ಇಂದು ಯುವ ದಿನ; ವಿವೇಕಾನಂದರು ಬಯಸಿದ ಯುವಶಕ್ತಿ


Team Udayavani, Jan 12, 2023, 6:10 AM IST

ಇಂದು ಯುವ ದಿನ; ವಿವೇಕಾನಂದರು ಬಯಸಿದ ಯುವಶಕ್ತಿ

ನಮ್ಮ ಭಾರತವು ಯುವ ರಾಷ್ಟ್ರ ಎಂದರೆ ಅಸಂಖ್ಯ ಯುವಕರಿಂದ ಕೂಡಿರುವ ರಾಷ್ಟ್ರ. ಆದರೂ ನಮ್ಮ ದೇಶ ಇನ್ನೂ ಮುಂದುವರಿಯುತ್ತಿರುವ ದೇಶವಾಗಿದೆ. ಇದು ನಮ್ಮ ದುರದೃಷ್ಟದ ಸಂಗತಿಯೇ ಸರಿ. ನಮ್ಮ ಯುವಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಸ್ವಾವಲಂಬನೆ ಜೀವನ ಹೆಚ್ಚು ನಡೆಸಿದರೆ ಅವರು ಮುಂದು ವರಿಯುತ್ತಾರೆ. ಮತ್ತೊಮ್ಮೆ ನಮ್ಮ ರಾಷ್ಟ್ರ ಮುಂದುವರಿದ ದೇಶ, ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಯಂಗೆಂಗೋ ಇದ್ದರೆ ನಾವು ಯಂಗ್‌ ಅಂದುಕೊಂಡಿದ್ದಾರೆ ಇಂದಿನ ಅನೇಕ ಯುವಕರು. ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ನಮ್ಮ ತಂದೆ- ತಾಯಿಗಳು. ಗುರು-ಹಿರಿಯರು ನಾವು ಏನು ಮಾಡಿದರೂ ಪ್ರಶ್ನಿಸಬಾರದು ಎಂದು ವಾದಿಸುತ್ತಾರೆ. ಅದು ಸ್ವಾತಂತ್ರ್ಯವಲ್ಲ, ಬದಲಾಗಿ ಸ್ವೇಚ್ಛಾಚಾರ.

ಸ್ವಾತಂತ್ರ್ಯ ಎಂದರೆ ಜವಾಬ್ದಾರಿ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ. ಹಾಗಾದರೆ ಸ್ವಾತಂತ್ರ್ಯ ಎಂದರೇನು?. ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯ ಎಂದರೆ ಜವಾಬ್ದಾರಿ ಎಂದು ವ್ಯಾಖ್ಯಾನಿಸಿದ್ದಾರೆ.
ನಮ್ಮ ಕೆಲಸಗಳು, ಆಲೋಚನೆಗಳು, ಕನಸುಗಳು, ಆಸೆ ಗಳಿಗೆ ನಾವು ಜವಾಬ್ದಾರಿಯುತರಾಗಬೇಕು. ಅವರಂತೆ ನಾವು ಕಾರ್ಯ ಮಾಡಬೇಕು. ಈ ರೀತಿಯಲ್ಲಿ ಎಷ್ಟು ಜನ ಯುವಕರು ನಡೆದುಕೊಳ್ಳುತ್ತಾರೆ? ಕೆಲವೇ ಕೆಲವು ಯುವ ಕರು ಮಾತ್ರ ಈ ರೀತಿ ಇರುತ್ತಾರೆ. ಹೀಗಾಗಿ ಜವಾಬ್ದಾರಿಯುತ ಯುವಕರಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಮಾಜ ನಿರ್ಮಾಣ ಸಾಧ್ಯ.

ಗುರಿಯ ಅವಶ್ಯಕತೆ: “ಹಿಂದೆ ಗುರುವಿದ್ದರೆ ಮುಂದೆ ಗುರಿಯತ್ತ ಸಾಗಿತ್ತು ರಣಧೀರರ ಹಿಂಡು. ಇಂದು ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ, ಸಾಗಿವೆ ರಣಹೇಡಿಗಳ ಹಿಂಡು’ ಎಂದಿ ದ್ದಾರೆ ರಾಷ್ಟ್ರಕವಿ ಕುವೆಂಪು. ಗೊತ್ತುಗುರಿಯಿಲ್ಲದೆ ಯುವಕರು ಇಂದು ಸುಮ್ಮನೆ ಅಲೆದಾಡುತ್ತಿರುವುದು, ಕಾಲಹರಣ ಮಾಡುತ್ತಿರುವುದನ್ನು ಅನೇಕ ಬಾರಿ ನಾವು ಕಾಣಬಹುದು.

ಒಬ್ಬ ಯುವಕ ಗುರಿಯನ್ನಿಟ್ಟುಕೊಂಡಾಗ, ಅವನ ಸಮಯ, ಶಕ್ತಿಗಳು ಸರಿಯಾದ ದಿಕ್ಕಿನಲ್ಲಿ ನಿರ್ದಿಷ್ಟ ರೀತಿಯಲ್ಲಿ ಹರಿ ಯುತ್ತವೆ. ಆದ್ದರಿಂದ ಸ್ವಾಮಿ ವಿವೇಕಾನಂದರು, “”ಗುರಿಯಿರುವ ವ್ಯಕ್ತಿ ಹತ್ತು ಸಾವಿರ ತಪ್ಪು ಮಾಡಿದರೆ, ಗುರಿಯಿರದ ವ್ಯಕ್ತಿ 50 ಸಾವಿರ ತಪ್ಪುಗಳನ್ನು ಮಾಡುತ್ತಾನೆ” ಎಂದು ಹೇಳಿದ್ದಾರೆ.

ಡಾ. ಕಲಾಂ, ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಮುಂತಾದವರೇ ಇದಕ್ಕೆ ಉತ್ತಮ ನಿರ್ದಶನ.
ವ್ಯಕ್ತಿತ್ವ ನಿರ್ಮಾಣ ಯಶಸ್ಸಿನ ಕೀಲಿಕೈ: 16ರಿಂದ 30 ವರ್ಷದ ವಯಸ್ಸಿನವರು ಯುವಕರು ಎಂದಷ್ಟೇ ಹೇಳ ಲಾರದು. ಯಾರಲ್ಲಿ ಅದಮ್ಯ ಉತ್ಸಾಹ, ಶಕ್ತಿ, ಆತ್ಮಬಲ, ಧೈರ್ಯ ಇರುತ್ತದೆಯೋ ಅವರೆಲ್ಲರನ್ನೂ ಯುವಕರೆನ್ನಬಹುದು. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಯುವ ಕರು “”ನಮಗಿಂದು ಕಬ್ಬಿಣದಂಥ ಮಾಂಸಖಂಡ, ಉಕ್ಕಿ ನಂಥ ನರಮಂಡಲ, ಹಾಗೂ ವಿದ್ಯುತ್ಛಕ್ತಿಯಂಥ ಮನೋಬಲವುಳ್ಳ ಯುವಕರು ಬೇಕು. ಇವರು ಶಾಂತರೂ, ಸೂಕ್ಷ್ಮ ಮತಿಗಳೂ, ಪ್ರಾಮಾಣಿಕರೂ, ಕಾಮ ಕಾಂಚನ, ಹೆಸರು-ಕೀರ್ತಿಗಳ ಹುಚ್ಚಿಲ್ಲದವರೂ ಆಗಿರಬೇಕು”.

ಅಬ್ಟಾ ಎಂಥ ವಿಚಾರ ಸ್ವಾಮೀಜಿಯವರದ್ದು, ಸ್ವಾಮೀಜಿಯವರ ಈ ಮೇಲಿನ ಮಾತುಗಳನ್ನು ಸೂಕ್ಷ್ಮ ವಾಗಿ ಗಮನಿಸಿ ದಾಗ ವ್ಯಕ್ತಿತ್ವದ ಎಲ್ಲ ಆಯಾಮಗಳ ಬೆಳವಣಿಗೆ ಯನ್ನು ಹುದುಗಿಸಿಬಿಟ್ಟಿದ್ದಾರೆ. ಶಾರೀರಿಕ ಬಲವು ನಮಗೆ ಬಹಳ ಮುಖ್ಯ. ಆದ್ದರಿಂದ ಕಬ್ಬಿಣದಂಥ ಮಾಂಸಖಂಡ, ಉಕ್ಕಿನಂಥ ನರಮಂಡಲ ಎಂದು ಸ್ವಾಮೀಜಿ ಹೇಳಿರುವುದು ನಾವು ವ್ಯಾಯಾಮ, ಕಾಯಕ, ಸರಿಯಾದ ಆಹಾರ ಮುಂತಾದವುಗ ಳನ್ನು ಹಿತ- ಮಿತವಾಗಿ ಮಾಡುವುದರಿಂದ ಶಾರೀರಿಕವಾಗಿ ಸದೃಢವಾಗಬಹುದು. ಅದರಿಂದ ಹೆಚ್ಚಿನ ಕಾರ್ಯಗಳನ್ನು ಮಾಡಬಹುದು.
ಪ್ರಾಮಾಣಿಕತೆಯ ಜತೆಗೆ ಸೂಕ್ಷ್ಮಮತಿಯೂ ಬಹಳ ಮುಖ್ಯ. ನಮ್ಮಲ್ಲಿ ಅನೇಕ ಪ್ರಾಮಾ ಣಿಕ ಯುವಕರು ಅಥವಾ ಸಜ್ಜನರು ಪ್ರಾಮಾಣಿಕವಾಗಿ ನಾವು ಜೀವನ ನಡೆಸಲು, ಕೆಲಸ ಮಾಡಲು ಪ್ರಯತ್ನಿಸಿದೆವು. ಆದರೆ ಅದರಿಂದ ಸಫ‌ಲತೆ ಸಿಗಲಿಲ್ಲ ಎಂದು ಹಲುಬುವುದನ್ನು ನಾವು ಕೇಳಿರಬಹುದು. ಅನೇಕ ಬಾರಿ ಅದಕ್ಕೆ ಕಾರಣ ಸೂಕ್ಷ್ಮಮತಿ, ಕೌಶಲ್ಯಗಳ ಕೊರತೆಯೂ ಇರಬಹುದು. ಆದ್ದರಿಂದ ಸಮಸ್ಯೆಗಳನ್ನು ಸನ್ನಿವೇಶಗಳನ್ನು ಇತರೆ ವ್ಯಕ್ತಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಮಯಕ್ಕೆ ಸರಿಯಾಗಿ ಮುಂದೆ ಸಾಗಲು ನಮಗೆ ಸೂಕ್ಷ್ಮಮತಿ ಬಹಳ ಅವಶ್ಯಕ. ಸದ್ಗಂಥಗಳ ಅಧ್ಯಯನ, ಚಿಂತನೆ, ಸಾಧಕರ ಜೀವನ ಸಂದೇಶಗಳನ್ನು ಆಳವಾಗಿ ಓದುವುದರಿಂದ ನಮ್ಮ ಮತಿಯನ್ನು ಹರಿತ ಮಾಡಿಕೊಳ್ಳಬಹುದು.

ಅನೇಕ ಬಾರಿ ಕೆಲವರು ಒಳ್ಳೆಯ ಶಕ್ತಿ, ಉತ್ಸಾಹ, ಸೂಕ್ಷ್ಮಮತಿಗಳನ್ನು ಹೊಂದಿರುತ್ತಾರೆ. ಬಹಳ ಶ್ರಮಪಟ್ಟು ಮೇಲೆ ಬರಲು ಪ್ರಯತ್ನಿಸುತ್ತಾರೆ. ಸ್ವಲ್ಪ ಯಶಸ್ಸು, ಹೆಸರು, ಕೀರ್ತಿ ಸಿಕ್ಕಿದೊಡನೆಯೇ ಅವರು ಬದಲಾಗಿಬಿಡುತ್ತಾರೆ. ಅಧಿಕಾರ, ಸಂಪತ್ತು, ಕೀರ್ತಿಗೆ ಬಲಿಪಶುಗಳಾಗುತ್ತಾರೆ. ಅವರು ಮಾರ್ಗ, ಸಿದ್ಧಾಂತಗಳಿಂದ ವಿಮುಖರಾಗಿ ಬಿಡು ತ್ತಾರೆ. ಈ ಎಲ್ಲ ನ್ಯೂನತೆಗಳನ್ನು ಸರಿಮಾಡಲು ಸ್ವಾಮೀಜಿ ಪ್ರಾಮಾ ಣಿಕತೆ, ಕಾಮ-ಕಾಂಚನ, ಹೆಸರು-ಕೀರ್ತಿಗಳ ಹುಚ್ಚಿಲ್ಲದ ಯುವಕರು ಆಗಿರಬೇಕು ಎಂದು ಹೇಳಿರುವುದು.

ಸ್ವಾಮಿ ವಿವೇಕಾನಂದರು ಈ ಕೆಳಗಿನ ಮಾತುಗಳನ್ನು ಭಾರತೀಯರಿಗಾಗಿ ಅನೇಕ ಬಾರಿ ಹೇಳಿದ್ದಾರೆ. “ಮೊಟ್ಟ ಮೊದಲನೆಯದಾಗಿ ವಿಧೇಯತೆಯನ್ನು ಅಭ್ಯಸಿಸಿರಿ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಉತ್ತುಂಗವಾದ ಸ್ವಾತಂತ್ರ್ಯಪ್ರಿಯತೆ ಇರುವಂತೆ ಅಷ್ಟೇ ಬಲವಾದ ವಿಧೇಯತೆಯ ಮನೋಭಾವವೂ ಇದೆ. ನಾವಾದರೋ ನಮಗೆ ಹೇಳಬಲ್ಲವರು ಈ ಜಗತ್ತಿನಲ್ಲಿ ಹುಟ್ಟಿಲ್ಲ ಎಂಬ ಧೋರಣೆ ತಾಳಿರುವುದರಿಂದ ಏನನ್ನೂ ಸಾಧಿಸಲಾರದವರಾಗಿದ್ದೇವೆ. ಆದ್ದರಿಂದ ಓ ನನ್ನ ಯುವಕರೇ, ಅಗಾಧ ವಾದ ಕಾರ್ಯಶಕ್ತಿ, ಆಸೀಮ ಧೈರ್ಯ, ಅಪಾರ ಬಲ ಇವೆಲ್ಲಕ್ಕೂ ಹೆಚ್ಚಾಗಿ ಪರಿಪೂರ್ಣ ವಿಧೇಯತೆ- ಇವುಗಳೇ ವ್ಯಕ್ತಿಯ ಉದ್ಧಾರಕ್ಕೂ ರಾಷ್ಟ್ರದ ಪ್ರಗತಿಗೂ ಸಾಧಕ. ಇಂತಿಂಥ ಗುಣಗಳೆಲ್ಲ ನಮ್ಮಲ್ಲಿ ನಶಿಸಿಯೇ ಹೋಗಿವೆ. ಅವುಗಳನ್ನು ಊರ್ಜಿತ ಗೊಳಿಸಿಕೊಳ್ಳಬೇಕು.”

ಇಂದು ಸಾವಿರಾರು ಜನ ಸ್ವಾಮೀಜಿಯ ಕೆಲವು ಸಂದೇಶಗಳನ್ನು ಅಳವಡಿಕೊಳ್ಳುವುದರ ಮೂಲಕ ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿ ದ್ದಾರೆ. ಅಲ್ಲದೆ, ಸ್ವಾಮಿ ವಿವೇಕಾನಂದರೇ ಈ ಮೇಲಿನ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿ, ತರುವಾಯ ನಮಗೆ ತಿಳಿಸಿರುವುದು ಮಹತ್ವದ ಸಂಗತಿ.

ನಮ್ಮ ಭಾರತವು ಯುವ ರಾಷ್ಟ್ರ ಎಂದರೆ ಅಸಂಖ್ಯ ಯುವಕರಿಂದ ಕೂಡಿರುವ ರಾಷ್ಟ್ರ. ಆದರೂ ನಮ್ಮ ದೇಶ ಇನ್ನೂ ಮುಂದುವರಿಯುತ್ತಿರುವ ದೇಶವಾಗಿದೆ. ಇದು ನಮ್ಮ ದುರದೃಷ್ಟದ ಸಂಗತಿಯೇ ಸರಿ. ನಮ್ಮ ಯುವಕರು ಜವಾಬ್ದಾರಿ ಯಿಂದ ಕಾರ್ಯನಿರ್ವಹಿಸಿ, ಸ್ವಾವಲಂಬನೆ ಜೀವನ ಹೆಚ್ಚು ನಡೆಸಿದರೆ ಅವರು ಮುಂದುವರಿಯುತ್ತಾರೆ. ಮತ್ತೂಮ್ಮೆ ನಮ್ಮ ರಾಷ್ಟ್ರ ಮುಂದುವರಿದ ದೇಶ, ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಿರೋಶಿಮಾ- ನಾಗಸಾಕಿಗಳಲ್ಲಿ ಬಾಂಬ್‌ ಸ್ಫೂಟ ಗೊಂಡು ಜಪಾನ್‌ ದೇಶ ತಲ್ಲಣಿಸಿತು. ಅದರಿಂದ ಅವರ ದೇಶಕ್ಕೆ ಹೇಳಲಾರದಷ್ಟು ನಷ್ಟವಾಗಿತ್ತು. ಆದರೆ, ಜಪಾನಿ ಯರು ಅಳುತ್ತಾ ಕೂರಲಿಲ್ಲ. ದೇವರನ್ನು, ದೇಶವನ್ನು, ಧರ್ಮವನ್ನು ಹೀಯಾಳಿಸಲಿಲ್ಲ. ಬದಲಾಗಿ ನಮ್ಮ ದೇಶವನ್ನು ಹೇಗೆ ನಾವು ಮರುನಿರ್ಮಾಣ ಮಾಡಬಲ್ಲೆವು ಎಂದು ಆಲೋಚಿಸಿದರು. ದೇಶ ನಿರ್ಮಾಣವೇ ನಮ್ಮ ಗುರಿ ಎಂದು ಸಂಕಲ್ಪ ಮಾಡಿದರು. ಏಕೆಂದರೆ ದೇಶ ಚೆನ್ನಾಗಿದ್ದರೆ, ನಾವು ಚೆನ್ನಾಗಿರುತ್ತೇವೆ ಎಂದು ಅವರು ಚೆನ್ನಾಗಿ ತಿಳಿದಿದ್ದರು. ಆದ್ದರಿಂದ ಮೂವತ್ತು ವರ್ಷಗಳಲ್ಲಿ ಜಪಾನಿಯರು ಅವರ ದೇಶವನ್ನು ಸ್ವ-ಪರಿಶ್ರಮದಿಂದ ಮುಂದುವರಿದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಿದರು.

ಅದೇ ರೀತಿ ಇಸ್ರೇಲ್‌ ದೇಶದ ಕತೆಯೂ ಕೂಡ. ಅವರಿಗೆ 1949ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಎಷ್ಟು ಸಮಸ್ಯೆಗಳು, ಯುದ್ಧಗಳನ್ನು ಅವರು ಎದುರಿಸಬೇಕಾಯಿತು. ಆದರೆ, ಅದು ಕೂಡ ಮುಂದುವರಿದ ರಾಷ್ಟ್ರದ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಹಲವು ದಶಕಗಳ ಹಿಂದೆಯೇ ಸಾಧಿಸಿತು.

ಭಾರತೀಯರೇ, ಸಾವಿರಾರು ವರ್ಷಗಳ ಅಮೋಘ ಇತಿಹಾಸವಿರುವ, ನಮ್ಮ ದೇಶವನ್ನು ಮತ್ತೂಮ್ಮೆ ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸಲು ತಮ್ಮ ಕರ್ತವ್ಯ, ಶ್ರಮ ಅತ್ಯಗತ್ಯ. ಆ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಸೇವೆಯನ್ನು ಮಾಡಿ ತೆರಳಿದ್ದಾರೆ. ಇಂದು ನಮ್ಮ ಸರದಿ ಸ್ವಾಮಿ ವಿವೇಕಾನಂದರ ಮಾತುಗಳನ್ನು ಆಲಿಸಿ ಅವರಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಪುರುಷ ಸಿಂಹರಾಗೋಣ. ಭರತ ಮಾತೆಯ ಸೇವೆಗೈದು ಪುನೀತರಾಗೋಣ ಧನ್ಯರಾಗೋಣ.

ಸ್ವಾಮಿ ವಿವೇಕಾನಂದರ ಕನಸನ್ನೇ ನನಸು ಮಾಡೋಣವೇ! ಬನ್ನಿ ಯುವಕರೇ ಭವ್ಯ ಭಾರತದ ನಿರ್ಮಾಣಕ್ಕಾಗಿ! ಜೈ ಸ್ವಾಮೀಜಿ.

-ಸ್ವಾಮಿ ಶಾಂತಿವ್ರತಾನಂದ,
ಅಧ್ಯಕ್ಷರು ರಾಮಕೃಷ್ಟ ವೇದಾಂತ ಕೇಂದ್ರ, ಐರ್ಲೆಂಡ್‌

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.