Today World Mental Health Day: ಸದೃಢ ಶರೀರದಷ್ಟೇ ಮುಖ್ಯ ಸುಸ್ಥಿರ ಮನಸ್ಸು
Team Udayavani, Oct 10, 2023, 6:15 AM IST
ಮನುಷ್ಯ ಆರೋಗ್ಯವಾಗಿರಬೇಕಾದರೇ ದೈಹಿಕ ಸುಸ್ಥಿರತೆಯ ಜತೆಗೆ ಮಾನಸಿಕ ಸ್ಥಿರತೆಯೂ ಅತೀ ಅಗತ್ಯ. ಮಾನಸಿಕ ಸಮಸ್ಯೆಗಳು ಯಾರಿಗೂ, ಯಾವ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದು. ಮಾನಸಿಕ ಕಾಯಿಲೆಗೆ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ ಅಂಗವೈಕಲ್ಯ ಆದಿಯಾಗಿ ವಿವಿಧ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಮಾತ್ರವಲ್ಲದೇ ಈ ಸಮಸ್ಯೆಗಳು ಉಲ್ಬಣಿಸಿದರೆ ಸಾವು ಸಂಭವಿಸುವ ಅಪಾಯವೂ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಪ್ರತೀ ಎಂಟು ಜನರಲ್ಲಿ ಒಬ್ಬರು ಮಾನಸಿಕ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿ¨ªಾರೆ. ಮಾನಸಿಕ ಕಾಯಿಲೆಯ ಕುರಿತು ಜಾಗೃತಿ ಮೂಡಿಸಲು ಮತ್ತದರ ಪರಿಣಾಮಗಳ ಕುರಿತಂತೆ ಜನರಿಗೆ ತಿಳಿಸುವ ಸಲುವಾಗಿ ಪ್ರತೀವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ಈ ಬಾರಿಯ ಧ್ಯೇಯ
“ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು’ ಎಂಬುದು ಈ ವರ್ಷದ ಧ್ಯೇಯವಾಗಿದೆ. ಮಾನಸಿಕ ಸಮಸ್ಯೆಗಳ ಕುರಿತು ಜನರಲ್ಲಿ ತಿಳಿವಳಿಕೆಯನ್ನು ಹೆಚ್ಚಿಸು ವುದು, ಮಾನಸಿಕ ಆರೋಗ್ಯವನ್ನು ಸಾರ್ವತ್ರಿಕ ಮಾನವ ಹಕ್ಕಾಗಿ ಉತ್ತೇಜಿಸುವುದು ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಅತ್ಯಗತ್ಯ ಕ್ರಮ ಕೈಗೊಳ್ಳವುದು ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಮುಖ ಗುರಿಗಳಾಗಿವೆ.
ಕೀಳರಿಮೆ, ನಿರ್ಲಕ್ಷ್ಯ ಸಲ್ಲದು
ಮಾನಸಿಕ ಕಾಯಿಲೆಗಳಿಗೆ ಪ್ರಥಮ ಚಿಕಿತ್ಸೆ ಅಂದರೆ ಇನ್ನೊಬ್ಬರ ಬಳಿ ನಮ್ಮ ಸಮಸ್ಯೆಗಳು ಹೇಳಿಕೊಳ್ಳುವುದು; ಮತ್ತು ಆ ವ್ಯಕ್ತಿ ಅದನ್ನು ಹಾಸ್ಯ ಮಾಡದೆ, ಅದರ ಗಂಭೀರತೆಯನ್ನು ಅರಿತು ಸೂಕ್ತ ಚಿಕಿತ್ಸೆಗೆ ಪ್ರೇರೇಪಿಸುವುದು. ಮಾನಸಿಕ ಸಮಸ್ಯೆ ಅಂದರೆ ಹುಚ್ಚು ಎನ್ನುವ ತಪ್ಪು ಕಲ್ಪನೆಯಿಂದ ಮೊದಲು ಹೊರ ಬರಬೇಕು. ಮಾನಸಿಕ ಕಾಯಿಲೆಯ ಬಗ್ಗೆ ಕೀಳರಿಮೆ ಸಲ್ಲದು. ಸೂಕ್ತ ಚಿಕಿತ್ಸೆ ಪಡೆದಲ್ಲಿ ಎಲ್ಲರಂತೆ ಬಾಳಬಹುದು.
-ಒತ್ತಡಮುಕ್ತ ಜೀವನದಿಂದ ಮನಸ್ಸಿನ ಆರೋಗ್ಯ ರಕ್ಷಣೆ ಸಾಧ್ಯ
- ದೈಹಿಕ ಮತ್ತು ಮಾನಸಿಕ ಚಟುವಟಿಕೆಯಿಂದ ಕೂಡಿರಲಿ ನಮ್ಮ ದಿನಚರಿ
- ಆರೋಗ್ಯಕರ ಜೀವನ ಶೈಲಿ ಯನ್ನು ನಮ್ಮದಾಗಿಸಿ ಕೊಳ್ಳೋಣ
- ಮದ್ಯಪಾನ, ಮಾದಕದ್ರವ್ಯ ಸೇವನೆಗಳಂತಹ ಚಟಗಳಿಂದ ದೂರವಿರಿ
- ಮಾನಸಿಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯಿಂದ ಪರಿಹಾರ ಸಾಧ್ಯ
- ಮಾನಸಿಕ ಸಮಸ್ಯೆ ಎಂದಾಕ್ಷಣ ಭಯಪಡುವ ಅಗತ್ಯವಿಲ್ಲ.
-ಯಾವುದೇ ಮೂಢನಂಬಿಕೆಗಳಿಗೆ ಬಲಿಯಾಗದಿರಿ.
- ಯೋಗ, ಧ್ಯಾನ, ಪ್ರಾರ್ಥನೆಯಂತಹ ಚಟುವಟಿಕೆಗಳಿಗೆ ಪ್ರತೀದಿನ ನಿರ್ದಿಷ್ಟ ಸಮಯವನ್ನು ಮೀಸಲಿಡಿ.
ಭಾರತದಲ್ಲಿ ಹೆಚ್ಚುತ್ತಿದೆ ಮಾನಸಿಕ ಸಮಸ್ಯೆ
ವಿಶ್ವದ ನೆಮ್ಮದಿಯುತ 146 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 126ನೇ ಸ್ಥಾನದಲ್ಲಿದ್ದು, ಇದು ಕಳವಳಕಾರಿ ಸಂಗತಿ ಯಾಗಿದೆ. ಕೋವಿಡ್ ಬಳಿಕ ಈ ಸಂಖ್ಯೆಯಲ್ಲಿ ಹೆಚ್ಚಳ ಆಗಿರುವುದು ಗಮನಿಸಬೇಕಾದ ಸಂಗತಿ. ಸರ್ವೇ ಯೊಂದರ ಪ್ರಕಾರ ದೇಶದ ಜನಸಂಖ್ಯೆಯ ಶೇ. 10ರಿಂದ 15ರಷ್ಟು ಮಂದಿ ಮಾನಸಿಕ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ಭಾರತದಲ್ಲಿ ಪ್ರಾಥಮಿಕ ಹಂತದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಕೊರತೆಯಿದೆ. ಅಲ್ಲದೇ ಗ್ರಾಮೀಣ ಪ್ರದೇಶದ ಜನರಿಗೆ ಈ ಬಗ್ಗೆ ಸಾಕಷ್ಟು ತಿಳಿವಳಿಕೆಯಿಲ್ಲ. ಸರಕಾರ ಈ ಕುರಿತು ಆದಷ್ಟು ಬೇಗ ಎಚ್ಚೆತ್ತು ಕೊಳ್ಳಬೇಕಾಗಿರುವುದು ಅನಿವಾರ್ಯ. ತಳಮಟ್ಟ ದಿಂದಲೇ ಮಾನಸಿಕ ಆರೋಗ್ಯದ ಕಾಳಜಿಯ ಕುರಿತಂತೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.
– ಸುಶ್ಮಿತಾ ನೇರಳಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.