ಇಂದು ವಿಶ್ವ ನಗು ದಿನ: ನಗು ನಗುತಾ ನಲಿ ನಲಿ, ಏನೇ ಆಗಲಿ

Team Udayavani, May 1, 2022, 7:20 AM IST

ಇಂದು ವಿಶ್ವ ನಗು ದಿನ: ನಗು ನಗುತಾ ನಲಿ ನಲಿ, ಏನೇ ಆಗಲಿ

ಪ್ರತೀ ವರ್ಷ ಮೇ ತಿಂಗಳ ಮೊದಲ ರವಿವಾರದಂದು ವಿಶ್ವ ನಗು ದಿನ ಎಂದು ಆಚರಿಸಿ ಸಂಭ್ರಮಿಸಲಾಗುತ್ತದೆ. ಮೊದಲ ಬಾರಿಗೆ ಈ ಆಚರಣೆ 1998ರಲ್ಲಿ ಭಾರತದ ಮುಂಬಯಿಯಲ್ಲಿ ಆರಂಭವಾಯಿತು. ಡಾ| ಮದನ್‌ ಕಟಾರಿಯಾ ಈ ವಿಶ್ವ ನಗು ಅಭಿಯಾನದ ರೂವಾರಿ. ಮನಬಿಚ್ಚಿ ಮನಸು ಹಗುರಾಗಿಸಿ ನಕ್ಕಾಗ ಮುಖದ ಸ್ನಾಯುಗಳು ಚೆನ್ನಾಗಿ ವಿಕಸನಗೊಂಡು ಮನಸ್ಸು ಮುದವಾಗುತ್ತದೆ ಎಂಬ ಕಲ್ಪನೆಯೊಂದಿಗೆ ಈ ಅಭಿಯಾನ ಆರಂಭವಾಯಿತು. ಕ್ರಮೇಣ ನಗುವಿನ ಸಂಘಗಳು (Laughter club) ವಿಶ್ವದೆಲ್ಲೆಡೆ ಹುಟ್ಟಿಕೊಂಡವು. ಸಾರ್ವಜನಿಕ ಸ್ಥಳಗಳಾದ ಪಾರ್ಕ್‌, ಮೈದಾನ, ಸಂಘಸಂಸ್ಥೆಗಳ ವಠಾರಗಳಲ್ಲಿ ಜನರು ಒಟ್ಟು ಸೇರಿ ನಗುವ ಕಾರ್ಯಕ್ರಮ ಆರಂಭಿಸಿದರು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಜಗತ್ತಿನ ಸುಮಾರು 115 ರಾಷ್ಟ್ರಗಳಲ್ಲಿ ಲಕ್ಷಾಂತರ ನಗೆ ಸಂಘಗಳು ಸಕ್ರಿಯವಾಗಿದ್ದು ಜನರನ್ನು ನಗಿಸಿ, ಜನರ ಆರೋಗ್ಯವನ್ನು ಹೆಚ್ಚಿಸುತ್ತಿರುವುದು ಆಶಾದಾಯಕ ಸಂಗತಿ.

ಈಗಿನ ಯಾಂತ್ರಿಕ ಬದುಕಿನಲ್ಲಿ ನಗು ಮತ್ತು ನಗಿಸುವುದು ಕೂಡ ಹಣ ಸಂಪಾದನೆಯ ಒಂದು ಮಾರ್ಗ ಎಂಬ ಸತ್ಯ ಹಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಸುಂದರವಾದ ದಂತ ಪಂಕ್ತಿಗಳಿಂದ ಮನಬಿಚ್ಚಿ ನಿಷ್ಕಲ್ಮಶವಾಗಿ ಹೃದಯ ತುಂಬಿ ನಕ್ಕಲ್ಲಿ, ಮನುಷ್ಯನಿಗೆ ಯಾವುದೇ ರೋಗ ಬರದು ಎಂದು ತಿಳಿದವರು ಹೇಳುತ್ತಾರೆ. ತನ್ನ ಜತೆಗಿರುವವರನ್ನು ತನ್ನ ಮೋಡಿಗೆ ಬೀಳಿಸುವ, ಪರಸ್ಪರ ಅನ್ಯೋನ್ಯತೆ ಬೆಳೆಸುವ, ವಿಶ್ವಾಸ ವೃದ್ಧಿಸುವ,
ನವಚೈತನ್ಯ ಮೂಡಿಸುವ ಅದ್ಭುºತ ಶಕ್ತಿ ನಗುವಿಗೆ ಇದೆ.

ಸಂಶೋಧನೆಗಳಿಂದಲೂ ಸಾಬೀತು
ವೈಜ್ಞಾನಿಕವಾಗಿ ನಗುವಿನ ಪರಿಣಾಮ ಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ. ಮಾನಸಿಕ, ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನಗು ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಒಮ್ಮೆ ಹಾಯಾಗಿ ನಕ್ಕಲ್ಲಿ ಸುಮಾರು 30 ನಿಮಿಷಗಳ ಕಾಲ ಸ್ನಾಯುಗಳು ಸಡಿಲಗೊಂಡು ರಕ್ತ ಸಂಚಾರ ಸುಗಮವಾಗಿ ಆ ಮೂಲಕ ಹೃದಯದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲು ಪರೋಕ್ಷವಾಗಿ ಸಹಕರಿಸುತ್ತದೆ. ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಒಟ್ಟಿನಲ್ಲಿ ನಗು ಎನ್ನುವುದು ಉಚಿತವಾಗಿ ದೊರಕುವ ಔಷಧ.

ನಗು ಎನ್ನುವುದು ಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡು ಕೊಳ್ಳುತ್ತಾರೆ. ಅಂಥ ವ್ಯಕ್ತಿಗಳ ಜತೆ ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಿ, ಮಾನಸಿಕ ಒತ್ತಡ ಕಡಿಮೆಯಾಗಿ ನಾವು ಕೂಡ ಹೆಚ್ಚು ಹೆಚ್ಚು ನಗುನಗುತ್ತಾ ನೂರು ಕಾಲ ಬದುಕಬಹುದು.

ಜೀವನ ಎನ್ನುವುದು ಬಹುದೊಡ್ಡ ಪ್ರಯಾಣ. ಈ ಪ್ರಯಾಣದಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲು ಗಳು ಬರುವುದು ಸಹಜ. ಎದುರಾದ ಸಮಸ್ಯೆ ಗಳನ್ನು ಸಾಧ್ಯವಾದಷ್ಟು ಮುಕ್ತ ಮನಸ್ಸಿನಿಂದ, ಸಮಾಧಾನದಿಂದ ಎದುರಿಸುವುದನ್ನು ಕಲಿತಾಗ, ಸಮಸ್ಯೆಗಳೇ ಹೊಸತನ್ನು ಮಾಡಲು, ಕಲಿ ಯಲು ಪ್ರೇರೇಪಿಸುತ್ತದೆ. ನಗುನಗುತ್ತಾ ಇದ್ದರೆ ಜೀವನದಲ್ಲಿ ಬರುವಂಥ ಯಾವುದೇ ಕಷ್ಟಗಳನ್ನು ಲೀಲಾಜಾಲವಾಗಿ ಎದುರಿಸಬಹುದು. ಬದುಕಿನ ಮಹತ್ತರವಾದ ಗಳಿಗೆಯಲ್ಲಿ, ಕಷ್ಟಕಾಲದಲ್ಲಿ ಆಶಾಕಿರಣವನ್ನು, ಬದುಕಿಗೆ ಹೊಸ ಚೈತನ್ಯವನ್ನು, ದಾರಿಯನ್ನು ತೋರುವ ಶಕ್ತಿ ನಗುವಿಗೆ ಖಂಡಿತಾ ಇದೆ. ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ. ನಕ್ಕರೆ ಅದೇ ಸ್ವರ್ಗ, ನಗಬಾರದೇಕೆ ?

ನಗುವಿನಿಂದ ಪ್ರಯೋಜನಗಳು
– ನಮ್ಮ ಮನಸ್ಸಿಗೆ ಉಲ್ಲಾಸ, ಸಂತಸ ಮತ್ತು ಸಮಾಧಾನ ನೀಡುತ್ತದೆ.
– ನಗುವಿನಿಂದ ನಮ್ಮ ಶ್ವಾಸಕೋಶದ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು.
– ನಗುವಿನಿಂದ ಮಾನಸಿಕ ತಳಮಳ, ಭಯ, ಆತಂಕ ಮತ್ತು ಮನೋ ವ್ಯಾಕುಲತೆಯನ್ನು ಶಮನ ಮಾಡಬಹುದು.
– ನಮ್ಮ ಮನಸ್ಸಿಗೆ ಧೈರ್ಯ ಮತ್ತು ಸದೃಢತೆಯನ್ನು ನೀಡಿ, ಮನೋಸ್ಥಿತಿಯನ್ನು ಉಚ್ಚಾ†ಯ ಸ್ಥಿತಿಯಲ್ಲಿ ಇಡುತ್ತದೆ.
– ಧನಾತ್ಮಕ ಮತ್ತು ಆಶಾದಾಯಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯಮಾಡುತ್ತದೆ.
– ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಮತ್ತು ಆಯಾಮವನ್ನು, ದಿಶೆಯನ್ನು ನೀಡುತ್ತದೆ.
– ಯಾತನಾಮಯ ಮತ್ತು ನೋವಿನ ಸ್ಥಿತಿಗಳಲ್ಲಿ ಮಾನಸಿಕ ದೃಢತೆಯನ್ನು, ಧೈರ್ಯವನ್ನು ನೀಡಿ ಮನಸ್ಸಿಗೆ ಉಲ್ಲಾಸ ಮತ್ತು ಮುದವನ್ನು ನೀಡುತ್ತದೆ.
– ದೇಹದಲ್ಲಿರುವ ಪ್ರತಿಯೊಂದು ಗ್ರಂಥಿಗಳಿಂದಲೂ ಆರೋಗ್ಯಕ್ಕೆ ಪೂರಕವಾದ ದ್ರವ್ಯಗಳು ಸ್ರವಿಸಲ್ಪಟ್ಟು ಜೀವಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ.
– ನಮ್ಮ ಬದುಕಿಗೆ ಹೊಸ ಆಯಾಮವನ್ನು ನೀಡಿ ಬಾಳಿಗೆ ಬೆಳಕು ನೀಡುತ್ತದೆ. ನೀವು ಮನಬಿಚ್ಚಿ ನಕ್ಕಾಗ ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಸೇರಿಕೊಂಡು, ನಿಮ್ಮ ಹೃದಯ, ಶ್ವಾಸಕೋಶ ಮತ್ತು ಸ್ನಾಯುಗಳನ್ನು ಉತ್ತೇಜಿಸುತ್ತದೆ. ನಿಮ್ಮ ದೇಹದಲ್ಲಿ ಸ್ರವಿಸಲ್ಪಡುವ ಎಂಡೊರ್‌ಫಿನ್‌ ಎಂಬ ನಗಿಸುವ ರಸದೂತವನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಮತ್ತಷ್ಟು ಉಲ್ಲಸಿತರನ್ನಾಗಿ ಮಾಡುತ್ತದೆ.
– ನಮ್ಮ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸದೃಢಗೊಳಿಸುತ್ತದೆ. ಜತೆಗಿದ್ದವರನ್ನು ಮತ್ತಷ್ಟು ಉಲ್ಲಸಿತರನ್ನಾಗಿ ಮಾಡಿ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಸಣ್ಣಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ವಿವಾದಗಳಿಗೆ ಅಂತ್ಯಹಾಡಲು ಸಹಕಾರಿ.
– ಮನಬಿಚ್ಚಿ ನಕ್ಕಾಗ ನಿಮ್ಮ ಮನಸ್ಸು ಉಲ್ಲಸಿತವಾಗಿ ಖನ್ನತೆಯನ್ನು ಕಡಿಮೆ ಮಾಡಿ, ಆತಂಕವನ್ನು ದೂರವಾಗಿಸಿ ನಿಮ್ಮನ್ನು ಖುಷಿಯಾಗಿಸುತ್ತದೆ.
– ನಾವು ನಕ್ಕಾಗ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಹುಟ್ಟಿಕೊಳ್ಳುತ್ತದೆ. ಇದು ನಮ್ಮ ದೇಹದಲ್ಲಿ ಸ್ರವಿಸಲ್ಪಡುವ ಉತ್ತಮ ರಸದೂತಗಳನ್ನು ಹೆಚ್ಚಿಸುವಂತೆ ಮಾಡಿ, ದೇಹದ ರಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಶಕ್ತಿಶಾಲಿಯಾಗಿಸುತ್ತದೆ.

-ಡಾ| ಮುರಲೀ ಮೋಹನ್‌ ಚೂಂತಾರು

ಟಾಪ್ ನ್ಯೂಸ್

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.