ಹೊಸದು ಕಾಲಿರಿಸುವ ಸಮಯ


Team Udayavani, Apr 14, 2021, 12:26 PM IST

Untitled-1

“ಯುಗ’ ಎಂದರೆ ಶಕ, “ಆದಿ’ ಎಂದರೆ “ಆರಂಭ’ಎಂಬ ಅರ್ಥವನ್ನು ಯುಗಾದಿ ಕೊಡುತ್ತದೆ. ಪ್ರಸ್ತುತ ನಾವೆಲ್ಲರೂ ಕಲಿಯುಗದಲ್ಲಿ ಬದುಕುತ್ತಿದ್ದೇವೆ. ಶ್ರೀಕೃಷ್ಣ ಪರಮಾತ್ಮನು ತನ್ನ ಅವತಾರವನ್ನು ಮುಗಿಸಿ ಹೊರಟಂದಿನಿಂದ “ಕಲಿಯುಗ’ ಆರಂಭಗೊಂಡಿದೆ.

ಬ್ರಹ್ಮ ಸೃಷ್ಟಿಯನ್ನು ನಿರ್ಮಿಸಿದ ದಿನ, ಶ್ರೀರಾಮಚಂದ್ರ ವಾಲಿಯನ್ನು ಸಂಹರಿಸಿದದಿನ, ದುರುಳ ರಾವಣನನ್ನು ಕೊಂದುರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವಾಗಿದೆ. ಯುಗಾದಿಯು ಭಾರತೀಯರದೃಷ್ಟಿಯಲ್ಲಿ ನೂತನ ವರ್ಷದ ಹೊಸದಿನ.ಈ ಹೊಸತನಕ್ಕೆ ಕಾಲವೇ ಸ್ಪಂದಿಸುತ್ತದೆ.ಹೊಸ ವರುಷಕ್ಕೆಸ್ವಾಗತ ಕೋರುವಂತೆ ಬೇವಿನಮರ ಚಿಗುರುತ್ತದೆ.

ಹೂ ಬಿಟ್ಟು ಫ‌ಲಭರಿತವಾಗುತ್ತದೆ. ಚಿಗುರೆಲೆಯನ್ನು ಸವಿದ ಕೋಗಿಲೆಯುಪಂಚಮದ ಇಂಚರದಿ ಸುಶ್ರಾವ್ಯ ಕಂಠದಿಂದಕೂಗುತ್ತದೆ. ವಸಂತ ಕಾಲದ ಆಗಮನದಿಂದಪ್ರಕೃತಿ ಹೂ ಹಣ್ಣು ಮೈದುಂಬಿ ತನ್ನೆಡೆಗೆಆಕರ್ಷಿಸುವ ಪರ್ವ ಕಾಲವಿದು.ಪ್ರಕೃತಿಯು ತನ್ನ ಮುಪ್ಪಾದ ಎಲೆಗಳನ್ನುಉದುರಿಸಿ ಚಿಗುರೆಲೆಗಳನ್ನು ತೋರುವಾಗಮನುಷ್ಯನು ಹೊಸ ವರುಷವನ್ನುಆಚರಿಸುತ್ತಾನೆ. ಪ್ರಕೃತಿಯ ಹೊಸ ಚೈತನ್ಯಮನುಷ್ಯನಿಗೂ ಚೈತನ್ಯದಾಯಕವಾಗಿದೆ.ವಸಂತನ ಆಗಮನವೆಂದರೆಸಂವತ್ಸರಾಧಿಪತಿಯ ಪಾತ್ರದ ಅನಾವರಣ.ಹೊಸ ಹಸಿರಿನ ಕಲಾ ನಾಯಕನಒಡ್ಡೋಲಗದ ಶುಭ ಮುಹೂರ್ತವೋಎಂಬಂತೆ ಯುಗಾದಿ ಸಾಗಿ ಬಂದಿದೆ.

ಚಾಂದ್ರಮಾನ ಯುಗಾದಿಯನ್ನು ಸಂವತ್ಸರಾರಂಭ ಎಂದು ಕರೆಯಲಾಗುತ್ತದೆ.ಯುಗಾದಿ ಹಬ್ಬವನ್ನು ಭಾರತದ ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ. ಆಂಧ್ರ ಪ್ರದೇಶದವರು ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿಯನ್ನು ಆಚರಿಸುತ್ತಾರೆ.

ಯುಗಾದಿಗೆ ವಿಶೇಷ ಭಕ್ಷ್ಯ :

ಯುಗಾದಿ ಹಬ್ಬಕ್ಕೆ ಕರ್ನಾಟಕದಲ್ಲಿ ವಿಶೇಷ ಭಕ್ಷ್ಯವಾಗಿ ಒಬ್ಬಟ್ಟು ಅಥವಾಹೋಳಿಗೆಯನ್ನು ಮಾಡಲಾಗುತ್ತದೆ. ಅದರಲ್ಲಿಯೂ ವಿವಿಧ ರುಚಿಯ ಒಬ್ಬಟ್ಟು ಇಲ್ಲಿನ ಮತ್ತೂಂದು ವಿಶೇಷ. ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಸಕ್ಕರೆ ಹೋಳಿಗೆ, ಮಂಡಿಗೆ ಇತ್ಯಾದಿಗಳನ್ನುತಯಾರಿಸಿ ಸವಿದರೆ, ಆಂಧ್ರಪ್ರದೇಶದವರುಭಕ್ಷ್ಯಾಲು ಅಥವಾ ಬೊಬ್ಬಟ್ಲು (ಪೊಲೆಲು)”ಪಚ್ಚಡಿ’ಯನ್ನು ತಯಾರಿಸಿ ಸವಿಯುವ ಸಂಪ್ರದಾಯವಿದೆ.

ಆಚರಣಾ ಕ್ರಮ :

ಯುಗಾದಿ ಹಬ್ಬದ ಆಚರಣೆ ಚಾಂದ್ರಮಾನ ಮತ್ತು ಸೌರಮಾನಎಂಬ ಎರಡು ಪದ್ಧತಿಗಳನ್ವಯರೂಢಿಯಲ್ಲಿದೆ. ಈ ದಿನ ಉಷಃಕಾಲದಲ್ಲಿ ಪರಮಾತ್ಮನ ಸ್ಮರಣೆ ಮಾಡುತ್ತ, ದೇವರಮನೆ, ಮನೆಯ ಮುಖ್ಯ ದ್ವಾರಗಳನ್ನುರಂಗೋಲಿ ತೋರಣಗಳಿಂದ ಸಿಂಗರಿಸಿ,ಅಭ್ಯಂಜನ ಸ್ನಾನ ಮಾಡಿ, ಹೊಸಉಡುಗೆ-ತೊಡುಗೆಗಳನ್ನು ತೊಟ್ಟು,ಹೊಸ ವರ್ಷದ ಪಂಚಾಂಗವನ್ನು ದೇವರಸಮೀಪವಿಟ್ಟು ಪೂಜಿಸಿ, ಅನಂತರ ಬೇವು-ಬೆಲ್ಲ ಸೇವಿಸಿ, ಸನ್ಮಿತ್ರರು ಸೇರಿದಸಭೆಯಲ್ಲಿ ಪುರೋಹಿತರು ಪಠಣಮಾಡುವ ಪಂಚಾಂಗ ಶ್ರವಣವನ್ನುಆಲಿಸುವುದು ರೂಢಿಯಲ್ಲಿದೆ.

ಅಂದರೆನೂರು ವರ್ಷಗಳ ಆಯುಷ್ಯ, ದೃಢಆರೋಗ್ಯ ಸಕಲ ಸಂಪತ್ತಿನ ಪ್ರಾಪ್ತಿಗಾಗಿ, ಸಕಲಾರಿಷ್ಟ ನಿವಾರಣೆಗಾಗಿ ಬೇವು-ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಸೇವಿಸಬೇಕು ಎಂಬುದು ನಡೆದು ಬಂದ ಪದ್ಧತಿ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಯುಗಾದಿ ಆಚರಣೆ ಬಲು ಜೋರಾಗಿ ನಡೆಯುತ್ತಿತ್ತು. ಇಂದಿಗೂ ಕರ್ನಾಟಕದಕೆಲವೆಡೆ ಅತ್ಯಂತ ವಿಜೃಂಭಣೆಯಿಂದಆಚರಿಸಲಾಗುತ್ತದೆ. ಪ್ರಸ್ತುತ ಪೇಟೆಪಟ್ಟಣಗಳಲ್ಲಿ ಹಬ್ಬದ ವಾತಾವರಣಮಾಸಿ ಹೋಗಿದೆ. ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿದ ಮನುಷ್ಯದಿನದಿನಕ್ಕೆ ಯಾವುದಕ್ಕೂ ಸಮಯ,ವ್ಯವಧಾನಗಳಿಲ್ಲದೆ ಹಬ್ಬದ ಸಂಭ್ರಮದಸವಿಯಿಂದ ವಂಚಿತನಾಗುತ್ತಿದ್ದಾನೆ. ಮುಂದೆ ಹಾಗಾಗದಿರುವಂತೆ ಮುಂದಿನಪೀಳಿಗೆಗೆ ಯುಗಾದಿಯಂತಹಹಬ್ಬಗಳ ಕುರಿತು ತಿಳಿಸಿ ಸಂಭ್ರಮದಿಂದಹಬ್ಬವನ್ನು ಆಚರಿಸುವ ಇರಾದೆಯನ್ನುಕಲಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ.

ಯುಗಾದಿ ಮಹತ್ವ  : ಚೈತ್ರ-ವೈಶಾಖ ಮಾಸ ಕೇವಲ ಪ್ರಾಕೃತಿಕವಾಗಿ ಮಹತ್ವವುಳ್ಳಕಾಲವಲ್ಲದೆ ಐತಿಹಾಸಿಕ, ಸಾಂಸ್ಕೃತಿಕವಾಗಿಯೂ ಮಹತ್ವಹೊಂದಿದೆ. ಶ್ರೀರಾಮನ ಜನನಚೈತ್ರ ಶುದ್ಧ ನವಮಿಯಂದು,24ನೇ ತೀರ್ಥಂಕರ ಮಹಾವೀರ ಸ್ವಾಮಿಯ ಜನನ ಚೈತ್ರಶುದ್ಧ ತ್ರಯೋದಶಿಯಂದು,ಬುದ್ಧ ಜಯಂತಿ ವೈಶಾಖಪೂರ್ಣಿಮೆಯಂದು ಹೀಗೆಮಹಾನುಭಾವರು ಜನಿಸಿದ ಪುಣ್ಯ ಕಾಲವಾದ ಈ ಮಾಸವು ವೈಶಿಷ್ಟ್ಯದಿಂದ ಕೂಡಿದೆ.

ಚಾಂದ್ರಮಾನ ಯುಗಾದಿಕಳೆದ ನಂತರವೇ ಸೌರಮಾನಯುಗಾದಿ ಬರುತ್ತದೆ. ಇದುಸೌರಮಾನದ ಪ್ರಕಾರ ವರ್ಷದಆರಂಭ, ಸೌರಮಾನದಮೇಷ ಮಾಸಾರಂಭ,ರವಿಯು ಮೇಷ ರಾಶಿಯನ್ನುಪ್ರವೇಶಿಸುವುದರಿಂದ “ಮೇಷ ಸಂಕ್ರಮಣ’ ಎಂದು ಕರೆಯಲ್ಪಡುತ್ತದೆ. ಅಂದಿನಿಂದಸೌರ ವರ್ಷದ ಗಣನೆ ಆರಂಭ.ಆ ದಿನವನ್ನು “ವಿಷು’ವೆಂದು ಕರೆಯುತ್ತಾರೆ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.