Bannanje Govindacharya ಎಲ್ಲ ಕಾಲದಲ್ಲೂ ಬೆಂಬಲವಾಗಿ ನಿಂತ ಉದಯವಾಣಿ
Team Udayavani, Aug 3, 2024, 6:10 AM IST
ಇಂದು ಬೆಂಗಳೂರಿನಲ್ಲಿ ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸ ದಿ| ಬನ್ನಂಜೆ ಗೋವಿಂದಾಚಾರ್ಯರ ಆತ್ಮಕಥೆ “ಆತ್ಮನಿವೇದನೆ’ ಬಿಡುಗಡೆಯಾಗಲಿದೆ. ಬನ್ನಂಜೆ ನಿರೂಪಣೆಯನ್ನು ಅವರ ಪುತ್ರಿ ವೀಣಾ ಬನ್ನಂಜೆ ಬರಹ ರೂಪಕ್ಕಿಳಿಸಿದ್ದಾರೆ. “ಉದಯವಾಣಿ’ ಉದ್ಯೋಗಿಯಾಗಿದ್ದ ಅವರು ತಮ್ಮ ಆ ಕುರಿತ ಅನುಭವಗಳಿಗಾಗಿ ಒಂದು ಅಧ್ಯಾಯ ಮೀಸಲಿಟ್ಟಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ…
1970ರ ಹೊತ್ತಿಗೆ ಉದಯವಾಣಿ ಬಂತು. ಅದಕ್ಕೆ ಮೊದಲು ನವಭಾರತ ಪತ್ರಿಕೆಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದೆ. ಸ್ವತಂತ್ರ ಲೇಖನಗಳನ್ನು ಅಲ್ಲಿ ಬರೆಯುತ್ತಿದ್ದೆ. ನವಭಾರತಕ್ಕೆ ಆಗ ಎಂ. ವಿ. ಹೆಗ್ಡೆಯವರು ಸಂಪಾದಕರಾಗಿದ್ದರು. ನಮ್ಮ ಅಣ್ಣ ಸುದ್ದಿ ಸಂಪಾದಕನಾಗಿದ್ದ. ಪುಣ್ಯವಶಾತ್ ನಮ್ಮ ತಂದೆಯವರು ಉಣ್ಣಲಿಕ್ಕೆ ಬೇಕಾದಷ್ಟು ಮಾಡಿದ್ದರಿಂದ ಉದ್ಯೋಗದ ಆಸೆೆ ಇರಲಿಲ್ಲ ನನಗೆ. ಸುಖವಾಗಿ ಮನೆಯಲ್ಲಿ ಅಧ್ಯಯನ ಮಾಡಿ ಕೊಂಡು ಇರೋಣ ಎಂದುಕೊಂಡಿದ್ದೆ. ಪಾಟೀಲ ಪುಟ್ಟಪ್ಪನವರು “ಪ್ರಪಂಚ’ ಎಂಬ ಪತ್ರಿಕೆ ಮಾಡಿದಾಗ ವಾರಪತ್ರಿಕೆಯಲ್ಲಿ ಒಂದು ಕ್ರಾಂತಿ ಮಾಡಿದರು. ಭಾರೀ ಜನಪ್ರಿಯವಾಯಿತು. ಕನ್ನಡದ ವಾರಪತ್ರಿಕೆ ಈ ರೀತಿ ಇರಬಹುದೆಂಬ ಕಲ್ಪನೆಯೇ ಇಲ್ಲದಂತೆ ಜನಪ್ರಿಯವಾಯಿತು. ಆಗ “ಪ್ರಕಾಶ’ ಎಂಬ ಪತ್ರಿಕೆ ಉಡುಪಿಯಲ್ಲಿತ್ತು. “ಪ್ರಪಂಚ’ದಂತೆಯೇ “ಪ್ರಕಾಶ’ವನ್ನು ಮಾಡೋಣ ಎಂದರು ಮೋಹನದಾಸ್ ಪೈಗಳು. ಹೊರದೇಶದ ಸುದ್ದಿಗಳು, ದೇಶದ ಸುದ್ದಿಗಳು, ಕೆಲವು ಫೋಟೋ ಹಾಕಿ, ಸಂಪಾದಕೀಯ, ಪ್ರಬಂಧಗಳು, ಕಥೆಗಳು, ಒಂದು ಧಾರಾವಾಹಿ ಪ್ರಕಟಿಸಿದೆವು. ಅದರಲ್ಲಿ ನನ್ನ ಬಾಣಭಟ್ಟನ ಅನುವಾದಿತ ಕಾದಂಬರಿಯೂ ಬಂತು. ಎಲ್ಲ ನಾನೇ ನೋಡಿಕೊಳ್ಳುತ್ತಿದ್ದೆ. ನನ್ನ ಸರ್ವಮೂಲ ಸಂಪಾದನೆ ಮುಗಿಯುತ್ತಿದ್ದಂತೆ ಅಲ್ಲಿ ಹೋಗಿ ಸೇರಿದೆ. ಭಗವಂತನ ವ್ಯವಸ್ಥೆ ಅದು. ನಾನು ನಿರುದ್ಯೋಗಿಯಾಗಲು ಬಿಡಲೇ ಇಲ್ಲ.
ಅಷ್ಟರಲ್ಲಿ ಉದಯವಾಣಿ ಪತ್ರಿಕೆ ಆರಂಭವಾಯಿತು. ಮೋಹನದಾಸ್ ಪೈಗಳು (ಮಾಧವ ಪೈಯವರ ಮಗ) ನನ್ನನ್ನು ಕರೆದರು. ಉದಯವಾಣಿಯಲ್ಲಿ ನೀವು ಕೆಲಸ ಮಾಡಬೇಕು ಎಂಬುದು ಅವರ ವಿನಂತಿ. ನಾನು ಯಾಕೋ ಅವರ ಜತೆಗೆ ಬಿಗುಮಾನ ತೋರಿದೆ. “ನಾನು ಉಪನ್ಯಾಸಕ್ಕೆ ಹೋಗುವವ. ಒಂದು ಸಂಸ್ಥೆಯಲ್ಲಿ ಗಂಟೆಗಟ್ಟಲೆ ಕೆಲಸ ಸಾಧ್ಯವಿಲ್ಲ. ನನಗೆ ಉದ್ಯೋಗ ಬೇಡ’ ಎಂದೆ. ದೇವರ ಚಿತ್ತ ತುಂಬ ವಿಚಿತ್ರವಿತ್ತು. ನನ್ನನ್ನು ನಿರುದ್ಯೋಗಿಯ ಹಾಗೆ ಮಾಡಿಯೂ ನನಗೆ ಉದ್ಯೋಗ ಕೊಟ್ಟ. ಅವರ ಉತ್ತರ ಹೀಗಿತ್ತು, “ನಿಮಗೆ ಯಾರ ನಿರ್ಬಂಧವಿದೆ ಹೇಳಿ? ಎಲ್ಲಿ ಉಪನ್ಯಾಸವಿದೆಯೋ ಅಲ್ಲಿ ಹೋಗಿ. ನಿಮಗೆ ಸಮಯ, ಗಂಟೆ ನಿಯಮಿಸಿದ್ದೇನಾ? ನೀವು ನಮಗೆ ಬೇಕು, ಬನ್ನಿ’.- ಅಂದರೆ ಸೇರುವ ಮೊದಲೇ ಅವರು ಕೊಟ್ಟ ಸ್ವಾತಂತ್ರÂ ಇದು. ಸಮಯ, ಗಂಟೆಗಳ ಬಂಧನವಿಲ್ಲದ ಸ್ವತಂತ್ರ ಉದ್ಯೋಗ. 1994ಕ್ಕೆ ನಾನು ಅದರಿಂದ ವಿರಮಿಸಿದ್ದು, ಆಗ ನನಗೆ ಐವತ್ತೆಂಟು. ಅಲ್ಲಿಯವರೆಗೂ ಅದು ನನ್ನ ಬದುಕಿನ ಇನ್ನೊಂದು ಅಧ್ಯಾಯ.
ನಾನು ಮತ್ತು ದೇವಾಡಿಗರು (ಉದಯವಾಣಿಯ ಆರ್ಟಿಸ್ಟ್) ಕೂಡಿಯೇ ಕಚೇರಿಗೆ ಹೋಗುವುದು. ಮಧ್ಯಾಹ್ನ ಮೂರರ ಮೇಲೆ ನಮ್ಮ ಹಾಜರಿ ಅಲ್ಲಿ. ಎಲ್ಲರೂ ಏನು ನಿಮ್ಮದು ಪಾರ್ಟ್ ಟೈಮ್ ಕೆಲಸವೇ ಎಂದು ಕೇಳಿದ್ದುಂಟು. ಆದರೆ ನನ್ನದು ಪೂರ್ಣಾ ವಧಿ ಕೆಲಸ. ಯಾವತ್ತೂ ಕೂಡ ಮೋಹನದಾಸ್ ಪೈಗಳು ನೀವು ಫುಲ್‌ಟೈಮ್ ಕೆಲಸ ಮಾಡಬೇಕು ಎಂದು ಆದೇಶಿಸಲಿಲ್ಲ. ರಜೆ ಮಾಡಿದಾಗ ಎಂದೂ ಏನೂ ಕೇಳುತ್ತಿರಲಿಲ್ಲ. ಬೆನ್ನು ನೋವಿನಿಂದ ಮಲಗಿದ್ದರೂ ಆನ್‌ಡ್ಯೂಟಿಯೇ ನಮೂದಾಗುತ್ತಿತ್ತು!
ಆಗ ನೂರಾ ಐವತ್ತರ ವೇತನ ಇನ್ನೂರ ಎಪ್ಪತ್ತೆçದಕ್ಕೆ ನೆಗೆಯಿತು. ಆಗಲೂ ನಾನು ಹಿರಿಹಿರಿ ಹಿಗ್ಗಿದೆ. 1969ಕ್ಕೆ ಅದು ಒಂದು ಸಾಧಾರಣವಲ್ಲದ ಮೊತ್ತವೇ. ನನ್ನ ಮನೆವಾಳೆ¤ಯ ತಲೆಬಿಸಿಯನ್ನು ಅದು ನಿರಾಳ ಮಾಡಿತ್ತು. ನಮ್ಮ ತಂದೆ ಅದಮಾರು ಮಠದ ಮನೆಯಲ್ಲಿಯೇ ಇದ್ದರು. ಅಂಬಲಪಾಡಿಯಲ್ಲಿ ಹೊಸದಾಗಿ ಮನೆ ಮಾಡಿದ್ದ ಸಮಯ. ನನ್ನ ತಂದೆ, “ಹೇಗೆ ಮಾಡುತ್ತಿ ಹುಡುಗಾ, ನಿನಗೆ ಮನೆವಾಳೆ¤ ಕಷ್ಟ ಆಗುತ್ತಿಲ್ಲವೇ? ಏನು ಮಾಡುತ್ತಿ? ಒಂದು ಕೆಲಸ ಮಾಡು. ನಾನು ದಿನಸಿ ಸಾಮಾನು ತರುವ ಜಗನ್ನಾಥ ಇದ್ದಾನಲ್ಲ. ಅವನ ಅಂಗಡಿಯಿಂದ ಮನೆಗೆ ಬೇಕಾದ ಸರಕು ತೆಗೆದುಕೋ. ಲೆಕ್ಕ ಬರೆಯಿಸಿಡು, ನಾನು ಅದರ ಹಣ ಪಾವತಿಸುತ್ತೇನೆ’ ಎಂದರು. ಇದು ನನ್ನ ಅಪ್ಪನ ಔದಾರ್ಯ. ಅದಕ್ಕೆ ನಾನು ಉತ್ತರಿಸಿದೆ, “ಅಪ್ಪ, ನಾನು ಬದುಕು ಹೇಗೂ ಕಲಿಯಬೇಕಲ್ಲ? ನೀವೆಷ್ಟು ದಿನ ಕಾಯಬಲ್ಲಿರಿ? ಬಳಿಕವಾದರೂ ನಾನೇ ಜೀವನ ನಡೆಸಬೇಕಲ್ಲ? ಅದರ ಅನುಭವ ನೀವಿದ್ದಾಗಲೇ ಆಗಲಿ. ನಾನೇ ನೋಡಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಸಾಕು. ಸಮಸ್ಯೆ ಬಂದಾಗ ನಿಮ್ಮ ಬಳಿ ಬರುತ್ತೇನೆ’ ಎಂದೆ. ಅಪ್ಪ ಕೂಡ ಒಳಗೊಳಗೆ ಹಿಗ್ಗಿ ಒಪ್ಪಿಕೊಂಡರು. ನಾನು ಹೇಳಿದ್ದು ಕೇಳಿ ಅಷ್ಟೇ ಸಂತೋಷಪಟ್ಟರು.
ಆಗಲೂ ಮಣಿಪಾಲಕ್ಕೆ ಕಾರಿನಲ್ಲಿ ಹೋಗಿ ಬರುವುದು. ಬೆನ್ನುನೋವಿನ ಪರಿಣಾಮ ಬಸ್, ರಿûಾ ಹತ್ತುವಂತಿರಲಿಲ್ಲ. ಮುದ್ದು ಆಗ ನನ್ನ ಚಾಲಕ, ಏಳು ರೂಪಾಯಿ ಮಣಿಪಾಲಕ್ಕೆ ಆಗಿನ ಬಾಡಿಗೆ. ಹೀಗೆ ಮಣಿಪಾಲದಲ್ಲಿ ಇನ್ನೂರ ಎಪ್ಪತ್ತೆçದು ರೂಪಾಯಿ ಉದ್ಯೋಗ ಆರಂಭ ಆಯ್ತು. ನಾನು ಬಿಡುವ ವೇಳೆಗೆ ನನಗೆ ಆರು ಸಾವಿರ ಸಂಬಳ ಇತ್ತು. ಈಗ ಅಲ್ಲಿ ಆರಂಭಕ್ಕೆ ಉದ್ಯೋಗ ಸೇರಿದವರು ಹದಿನೈದು-ಹದಿನಾರು ಸಾವಿರ ಪಡೆಯುತ್ತಾರೆ. ಆದರೆ ನಾನು ಆರು ಸಾವಿರದಲ್ಲಿ ತುಂಬ ವೈಭವದಲ್ಲೇ ಬದುಕಿದ್ದೇನೆ. ನನಗೆ ಕೊರತೆ ಕಾಣಿಸಲಿಲ್ಲ.
ನನಗೆ ಐವತ್ತೆಂಟು ಆದಾಗ ನಿವೃತ್ತನಾಗುವ ತೀರ್ಮಾನ ಮಾಡಿದೆ. ಮೋಹನದಾಸ್ ಪೈಗಳ ಬಳಿ ನಿವೇದಿಸಿಕೊಂಡೆ. ಅವರು, “ಯಾಕೆ ಬನ್ನಂಜೆಯವರೆ-ನೀವು ನಿವೃತ್ತರಾಗುತ್ತೀರಿ ಎಂದು ನಾವು ನಿರೀಕ್ಷಿಸಲಿಲ್ಲ’ ಯಾಕೆಂದರೆ ಐವತ್ತೆಂಟು ಆದ ತತ್‌ಕ್ಷಣ ಅಲ್ಲಿ ವೃತ್ತಿ ಬಿಟ್ಟವರಿಲ್ಲ. ನನ್ನ ಅಣ್ಣ ಕೂಡ ಹಾಗೆ ಮುಂದುವರಿದಿದ್ದ. ಹಾಗಾಗಿ ನಾನೂ ಸಂಸ್ಥೆ ಬಿಡಲಿಕ್ಕಿಲ್ಲ ಎಂದು ಅವರು ಭಾವಿಸಿರಬೇಕು. ನನ್ನ ಮೇಲೆ ಒಂದು ವಿಶಿಷ್ಟವಾದ ಪ್ರೀತಿ ಇತ್ತು ಅವರಿಗೆ.
ಒಮ್ಮೆ ಕಚೇರಿಯ ಕೆಲಸದ ವೇಳೆಯನ್ನು ನಿಯಮಿಸಲು ರಾಮದಾಸ ಶೆಣೈ ನಿರ್ಣಯಿಸಿದರು. ಅವರು ಮ್ಯಾನೇಜರನ್ನು ಆ ಕೆಲಸಕ್ಕಾಗಿ ಕರೆದರು. ಅವರ ಜತೆಗೆ ನನ್ನನ್ನು ಕರೆದರು. “ಕಚೇರಿಯ ವೇಳಾಪಟ್ಟಿಯನ್ನು ನಿರ್ಣಯಿಸಲು ಕರೆದದ್ದು’ ಎಂದಾಗ ನನ್ನನ್ನು ನಿಯಮಕ್ಕೆ ಒಳಪಡಿಸುತ್ತಾರೆ, ನನ್ನೊಬ್ಬನನ್ನೇ ಕರೆದಿದ್ದಾರೆ ಎಂದರೆ ಅದೇ ಅರ್ಥ ಅಂದುಕೊಂಡೆ. ಸುಮ್ಮನೆ ಕುಳಿತುಕೊಂಡೆ. ಎಲ್ಲರ ಹೆಸರು ವೇಳಾಪಟ್ಟಿ ಬರೆದಾಯ್ತು. ಮುಂದಿನ ಪಾಳಿ ನನ್ನ ಹೆಸರಿನದು. ಅಷ್ಟರಲ್ಲಿ ನನ್ನ ಹೆಸರು ಬರೆದರು ಮ್ಯಾನೇಜರ್ ರಾಮದಾಸ್ ಶೆಣೈಗಳು – “ಅವರಿಗೆ ವೇಳಾಪಟ್ಟಿ ನಿಯಮ ಬೇಡ’ ಎಂದು ಬಿಟ್ಟರು. “ಹಾಗೆಯೇ ಹಾಜರಿ ಪುಸ್ತಕದಲ್ಲೂ ಅವರ ಹೆಸರು ಬೇಡ. ಅವರು ದಿನಾ ದಸ್ಕತ್ತು ಹಾಕಲು ತೊಂದರೆ ಪಡುವುದು ಬೇಡ. ಅವರು ಬಂದರೂ ಬಾರದಿದ್ದರೂ ಅವರಿಗೆ ಹಾಜರಿಯ ಆವಶ್ಯಕತೆ ಬೇಡ’ ಎಂದರು. ಹಾಗಾಗಿ ನಾನು ಯಾವಾಗಲೂ ಆನ್‌ಡೂÂಟಿಯೇ. ಅವರ ಅಂಥ ದೊಡ್ಡಸ್ತಿಕೆ ಮತ್ತು ವಿದ್ವತ್ತಿನ ಮೇಲೆ ಅವರು ತೋರಿದ ಗೌರವ, ಅದು ಅಸದೃಶ ಮತ್ತು ಮರೆಯಲಾಗದ್ದು. ಒಮ್ಮೊಮ್ಮೆ ಮೋಹನದಾಸ್ ಪೈಯವರು ಕರೆದು ಹೇಳಿದ್ದುಂಟು. “ಉಪನ್ಯಾಸಕ್ಕೆ ಯಾರಾದರೂ ಕರೆದ ತತ್‌ಕ್ಷಣ ಹೋಗಬೇಡಿ. ಅವರು ವಿಮಾನದಲ್ಲಿ ಕರೆಸಿಕೊಂಡರಷ್ಟೇ ಹೋಗಿ’. ಆಗಲೂ ಅವರಿಗಿದ್ದದ್ದು ನನ್ನ ಆರೋಗ್ಯದ ಮತ್ತು ಘನತೆಯ ಕಾಳಜಿಯೇ. ವಿದ್ವತ್ತಿಗೆ ಗೌರವ. ಬಸ್ ಪ್ರಯಾಣ ಬೇಡ ಎನ್ನುತ್ತಿದ್ದರು ಅವರು.
ಹೀಗೆಲ್ಲ ನನ್ನೊಂದಿಗಿದ್ದ ಮೋಹನದಾಸ್‌ರು ನನ್ನ ನಿವೃತ್ತಿ ಅನಿರೀಕ್ಷಿತ ಎಂದರೂ, ಕೊನೆಗೆ ಒಪ್ಪಿಕೊಂಡರು. ನಾನು ಹೇಳಿದೆ, “ವೃತ್ತಿಯಲ್ಲಿದ್ದಾಗಲೇ ಕೆಲಸವಿಲ್ಲದೆ ಸಂಬಳ ಪಡೆದಿದ್ದೇನೆ. ನಿವೃತ್ತಿಯ ಬಳಿಕವೂ ಮತ್ತೆ ಸಂಬಳ ತೆಗೆದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಬಿಡುತ್ತೇನೆ’ ಎಂದೆ. ವ್ಯಾಲಿವ್ಯೂ ಹೊಟೇಲ್‌ನಲ್ಲಿ ಆಗ ಅತ್ಯಂತ ಸಂಭ್ರಮದ ವಿದಾಯ ಕಾರ್ಯಕ್ರಮ ಮಾಡಿದ್ದಾರೆ. ಅಲ್ಲಿಯವರೆಗೆ ಹಾಗೆ ಅವರು ವಿದಾಯ ಸಮಾರಂಭ ಮಾಡಿದ್ದು ನನಗೆ ಗೊತ್ತಿಲ್ಲ. ನನ್ನ ಅಣ್ಣನಿಗೇ ಮಾಡಿರಲಿಲ್ಲ. ಬೆಳ್ಳಿಯ ಹರಿವಾಣದಲ್ಲಿ ಹಣ್ಣು, ರಾತ್ರಿ ಎಲ್ಲರಿಗೂ ಊಟ.. ಹೀಗೆ ಸಂಭ್ರಮದ ವಿದಾಯ. ಕಡೆಗೆ “ನನಗೆ ಮಾಡಿದ್ದು, ಅಣ್ಣನಿಗೆ ಮಾಡಿಲ್ಲವಲ್ಲ’ ಯಾರೋ ಅವರನ್ನು ಕೇಳಿದರು. ಆ ಬಳಿಕ ಅಣ್ಣನಿಗೆ ವಿದಾಯ ಸಮಾರಂಭ ಮಾಡಿದ್ದರು. ಹೀಗೆಲ್ಲ ಪೈಗಳ ಉಪಕಾರ ನಾನೆಂದೂ ಮರೆಯುವಂಥದಲ್ಲ.
ಎಲ್ಲ ಕಾಲದಲ್ಲೂ ಬೆಂಬಲವಾಗಿ ನಿಂತ ಉದಯವಾಣಿ ಇಂದು ಬೆಂಗಳೂರಿನಲ್ಲಿ ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸ ದಿ| ಬನ್ನಂಜೆ ಗೋವಿಂದಾಚಾರ್ಯರ ಆತ್ಮಕಥೆ “ಆತ್ಮನಿವೇದನೆ’ ಬಿಡುಗಡೆಯಾಗಲಿದೆ. ಬನ್ನಂಜೆ ನಿರೂಪಣೆಯನ್ನು ಅವರ ಪುತ್ರಿ ವೀಣಾ ಬನ್ನಂಜೆ ಬರಹ ರೂಪಕ್ಕಿಳಿಸಿದ್ದಾರೆ. “ಉದಯವಾಣಿ’ ಉದ್ಯೋಗಿಯಾಗಿದ್ದ ಅವರು ತಮ್ಮ ಆ ಕುರಿತ ಅನುಭವಗಳಿಗಾಗಿ ಒಂದು ಅಧ್ಯಾಯ ಮೀಸಲಿಟ್ಟಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ…
1970ರ ಹೊತ್ತಿಗೆ ಉದಯವಾಣಿ ಬಂತು. ಅದಕ್ಕೆ ಮೊದಲು ನವಭಾರತ ಪತ್ರಿಕೆಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದೆ. ಸ್ವತಂತ್ರ ಲೇಖನಗಳನ್ನು ಅಲ್ಲಿ ಬರೆಯುತ್ತಿದ್ದೆ. ನವಭಾರತಕ್ಕೆ ಆಗ ಎಂ. ವಿ. ಹೆಗ್ಡೆಯವರು ಸಂಪಾದಕರಾಗಿದ್ದರು. ನಮ್ಮ ಅಣ್ಣ ಸುದ್ದಿ ಸಂಪಾದಕನಾಗಿದ್ದ. ಪುಣ್ಯವಶಾತ್ ನಮ್ಮ ತಂದೆಯವರು ಉಣ್ಣಲಿಕ್ಕೆ ಬೇಕಾದಷ್ಟು ಮಾಡಿದ್ದರಿಂದ ಉದ್ಯೋಗದ ಆಸೆೆ ಇರಲಿಲ್ಲ ನನಗೆ. ಸುಖವಾಗಿ ಮನೆಯಲ್ಲಿ ಅಧ್ಯಯನ ಮಾಡಿ ಕೊಂಡು ಇರೋಣ ಎಂದುಕೊಂಡಿದ್ದೆ. ಪಾಟೀಲ ಪುಟ್ಟಪ್ಪನವರು “ಪ್ರಪಂಚ’ ಎಂಬ ಪತ್ರಿಕೆ ಮಾಡಿದಾಗ ವಾರಪತ್ರಿಕೆಯಲ್ಲಿ ಒಂದು ಕ್ರಾಂತಿ ಮಾಡಿದರು. ಭಾರೀ ಜನಪ್ರಿಯವಾಯಿತು. ಕನ್ನಡದ ವಾರಪತ್ರಿಕೆ ಈ ರೀತಿ ಇರಬಹುದೆಂಬ ಕಲ್ಪನೆಯೇ ಇಲ್ಲದಂತೆ ಜನಪ್ರಿಯವಾಯಿತು. ಆಗ “ಪ್ರಕಾಶ’ ಎಂಬ ಪತ್ರಿಕೆ ಉಡುಪಿಯಲ್ಲಿತ್ತು. “ಪ್ರಪಂಚ’ದಂತೆಯೇ “ಪ್ರಕಾಶ’ವನ್ನು ಮಾಡೋಣ ಎಂದರು ಮೋಹನದಾಸ್ ಪೈಗಳು. ಹೊರದೇಶದ ಸುದ್ದಿಗಳು, ದೇಶದ ಸುದ್ದಿಗಳು, ಕೆಲವು ಫೋಟೋ ಹಾಕಿ, ಸಂಪಾದಕೀಯ, ಪ್ರಬಂಧಗಳು, ಕಥೆಗಳು, ಒಂದು ಧಾರಾವಾಹಿ ಪ್ರಕಟಿಸಿದೆವು. ಅದರಲ್ಲಿ ನನ್ನ ಬಾಣಭಟ್ಟನ ಅನುವಾದಿತ ಕಾದಂಬರಿಯೂ ಬಂತು. ಎಲ್ಲ ನಾನೇ ನೋಡಿಕೊಳ್ಳುತ್ತಿದ್ದೆ. ನನ್ನ ಸರ್ವಮೂಲ ಸಂಪಾದನೆ ಮುಗಿಯುತ್ತಿದ್ದಂತೆ ಅಲ್ಲಿ ಹೋಗಿ ಸೇರಿದೆ. ಭಗವಂತನ ವ್ಯವಸ್ಥೆ ಅದು. ನಾನು ನಿರುದ್ಯೋಗಿಯಾಗಲು ಬಿಡಲೇ ಇಲ್ಲ.
ಅಷ್ಟರಲ್ಲಿ ಉದಯವಾಣಿ ಪತ್ರಿಕೆ ಆರಂಭವಾಯಿತು. ಮೋಹನದಾಸ್ ಪೈಗಳು (ಮಾಧವ ಪೈಯವರ ಮಗ) ನನ್ನನ್ನು ಕರೆದರು. ಉದಯವಾಣಿಯಲ್ಲಿ ನೀವು ಕೆಲಸ ಮಾಡಬೇಕು ಎಂಬುದು ಅವರ ವಿನಂತಿ. ನಾನು ಯಾಕೋ ಅವರ ಜತೆಗೆ ಬಿಗುಮಾನ ತೋರಿದೆ. “ನಾನು ಉಪನ್ಯಾಸಕ್ಕೆ ಹೋಗುವವ. ಒಂದು ಸಂಸ್ಥೆಯಲ್ಲಿ ಗಂಟೆಗಟ್ಟಲೆ ಕೆಲಸ ಸಾಧ್ಯವಿಲ್ಲ. ನನಗೆ ಉದ್ಯೋಗ ಬೇಡ’ ಎಂದೆ. ದೇವರ ಚಿತ್ತ ತುಂಬ ವಿಚಿತ್ರವಿತ್ತು. ನನ್ನನ್ನು ನಿರುದ್ಯೋಗಿಯ ಹಾಗೆ ಮಾಡಿಯೂ ನನಗೆ ಉದ್ಯೋಗ ಕೊಟ್ಟ. ಅವರ ಉತ್ತರ ಹೀಗಿತ್ತು, “ನಿಮಗೆ ಯಾರ ನಿರ್ಬಂಧವಿದೆ ಹೇಳಿ? ಎಲ್ಲಿ ಉಪನ್ಯಾಸವಿದೆಯೋ ಅಲ್ಲಿ ಹೋಗಿ. ನಿಮಗೆ ಸಮಯ, ಗಂಟೆ ನಿಯಮಿಸಿದ್ದೇನಾ? ನೀವು ನಮಗೆ ಬೇಕು, ಬನ್ನಿ’.- ಅಂದರೆ ಸೇರುವ ಮೊದಲೇ ಅವರು ಕೊಟ್ಟ ಸ್ವಾತಂತ್ರÂ ಇದು. ಸಮಯ, ಗಂಟೆಗಳ ಬಂಧನವಿಲ್ಲದ ಸ್ವತಂತ್ರ ಉದ್ಯೋಗ. 1994ಕ್ಕೆ ನಾನು ಅದರಿಂದ ವಿರಮಿಸಿದ್ದು, ಆಗ ನನಗೆ ಐವತ್ತೆಂಟು. ಅಲ್ಲಿಯವರೆಗೂ ಅದು ನನ್ನ ಬದುಕಿನ ಇನ್ನೊಂದು ಅಧ್ಯಾಯ.
ನಾನು ಮತ್ತು ದೇವಾಡಿಗರು (ಉದಯವಾಣಿಯ ಆರ್ಟಿಸ್ಟ್) ಕೂಡಿಯೇ ಕಚೇರಿಗೆ ಹೋಗುವುದು. ಮಧ್ಯಾಹ್ನ ಮೂರರ ಮೇಲೆ ನಮ್ಮ ಹಾಜರಿ ಅಲ್ಲಿ. ಎಲ್ಲರೂ ಏನು ನಿಮ್ಮದು ಪಾರ್ಟ್ ಟೈಮ್ ಕೆಲಸವೇ ಎಂದು ಕೇಳಿದ್ದುಂಟು. ಆದರೆ ನನ್ನದು ಪೂರ್ಣಾ ವಧಿ ಕೆಲಸ. ಯಾವತ್ತೂ ಕೂಡ ಮೋಹನದಾಸ್ ಪೈಗಳು ನೀವು ಫುಲ್‌ಟೈಮ್ ಕೆಲಸ ಮಾಡಬೇಕು ಎಂದು ಆದೇಶಿಸಲಿಲ್ಲ. ರಜೆ ಮಾಡಿದಾಗ ಎಂದೂ ಏನೂ ಕೇಳುತ್ತಿರಲಿಲ್ಲ. ಬೆನ್ನು ನೋವಿನಿಂದ ಮಲಗಿದ್ದರೂ ಆನ್‌ಡೂÂಟಿಯೇ ನಮೂದಾಗುತ್ತಿತ್ತು!
ಆಗ ನೂರಾ ಐವತ್ತರ ವೇತನ ಇನ್ನೂರ ಎಪ್ಪತ್ತೆçದಕ್ಕೆ ನೆಗೆಯಿತು. ಆಗಲೂ ನಾನು ಹಿರಿಹಿರಿ ಹಿಗ್ಗಿದೆ. 1969ಕ್ಕೆ ಅದು ಒಂದು ಸಾಧಾರಣವಲ್ಲದ ಮೊತ್ತವೇ. ನನ್ನ ಮನೆವಾಳೆ¤ಯ ತಲೆಬಿಸಿಯನ್ನು ಅದು ನಿರಾಳ ಮಾಡಿತ್ತು. ನಮ್ಮ ತಂದೆ ಅದಮಾರು ಮಠದ ಮನೆಯಲ್ಲಿಯೇ ಇದ್ದರು. ಅಂಬಲಪಾಡಿಯಲ್ಲಿ ಹೊಸದಾಗಿ ಮನೆ ಮಾಡಿದ್ದ ಸಮಯ. ನನ್ನ ತಂದೆ, “ಹೇಗೆ ಮಾಡುತ್ತಿ ಹುಡುಗಾ, ನಿನಗೆ ಮನೆವಾಳೆ¤ ಕಷ್ಟ ಆಗುತ್ತಿಲ್ಲವೇ? ಏನು ಮಾಡುತ್ತಿ? ಒಂದು ಕೆಲಸ ಮಾಡು. ನಾನು ದಿನಸಿ ಸಾಮಾನು ತರುವ ಜಗನ್ನಾಥ ಇದ್ದಾನಲ್ಲ. ಅವನ ಅಂಗಡಿಯಿಂದ ಮನೆಗೆ ಬೇಕಾದ ಸರಕು ತೆಗೆದುಕೋ. ಲೆಕ್ಕ ಬರೆಯಿಸಿಡು, ನಾನು ಅದರ ಹಣ ಪಾವತಿಸುತ್ತೇನೆ’ ಎಂದರು. ಇದು ನನ್ನ ಅಪ್ಪನ ಔದಾರ್ಯ. ಅದಕ್ಕೆ ನಾನು ಉತ್ತರಿಸಿದೆ, “ಅಪ್ಪ, ನಾನು ಬದುಕು ಹೇಗೂ ಕಲಿಯಬೇಕಲ್ಲ? ನೀವೆಷ್ಟು ದಿನ ಕಾಯಬಲ್ಲಿರಿ? ಬಳಿಕವಾದರೂ ನಾನೇ ಜೀವನ ನಡೆಸಬೇಕಲ್ಲ? ಅದರ ಅನುಭವ ನೀವಿದ್ದಾಗಲೇ ಆಗಲಿ. ನಾನೇ ನೋಡಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಸಾಕು. ಸಮಸ್ಯೆ ಬಂದಾಗ ನಿಮ್ಮ ಬಳಿ ಬರುತ್ತೇನೆ’ ಎಂದೆ. ಅಪ್ಪ ಕೂಡ ಒಳಗೊಳಗೆ ಹಿಗ್ಗಿ ಒಪ್ಪಿಕೊಂಡರು.ನಾನು ಹೇಳಿದ್ದು ಕೇಳಿ ಅಷ್ಟೇ ಸಂತೋಷಪಟ್ಟರು.
ಆಗಲೂ ಮಣಿಪಾಲಕ್ಕೆ ಕಾರಿನಲ್ಲಿ ಹೋಗಿ ಬರುವುದು. ಬೆನ್ನುನೋವಿನ ಪರಿಣಾಮ ಬಸ್, ರಿûಾ ಹತ್ತುವಂತಿರಲಿಲ್ಲ. ಮುದ್ದು ಆಗ ನನ್ನ ಚಾಲಕ, ಏಳು ರೂಪಾಯಿ ಮಣಿಪಾಲಕ್ಕೆ ಆಗಿನ ಬಾಡಿಗೆ. ಹೀಗೆ ಮಣಿಪಾಲದಲ್ಲಿ ಇನ್ನೂರ ಎಪ್ಪತ್ತೆçದು ರೂಪಾಯಿ ಉದ್ಯೋಗ ಆರಂಭ ಆಯ್ತು. ನಾನು ಬಿಡುವ ವೇಳೆಗೆ ನನಗೆ ಆರು ಸಾವಿರ ಸಂಬಳ ಇತ್ತು. ಈಗ ಅಲ್ಲಿ ಆರಂಭಕ್ಕೆ ಉದ್ಯೋಗ ಸೇರಿದವರು ಹದಿನೈದು-ಹದಿನಾರು ಸಾವಿರ ಪಡೆಯುತ್ತಾರೆ. ಆದರೆ ನಾನು ಆರು ಸಾವಿರದಲ್ಲಿ ತುಂಬ ವೈಭವದಲ್ಲೇ ಬದುಕಿದ್ದೇನೆ. ನನಗೆ ಕೊರತೆ ಕಾಣಿಸಲಿಲ್ಲ.
ನನಗೆ ಐವತ್ತೆಂಟು ಆದಾಗ ನಿವೃತ್ತನಾಗುವ ತೀರ್ಮಾನ ಮಾಡಿದೆ. ಮೋಹನದಾಸ್ ಪೈಗಳ ಬಳಿ ನಿವೇದಿಸಿಕೊಂಡೆ. ಅವರು, “ಯಾಕೆ ಬನ್ನಂಜೆಯವರೆ-ನೀವು ನಿವೃತ್ತರಾಗುತ್ತೀರಿ ಎಂದು ನಾವು ನಿರೀಕ್ಷಿಸಲಿಲ್ಲ’ ಯಾಕೆಂದರೆ ಐವತ್ತೆಂಟು ಆದ ತತ್‌ಕ್ಷಣ ಅಲ್ಲಿ ವೃತ್ತಿ ಬಿಟ್ಟವರಿಲ್ಲ. ನನ್ನ ಅಣ್ಣ ಕೂಡ ಹಾಗೆ ಮುಂದುವರಿದಿದ್ದ. ಹಾಗಾಗಿ ನಾನೂ ಸಂಸ್ಥೆ ಬಿಡಲಿಕ್ಕಿಲ್ಲ ಎಂದು ಅವರು ಭಾವಿಸಿರಬೇಕು. ನನ್ನ ಮೇಲೆ ಒಂದು ವಿಶಿಷ್ಟವಾದ ಪ್ರೀತಿ ಇತ್ತು ಅವರಿಗೆ.
ಒಮ್ಮೆ ಕಚೇರಿಯ ಕೆಲಸದ ವೇಳೆಯನ್ನು ನಿಯಮಿಸಲು ರಾಮದಾಸ ಶೆಣೈ ನಿರ್ಣಯಿಸಿದರು. ಅವರು ಮ್ಯಾನೇಜರನ್ನು ಆ ಕೆಲಸಕ್ಕಾಗಿ ಕರೆದರು. ಅವರ ಜತೆಗೆ ನನ್ನನ್ನು ಕರೆದರು. “ಕಚೇರಿಯ ವೇಳಾಪಟ್ಟಿಯನ್ನು ನಿರ್ಣಯಿಸಲು ಕರೆದದ್ದು’ ಎಂದಾಗ ನನ್ನನ್ನು ನಿಯಮಕ್ಕೆ ಒಳಪಡಿಸುತ್ತಾರೆ, ನನ್ನೊಬ್ಬನನ್ನೇ ಕರೆದಿದ್ದಾರೆ ಎಂದರೆ ಅದೇ ಅರ್ಥ ಅಂದುಕೊಂಡೆ. ಸುಮ್ಮನೆ ಕುಳಿತುಕೊಂಡೆ. ಎಲ್ಲರ ಹೆಸರು ವೇಳಾಪಟ್ಟಿ ಬರೆದಾಯ್ತು. ಮುಂದಿನ ಪಾಳಿ ನನ್ನ ಹೆಸರಿನದು. ಅಷ್ಟರಲ್ಲಿ ನನ್ನ ಹೆಸರು ಬರೆದರು ಮ್ಯಾನೇಜರ್ ರಾಮದಾಸ್ ಶೆಣೈಗಳು – “ಅವರಿಗೆ ವೇಳಾಪಟ್ಟಿ ನಿಯಮ ಬೇಡ’ ಎಂದು ಬಿಟ್ಟರು. “ಹಾಗೆಯೇ ಹಾಜರಿ ಪುಸ್ತಕದಲ್ಲೂ ಅವರ ಹೆಸರು ಬೇಡ. ಅವರು ದಿನಾ ದಸ್ಕತ್ತು ಹಾಕಲು ತೊಂದರೆ ಪಡುವುದು ಬೇಡ. ಅವರು ಬಂದರೂ ಬಾರದಿದ್ದರೂ ಅವರಿಗೆ ಹಾಜರಿಯ ಆವಶ್ಯಕತೆ ಬೇಡ’ ಎಂದರು. ಹಾಗಾಗಿ ನಾನು ಯಾವಾಗಲೂ ಆನ್‌ಡೂÂಟಿಯೇ. ಅವರ ಅಂಥ ದೊಡ್ಡಸ್ತಿಕೆ ಮತ್ತು ವಿದ್ವತ್ತಿನ ಮೇಲೆ ಅವರು ತೋರಿದ ಗೌರವ, ಅದು ಅಸದೃಶ ಮತ್ತು ಮರೆಯಲಾಗದ್ದು. ಒಮ್ಮೊಮ್ಮೆ ಮೋಹನದಾಸ್ ಪೈಯವರು ಕರೆದು ಹೇಳಿದ್ದುಂಟು. “ಉಪನ್ಯಾಸಕ್ಕೆ ಯಾರಾದರೂ ಕರೆದ ತತ್‌ಕ್ಷಣ ಹೋಗಬೇಡಿ. ಅವರು ವಿಮಾನದಲ್ಲಿ ಕರೆಸಿಕೊಂಡರಷ್ಟೇ ಹೋಗಿ’. ಆಗಲೂ ಅವರಿಗಿದ್ದದ್ದು ನನ್ನ ಆರೋಗ್ಯದ ಮತ್ತು ಘನತೆಯ ಕಾಳಜಿಯೇ. ವಿದ್ವತ್ತಿಗೆ ಗೌರವ. ಬಸ್ ಪ್ರಯಾಣ ಬೇಡ ಎನ್ನುತ್ತಿದ್ದರು ಅವರು.
ಹೀಗೆಲ್ಲ ನನ್ನೊಂದಿಗಿದ್ದ ಮೋಹನದಾಸ್‌ರು ನನ್ನ ನಿವೃತ್ತಿ ಅನಿರೀಕ್ಷಿತ ಎಂದರೂ, ಕೊನೆಗೆ ಒಪ್ಪಿಕೊಂಡರು. ನಾನು ಹೇಳಿದೆ, “ವೃತ್ತಿಯಲ್ಲಿದ್ದಾಗಲೇ ಕೆಲಸವಿಲ್ಲದೆ ಸಂಬಳ ಪಡೆದಿದ್ದೇನೆ. ನಿವೃತ್ತಿಯ ಬಳಿಕವೂ ಮತ್ತೆ ಸಂಬಳ ತೆಗೆದುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಬಿಡುತ್ತೇನೆ’ ಎಂದೆ. ವ್ಯಾಲಿವ್ಯೂ ಹೊಟೇಲ್‌ನಲ್ಲಿ ಆಗ ಅತ್ಯಂತ ಸಂಭ್ರಮದ ವಿದಾಯ ಕಾರ್ಯಕ್ರಮ ಮಾಡಿದ್ದಾರೆ. ಅಲ್ಲಿಯವರೆಗೆ ಹಾಗೆ ಅವರು ವಿದಾಯ ಸಮಾರಂಭ ಮಾಡಿದ್ದು ನನಗೆ ಗೊತ್ತಿಲ್ಲ. ನನ್ನ ಅಣ್ಣನಿಗೇ ಮಾಡಿರಲಿಲ್ಲ. ಬೆಳ್ಳಿಯ ಹರಿವಾಣದಲ್ಲಿ ಹಣ್ಣು, ರಾತ್ರಿ ಎಲ್ಲರಿಗೂ ಊಟ.. ಹೀಗೆ ಸಂಭ್ರಮದ ವಿದಾಯ. ಕಡೆಗೆ “ನನಗೆ ಮಾಡಿದ್ದು, ಅಣ್ಣನಿಗೆ ಮಾಡಿಲ್ಲವಲ್ಲ’ ಯಾರೋ ಅವರನ್ನು ಕೇಳಿದರು. ಆ ಬಳಿಕ ಅಣ್ಣನಿಗೆ ವಿದಾಯ ಸಮಾರಂಭ ಮಾಡಿದ್ದರು. ಹೀಗೆಲ್ಲ ಪೈಗಳ ಉಪಕಾರ ನಾನೆಂದೂ ಮರೆಯುವಂಥದಲ್ಲ.
ಬನ್ನಂಜೆ ಗೋವಿಂದಾಚಾರ್ಯ,
ಬಹುಶ್ರುತ ವಿದ್ವಾಂಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.