ಬರಹಗಾರ್ತಿಯಾಗಿಸಿದ ಪತ್ರಿಕೆ
Team Udayavani, Jan 18, 2020, 6:29 AM IST
ಉದಯವಾಣಿ ಪತ್ರಿಕೆಯನ್ನು ಬಹಳ ವರ್ಷಗಳಿಂದ ಓದುತ್ತಿದ್ದೇನೆ. ನನಗೆ ಇಷ್ಟವಾಗಲು ಹಲವು ಕಾರಣಗಳಿವೆ. ಉದಯವಾಣಿಯ ಅಕ್ಷರ ಹಾಗೂ ಪುಟ ವಿನ್ಯಾಸ ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಆಕರ್ಷಕ. ಕನ್ನಡ ಭಾಷೆಯ ಯಾವುದಾ ದರೂ ಪದ ಬರೆಯುವಾಗ ಅದರ ಸರಿ ಯಾದ ರೂಪ ಏನು ಎಂಬ ಬಗ್ಗೆ ಗೊಂದಲ ಬಂದಾಗ ಉದಯವಾಣಿಯನ್ನು ಪರಾಮರ್ಶಿಸುತ್ತಿದ್ದೆ. ಯಾಕೆಂದರೆ ಬಳಸುವ ಪದಗಳು ಭಾಷಾ ಶುದ್ಧತೆಯಿಂದ ಕೂಡಿರುತ್ತವೆ.
ನಾನು ಮೊದಲು ಪುಸ್ತಕಗಳ ಜತೆ ಉದಯವಾಣಿಯನ್ನೂ ಓದುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳಿಸುತ್ತಿದ್ದೆ. ಆದರೆ ಇತರ ರೀತಿಯ ಸಾಹಿತ್ಯದ ಬರವ ಣಿಗೆ ನನಗೆ ಅಪರಿಚಿತವಾಗಿತ್ತು. ಅಂತಹ ಬರಹಕ್ಕೆ ನಾನು ಪ್ರಯತ್ನಿ ಸಿಯೇ ಇರಲಿಲ್ಲ. ನನ್ನನ್ನು ಬರಹ ಲೋಕಕ್ಕೆ ಕೈಹಿಡಿದು ನಡೆಸಿದ್ದು ಉದಯವಾಣಿ. ಸಾಪ್ತಾಹಿಕ ಸಂಪದದಲ್ಲಿ “ನೀವೂ ಬರೆಯಿರಿ’ ಎಂಬ ಸೂಚನೆಯನ್ನು ಓದಿ (ಅದರಲ್ಲಿ ತಿಳಿಸಿದ ಮಾದರಿಯಲ್ಲಿ) ನಾನು ಬರೆದ ಹಾಗೂ ಕಳಿಸಿದ ಪ್ರಥಮ ಬರಹ ಒಂದು ಅತಿ ಸಣ್ಣ ಕತೆ ಪ್ರಕಟ ವಾಯಿತು. ನನಗಾದ ಖುಷಿ ಅಷ್ಟಿಷ್ಟಲ್ಲ. ಅದಕ್ಕೆ ಸಂಭಾವನೆಯೂ ಬಂತು. ನಾನೂ ಬರೆಯಬಲ್ಲೆ ಎಂಬ ನಂಬಿಕೆ ನನ್ನಲ್ಲಿ ಮೂಡಿಸಿದ್ದು ಉದಯವಾಣಿ. ಅನಂತರ ಮಹಿಳಾ ಸಂಪದ, ಸಾಪ್ತಾಹಿಕ, ಚಿನ್ನಾರಿ, ಅವಳು, ಸುದಿನ, ಜೋಶ್ ಹೀಗೆ ವಿವಿಧ ಪುರವಣಿಗಳಿಗೆ ಬರಹಗಳನ್ನು ಕಳಿಸುತ್ತಾ ಬಂದೆ. ಹೆಚ್ಚಿನ ಎಲ್ಲವೂ ಪ್ರಕಟವಾದವು. ಈಗ ನಾನು ವಿವಿಧ ಪತ್ರಿಕೆಗಳಿಗೆ ಬರೆಯುತ್ತೇನೆ. ಸಂಪಾದಕೀಯ ಪುಟದಲ್ಲೂ ನನ್ನ ಬರಹಗಳು ಪ್ರಕಟವಾದವು. ಮಹಿಳಾ ಸಂಪದದಲ್ಲಿ ಒಂದು ಅಂಕಣ ಬರೆಯುವ ಅವಕಾಶವನ್ನೂ ಪತ್ರಿಕೆ ನನಗೆ ನೀಡಿತು. ವಿವಿಧ ರೀತಿಯ ಬರಹಗಳ ನನ್ನ ಆರು ಪುಸ್ತಕಗಳು ಹೊರಬಂದಿವೆ. ಅಂದರೆ ನಾನು ಸಾಹಿತ್ಯ ಲೋಕ ಪ್ರವೇಶಿಸಲು ಕಾರಣವಾದ, ಪ್ರೇರಣೆಯಾದ ಉದಯವಾಣಿ ನನ್ನನ್ನು ಒಂದು ಲೇಖಕಿಯಾಗುವ ಮಟ್ಟಿಗೆ ಬೆಳೆಸಿದೆ. ನನ್ನ ಬಿಡುವಿನ ವೇಳೆಯನ್ನು ಮೌಲ್ಯಯುತವಾಗಿಸಿದ, ಬರಹದ ಮೂಲಕ ಹೊಸದೊಂದು ಲೋಕವನ್ನು ಪ್ರವೇಶಿಸಲು ಅನುವು ಮಾಡಿ ಕೊಟ್ಟ ಉದಯವಾಣಿಯನ್ನು ಮರೆಯಲು ಸಾಧ್ಯವಿಲ್ಲ. ಹೊಸ ಬರಹ ಗಾರರಿಗೆ ಅವಕಾಶ ನೀಡಿ, ಬೆಳೆಸಿದ ಪತ್ರಿಕೆಗೆ ತುಂಬಾ ಧನ್ಯವಾದಗಳು. ಮುಂದೆ ಇನ್ನಷ್ಟೂ ಜನರನ್ನು ಆಕರ್ಷಿಸಿ, ಬೆಳೆಯಲಿ, ಬೆಳಗಲಿ.
ಜೆಸ್ಸಿ ಪಿ.ವಿ. ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.