ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Team Udayavani, Dec 23, 2024, 6:55 AM IST
ರೈತ ದಿನಾಚರಣೆ ರೈತರಿಗೆ ಇರುವ ವಿಶೇಷ ದಿನ. ಮನೆ ಮಂದಿ ಎಲ್ಲ ಸೇರಿ, ಊರವರು ಸೇರಿ ಆಚರಿಸುವ ಪರಿಕಲ್ಪ ನೆಯು ಈ ದಿನದ ವಿಶೇಷವಾಗಿದೆ. ಆದರೂ ಇದು ಇತ್ತೀಚಿನ ದಿನಗಳಲ್ಲಿ ಆಡಂಬರದ ದಿನಾಚರಣೆಯಾಗಿ ಪರಿವರ್ತನೆಯಾಗುತ್ತಿರುವುದು ವಿಪ ರ್ಯಾಸ. ಕೆಲವೊಂದು ಗ್ರಾಮ ಪಂಚಾ ಯತ್‌ಗಳಲ್ಲಿ, ಸಹಕಾರಿ ಸಂಘ ಸಂಸ್ಥೆ ಗಳಲ್ಲಿ ಮತ್ತು ಜಿÇÉಾಡಳಿತದಿಂದ ರೈತ ದಿನಾಚರಣೆ ಆಚರಿಸಲ್ಪಡಬೇಕೆಂಬ ಸರಕಾರದ ಆದೇಶ ಇದ್ದರೂ ಕೇವಲ ಕಾಟಚಾರಕ್ಕಾಗಿ ಮಾತ್ರ ಇದನ್ನು ಇತ್ತೀ ಚಿನ ದಿನಗಳಲ್ಲಿ ಮಾಡಲಾಗುತ್ತಿದೆ.
ರೈತರಿಗೆ ಪ್ರೋತ್ಸಾಹ ಕೊಡುವ ನಿಟ್ಟಿ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಹಾಕಿಕೊಂಡಿ ವೆಯಾದರೂ ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನವೇನೂ ಆಗುತ್ತಿಲ್ಲ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಆರೋಗ್ಯ ವಿಮೆ ಯಂತಹ ಯೋಜನೆ ಗಳಿಗೂ ಇನ್ನೂ ಪೂರ್ಣವಾಗಿ ಕೈಗೂ ಡಿಲ್ಲ. ಒಟ್ಟಿನಲ್ಲಿ ರೈತರ ಬಗ್ಗೆ ಕಾಳಜಿಯ ಕೊರತೆ ಎಲ್ಲೆಲ್ಲೂ ಕಾಣುವುದು ಎಲ್ಲರೂ ಒಪ್ಪಬೇಕಾದ ವಿಚಾರ.
ರೈತ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿ ಎನ್ನುವ ಕೂಗು ಇಂದು ನಿನ್ನೆಯ ದಲ್ಲ. ರೈತ ತನ್ನ ಯಾವುದೇ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವ ಹಕ್ಕನ್ನು ಯಾವುದೇ ಸರಕಾರಗಳು ಇವತ್ತಿನವರೆಗೆ ನೀಡದಿರುವುದು ವಿಷಾದನೀಯ. ಇದರಿಂದ ಕೆಲವು ರೈತರು ಕೃಷಿಯಿಂದ ವಿಮುಖ ರಾಗುವ ಜತೆಗೆ ತಮ್ಮ ಮಕ್ಕಳನ್ನು ಕೃಷಿ ಯೇತರ ಚಟುವಟಿಕೆಗೆ ಹೋಗುವ ಒತ್ತಾಯವನ್ನು ಮಾಡುತ್ತಾರೆ.
ಕೃಷಿ ಅಭಿವೃದ್ಧಿಗೆ ಬೆಳೆಗಳ ಇಳುವರಿ ಅಧಿಕಗೊಳಿಸುವುದು ಮಾತ್ರವಲ್ಲದೆ ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ಕೂಡ ದೊರಕುವಂತಾಗಬೇಕು. ಈ ಲಾಭದಾಯಕ ಬೆಲೆ ಎಲ್ಲಿಯವರೆಗೆ ದೊರಕುವುದಿಲ್ಲವೋ ಅಲ್ಲಿಯವರೆಗೆ ಕೃಷಿ ಅಭಿವೃದ್ಧಿಯ ಪಥ ಹಿಡಿಯಲು ಸಾಧ್ಯ ವಿಲ್ಲ. ಬೆಲೆ ನಿರ್ಧಾರದ ಹಕ್ಕನ್ನು ರೈತನ ಹೊರತಾಗಿ ಮತ್ತಾವುದೇ ಉತ್ಪಾ ದಕ ವರ್ಗಕ್ಕೆ ಇದುವರೆಗೆ ಕಂಟಕವಾಗಿ ಪರಿಣಾಮ ಬೀರಲಿಲ್ಲ. ಈ ಬಗ್ಗೆ ಎಲ್ಲರೂ ಆಲೋಚಿಸಬೇಕಾದ ಅನಿವಾರ್ಯತೆ ಇದೆ.
ಕನಿಷ್ಠ ಬೆಂಬಲ ಬೆಲೆಯ ಮೂಲ ಉದ್ದೇಶವೇ ವಿಮುಖವಾಗಿ ಯಾವು ದೇ ರೀತಿಯಲ್ಲಿ ರೈತನಿಗೆ ಹೆಚ್ಚಿನ ವಿಚಾರ ದಲ್ಲಿ ಉಪಯೋಗ ಆಗುತ್ತಿ ಲ್ಲವಾದರೂ ಕೆಲವು ರಾಜಕಾರಣಿಗಳು ರೈತನ ಮಕ್ಕಳು ಎಂದು ಹೇಳಿಕೊಳ್ಳುತ್ತಾ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯ ತ್ನವನ್ನು ಮಾತ್ರ ಮಾಡುತ್ತಾರೆ ವಿನಾ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ವಿಫಲರಾ ಗಿರುವುದು ತಮ್ಮೆಲ್ಲರ ಗಮ ನಕ್ಕೆ ಬಂದ ವಿಚಾರ.
ಇನ್ನಾದರೂ ಸರಕಾರಗಳು ಪಕ್ಷ ಭೇದ ಮರೆತು ಪ್ರಯತ್ನಿಸಿದರೆ ರೈತರಿಗೆ ಅವರಲ್ಲಿರುವ ನಂಬಿಕೆ ಉಳಿಸಲು ಸಾಧ್ಯ. ಕಾಡು ಪ್ರಾಣಿಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದ್ದರೂ ರೈತ ಇದನೆಲ್ಲ ಸಹಿಸಿ ಕೊಂಡು ತನ್ನ ಜಾಣ್ಮೆಯಿಂದ ಕೃಷಿ ಮಾಡುತ್ತಿ ರುವುದು ಪ್ರಶಂಸನೀಯ. ಕೆಲವೊಂದು ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಹೊಂದು ವುದರ ಜತೆಗೆ ಮಾನಸಿಕ ನೆಮ್ಮದಿಯನ್ನು ಕಳೆದು ಕೊಂಡು ಬದುಕು ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ರೈತನದ್ದಾಗಿದೆ.
ರೈತರು ತಮ್ಮ ಉತ್ಪನ್ನಗಳಿಗೆ ಸಿಗುವ ಅನಿಶ್ಚಿತ ಬೆಲೆಗಳಿಂದ ಧೃತಿಗೆಡದೆ ಇದು ವರೆಗೂ ಕೃಷಿ ಮುಂದುವರಿಸುವುದು ಪ್ರಶಂಸನೀಯ. ಇದನ್ನು ಸರಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ದಿಟ್ಟ ಹೆಜ್ಜೆ ಇಡಬೇಕಾದುದು ಆವಶ್ಯಕ. ರೈತರು ಇಂದು ಎದುರಿಸುತ್ತಿರುವ ಪ್ರಕೃತಿ ವಿಕೋಪ, ಕೀಟ ರೋಗದ ಬಾಧೆ, ಬೆಲೆಯ ಏರಿಳಿತ ಮತ್ತು ವಿಮಾ ಮೊತ್ತ ಪಡೆಯುವಲ್ಲಿನ ಸವಾಲುಗಳು ಕೂಲಿ ಕಾರ್ಮಿಕರ ಸಮಸ್ಯೆ ಇವೆಲ್ಲವೂ ರೈತರ ನಿದ್ದೆ ಕೆಡಿಸಿದೆ. ಇವೆಲ್ಲದಕ್ಕೂ ಪರಿಹಾರ ದೊರಕದಿದ್ದಲ್ಲಿ ಮುಂದಿನ ದಿನ ಕೃಷಿ ಉಳಿಯುವುದು ಅನುಮಾನವೇ ಸರಿ. ತಮ್ಮೆಲ್ಲ ನೋವುಗಳನ್ನು ನುಂಗಿ ಕೊಂಡು ಕೇವಲ ಕೃಷಿ ಉಳಿವಿಗಾಗಿ ಇಟ್ಟಿರುವ ಹೆಜ್ಜೆಗಾಗಿ ಪ್ರತಿಯೊಂದು ರೈತರನ್ನು ಬೆನ್ನು ತಟ್ಟಬೇಕು. ಇದು ರೈತ ದಿನದ ಮೊದಲ ಆದ್ಯತೆಯಾಗಲಿ.
ಆ ಮೂಲಕ ದೇಶದಲ್ಲಿ ಕೃಷಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನಶೀಲರಾಗೋಣ.
-ಕುದಿ ಶ್ರೀನಿವಾಸ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.