳಗೊಂಡ ಆಶಾದಾಯಕ ಭಾವವನ್ನು ಇಡೀ ದೇಶ ಹೊಂದಿದ್ದು ಅವೆಲ್ಲವನ್ನೂ ಈಡೇರಿಸಿಕೊಡುವ ಹೊಣೆಗಾರಿಕೆಯನ್ನು ಯುವಜನಾಂಗ ಅತ್ಯಂತ ಸಮರ್ಪಕವಾಗಿ ನಿರ್ವಹಿಸಬೇಕಿದೆ.

 ಸುರೇಶ್‌ಎಸ್‌., ನಾವೂರು

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.