ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ: ಉಡುಪಿ ಸೀರೆಗೆ ಕಾಯಕಲ್ಪ


Team Udayavani, Aug 6, 2023, 10:41 PM IST

UDUPI SAREE

ಭಾರತೀಯ ನಾರಿಯರಿಗೆ ಸೀರೆಗಳು ಭೂಷಣ. ನಮ್ಮ ಸಂಸ್ಕೃತಿಯಲ್ಲಿ ಸೀರೆಗಳಿಗೆ ವಿಶೇಷವಾದ ಸ್ಥಾನವನ್ನು ಕಲ್ಪಿಸ ಲಾಗಿದೆ. ಸಾಂಪ್ರದಾಯಿಕ ಸೀರೆಗಳು ಮತ್ತು ಆಭರಣಗಳು ಮೇಳೈಸಿ, ಹಬ್ಬ ಹರಿದಿನಗಳಲ್ಲಿ, ಪ್ರಮುಖ ಕಾರ್ಯ ಕ್ರಮಗಳಲ್ಲಿ ಮಹಿಳೆಯರು ಸಂಭ್ರಮಿಸುವುದು ವಾಡಿಕೆ.

ನಮ್ಮ ದೇಶದಲ್ಲಿರುವ ನಾನಾ ರೀತಿಯ ವೈವಿಧ್ಯಮಯ ಸೀರೆಗಳ ನಡುವೆ ಕೈಮಗ್ಗದಲ್ಲಿ ನೇಯ್ದ ಉಡುಪಿ ಸೀರೆಗಳು ಎದ್ದು ಕಾಣುತ್ತವೆ. ಈ ಸೀರೆಗಳು ಪ್ರಾದೇಶಿಕ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಾರುತ್ತವೆ.

ಉಡುಪಿ ಸೀರೆ ಕರ್ನಾಟಕ ರಾಜ್ಯದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗದಲ್ಲಿ ನೇಕಾರರು ಕೈಯಲ್ಲಿ ನೇಯ್ದ ಸೀರೆಯ ಹೆಸರಾಗಿದೆ.
ಈ ಸೀರೆಯು ಭಾರತದ ಪಶ್ಚಿಮ ಕರಾವಳಿಯ ದ. ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ನೇಕಾರ ಜನಾಂಗದವರು ಜೀವನಾ ಧಾರವಾಗಿ ನಡೆಸಿ ಕೊಂಡು ಬಂದ ಕುಲ ಕಸುಬಾಗಿದೆ. ಪ್ರಮುಖವಾಗಿ ಪದ್ಮಶಾಲಿ / ಶೆಟ್ಟಿಗಾರ್‌ ಎಂಬ ಜಾತಿ ಸಮು ದಾಯದ ಜನರು, ಈ ಕೆಲಸದಲ್ಲಿ ಪರಂಪರಾಗತವಾಗಿ ತೊಡಗಿಸಿಕೊಂಡಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೇಕಾರರು ತಮ್ಮದೇ ನೇಕಾರರ ಸಂಘಗಳನ್ನು ಸ್ಥಾಪಿಸಿ ಅದರ ಮೂಲಕ ನೇಕಾರಿಕೆ ಕೆಲಸ ಮಾಡುತ್ತಿದ್ದರು. “ಮಲಬಾರ್‌ ಫ್ರೆಮ್‌” ಎಂದು ಕರೆಯುವ ಮಗ್ಗದಲ್ಲಿ ಹತ್ತಿಯ ನೂಲಿನಿಂದ ಸಾದಾ ವಿನ್ಯಾಸದಲ್ಲಿ ಅಥವಾ ಸಣ್ಣ ಸಣ್ಣ ಚೌಕುಳಿಯ ವಿನ್ಯಾಸದಲ್ಲಿ ಈ ಸೀರೆಯನ್ನು ತಯಾರಿಸಲಾಗುತ್ತದೆ. ಹತ್ತಿಯಿಂದ ತಯಾರಿಸಿದ ನೂಲಿನಿಂದ 40, 60 ಹಾಗೂ 80 ಸಂಖ್ಯೆಯ ನೂಲಿನ ಸೀರೆಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಸೀರೆಗಳು ತುಂಬಾ ಲಘುವಾಗಿ ಇರುತ್ತವೆ, ಯಾವುದೇ ಕಾಲ ದಲ್ಲೂ ಧರಿಸಲು ಯೋಗ್ಯವಾಗಿರುತ್ತವೆ ಮತ್ತು ಧರಿಸಿದಾಗ ಆಹ್ಲಾದಕರ ಅನುಭವವನ್ನು ನೀಡುತ್ತವೆ. ಈ ಸೀರೆಗಳಿಗೆ ಹಿಂದಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆದರೆ ಪವರ್‌ ಲೂಮ್‌ಗಳು ಬಂದ ಬಳಿಕ ಈ ಸೀರೆಗಳಿಗೆ ಬೇಡಿಕೆ ಕಡಿಮೆಯಾಯಿತು. ಸಂಭಾವನೆ ಕಡಿಮೆಯಾಗಿ ನೇಕಾರರು ಸಂಕಷ್ಟಕ್ಕೆ ಸಿಲುಕಿದರು, ಪರಿಣಾಮವಾಗಿ ನೇಕಾರರ ಇಂದಿನ ಜನಾಂಗ ಬೇರೆ ಬೇರೆ ಉದ್ಯೋಗಗಳತ್ತ ಹೊರಳಿತು.

ವೈಶಿಷ್ಟéಗಳಿಂದ ಕೂಡಿದ ಉಡುಪಿ ಸೀರೆಗಳಿಗೆ 2016ರಲ್ಲಿ ಭೌಗೋಳಿಕ ಮಾನ್ಯತೆ ದೊರಕಿತು. ಪರಂಪರಾಗತ ಉಡುಪಿ ಸೀರೆಗೆ ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ವಿನ್ಯಾಸದ ಸ್ಪರ್ಶವನ್ನು ನೀಡುವುದು ಮತ್ತು ಹಿರಿಯ ನೇಕಾರರ ಮಾರ್ಗದರ್ಶನದಲ್ಲಿ ಯುವ ಪೀಳಿಗೆಯ ಮಹಿಳೆಯರನ್ನು ಈ ಉದ್ಯಮಕ್ಕೆ ಕರೆತರುವ ಪ್ರಯತ್ನಕ್ಕೆ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಕೈ ಹಾಕಿದೆ. ಜತೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಡುಪಿ ಸೀರೆಗಳಿಗೆ ಬೇಡಿಕೆ ಹೆಚ್ಚಿಸಲು ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ.

ಕಳೆದ ವರ್ಷ 100 ಹೊಸ ನೇಕಾರರನ್ನು ಈ ಉದ್ಯಮಕ್ಕೆ ಕರೆ ತರುವ ಸಂಕಲ್ಪ ಮಾಡಿದ ಪ್ರತಿಷ್ಠಾನ ಈಗಾಗಲೇ 80 ನೇಕಾರರನ್ನು ಉದ್ಯಮಕ್ಕೆ ತರಲು ಉಡುಪಿಯ ಜಿಲ್ಲಾಡಳಿತ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌, ನಬಾರ್ಡ್‌ ಮತ್ತು ರೋಬೋ ಸೋಫ್ಟ್ ಟೆಕ್ನಾಲಜಿಸ್‌ನ ಸಿಎಸ್‌ಆರ್‌ ಯೋಜನೆಯ ಅಡಿ ಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆಗಸ್ಟ್‌ 7 ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು 55 ಮಹಿಳೆಯರ ಕೈಮಗ್ಗ ತರಬೇತಿ ಕಾರ್ಯಗಾರಕ್ಕೆ ಚಾಲನೆ ಸಿಗಲಿದೆ.

25 ಮಹಿಳೆಯರಿಗೆ ಈಗಾಗಲೇ ನಾಲ್ಕು ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಉಡುಪಿ ಜಿಲ್ಲಾಡಳಿತದ ಜಿಲ್ಲಾ ಖನಿಜ ನಿಧಿಯ ಮೂಲಕ ಸಾಧ್ಯವಾಗಿದೆ. ಈ 25 ಮಹಿಳೆಯರಿಗೆ ಕೇಂದ್ರ ಸರಕಾರದ ಸಮರ್ಥ ಯೋಜನೆ ಅಡಿಯಲ್ಲಿ 45 ದಿನಗಳ ಕೌಶಲ ಉನ್ನತೀಕರಣ ಕಾರ್ಯಗಾರ ಈಗಾಗಲೇ ಆರಂಭವಾಗಿದೆ. ಈ ಯುವ ಪೀಳಿಗೆಯ ಎಲ್ಲ ನೇಕಾರರು ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉಡುಪಿ ಸೀರೆಗಳಲ್ಲಿ ಹೊಸತನವನ್ನು ತರಲಿದ್ದಾರೆ.

ಈ ಮೂಲಕ ಉಡುಪಿಯಲ್ಲಿ ಕೈಮಗ್ಗದ ನೇಯ್ಗೆ ಉದ್ಯಮಕ್ಕೆ ಹೊಸ ಕಾಯಕಲ್ಪ ಸಿಗಲಿದೆ. ಜತೆಗೆ ನೇಕಾರರು ಕೂಡ ಒಳ್ಳೆಯ ಆದಾಯವನ್ನು ಗಳಿಸುವ ಮೂಲಕ ಆರ್ಥಿಕ ವಾಗಿಯೂ ಸದೃಢರಾಗಲು ಸಾಧ್ಯವಿದೆ.

ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಉಡುಪಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ ಉಡುಪಿ ಬೀಚ್‌, ಉಡುಪಿ ಮಲ್ಲಿಗೆ, ಉಡುಪಿ ಗುಳ್ಳ, ಉಡುಪಿ ವಿದ್ಯಾನಗರಿಯ ಜತೆಗೆ ಭೌಗೋಳಿಕ ಮಾನ್ಯತೆ ಹೊಂದಿರುವ ವಿಶಿಷ್ಟವಾದ ಉಡುಪಿ ಸೀರೆಗಳನ್ನು ಕೂಡ ಭವಿಷ್ಯದಲ್ಲಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವ ಪ್ರಯತ್ನವನ್ನು ನಾವೆಲ್ಲರೂ ಒಟ್ಟು ಸೇರಿ ಮಾಡಬೇಕಾಗಿದೆ.

 ರತ್ನಾಕರ್‌ ಇಂದ್ರಾಳಿ ಅಧ್ಯಕ್ಷರು, ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ ಮತ್ತು ಅಧ್ಯಕ್ಷರು, ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ, ಉಡುಪಿ.

ಟಾಪ್ ನ್ಯೂಸ್

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Australia won the BGT 2024-25

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Australia won the BGT 2024-25

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.

News Hub