Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ
Team Udayavani, Sep 29, 2023, 6:50 AM IST
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಹೃದಯ ಸ್ತಂಭನದಂತಹ ಹೃದಯ ಸಂಬಂಧಿ ಕಾಯಿಲೆಗಳು ಮನುಷ್ಯನನ್ನು ಅತಿಯಾಗಿ ಕಾಡತೊಡಗಿವೆ. ಇಂದು ಇದು ಜಾಗತಿಕ ಆರೋಗ್ಯ ಸಮಸ್ಯೆಯಾಗಿಯೂ ಮಾರ್ಪಾಡಾಗಿದೆ. ಸಕಲ ಜೀವ ಸಂಕುಲ ಗಳಿಗೂ ಪ್ರಮುಖವಾಗಿರುವ ಹೃದಯದ ಬಗ್ಗೆ ಅರಿವು ಮೂಡಿಸಲು ಪ್ರತೀ ವರ್ಷ ಸೆ.29ರಂದು ವಿಶ್ವ ಹೃದಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಈ ಬಾರಿ “ಹೃದಯವನ್ನು ಬಳಸಿ, ಹೃದಯವನ್ನು ತಿಳಿಯಿರಿ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸ ಲಾಗುತ್ತಿದೆ. ಹೃದಯ ಚಿಹ್ನೆಯ ಇಮೋಜಿಯನ್ನು ಬಳಸುವ ಮೂಲಕ ” ಹೃದಯವನ್ನು ಬಳಸಿ’ ಎಂದು ಕರೆ ನೀಡ. ಇಂದು ಸಂವಹನದ ಪ್ರಮುಖ ಮಾಧ್ಯಮವಾಗಿ ಗುರುತಿಸಿ ಕೊಂಡಿರುವ ಇಮೋಜಿಯು ಜನರಿಗೆ ಸಂದೇಶವನ್ನು ಕ್ಷಿಪ್ರಗತಿಯಲ್ಲಿ ತಲುಪಿಸುವಲ್ಲಿ ಯಶಸ್ವಿಯಾಗುತ್ತಿದೆ. ಹಾಗಾಗಿ ಇದನ್ನೇ ಈ ಬಾರಿಯ ವಿಶ್ವ ಹೃದಯ ದಿನದ ಆಚರಣೆಯಲ್ಲಿ ಬಳಸಲಾಗುವುದು. ಪ್ರತಿಯೊಬ್ಬರೂ ತಮ್ಮ ತಮ್ಮ ಹೃದಯದ ಬಗ್ಗೆ ಅರಿತುಕೊಂಡು ಕಾಳಜಿ ವಹಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿ ಕೊಳ್ಳುವಂತೆ ಮಾಡುವುದು ಇದರ ಉದ್ದೇಶ ಎಂದು ವರ್ಲ್ಡ್ ಹಾರ್ಟ್ ಫೆಡರೇಶನ್ ಹೇಳಿದೆ.
ಕೋವಿಡ್ ಮತ್ತು ಹೃದಯ
ಕೊರೊನಾಗೆ ಸೋಂಕಿಗೆ ತುತ್ತಾದವರೂ ಅದರಿಂದ ಚೇತರಿಸಿಕೊಂಡ ಕೆಲವು ವಾರಗಳಲ್ಲೇ ಹಠಾತ್ ಹೃದಯಾಘಾತಕ್ಕೆ ತುತ್ತಾಗಿದ್ದರು. ಇದರ ಬಗ್ಗೆ ತಜ್ಞರು ಅಧ್ಯಯನಗಳನ್ನು ಕೈಗೊಂಡಿದ್ದರು. ಕೋವಿಡ್ ಬಳಿಕ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ ಎಂದು ಅಧ್ಯಯನ ವರದಿಗಳು ಬೆಟ್ಟು ಮಾಡಿವೆ. ಕೋವಿಡ್ ಸೋಂಕು ರಕ್ತದ ಕಣಗಳ ಮೇಲೆ ಪರಿಣಾಮ ಬೀರಿದ್ದು, ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸಿವೆ. ಅದಾಗಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ಹೆಚ್ಚಾಗಿ ಪರಿಣಾಮ ಬೀರಿದೆ. ಅಲ್ಲದೇ ಪಾರ್ಶ್ವ ವಾಯು, ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಸಮಸ್ಯೆಗಳು ಹೆಚ್ಚಾಗಿವೆ ಎಂದು ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ.
ಯುವಕರಲ್ಲೇ ಹೆಚ್ಚು !
ಈಗೀಗ ಹೃದಯ ಸಂಬಂಧಿ ಸಮಸ್ಯೆಗಳು ಯುವಕರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಅಧಿಕ ಕೆಲಸದ ಒತ್ತಡ, ಆರೋಗ್ಯಕರ ದಿನಚರಿಯನ್ನು ಪಾಲಿಸದೇ ಇರುವುದು, ಆಹಾರ ಕ್ರಮದಲ್ಲಿನ ಏರುಪೇರು ಹಾಗೂ ಇತ್ಯಾದಿಗಳು ಇದಕ್ಕೆ ಕಾರಣ. ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಶೇ.25ರಷ್ಟು ಜನರು ಹೃದಯ ಸಮಸ್ಯೆಯಿಂದ ಸಾವನ್ನಪ್ಪು ತ್ತಿದ್ದಾರೆ. ಇದರಲ್ಲಿ ಶೇ.18ರಷ್ಟು ಮಹಿಳೆಯರು. ಕಳೆದ ಕೆಲವು ವರ್ಷಗಳಲ್ಲಿ ಮಹಿಳೆಯರಲ್ಲಿ ಈ ಸಮಸ್ಯೆಯು ಅಧಿಕವಾಗಿ ಕಾಣಿಸಿಕೊಂಡಿದೆ. ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಶೇ.300ರಷ್ಟು ಈ ಸಮಸ್ಯೆಯು ಮಹಿಳೆಯರಲ್ಲಿ ಉಲ್ಬಣಿಸಿದೆ. ಅಧಿಕ ರಕ್ತದೊತ್ತಡ, ಅಧಿಕ ಬೊಜ್ಜು ಹಾಗೂ ಮಹಿಳೆಯರಲ್ಲಿ ಹೆಚ್ಚುತ್ತಿರುವ ಮಧುಮೇಹ ಇದಕ್ಕೆ ಕಾರಣವಾಗಿದೆ. ಜತೆಗೆ ಭಾರತೀಯ ಮಹಿಳೆಯರಿಗೆ ಈ ವಿಷಯದ ಬಗ್ಗೆ ಇರುವ ಅರಿವಿನ ಕೊರತೆಯೂ ಇದಕ್ಕೆ ಕಾರಣವಾಗಿದೆ.
ನಿಮಗಿದು ತಿಳಿದಿರಲಿ
-ನಮ್ಮ ಹೃದಯವು ದಿನಕ್ಕೆ ಅಂದಾಜು 1 ಲಕ್ಷ
ಬಾರಿ ಬಡಿಯುತ್ತದೆ.
-ನವಜಾತ ಶಿಶುಗಳ ಹೃದಯವು ನಿಮಿಷಕ್ಕೆ 70-190 ಬಾರಿ ಬಡಿಯುತ್ತದಂತೆ.
-ವಯಸ್ಕರ ಹೃದಯವು ಪ್ರತೀ ನಿಮಿಷಕ್ಕೆ
60ರಿಂದ 80 ಬಾರಿ ಬಡಿಯುತ್ತದೆ.
-ಹೃದಯವು 250ರಿಂದ 350 ಗ್ರಾಂನಷ್ಟು ತೂಕವನ್ನು ಹೊಂದಿದೆ.
ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣ
ದೈಹಿಕ ವ್ಯಾಯಾಮದ ಕೊರತೆ, ಅತಿಯಾದ ಸೋಡಿಯಂ, ಮದ್ಯಪಾನ, ತಂಬಾಕು ಬಳಕೆ, ಅಧಿಕ ರಕ್ತದೊತ್ತಡ, ಮಧುಮೇಹ, ವಾಯುಮಾಲಿನ್ಯ.
ಹೃದಯದ ರಕ್ಷಣೆ ಹೇಗೆ?
-ದೇಹದ ತೂಕ ಹೆಚ್ಚಾಗಿ ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು.
-ಮಧುಮೇಹವನ್ನು ನಿಯಂತ್ರಣದಲ್ಲಿಡಬೇಕು.
-ಸಾಧ್ಯವಾದಷ್ಟು ಒತ್ತಡದ ಸನ್ನಿವೇಶದಿಂದ ದೂರವುಳಿಯಿರಿ.
-ರಕ್ತದಲ್ಲಿ ಕೊಬ್ಬು ಸೇರಿಕೊಳ್ಳದಂತೆ ಎಚ್ಚರವಹಿಸಬೇಕು.
-ಒಳ್ಳೆಯ ಆಹಾರ ಕ್ರಮಗಳನ್ನು ಅನುಸರಿಸಬೇಕು.
-ಹಣ್ಣು, ತರಕಾರಿ ಸೇವಿಸಿ.
-ಬಿರುಸಿನ ನಡಿಗೆ, ಓಟ, ಈಜು, ಟೆನಿಸ್, ಬ್ಯಾಡ್ಮಿಂಟನ್, ಸ್ಕಿಪಿಂಗ್ ಮತ್ತಿತರ ದೈಹಿಕ ಚಟುವಟಿಕೆಗಳನ್ನು ದಿನನಿತ್ಯ ನಡೆಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.