ಇಂದು ವಿಶ್ವ ಜಲ ದಿನ; ಮೂಡಲಿ ನೀರಿನೆಚ್ಚರ


Team Udayavani, Mar 21, 2017, 10:20 PM IST

21-ANKANA-2.jpg

ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅರಿವು ಮೂಡಿಸಲು ಶತಪ್ರಯತ್ನ ನಡೆಯುತ್ತಲೇ ಇದೆ. ಈ ಉದ್ದೇಶಕ್ಕೆಂದೇ ಮಾರ್ಚ್‌ 22ನ್ನು ವಿಶ್ವ ಜಲ ದಿನ ಎಂದು ಕರೆಯಲಾಗಿದೆ. ಆದರೆ ನೀರಿನ ಸಂರಕ್ಷಣೆ ಮತ್ತು ಅದರ ಮಿತ ಬಳಕೆಯನ್ನು ಸಾಮಾನ್ಯ ಜನರ ಬದ್ಧತೆಯ ವಿಷಯವನ್ನಾಗಿ ರೂಪಿಸುವ ಪ್ರಯತ್ನ ಇನ್ನೂ ನಿರೀಕ್ಷಿತ ಫ‌ಲ ಕಂಡಿಲ್ಲ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ನೀರು ಮಾನವ ಕುಲದ ಅಸ್ತಿತ್ವ ಹಾಗೂ ಪುನಶ್ಚೇತನಕ್ಕೆ ಜೀವನಾಧಾರ ದ್ರವವಾಗಿದ್ದು, ಜೀವಜಲ ಎಂದೇ ಭಾವಿಸಲಾಗಿದೆ. ಮನುಷ್ಯನಿಗೆ ಗಾಳಿಯಂತೆಯೇ ನೀರು ಅತಿ ಅಮೂಲ್ಯ. ಕಳೆದ 300 ವರ್ಷಗಳಲ್ಲಿ ನೀರಿನ ಬಳಕೆಯ ಪ್ರಮಾಣ ಶೇ.35ರಷ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಸುಮಾರು 650 ಕ್ಯುಬಿಕ್‌ ಕಿ.ಮೀ. ನೀರಿನ ಆವಶ್ಯಕತೆಯಿದ್ದು ಇದರ ಶೇ.60 ಭಾಗ ಕೃಷಿಗೆ, ಶೇ.30 ಕೈಗಾರಿಕೆಗಳ ನಿರ್ವಹಣೆಗೆ ಹಾಗೂ ಶೇ.10 ಇತರ ಉಪಯೋಗಕ್ಕೆ ಲಭ್ಯವಾಗುತ್ತಿದೆ. ಭೂಮಿಯ ಮೇಲೆ ಲಭ್ಯವಿರುವ ಶೇ.99 ನೀರು ಮಾನವನ ನೇರ ಬಳಕೆಗೆ ಸಾಧ್ಯವಿಲ್ಲದ್ದು. ಶೇ.1ರಷ್ಟು ನೀರು ಮಾತ್ರ ಮಾನವನ ಉಪಯೋಗಕ್ಕೆ ದಕ್ಕಬಹುದಾದದ್ದು ಎಂಬ ವಾಸ್ತವ ಆಧುನಿಕ ವಿಜ್ಞಾನದ ಉದಯದ ದಿನಗಳಿಂದ ಮನುಷ್ಯನ ಅರಿವಿಗೆ ಬಂದಿದ್ದರೂ ಮಾನವ ಆ ಜೀವಜಲದ ಸಂರಕ್ಷಣೆಗೆ, ಅದರ ಸದುಪಯೋಗಕ್ಕೆ ಮತ್ತು ಅದನ್ನು ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳುವಲ್ಲಿ ಮಾತ್ರ ಬದ್ಧತೆ ಮೆರೆದಿಲ್ಲ ಎಂಬುದೇ ತೀವ್ರ ವಿಷಾದದ ಸಂಗತಿ.

ಜೀವದ್ರವವೆನಿಸಿದ ನೀರನ್ನು ಮನುಷ್ಯ ಪ್ರಜ್ಞಾಪೂರ್ವಧಿಕಧಿವಾಗಿಯೇ ಕಲುಷಿತಗೊಳಿಸುತ್ತಿರುವುದಲ್ಲದೆ ಅದರ ಬಳಕೆ ಹಾಗೂ ಸಂರಕ್ಷಣೆಯಲ್ಲಿ ಸೂಕ್ತ ವಿವೇಚನೆ ಇಲ್ಲದೆ ಭವಿಷ್ಯದ ನಾಗಧಿರಿಧಿಕತೆಯನ್ನೂ ತಲ್ಲಣ, ಆತಂಕಗಳ ವಿಷವ್ಯೂಹಕ್ಕೆ ಸಿಲುಕಿಸುತ್ತಿದ್ದಾನೆ. ಜೀವನಾಧಾರವಾದ ನೀರು ಕಲುಷಿತಗೊಳ್ಳಲು, ಅನುಧಿಪಯುಕ್ತಧಿವಾಗಲು ಅಥವಾ ವ್ಯರ್ಥವಾಗಲು ಈ ಅಂಶಗಳು ಕಾರಣಧಿವಾಗಿವೆ. ನಾಗರಿಕತೆ ಮತ್ತು ಕೈಗಾರಿಕೀಕರಣದ ಶಾಪಗಳೆನಿಸಿದ ಬೃಹತ್‌ ಕಾರ್ಖಾನೆಗಳ ತ್ಯಾಜ್ಯಗಳು ಅನಿರ್ಬಂಧಿತವಾಗಿ ನದಿ, ಜಲಾಶಯ, ಕೆರೆ ಮೊದಲಾದ ಉಪಯುಕ್ತ ನೀರಿನ ಮೂಲಧಿಗಳನ್ನು ಸೇರುತ್ತಿರುವುದು, ಅಂತರ್ಜಲದ ಅತಿ ಬಳಕೆ, ಕೃಷಿ ರಾಸಾಯನಿಕ ತ್ಯಾಜ್ಯಗಳು ಬಳಕೆಯ ನೀರನ್ನು ಸೇರುತ್ತಿರುವುದು, ನಗರಗಳ ಚರಂಡಿ ನೀರು ಹಾಗೂ ತ್ಯಾಜ್ಯ ವಸ್ತುಗಳು ಜಲಮೂಲ ಸೇರುತ್ತಿರುವುದು, ಕೈಗಾರಿಕೆಗಳಿಂದ ನದಿ ನೀರಿನ ಅನಿಯಂತ್ರಿತ  ಬಳಕೆ, ಅವೈಜ್ಞಾನಿಕ ಕೃಷಿ ಪದ್ಧತಿ, ಸಾಗರ ಸಮುದ್ರಗಳ ಮಾಲಿನ್ಯ- ಇವು ನೀರು ಮಲಿನಗೊಳ್ಳಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿರುವ ಕೆಲವು ಪ್ರಮುಖ ಕಾರಣಗಳು. ಇದಲ್ಲದೆ ಭೌಗೋಳಿಕ ಅಂಶಗಳು, ಜನಸಾಂದ್ರತೆ, ಒಂದು ದೇಶದ ಆರ್ಥಿಕ ಚಟುವಟಿಕೆಗಳು, ಆಧುನಿಕತೆಯ ದುಷ್ಪರಿಣಾಮಗಳು ಮತ್ತು ಅಲ್ಲಿನ ಆಂತರಿಕ ಸಂಘರ್ಷಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ, ದೇಶದಿಂದ ದೇಶಕ್ಕೆ ಈ ಕಾರಣಗಳು ಬದಲಾಗುತ್ತಲೂ ಹೋಗಬಹುದು.

ಶತ ಪ್ರಯತ್ನ ನಡೆದರೂ ಮೂಡದ ಜಾಗೃತಿ
ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತಂತೆ ಸುಮಾರು 50 ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇವೆ. ವಿಶ್ವಸಂಸ್ಥೆ, ಯುನಿಸೆಫ್, ಅಂತಾರಾಷ್ಟ್ರೀಯ ಸಮುದಾಯಗಳು ನೀರಿನ ಮೇಲಾಗುತ್ತಿರುವ ಆಕ್ರಮಣ ಮತ್ತು ಮಾಲಿನ್ಯವನ್ನು ತಡೆಗಟ್ಟಲು ಶತಾಯಗತಾಯ ಪ್ರಯತ್ನ ನಡೆಸಿವೆ. ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅವರಲ್ಲಿ ಅರಿವು ಮೂಡಿಸಲು ಹಲವು ತುರ್ತು ಕ್ರಮಗಳನ್ನು ಕೈಗೊಂಡಿವೆ. ಈ ಉದ್ದೇಶಕ್ಕೆಂದೇ ಮಾರ್ಚ್‌ 22ನ್ನು ವಿಶ್ವ ಜಲ ದಿನ ಎಂದು ಕರೆದು ಜಾಗತಿಕ ಮಟ್ಟದಲ್ಲಿ ಜನರಲ್ಲಿ ನೀರಿನ ಮಹತ್ವದ ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ಆದರೆ ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ನೀರಿನ ಸಮಾನ ಹಂಚಿಕೆ ಮೂಲಭೂತ ಹಕ್ಕಾಗಿ ಉಳಿದಿಲ್ಲ. ನೀರಿನ ಸಂರಕ್ಷಣೆ ಮತ್ತು ಅದರ ಮಿತ ಬಳಕೆಯನ್ನು ಸಾಮಾನ್ಯ ಜನರ ಬದ್ಧತೆಯ ವಿಷಯವನ್ನಾಗಿ ರೂಪಿಸುವಲ್ಲಿ ಸರಕಾರಗಳು ಮತ್ತು ಸಾಮಾಜಿಕ ಸಂಸ್ಥೆಗಳು ವಿಫ‌ಲವಾಗಿವೆ.

ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ನೀರಿನ ಮಹತ್ವದ ಬಗ್ಗೆ ಅರಿವು ಬೆಳೆಸಿಕೊಂಡಿಲ್ಲ. ಹೀಗಾಗಿ ಅದನ್ನು ಮನಸೋ ಇಚ್ಛೆ ಪೋಲು ಮಾಡುವ ಮನೋಭಾವ ಹೊಂದಿದ್ದಾರೆ. ಆಧುನಿಕ ಜೀವನ ಶೈಲಿ, ಐಶಾರಾಮಿ ಬದುಕು ಹಾಗೂ ಕೊಳ್ಳುಬಾಕ ಸಂಸ್ಕೃತಿ ಜನರನ್ನು ಸ್ವಾರ್ಥಪರರನ್ನಾಗಿ ಮಾಡಿ ಮತ್ತೂಬ್ಬನ ಅಸ್ತಿತ್ವದ ಬಗ್ಗೆ ಯೋಚಿಸದಂತೆ ಮಾಡಿವೆ. ನೀರಿಗೂ ಇದು ಅನ್ವಯಿಸುತ್ತದೆ. ಇಂತಹ ಮನೋಭಾವದ ಒಂದು ಸಮುದಾಯವನ್ನು ಪರಿವರ್ತಿಸಿ ಅವರಲ್ಲಿ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪರಿಣಾಮಕಾರಿ ತಂತ್ರಗಳನ್ನು ರೂಪಿಸಬೇಕಿದೆ.

ತಾಂತ್ರಿಕ ದೃಷ್ಟಿಕೋನವೂ ಅಗತ್ಯ
ನೀರಿನ ನಿರ್ವಹಣೆ, ಸಂರಕ್ಷಣೆ ಕುರಿತು ಯಾರಾದರೂ ಜಾಗೃತಿ ಮೂಡಿಸಬಹುದಾಗಿದೆ ಮತ್ತು ಅದು ಎಲ್ಲರ ಕರ್ತವ್ಯವೂ ಆಗಿದೆ ಎಂಬುದು ನಿಜವೇ! ಆದರೆ ನೀರಿನ ನಿರ್ವಹಣೆ ಅಂದರೆ ಅದು ಇಂದಿನ ದಿನಗಳಲ್ಲಿ ಕೇವಲ ಸಾರ್ವಜನಿಕ ಬಾವಿ, ಕೆರೆಗಳ ನೀರಿನ ನಿರ್ವಹಣೆ ಮಾತ್ರವಲ್ಲ. ಸಮುದಾಯದ ಹಿತ ಕಾಯುವಲ್ಲಿ ನೀರಿನ ಬಳಕೆ ಮತ್ತು ಅದರ ಸಂರಕ್ಷಣೆಯನ್ನು ತಾಂತ್ರಿಕ ದೃಷ್ಟಿಕೋನದಿಂದ ಕೂಡ ನೋಡಬೇಕಾಗುತ್ತದೆ. ಏಕೆಂದರೆ ನೀರು ಇಂದಿನ ನಮ್ಮ ದೈನಂದಿನ ಉಪಯೋಗದ ಲಭ್ಯತೆಯ ದೃಷ್ಟಿಯಿಂದಷ್ಟೇ ಮುಖ್ಯವಲ್ಲ. ಅದು ಪ್ರತಿಯೊಂದು ಉತ್ಪನ್ನ, ಸರಕು ಹಾಗೂ ಸೌಲಭ್ಯದೊಂದಿಗೆ ಅಂತರ್ಗತವಾದ ಸಂಬಂಧವನ್ನು ಹೊಂದಿದೆ. ನೀರು ಹಾಗೂ ಈ ಉಪಭೋಗದ ಸಂಬಂಧಗಳ ವಿಶ್ಲೇಷಣೆ ಅತಿ ಮುಖ್ಯವಾದದ್ದು. ಹಾಗಾಗಿ ಇದು ವಿದ್ಯಾರ್ಥಿಗಳು ಹಾಗೂ ಯುವಜನತೆಯ ಪಾಲ್ಗೊಳ್ಳುವಿಕೆಯನ್ನೇ ಹೆಚ್ಚು ಅಪೇಕ್ಷಿಸುತ್ತದೆ. ಉದಾಹರಣೆಗೆ, ಒಂದು ಗ್ಯಾಲನ್‌ ಕಚ್ಚಾ ತೈಲ ಉತ್ಪಾದನೆಗೆ 2.2ರಿಂದ 6 ಗ್ಯಾಲನ್‌ನಷ್ಟು ನೀರು ಬೇಕಾಗುತ್ತದೆ. ಹೆಚ್ಚು ಹೆಚ್ಚು ದೂರದಿಂದ ನಾವು ಆಹಾರ ಮತ್ತು ಎಣ್ಣೆಯನ್ನು ಅಮದು ಮಾಡಿಕೊಂಡಂತೆಲ್ಲ ಅದಕ್ಕೆ ಬಳಕೆಯಾಗುವ ನೀರು ಕೂಡ ಹೆಚ್ಚುತ್ತದೆ. ನಾವು ಸ್ಥಳೀಯವಾಗಿ ವಸ್ತುಗಳನ್ನು ಕೊಂಡಾಗ ಅಂತಧಿರ್ಗತ ನೀರಿನ ಖರ್ಚು ಗಣನೀಯವಾಗಿ ಕಡಿಮೆಧಿಯಾಧಿಗುತ್ತದೆ. ಹಾಗೇ ಒಂದು ಕೆಜಿ ಬಿ.ಟಿ. ಹತ್ತಿ ಉತ್ಪಾದನೆಗೆ 20 ಸಾವಿರ ಲೀಟರ್‌ ನೀರು ಬೇಕಾಗುತ್ತದೆ. ಹಲವು ಫ್ಯಾಶನ್‌ ಉಡುಪುಗಳು ಕೂಡ ಇದೇ ಮಾದರಿಯಲ್ಲಿ ದುಬಾರಿ ನೀರಿನ ಖರ್ಚು ಹೊಂದಿರುತ್ತವೆ. ಸಾವಯವ ವಸ್ತುಗಳ ಉಪಯೋಗ ಬಳಕೆಯಾಗುವ ನೀರಿನ ಪ್ರಮಾಣವನ್ನು ಕುಗ್ಗಿಸುತ್ತದೆ. ಬ್ರೆಜಿಲ್‌ನಲ್ಲಿ 1 ಪೌಂಡ್‌ ಹತ್ತಿಯನ್ನು 10.6 ಗ್ಯಾಲನ್‌ ನೈಸರ್ಗಿಕ ಮಳೆ ನೀರಿನಿಂದ ಬೆಳೆದರೆ ಕ್ಯಾಲಿಫೋರ್ನಿಯಾದಲ್ಲಿ ಅದೇ ಪ್ರಮಾಣದ ಹತ್ತಿ ಬೆಳೆಯಲು 782 ಗ್ಯಾಲನ್‌ ನೀರು ಬೇಕಾಗುತ್ತದೆ ಎಂದು ಒಂದು ವರದಿ ತಿಳಿಸುತ್ತದೆ. ಹಾಗಾಗಿ ಸಾವಯವ ಬಳಕೆಯ ವಸ್ತುಗಳು ಹಾಗೂ ಸ್ವದೇಶೀ ನಿರ್ಮಿತ ವಸ್ತುಗಳನ್ನು ಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ

ಸಮುದ್ರ ನೀರನ್ನು ರಕ್ಷಿಸಬೇಡವೇ!
ಇಷ್ಟಾಗಿಯೂ ನಮ್ಮಲ್ಲಿ ಒಂದು ತಪ್ಪು ಕಲ್ಪನೆಯಿದೆ- ಮನುಷ್ಯನ ಬಳಕೆಗೆ ಈ ಭೂಮಿಯಲ್ಲಿ ಲಭ್ಯವಿರುವ ಶೇ.1ರಷ್ಟು ನೀರನ್ನು ಸಂರಕ್ಷಿಸಿದರೆ, ಹಿತಮಿತವಾಗಿ ಬಳಸಿಬಿಟ್ಟರೆ ಸಾಕು! ಆದರೆ ಸಿಹಿ ನೀರನ್ನು ಸಂರಕ್ಷಿಸುವಂತೆಯೇ ಸಮುದ್ರ ಸಾಗರಗಳ ನೀರನ್ನೂ ರಕ್ಷಿಸಬೇಕಾದದ್ದು ನಮ್ಮ ಮಹತ್ವದ ಕರ್ತವ್ಯ. 2002ರಲ್ಲಿ ಬಹಾಮದ ತೈಲ ಸಾಗಣೆ ಹಡಗೊಂದು ಸ್ಪೇಯ್ನನ ಕಡಲ ತೀರದಲ್ಲಿ ಅಪಘಾತಕ್ಕೀಡಾಗಿ 77 ಸಾವಿರ ಮೆ.ಟನ್‌ನಷ್ಟು ತೈಲ ಸಮುದ್ರಕ್ಕೆ ಸೋರಿ ಅಪಾರ ಪ್ರಮಾಣದಲ್ಲಿ ನೀರು ಕಲುಶಿತಗೊಂಡಿತ್ತು. 2003ರಲ್ಲಿ ಗಲ್ಫ್ ಯುದ್ಧದ ಸಂದರ್ಭದಲ್ಲೂ ಕೆಂಪು ಸಮುದ್ರ, ಮೆಡಿಟರೇನಿಯನ್‌ ಸಮುದ್ರ ಹಾಗೂ ಅರೇಬಿಯನ್‌ ಸಮುದ್ರದ ನೀರು ತೈಲ ಸೋರಿಕೆ ಹಾಗೂ ಇತರ ಯುದ್ಧ ರಾಸಾಯನಿಕಗಳಿಂದ ಕಲುಷಿತಗೊಂಡಿತ್ತು. ಇಂತಹ ಘಟನೆಗಳು ಜೈವಿಕ ಸರಪಣಿ ಹಾಗೂ ವಾತಾವರಣದ ಮೇಲೆ ದೊಡ್ಡ ಆತಂಕವನ್ನು ಸೃಷ್ಟಿಸುತ್ತವೆ. ಈ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಬೇಕಿದೆ.

ಈಗ ನೀರಿನ ಉಪಯೋಗದ ಸೂತ್ರವೇ ಬದಲಾಗಿದೆ. ಈಗ ಉತ್ಪನ್ನದ ಮಾಪನ ಪ್ರತಿ ಪ್ರದೇಶದ ತಲಾ ಗರಿಷ್ಠ ಉತ್ಪಾದನೆಯ ಅಳತೆಯಾಗಿ ಉಳಿದಿಲ್ಲ. ಅದೀಗ ತಲಾ ಯುನಿಟ್‌ ನೀರಿನ ಉಪಯೋಗದಿಂದ ಬಂದ ಗರಿಷ್ಠ ಉತ್ಪನ್ನಕ್ಕೆ ಬದಲಾಗಿದೆ. ಈ ಹಿನ್ನೆಲೆಯಲ್ಲಿ, ಅತಿ ಕಡಿಮೆ ಬಳಕೆಯ ನೀರಿನಿಂದ ಹೆಚ್ಚು ಉತ್ಪನ್ನಗಳನ್ನು ಉತ್ಪಾದಿಸುವುದೇ ಹೆಚ್ಚು ಲಾಭದಾಯಕ ಮತ್ತು ಸುಸ್ಥಿರ ಅಭಿವೃದ್ಧಿ ಎಂದು ಭಾವಿಸಲಾಗಿದೆ. ಈ ಹಿನ್ನೆಲೆಯಲ್ಲೇ ನೀರಿನ ಕುರಿತಾದ ಎಲ್ಲ ಯೋಜನೆಗಳನ್ನು ವಿಶ್ಲೇಷಿಸಬೇಕಿದೆ. ಹಾಗೆಯೇ ನೀರಿನ ಹಕ್ಕಿನ ಖಾಸಗೀಕರಣ ನಿಲ್ಲಬೇಕಿದೆ. ಎಲ್ಲ ಖಾಸಗಿ ನೀರಿನ ಮೂಲಗಳು ಹಿಂದಿದ್ದ ಕೆರೆಕಟ್ಟೆಗಳ ಮಾದರಿಯಲ್ಲಿ ಸಮುದಾಯದ ನಿಯಂತ್ರಣಕ್ಕೊಳಪಡಬೇಕು. ಸಮುದಾಯವೇ ಅವುಗಳನ್ನು ನಿಯಂತ್ರಿಸುವಂತಾಗಬೇಕು. ಜಲಸಂರಕ್ಷಣೆ ಮತ್ತು ಮಳೆಕೊಯ್ಲಿನಿಂದ ಮಾತ್ರ ನಾವು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಸಮುದಾಯದಲ್ಲಿ ನೀರಿನ ಸಮರ್ಪಕ ಹಂಚಿಕೆಯಾಗಬೇಕು. ನೀರು ಇಂದು ಆರೋಗ್ಯ, ಸಾಕ್ಷರತೆ, ಉದ್ಯೋಗ ಹೀಗೆ ಬದುಕಿನ ಎಲ್ಲ ಆಯಾಮಗಳಿಗೂ ತಳುಕು ಹಾಕಿಕೊಂಡಿದೆ. ಬಡತನ, ಅನಾರೋಗ್ಯ ಸಮಸ್ಯೆಗಳಿಗೆ ನೀರು ಮುಖ್ಯ ಕಾರಣವಾಗುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಕಾಂಕ್ರೀಟ್‌ ಕಾಡುಗಳನ್ನು ಕಟ್ಟುತ್ತಾ ಹಳ್ಳಿಗಳನ್ನು, ಕೆರೆಕಟ್ಟೆಗಳನ್ನು ನುಂಗಿದ ನಾವು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನೇ ಹಾಳು ಮಾಡುತ್ತಿದ್ದೇವೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಟಿ. ಪಿ. ಶರಧಿ, ಹಾಸನ

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.