ಇಂದು ವಿಶ್ವ ಜಲ ದಿನ: ಜಲ ಸೇವೆಯೇ ಜನಾರ್ದನ ಸೇವೆ


Team Udayavani, Mar 22, 2022, 7:10 AM IST

ಇಂದು ವಿಶ್ವ ಜಲ ದಿನ: ಜಲ ಸೇವೆಯೇ ಜನಾರ್ದನ ಸೇವೆ

“ಜನರು ಪ್ರೀತಿ ಇಲ್ಲದೆ ಬದುಕಬಹುದು. ಕುಡಿಯುವ ನೀರಿಲ್ಲದೆ ಒಬ್ಬನೂ ಜೀವಿಸಲಾರ’ ಎಂಬ ಪಂಡಿತರ ಮಾತು ಸುಮ್ಮನೆ ಅಲ್ಲ. ನೀರೇ ಈ ಭೂಮಿಯ ಜೀವಾತ್ಮ. ಪೃಥ್ವಿಯ ಸಕಲ ಜೀವಗಳ ಅಸ್ತಿತ್ವಕ್ಕೆ ನೀರೇ ಕಾರಣ. ಇಂದು ವಿಶ್ವ ಜಲ ದಿನ. ಜಲಮೂಲಗಳು ಅಪಾಯದ ಅಂಚಿನಲ್ಲಿರುವುದು ಗೊತ್ತಿರುವ ಸಂಗತಿ. ಜಲಸಂರಕ್ಷಣೆಗೆ ಟೊಂಕಕಟ್ಟಿದ “ವಾಟರ್‌ ವಾರಿಯರ್ಸ್‌’ಗಳನ್ನು ಸ್ಮರಿಸದೇ ಹೋದರೆ ಈ ದಿನಾಚರಣೆ ಮಾಡಿಯೂ ವ್ಯರ್ಥ…

ಕಟ್ಟೆ ಕಟ್ಟಿ ಜಲಕಹಳೆ ಊದಿದ ಕುರಿಗಾಹಿ
ಮಂಡ್ಯ
ಕಲ್ಮನೆ ಕಾಮೇಗೌಡರ “ಜಲಪ್ರೀತಿ’ಗೆ ತಲೆಬಾಗದವರೇ ಇಲ್ಲ. ಈ ಕುರಿಗಾಹಿಗೆ ವಯಸ್ಸು 74. ಕುರಿಗಳ ಮಾರಾಟದಿಂದ ಬಂದ ಹಣದಿಂದ ಕಟ್ಟೆಗಳನ್ನು ನಿರ್ಮಿಸಿ, ಊರನ್ನು ತಂಪಾಗಿಟ್ಟ ಈ ಜಲತಪಸ್ವಿ, ಪ್ರಾಣಿ- ಪಕ್ಷಿಗಳ, ಮರಗಿಡಗಳ ನೀರಿನ ದಾಹ ನೀಗಿಸುವುದನ್ನೇ ತಪಸ್ಸು ಎಂದು ಭಾವಿಸಿದವರು.

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರು, ಕುಂದೂರು ಬೆಟ್ಟದ ಮೇಲೆ ಸುಮಾರು 14ಕ್ಕೂ ಹೆಚ್ಚು ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಕಟ್ಟೆಗಳ ಸುತ್ತ ಮರಗಿಡ ಬೆಳೆಸಿ, ಪರಿಸರ ಕಾಳಜಿ ತೋರಿದ್ದಾರೆ.
ಇವರ ಸಾಧನೆ ಗುರುತಿಸಿ ಪ್ರಶಸ್ತಿ- ಬಹುಮಾನಗಳು ಅರಸಿ ಬಂದಿವೆಯಾದರೂ ಆ ಹಣವನ್ನೂ ಇವರು ಸುರಿದಿದ್ದು ಇದೇ ಕಟ್ಟೆಗಳ ನಿರ್ಮಾಣಕ್ಕೆ! ಪ್ರತೀ ಕಟ್ಟೆಗಳಿಗೂ ಒಂದೊಂದು ಹೆಸರಿಟ್ಟು ಪರಿಸರ ಸಂದೇಶಗಳನ್ನು ಬರೆಸಿ, ಜಾಗೃತಿ ಮೂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು “ಮನ್‌ ಕೀ ಬಾತ್‌’ನ ಮೂಲಕ ಕಾಮೇಗೌಡರ ಸಾಧನೆಯನ್ನು ದೇಶಾದ್ಯಂತ ಪರಿಚಯಿಸಿದ್ದನ್ನೂ ಇಲ್ಲಿ ಸ್ಮರಿಸದೆ ಇರಲಾಗದು.

“ಸುರಂಗ ವೀರ’ ಅಮೈ ಮಹಾಲಿಂಗ ನಾಯ್ಕ
ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ನೀರಿಗಾಗಿ ಭಗೀರಥ ಪ್ರಯತ್ನ ಮಾಡಿದವರು. ಕಲ್ಲು, ಮುಳ್ಳು ಮತ್ತು ಮುಳಿ ಹುಲ್ಲನ್ನು ಹೊಂದಿರುವ ಗುಡ್ಡದಲ್ಲಿ ಕೃಷಿ ಕನಸಿನ ಮಾತಾಗಿತ್ತು. ಅವರಿಗೆ ದೊರೆತ ಜಾಗದಲ್ಲಿ ಪ್ರಥಮ ಪ್ರಯತ್ನ ಮಾಡಿದ್ದು, ಜೀವನವನ್ನು ತೇದದ್ದು ನೀರಿಗಾಗಿ, ಪ್ರಥಮ ಸುರಂಗ 25 ಮೀ. ಉದ್ದವಾಗಿತ್ತು. ಆದರೆ ನೀರು ಸಿಗಲಿಲ್ಲ. ಅದಕ್ಕಾಗಿ ಮತ್ತೂಂದು ಸುರಂಗ ನಿರ್ಮಾಣಕ್ಕೆ ಮುಂದಾದರು. ಸ್ವಲ್ಪ ಮೇಲ್ಭಾಗದಲ್ಲಿ ಸುರಂಗ ನಿರ್ಮಾಣವಾಯಿತು. 130 ಮೀಟರ್‌ ಉದ್ದದ ಸುರಂಗದಲ್ಲಿ ನೀರು ಬಂತು. ಭಗೀರಥನ ಪ್ರಯತ್ನ ಫಲಿಸಿತು. ಸಾಲವಾಗಿ ಪಡೆದ ಜಮೀನಿನಲ್ಲಿ ಬೆವರು ಹರಿಸಿ ದುಡಿದು ಈಗ ಬಂಗಾರವನ್ನೇ ಬೆಳೆದಿದ್ದಾರೆ. ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು ಇತ್ಯಾದಿ ಬೆಳೆಗಳು ಇವರ ತೋಟದಲ್ಲಿವೆ. “ಪದ್ಮಶ್ರೀ’ ಈ ಸಾಧಕನನ್ನು ಅರಸಿಬಂದಿದೆ.

ಕೂಲಿ ದಂಪತಿಯ ಬಾವಿ ಸಾಹಸ
ಚಿಕ್ಕಮಗಳೂರು
ಯಾರೋ ಅಧಿಕಾರಿಗಳು ಬಂದು ಬಾವಿ ತೋಡಿಸುತ್ತಾರೆಂದು ಈ ಕೂಲಿ ದಂಪತಿ ಕಾದು ಕೂರಲೇ ಇಲ್ಲ. ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದ ದಂಪತಿ,55 ಅಡಿ ಆಳದ ತೆರೆದ ಬಾವಿ ತೋಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುಡಿಯುವ ನೀರಿನ ಪರದಾಟದಿಂದ ಬೇಸತ್ತ ಮೂಡಿಗೆರೆ ತಾಲೂಕಿನ ಅಣಚೂರು ಗ್ರಾಮದ ರಾಜು ಮತ್ತು ಶಾರದಾ ದಂಪತಿ ಒಂದೂವರೆ ತಿಂಗಳಲ್ಲಿ 55 ಅಡಿ ಆಳದ ಬಾವಿ ತೋಡಿದ್ದಾರೆ. ಕಡು ಬಡತನದಲ್ಲಿರುವ ಈ ಕುಟುಂಬ ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದೆ. ಗಂಡ- ಹೆಂಡತಿ, ಕೂಲಿ ಕೆಲಸ ಮುಗಿಸಿ ಮನೆಗೆ ಮರಳಿದ ಅನಂತರ ಬಾವಿ ತೋಡುವ ಕಾಯಕಕ್ಕೆ ಇಳಿದಿದ್ದರು. ಕೊನೆಗೂ ಜೀವಜಲ ಸಿಕ್ಕಿತು. ದಂಪತಿಯ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ಕೇಳಿಬರುತ್ತಿದೆ.

ಯುವ ಬ್ರಿಗೇಡ್‌ನ‌ “ತುಂಗಾರಾಧನೆ’
ಮಂತ್ರಾಲಯ
ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ “ಯುವ ಬ್ರಿಗೇಡ್‌’ ಇತ್ತೀಚೆಗಷ್ಟೇ “ತುಂಗಾರಾಧನೆ’ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಜಲಸಂರಕ್ಷಣೆಗೆ ಮುಂದಾಗಿತ್ತು. ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ “ತುಂಗಾರಾಧನೆ’ ಹೆಸರಿನ ಸ್ವಚ್ಛತ ಕಾರ್ಯ ನಡೆಸಿತ್ತು. ಬರೋಬ್ಬರಿ 7000 ಮಾನವ ಗಂಟೆಗಳ ಕಾಲ ನಡೆದ ಈ ಸ್ವಚ್ಛತ ಕಾರ್ಯಕ್ರಮದಲ್ಲಿ ಬರೋಬ್ಬರಿ 75 ಟನ್‌ಗಳಷ್ಟು ಕಸವನ್ನು ತೆರವು ಮಾಡಲಾಗಿದೆ. ಯುವ ಬ್ರಿಗೇಡ್‌ನ‌ ಜತೆ ಸಹೋದರಿ ನಿವೇದಿತಾ ಪ್ರತಿಷ್ಠಾನವೂ ಇದಕ್ಕೆ ಕೈಜೋಡಿಸಿತ್ತು. ಉರಿ ಬಿಸಿಲನ್ನೂ ಲೆಕ್ಕಿಸದೆ, ಬೀದರ್‌ನಿಂದ ಚಾಮರಾಜನಗರದ ವರೆಗಿನ ಯುವ ಕಾರ್ಯ ಕರ್ತರು ಪಾಲ್ಗೊಂಡಿದ್ದರು. ಈಗಾಗಲೇ ಯುವ ಬ್ರಿಗೇಡ್‌ ನೇತೃತ್ವದಲ್ಲಿ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಕಲ್ಯಾಣಿಗಳು, ಗಾಣಿಗಾಪುರದ ಭೀಮಾ ತೀರದಿಂದ ಕೊಲ್ಲೂರಿನ ಸೌಪರ್ಣಿಕಾ ತೀರದವರೆಗೆ 10 ನದಿಗಳ ಸ್ವಚ್ಛತೆ ಯಶಸ್ವಿಯಾಗಿ ನಡೆದಿದೆ.

ಟೆಕ್ಕಿ ತೋಡಿದ ಬಾವಿ
ಬೀದರ್‌
ಹೊಲದಲ್ಲಿ ಏಕಾಂಗಿಯಾಗಿ ಸತತ ಐದು ತಿಂಗಳು ಬಾವಿ ತೋಡಿದ ಈ ಸಾಫ್ಟ್ವೇರ್‌ ಎಂಜಿನಿಯರ್‌ ಹೆಸರು ಸೂರ್ಯಕಾಂತ ಪ್ರಭು ಕೋಳಿ. ಬೀದರ್‌ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ) ಗ್ರಾಮದವರು. ಎಂ.ಟೆಕ್‌ ಪೂರೈಸಿ, ಒಂದು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಸೂರ್ಯಕಾಂತ, ಈಗ ಅಪ್ಪಟ ಕೃಷಿಕ. ತಮಗಿರುವ ಒಂದೂವರೆ ಎಕ್ರೆ ಭೂಮಿಯಲ್ಲಿ ಕೃಷಿ ಮಾಡಲು ಅವರಿಗೆ ಎದುರಾಗಿದ್ದು ನೀರಿನ ಕೊರತೆ. ಇದಕ್ಕಾಗಿ ತಾವೊಬ್ಬರೇ ಶ್ರಮಪಟ್ಟು ಬಾವಿ ತೋಡಿ ನೀರು ಚಿಮ್ಮಿಸಿದ್ದಾರೆ. 25/30 ಅಡಿ ವಿಸ್ತೀರ್ಣದ ಜಾಗದಲ್ಲಿ 14 ಅಡಿಗಳವರೆಗೆ ಕೊರೆದಾಗ ಜೀವಜಲ ಉಕ್ಕಿದೆ. ಉನ್ನತ ಹುದ್ದೆ ಬಿಟ್ಟು ಹೊಲಕ್ಕೆ ರೈತನಾಗಿ ಇಳಿದಾಗ “ಇಂವ ಹುಚ್ಚ ಲೇ’ ಎಂದು ಅಣಕಿಸಿದವರೆಲ್ಲ, ಇಂದು ಬೆನ್ನು ತಟ್ಟಿ ಭೇಷ್‌ ಹೇಳುತ್ತಿದ್ದಾರೆ!

“ವಾಟರ್‌ ಡಾಕ್ಟರ್‌’ ಅಯ್ಯಪ್ಪ ಮಸಗಿ
ಬೆಂಗಳೂರು
ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿದ್ದ ಗದಗ ಜಿಲ್ಲೆಯ ಬಡ ರೈತ ಕುಟುಂಬದ ಡಾ| ಅಯ್ಯಪ್ಪ ಮಸಗಿ, ಬಾಲ್ಯದಲ್ಲಿ ತಾಯಿಯೊಂದಿಗೆ ಮುಂಜಾನೆ 3 ಗಂಟೆಗೆ ಎದ್ದು ನೀರು ತರಲು ಮೈಲುಗಟ್ಟಲೆ ನಡೆಯುತ್ತಿದ್ದರಂತೆ. ಬರಪೀಡಿತ ಪ್ರದೇಶದಲ್ಲಿ ಬೆಳೆ ಬೆಳೆಯಲು ಹೋಗಿ, ಕೈ ಸುಟ್ಟುಕೊಂಡಾಗ, ಜನರ ಕೊಂಕು ಬಾಯಿಗೆ ಆಹಾರವಾದರು. ಇದಕ್ಕೆಲ್ಲ ಮಸಗಿ ತಲೆಕೆಡಿಸಿಕೊಳ್ಳದೆ, ಜಲತಪಸ್ಸನ್ನು ಮುಂದುವರಿಸಿದರು. ಜಲ ಸಂರಕ್ಷಣೆಯ ವಿಧಾನ ಅಧ್ಯಯ ನಡೆಸಿ, ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದರು. ಇಂದು ತಮ್ಮದೇ ಭೂಮಿ ಯಲ್ಲಿ “ಜಲಸಮೃದ್ಧಿ’ ಎಂಬ ತರಬೇತಿ ಕೇಂದ್ರ ತೆರೆದು ಒಣ ಗಿದ ಕೊಳವೆ ಬಾವಿ ಗಳಿಗೆ ಮರು ಜೀವ ಕೊಡುತ್ತಿದ್ದಾರೆ. “ವಾಟರ್‌ ಡಾಕ್ಟರ್‌’, “ವಾಟರ್‌ ಗಾಂಧಿ’ ಅಂತಲೇ ಖ್ಯಾತಿ ಸಂಪಾದಿಸಿದ್ದಾರೆ. ಈವರೆಗೆ 13 ರಾಜ್ಯಗಳಲ್ಲಿ 2.5 ಲಕ್ಷ ಕೊಳವೆ ಬಾವಿಗಳಿಗೆ ಮರುಜೀವ ನೀಡಿದ್ದಾರೆ. 1 ಲಕ್ಷ ಎಕ್ರೆ ಒಣ ಭೂಮಿ ಯನ್ನು ಹಸುರಾಗಿಸಿ ಕೃಷಿಕರ ಪಾಲಿನ ಭಗೀರಥ ಎನಿಸಿಕೊಂಡಿದ್ದಾರೆ. 3 ಲಕ್ಷ ಎಕ್ರೆ ಕಾಡು ಆಧಾರಿತ ಕೃಷಿ ಜಮೀನು ನಿರ್ಮಿಸಿದ್ದಲ್ಲದೆ, ಜಲ ಸಂರಕ್ಷಣೆ ಕುರಿತು 7 ಪುಸ್ತಕಗಳನ್ನು ಬರೆದಿದ್ದಾರೆ. ಬೆಂಗ ಳೂ ರಿನ ಸುತ್ತ ಮುತ್ತ ಪ್ರದೇಶಗಳಲ್ಲಿ ಮಸಗಿ ಅವರೊಂದಿಗೆ ಇಡೀ ಕುಟುಂಬ ಜಲತಪಸ್ಸಿನಲ್ಲಿ ತೊಡಗಿಸಿಕೊಂಡಿದೆ.

ಪುರಾತನ ಜಲಮೂಲ ರಕ್ಷಣೆಗೆ “ರಾಘವೇಂದ್ರ’ ಎನ್ನಿರಿ…
ಮೈಸೂರು
ವೃತ್ತಿಯಲ್ಲಿ ಶಿಕ್ಷಕರಾಗಿರುವ, ಮೈಸೂರಿನ ಡಾ. ರಾಘವೇಂದ್ರ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರೂ ಹೌದು. ಪುರಾತನ ಕೆರೆ, ಕೊಳಗಳಲ್ಲಿ ತ್ಯಾಜ್ಯಗಳು ತುಂಬಿ, ಜಲಮೂಲ ಗಳು ಹುದುಗಿ ಹೋಗಿರುವುದನ್ನು ಗಮನಿಸಿ, ಅವುಗಳಿಗೆ ಜೀವ ತುಂಬುವ ಕಾಯಕ ಮಾಡುತ್ತಿ ದ್ದಾರೆ. 300 ಸ್ವಯಂ ಸೇವಕರ ಜತೆಗೂಡಿ, 4 ಕೆರೆಗಳು, 10 ನೀರಿನ ಕೊಳಗಳು ಮತ್ತು 8 ದೇಗುಲಗಳ ನೀರಿನ ಮೂಲಗಳಿಗೆ ಪುನ ಶ್ಚೇತನ ನೀಡಿದ್ದಾರೆ. ಇದರಿಂದಾಗಿ 1,500 ಅಧಿಕ ಮಂದಿಗೆ ಶುದ್ಧ ಕುಡಿಯುವ ನೀರು ತಲುಪುತ್ತಿದೆ.

165 ತೆರೆದ ಬಾವಿ, 12 ಕೆರೆ ತುಂಬಿಸಿದ ರೈತ
ಹಾವೇರಿ
ಸುಮಾರು 2,500 ಎಕ್ರೆ ಪ್ರದೇಶದಲ್ಲಿ ಹರಿದು ಹಳ್ಳ ಸೇರುತ್ತಿದ್ದ ಮಳೆ ನೀರನ್ನು ಗ್ರಾಮದ 165 ತೆರೆದ ಬಾವಿಗಳಿಗೆ ತಿರುವು ಕಾಲುವೆ ಮೂಲಕ ಮರುಪೂರಣಗೊಳಿಸಿದ ಯಶೋಗಾಥೆ ಇದು. ಈ ಮಹತ್ಕಾರ್ಯ ಕೈಗೊಂಡವರು ರಾಣಿಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ರೈತ ಚನ್ನಬಸಪ್ಪ ಕೊಂಬಳಿ. ಬರಡು ನೆಲವಾಗಿದ್ದ ಕಾಕೋಳದಲ್ಲಿ 165 ತೆರೆದ ಬಾವಿಗಳು, 12 ಕೆರೆಗಳನ್ನು ನಿರ್ಮಿಸಿ ಸುಮಾರು 600 ಎಕ್ರೆ ಪ್ರದೇಶದಲ್ಲಿ ಅರಣ್ಯವನ್ನು ಪುನರುಜ್ಜೀವನಗೊಳಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಅಲ್ಲದೆ ಸಂಘ ಸ್ಥಾಪಿಸಿಕೊಂಡು, ಜಲ ಸಂರಕ್ಷಣೆಯ ಅರಿವು ಮೂಡಿಸುತ್ತಿದ್ದಾರೆ.

ಬೋರ್‌ವೆಲ್‌ ನಗರಿಯ “ಬಾವಿ’ಪ್ರಜೆ
ಬೆಂಗಳೂರು
ಬೋರ್‌ವೆಲ್‌ಗ‌ಳೇ ತುಂಬಿಕೊಂಡ ಬೆಂಗಳೂರಿನಲ್ಲಿ ಬಾವಿಗಳೇ ಅಪರೂಪ. ಹೀಗೆ ಅಳಿವಿನಂಚಿನಲ್ಲಿರುವ ಈ ಜಲಮೂಲವನ್ನು ರಕ್ಷಿಸುವ ಭಗೀರಥ ಪ್ರಯತ್ನಕ್ಕೆ ಇಳಿದ ಸಾಧಕನ ಹೆಸರು, ವಿಶ್ವನಾಥ್‌ ಶ್ರೀಕಂಠಯ್ಯ. “ರೈನ್‌ ವಾಟರ್‌ ಕ್ಲಬ್‌’ ಎಂಬ ಸಂಸ್ಥೆಯ ಅಡಿಯಲ್ಲಿ 2009ರಿಂದ ಇವರು ಆರಂಭಿಸಿದ ಜಲಸಂರಕ್ಷಣ ಸೇವೆ ಅಸಾಮಾನ್ಯ ಮೈಲುಗಲ್ಲುಗಳನ್ನೇ ನೆಟ್ಟಿದೆ. 10 ಸಾವಿರ ಬಾವಿಗಳ ಪುನಶ್ಚೇತನ ಮಾಡಿದ್ದಾರೆ.

10 ಲಕ್ಷ ಬಾವಿಗಳ ಪುನಶ್ಚೇತನದ ಗುರಿ ಕಣ್ಮುಂದೆ ಇದೆ. ಸಾಮಾಜಿಕ ಜಾಲತಾಣದ ಮೂಲಕ ಮಳೆ ನೀರು ಕೊಯ್ಲಿನ‌ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಡುವ ಇವರು, ಈವರೆಗೆ 2 ಲಕ್ಷ ಮನೆಗಳಲ್ಲಿ ಇಂಗು ಬಾವಿಗಳನ್ನು ತೆರೆಸಲು ಪ್ರೇರಣೆ ಆಗಿದ್ದಾರೆ.

ಹನಿ ಹನಿ ಕಾಳಜಿ
– ದೀರ್ಘ‌ ಸ್ನಾನದ ಬದಲು, ಕ್ವಿಕ್‌ ಶವರ್‌ನ
– ಮೊರೆ ಹೋದರೆ ಹೆಚ್ಚು ನೀರು ಉಳಿತಾಯ ಸಾಧ್ಯ.
– ಟಾಯ್ಲೆಟ್‌ನಲ್ಲಿ ತುಂಬಾ ಸಲ ಫ್ಲಶ್‌ ಮಾಡುವುದ ರಿಂದ ನೀರು ಅನಗತ್ಯವಾಗಿ ಪೋಲಾಗುತ್ತದೆ.
– ನಲ್ಲಿ, ಪೈಪ್‌, ಟ್ಯಾಂಕ್‌ನಲ್ಲಿ ಸೋರಿಕೆ ಇದ್ದರೆ ಕೂಡಲೇ ಅದನ್ನು ಗುರುತಿಸಿ, ರಿಪೇರಿ ಮಾಡಿಸಿ.
– ನಲ್ಲಿ ಬಳಸಿದ ಅನಂತರ ಬಂದ್‌ ಮಾಡುವುದನ್ನು ತಪ್ಪದೇ ಮರೆಯದಿರಿ.
– ಮನೆ ಆವರಣದಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವುದು ಉತ್ತಮ.
– ಲೋ ಫ್ಲೋ ಮಾಡೆಲ್‌ನ ಟಾಯ್ಲೆಟ್‌ಗಳನ್ನು ಹೆಚ್ಚು ಅಳವಡಿಸುವುದರಿಂದ ನೀರಿನ ಮಿತವ್ಯಯ ಸಾಧ್ಯ.
– ಬೇಸಗೆ ಅಂಚಿನ ದಿನಗಳಲ್ಲಿ ಕಾರನ್ನು ತೊಳೆಯಲು, ಆಗಾಗ್ಗೆ ಸುರಿಯುವ ಮಳೆ ನೀರನ್ನು ಆಶ್ರಯಿಸುವುದೇ ಉತ್ತಮ.

ಮಾಹಿತಿ
ವಾಣಿ ಭಟ್ಟ ,ಎಚ್‌. ಶಿವರಾಜ್‌ ,ಸಂದೀಪ ಜಿ.ಎನ್‌. ಶೇಡ್ಗಾರ್‌,ವೀರೇಶ ಮಡ್ಲೂರ್‌ ,ಶಶಿಕಾಂತ ಬಂಬುಳಗೆ,ಉದಯಶಂಕರ ನೀರ್ಪಾಜೆ

ಟಾಪ್ ನ್ಯೂಸ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.