ಜಲಮೂಲ ಕಸಿಯದಿರಲಿ ಕೊಳವೆ ಬಾವಿ


Team Udayavani, Feb 25, 2018, 3:45 AM IST

kolave-bavi.jpg

ಸ್ಥಳೀಯ ಆಡಳಿತ ತೆರೆದ ಬಾವಿಗಳ ಸಮೀಪ ಕೊಳವೆ ಬಾವಿ ನಿರ್ಮಿಸಿ ಬಾವಿಯ ನೀರಿಗೆ ತೊಂದರೆ ಆಗುವಂತೆ ಮಾಡುತ್ತಿದೆ. ತಮ್ಮ ಬಾವಿ ಸಮೀಪ ಕೊಳವೆ ಬಾವಿ ನಿರ್ಮಿಸಬೇಡಿ ಎಂದು ಮನವಿ ಮಾಡಿಕೊಂಡರೂ ಅದಕ್ಕೂ ತನಗೂ ಸಂಬಂಧವಿಲ್ಲವೆಂಬ ರೀತಿಯಲ್ಲಿ ಕೊಳವೆ ಬಾವಿ ಕೊರೆಯಿಸುತ್ತಿದೆ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಕಾರವೇ ಕೊಳವೆ ಬಾವಿ ನಿರ್ಮಾಣ ಬೇಡ ಎಂದು ಹೇಳುತ್ತಿದ್ದರೂ ಸ್ಥಳೀಯಾಡಳಿತಗಳು ಮಾತ್ರ ಅಲ್ಲಲ್ಲಿ ಕೊಳವೆ ಬಾವಿ ನಿರ್ಮಿಸುತ್ತಿರುವುದು ವಿಪರ್ಯಾಸದ ಸಂಗತಿ. ಕೊಳವೆ ಬಾವಿ ಹುಚ್ಚುಬಿಟ್ಟು ಹೋಗಲು ಸುಪ್ರೀಂ ಕೋಟೇì ಕಠಿಣ ಆದೇಶ ನೀಡಬೇಕೇನೋ? ವರ್ಷದಿಂದ ವರ್ಷಕ್ಕೆ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬವಣೆ ಹೆಚ್ಚುತ್ತಿರುವುದು ಕೆಲವೆಡೆ ಕಂಡು ಬರುತ್ತಿದೆ. ಇದರಿಂದಾಗಿ ಹೊಸ ಜಲ ಮೂಲ ಅರಸಬೇಕಾದುದು ಅನಿವಾರ್ಯ. ಆದರೂ ಅಂತರ್ಜಲ ಸಾಮರ್ಥ್ಯ ಹೆಚ್ಚಿಸುವ ವಿವಿಧ ಕ್ರಮಗಳನ್ನು ಅನುಸರಿಸಿದರೆ ಎಲ್ಲರಿಗೂ ಉಪಕಾರವಾಗುತ್ತದೆ.

ನಾಡಿನಾದ್ಯಂತ ಬೇಸಿಗೆ ಶುರುವಲ್ಲೇ ನೀರಿನ ಕೊರತೆ ಕಂಡು ಬರುತ್ತಿದೆ. ನೀರಿಲ್ಲ ಎಂದ ಕೂಡಲೇ ಜನರಿಗೆ ಮೊದಲು ನೆನಪಾಗುವುದು ಬೋರ್‌ವೆಲ್‌ಗ‌ಳು. ಎಷ್ಟೇ ಖರ್ಚಾದರೂ ಸರಿ ಬೋರ್‌ವೆಲ್‌ ಕೊರೆದರೆ ನೀರು ಸಿಗುತ್ತದೆ ಎಂಬ ನಂಬಿಕೆಯೊಂದು ಅದ್ಹೇಗೋ ಹುಟ್ಟಿಕೊಂಡಿದೆ. ಹಗಲು-ರಾತ್ರಿ ಎಂಬ ವ್ಯತ್ಯಾಸವಿಲ್ಲದಂತೆ ಅಲ್ಲಲ್ಲಿ ದೈತ್ಯಾಕಾರದ ಯಂತ್ರಗಳು ಭೂಮಿಯನ್ನು ಕೊರೆಯುವ ಸದ್ದು ಎದೆ ಝಲ್ಲೆನಿಸುತ್ತಿದೆ. 500, 600 ಅಡಿ ಕೊರೆದರೂ ಕೆಲವೊಮ್ಮೆ ನೀರು ಸಿಗುವುದೆಂಬ ಖಾತ್ರಿ ಇಲ್ಲ, ಸಿಕ್ಕಿದರೂ ಅತ್ಯಲ್ಪ. ಇಂತಹ ಕೊಳವೆ ಬಾವಿಗಳಲ್ಲಿ ಆರು ತಿಂಗಳು, ಒಂದು ವರ್ಷದ ತನಕ ನೀರು ದೊರೆತರೆ ಅದೇ ಹೆಚ್ಚು. ಆದರೂ ಪ್ರತಿ ವರ್ಷ ಕೊರೆಯುವುದು ನಿಂತಿಲ್ಲ. ಭೂಮಿಯ ಮೇಲೆ ದೌರ್ಜನ್ಯ ನಿರಂತರ ಮುಂದುವರಿದಿದೆ.

ಕೈಗಾರಿಕೆ, ವಾಣಿಜ್ಯ, ನಗರೀಕರಣದಿಂದಾಗಿ ಈಗಾಗಲೇ ನೀರಿನ ಮೂಲ ಕಡಿಮೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಕಣ್ಮರೆಯಾಗುವ ಹಂತ ತಲುಪಿದೆ. ಇದೀಗ ಸರಕಾರದ ಕಠಿಣ ನಿರ್ಬಂಧ ಇರುವ ಹೊರತಾಗಿಯೂ ಅಲ್ಲಲ್ಲಿ ಕೊಳವೆ ಬಾವಿಗಳು ನಿರ್ಮಾಣವಾಗುತ್ತಿವೆ. ಒಂದೆಡೆ ಕೃಷಿ ಕಾರ್ಯಕ್ಕಾಗಿ ಖಾಸಗಿಯಾಗಿ ಬೋರ್‌ವೆಲ್‌ ನಿರ್ಮಾಣ, ಇನ್ನೊಂದೆಡೆ ಕುಡಿಯುವ ನೀರು ಸರಬರಾಜಿಗಾಗಿ ಸ್ಥಳೀಯ ಆಡಳಿತಗಳಿಂದ ಕೊಳವೆ ಬಾವಿ ಕೊರೆಯಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ತೆರೆದ ಬಾವಿ, ಕೆರೆಗಳ ಸಮೀಪ ಕೊಳವೆ ಬಾವಿ ತೆಗೆದರೆ ಜಲಮೂಲ ಬತ್ತಿ ಹೋಗಿ ಬಾವಿಗಳು ಬರಿದಾಗುವುದು ಎಲ್ಲರಿಗೂ ತಿಳಿದ ವಿಚಾರವೇ. ಒಂದು ಹಂತದಲ್ಲಿ ಕೊಳವೆ ಬಾವಿಗಳು ಕೃಷಿಗೆ, ಕುಡಿಯುವ ನೀರಿಗೆ ಬೇಕಾದ ನೀರನ್ನು ಕೆಲವಾರು ಕಡೆ ಒದಗಿಸಿಕೊಟ್ಟಿರುವುದು ಸತ್ಯ. ಹಾಗಿದ್ದರೂ ಮಿತಿಮೀರಿ ಅಲ್ಲಲ್ಲಿ ಕೊಳವೆ ಬಾವಿ ನಿರ್ಮಿಸಿದರೆ ನೀರಿನ ಒಳ ಹರಿವು ಬಹುಮುಖವಾಗಿ ಇರುವುದಿಲ್ಲ ಎಂದು ಈಗಾಗಲೇ ಅನೇಕ ಕಡೆಗಳಲ್ಲಿ ಕಂಡು ಬಂದಿದೆ.

ಸ್ಥಳೀಯ ಆಡಳಿತ ಈ ವಿಚಾರ ಮರೆತು ತೆರೆದ ಬಾವಿಗಳ ಸಮೀಪ ಕೊಳವೆ ಬಾವಿ ನಿರ್ಮಿಸಿ ಬಾವಿಯ ನೀರಿಗೆ ತೊಂದರೆ ಆಗುವಂತೆ ಮಾಡುತ್ತಿದೆ. ತಮ್ಮ ಬಾವಿ ಸಮೀಪ ಕೊಳವೆ ಬಾವಿ ನಿರ್ಮಿಸಬೇಡಿ ಎಂದು ಮನವಿ ಮಾಡಿಕೊಂಡರೂ ಅದಕ್ಕೂ ತನಗೂ ಸಂಬಂಧವಿಲ್ಲವೆಂಬ ರೀತಿಯಲ್ಲಿ ಕೊಳವೆ ಬಾವಿ ಕೊರೆಯಿಸುತ್ತಿದೆ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರವೇ ಕೊಳವೆ ಬಾವಿ ನಿರ್ಮಾಣ ಬೇಡ ಎಂದು ಹೇಳುತ್ತಿದ್ದರೂ ಸ್ಥಳೀಯಾಡಳಿತಗಳು ಮಾತ್ರ ಅಲ್ಲಲ್ಲಿ ಕೊಳವೆ ಬಾವಿ ನಿರ್ಮಿಸುತ್ತಿರುವುದು ವಿಪರ್ಯಾಸದ ಸಂಗತಿ. ಕೊಳವೆ ಬಾವಿ ಹುಚ್ಚುಬಿಟ್ಟು ಹೋಗಲು ಸುಪ್ರೀಂ ಕೋಟೇì ಕಠಿಣ ಆದೇಶ ನೀಡಬೇಕೇನೋ? ವರ್ಷದಿಂದ ವರ್ಷಕ್ಕೆ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಬವಣೆ ಹೆಚ್ಚುತ್ತಿರುವುದು ಕೆಲವೆಡೆ ಕಂಡು ಬರುತ್ತಿದೆ. ಇದರಿಂದಾಗಿ ಹೊಸ ಜಲ ಮೂಲ ಅರಸಬೇಕಾದುದು ಅನಿವಾರ್ಯ. ಆದರೂ ಅಂತರ್ಜಲ ಸಾಮರ್ಥ್ಯ ಹೆಚ್ಚಿಸುವ ವಿವಿಧ ಕ್ರಮಗಳನ್ನು ಅನುಸರಿಸಿದರೆ ಎಲ್ಲರಿಗೂ ಉಪಕಾರವಾಗುತ್ತದೆ.

ಪರಿಸರ ಮಾಲಿನ್ಯದಿಂದ ಈಗಾಗಲೇ ಕಂಗೆಟ್ಟಿರುವ ನಾಡಿಗೆ ನದಿ ತಿರುವು ಹಾಗೂ ಇನ್ನಿತರ ಯೋಜನೆಗಳ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಅಲ್ಲಲ್ಲಿ ನೂರಾರು ಕೊಳವೆ ಬಾವಿಗಳನ್ನು ನಿರ್ಮಿಸುತ್ತಿರುವುದು ಆತಂಕಕಾರಿ ಸಂಗತಿ. ಹೊಸ ಕೊಳವೆಬಾವಿ ಕೊರೆಯುವಾಗ ಸಂಭವಿಸುವ ಶಬ್ದ ಮಾಲಿನ್ಯ, ಧೂಳು, ಜಲ್ಲಿ ಹುಡಿಗಳಿಂದ ಪರಿಸರದ ಸಸ್ಯಗಳಿಗೆ ಹಾನಿ.

ಆರೋಗ್ಯಕ್ಕೂ ಈ ಧೂಳು ಹಾನಿಕರ. ಕೆಲವೊಮ್ಮೆ ಈ ಧೂಳನ್ನು ತೊಳೆಯಲು ಬೇಕಾಗುವಷ್ಟು ನೀರು ಕೂಡಾ ಸಿಗಲಾರದು, ಅಷ್ಟು ವ್ಯಾಪಕವಾಗಿ ಧೂಳು, ಕೆಸರು ಮಿಶ್ರಿತ ಮಣ್ಣಿನ ರಾಶಿ ಎದ್ದಿರುತ್ತದೆ. ಪ್ರಾಕೃತಿಕವಾಗಿ ಸ್ವತ್ಛವಾಗಲು ಮಳೆಯನ್ನೇ ನಿರೀಕ್ಷಿಸಬೇಕಷ್ಟೇ. ಮುಂಗಾರು ಮಳೆ ಆಗಮನದ ತನಕವೂ ಕೊಳವೆ ಬಾವಿಯಿಂದೆದ್ದ ಧೂಳಿನ ಪ್ರಭಾವ ಪರಿಸರದ ಮೇಲೆ ಇರುತ್ತದೆ.

ಜಲ ತಜ್ಞರು ಹೇಳುವಂತೆ ಮಳೆಗಾಲದಲ್ಲಿ ಮಳೆ ನೀರನ್ನು ಹೊರಗೆ ಹೋಗಗೊಡದೆ ತಮ್ಮ ತಮ್ಮ ಹಿತ್ತಿಲಿನಲ್ಲೇ ಇಂಗು ಗುಂಡಿಗಳ ಮುಖೇನ ಇಂಗಿಸಿಕೊಂಡರೆ ಬಾವಿ, ಕೆರೆಗಳನ್ನು ಸಮೃದ್ಧಗೊಳಿಸಿಕೊಳ್ಳಬಹುದು. ಕೊಳವೆ ಬಾವಿಗಳ ಹೊರತಾಗಿಯೂ ಕೆಲವು ಕಡೆಗಳಲ್ಲಿ ಹಳೆ ಕಾಲದ ಕೆರೆ, ಬಾವಿಗಳನ್ನು ದುರಸ್ತಿಪಡಿಸಿದರೆ ನೀರು ದೊರಕಬಹುದು. ಸ್ಥಳೀಯ ಆಡಳಿತಗಳು ಏಕಾಏಕಿ ಕೊಳವೆ ಬಾವಿಗಳಿಗೆ ಆಸಕ್ತಿ ತೋರಿಸುವುದನ್ನು ಬಿಟ್ಟು ಇಂತಹ ಕೆರೆ ಬಾವಿಗಳ ಹೂಳೆತ್ತಿ ಅಭಿವೃದ್ಧಿಪಡಿಸುವತ್ತ ಚಿಂತನೆ ನಡೆಸಬೇಕಾಗಿದೆ.

ಅಂತಹ ಕೆರೆಗಳಲ್ಲಿ ಕೊಳವೆ ಬಾವಿಗಳಲ್ಲಿ ದೊರಕುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಲಭ್ಯವಾಗುತ್ತದೆ. ಗಮನಾರ್ಹವಾದ ಮತ್ತೂಂದು ವಿಚಾರವೆಂದರೆ ಹತ್ತಾರು ವರ್ಷಗಳ ಹಿಂದೆ ಅಗಾಧ ನೀರಿನ ಸಾಮರ್ಥ್ಯವಿದ್ದ ಕೊಳವೆ ಬಾವಿಗಳಲ್ಲಿ ಈಗ ನೀರಿನ ಪ್ರಮಾಣ ಕಡಿಮೆಯಾಗಿರುವುದು.

ಅಧಿಕ ಉಷ್ಣಾಂಶದ ಪ್ರದೇಶವಾದ ನಮ್ಮ ರಾಜ್ಯದಲ್ಲಿ ನೀರಿನ ಬಳಕೆ ಪ್ರಮಾಣ ಹೆಚ್ಚು. ಬೇಡಿಕೆಯೂ ಅಧಿಕ. ಅವಶ್ಯಕತೆಗೆ ತಕ್ಕಂತೆ ಪೂರೈಸುವುದು ಆಡಳಿತದವರಿಗೂ ಕಷ್ಟಕರವೇ. ಕಾಂಕ್ರೀಟ್‌ ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ನೀರಿನ ಪ್ರಮಾಣವು ಹೆಚ್ಚಾಗಿದೆ. ಸಮಸ್ತ ಜನತೆ ಜಾಗರೂಕತೆಯಿಂದ ನೀರನ್ನು ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಉಳಿಸಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಲಿ.

– ಎಲ್‌.ಎನ್‌.ಭಟ್‌ ಮಳಿ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.