ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಯುಜಿಸಿ ಹೆಜ್ಜೆ 


Team Udayavani, Aug 19, 2022, 6:20 AM IST

ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಯುಜಿಸಿ ಹೆಜ್ಜೆ 

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಯುಜಿಸಿಯು ಹೊಸ ವೆಬ್‌ ಪೋರ್ಟಲ್‌ ಒಂದನ್ನು ಬಿಡುಗಡೆಗೊಳಿಸಿದೆ.  ನ್ಯಾಶನಲ್‌ ಎಜುಕೇಶನಲ್‌ ಪೋರ್ಟಲ್‌ನ ಎರಡನೇ ವರ್ಷದ ಸಂಭ್ರಮದ ಸಮಯದಲ್ಲಿ ಇದನ್ನು ಬಿಡುಗಡೆಗೊಳಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಆಧುನಿಕ ಕ್ರಮಗಳನ್ನು ತರಲು ಇದನ್ನು ಆರಂಭಿಸಲಾಗಿದೆ. ಯುಜಿ ಹಾಗೂ ಪಿಜಿ ಕೋರ್ಸ್‌ ಗಳನ್ನು ಈ ಪೋರ್ಟಲ್‌ ಮೂಲಕ ಪಡೆದುಕೊಳ್ಳಬಹುದು.

ಯುಜಿಸಿ ಮತ್ತು ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಜಂಟಿಯಾಗಿ ಇದನ್ನು ಬಿಡುಗಡೆಗೊಳಿಸಿದ್ದು, ಯುಜಿಸಿ ಇ- ರಿಸೋರ್ಸಸ್‌ ಪೋರ್ಟಲ್‌ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಯುಜಿ ಮತ್ತು ಪಿಜಿ ಕೋರ್ಸ್‌ಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಿದೆ.  ಕಂಪ್ಯೂಟರ್‌ ಸೌಲಭ್ಯವಿಲ್ಲದಿದ್ದರೆ ಅಥವಾ ನೆಟ್‌ವರ್ಕ್‌ ಸಮಸ್ಯೆಯಿರುವವರು ತಮ್ಮ ಸಮೀಪವಿರುವ ಸಿಎಸ್‌ಸಿ (Common Service Centres)  ಅಥವಾ ಸಿಪಿವಿ (Special Purpose Vehicle)ಗೆ  ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಗ್ರಾಮ ಪಂಚಾಯತ್‌ಗಳಲ್ಲಿ 2.5 ಲಕ್ಷ ಸಿಎಸ್‌ಸಿ ಹಾಗೂ ಎಸ್‌ಪಿವಿ ಸೆಂಟರ್‌ ಹಾಗೂ ದೇಶಾದ್ಯಂತ ಇತರೆಡೆಗಳಲ್ಲಿ 5 ಲಕ್ಷ ಸೆಂಟರ್‌ಗಳನ್ನು ಯುಜಿಸಿ ಆರಂಭಿಸಿದೆ.

ಡಿಜಿಟಲ್‌ ಯುನಿವರ್ಟಿಟಿ ಆರಂಭವಾದ ಬಳಿಕ ಪದವಿಗಳನ್ನು ನೀಡಲು ನಿರ್ಧರಿಸಲಾಗಿದೆ. ಸದ್ಯ ವಿದ್ಯಾರ್ಥಿಗಳು ಈ ಕೋರ್ಸ್‌ಗಳ ಮೂಲಕ ಶೇ. 40 ಕ್ರೆಡಿಟ್‌ಗಳನ್ನು ಪಡೆದುಕೊಳ್ಳಬಹುದು ಎಂದು ಯುಜಿಸಿಯ ಚೇರ್‌ಪರ್ಸನ್‌ ಎಂ. ಜಗದೀಶ್‌ ಕುಮಾರ್‌ ಹೇಳಿದ್ದಾರೆ.

ಒಟ್ಟು ಕೋರ್ಸ್‌ಗಳು  :

  • 25 MOOC (Massive Open Online Courses) ಕೋರ್ಸ್‌ಗಳು 8 ಭಾಷೆಗಳಲ್ಲಿ ಲಭ್ಯ
  • ನಾನ್‌ ಟೆಕ್ನಾಲಜಿ ಕೋರ್ಸ್‌ಗಳು (135 ಪಿಜಿ ಹಾಗೂ 243 ಯುಜಿ ಕೋರ್ಸ್‌ಗಳು)
  • ಇ- ಪಾಠ್ ಶಾಲಾದಲ್ಲಿ 67 ವಿಷಯಗಳು (23,000ಕ್ಕೂ ಹೆಚ್ಚು ಪಿಜಿ ಪಠ್ಯ ಹಾಗೂ ವೀಡಿಯೋಗಳು ಲಭ್ಯ)

ಯುಜಿಸಿಯ ಹೊಸ  ಪೋರ್ಟಲ್‌ ಏನು ಮಾಡುತ್ತದೆ? :

ಉನ್ನತ ಶಿಕ್ಷಣವನ್ನು ಎಲ್ಲ ವಿದ್ಯಾರ್ಥಿಗಳಿಗೆ ಕೈಗೆಟಕುವ ಹಾಗೆ ಮಾಡುತ್ತದೆ. ಇಂಗ್ಲಿಷ್‌ ಜತಗೆ ಇತರ 8 ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡುತ್ತದೆ. ಯುಜಿಸಿ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜತೆಗೂಡಿ ಕಾಮನ್‌ ಸರ್ವಿಸ್‌ ಸೆಂಟರ್‌ (ಸಿಎಸ್‌ಸಿ) ಹಾಗೂ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ (ಎಸ್‌ವಿಪಿ) ಮೂಲಕ ವಿದ್ಯಾರ್ಥಿಗಳನ್ನು ತಲುಪಲಿದೆ.

ವಿದ್ಯಾರ್ಥಿಗಳಿಗೆ ಪ್ರಯೋಜನವೇನು?  :

  • ಈ ಹಿಂದೆ ಮಾಹಿತಿಗಾಗಿ ಬೇರೆ ಬೇರೆ ಪೋರ್ಟಲ್‌ ಮೂಲಕ ಪ್ರವೇಶ ಪಡೆಯಬೇಕಾಗಿತ್ತು. ಆದರೆ ಈಗ ಯುಜಿಯು ಎಲ್ಲ ಮಾಹಿತಿಗಳು ಒಂದೇ ಪೋರ್ಟಲ್‌ನಲ್ಲಿ ಲಭ್ಯವಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿ.
  • ಇ- ಪೋರ್ಟಲ್‌ ಆನ್‌ಲೈನ್‌ ತರಗತಿಗಳನ್ನು ಪ್ರಾದೇಶಿಕ ಭಾಷೆಗಳ ಮೂಲಕವು ನೀಡುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅರ್ಥಮಾಡಿಕೊಳ್ಳಲು ಸುಲಭ.
  • 135 ಪಿಜಿ ಕೋರ್ಸ್‌ ಹಾಗೂ 243 ಯುಜಿ ಕೋರ್ಸ್‌ಗಳಿಗೆ ಇ- ಬುಕ್‌ ಲಭ್ಯವಿವೆ.
  • ಪ್ರಸ್ತುತ ನಡೆಯುತ್ತಿರುವ ತರಗತಿಗಳಿಗೆ ಸಹಾಯವಾಗಲು 23,000 ಪಠ್ಯ ಮತ್ತು ವೀಡಿಯೋಗಳು ಉಚಿತವಾಗಿ ಲಭ್ಯವಿವೆ.
  • ಸ್ವಯಂ  (SWAYAM- study webs of active -learning for young aspiring minds)  ಮ್ಯಾಸಿವ್‌ ಓಪನ್‌ ಆನ್‌ಲೈನ್‌ ಕೊರ್ಸ್‌ (MOOC) ಈ ಪೋರ್ಟಲ್‌ನಲ್ಲಿ  ಲಭ್ಯವಿದೆ. ಅದರಲ್ಲಿ ನೋಂದಾಯಿಸಿಕೊಂಡು ಯಾವುದಾದರೂ ಕೋರ್ಸ್‌ ಮಾಡಿದರೆ ಈ ಕೋರ್ಸ್‌ನಲ್ಲಿ ಪಡೆಯುವ ಕ್ರೆಡಿಟ್‌ ಅನ್ನು ಅಸ್ತಿತ್ವದಲ್ಲಿರುವ ಪದವಿ ಕಾರ್ಯಕ್ರಮಕ್ಕೆ  ಅಕಾಡೆಮಿಕ್‌ ಬ್ಯಾಂಕ್‌ ಆಫ್ ಕ್ರೆಡಿಟ್ಸ್‌  ಪೋರ್ಟಲ್‌ ಮೂಲಕ ವರ್ಗಾಯಿಸಬಹುದು.

ಈಗ ಇರುವ ಪೋರ್ಟಲ್‌ಗ‌ಳಿಗಿಂತ ಹೊಸ ಪೋರ್ಟಲ್‌ ಹೇಗೆ ಭಿನ್ನ ? :

ಸರಕಾರದ ಆನ್‌ಲೈನ್‌ ಲರ್ನಿಂಗ್‌ ಪೋರ್ಟಲ್‌ನ ಉದ್ದೇಶ ಗ್ರಾಮೀಣ ಪ್ರದೇಶದ ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ತಲುಪಿಸುವುದು. ಇದರೊಂದಿಗೆ ಈ ಹೊಸ ಪೋರ್ಟಲ್‌ನ ಉದ್ದೇಶ ಸಮಾನ ಉನ್ನತ ಶಿಕ್ಷಣ ನೀಡುವುದು ಕೂಡ. ಇದರ ಮೊದಲ ಮೆಟ್ಟಿಲು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಒದಗಿಸುವುದು. ಇನ್ನೂ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಒದಗಿಸಲು ಯುಜಿಸಿಯು ಪ್ರಯತ್ನಿಸುತ್ತಿದೆ. ಜತೆಗೆ ವೀಡಿಯೋಗಳನ್ನು ಕೂಡ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಿ ನೀಡುತ್ತಿದೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗುವುದರ ಜತೆಗೆ ಭಾಷಾ ಸಮಸ್ಯೆ ಎದುರಿಸುವವರಿಗೆ ಸಹಾಯಕವಾಗಲಿದೆ.

ಯುಜಿಸಿಯು ಸಿಎಸ್‌ಸಿ ಹಾಗೂ ಎಸ್‌ಪಿವಿಯನ್ನು ಆರಂಭಿಸಿ ವಿದ್ಯಾರ್ಥಿಗಳು ಸುಲಭವಾಗಿ ಆನ್‌ಲೈನ್‌ ಶಿಕ್ಷಣ ಪಡೆಯಲು ನೆರವಾಗುತ್ತಿದೆ. ಇದನ್ನು ಬಳಸಲು ವಿದ್ಯಾರ್ಥಿಗಳು ದಿನಕ್ಕೆ 20 ರೂ. ಅಥವಾ ತಿಂಗಳಿಗೆ 500 ರೂ. ಅನ್ನು ಪಾವತಿಸಬೇಕಾಗುತ್ತದೆ.

 ಸಿಎಸ್‌ಸಿ ಹಾಗೂ ಎಸ್‌ಪಿವಿಯನ್ನು ನಿಯಂತ್ರಿಸುವವರು ಯಾರು ? :

ಸಿಎಸ್‌ಸಿ ಹಾಗೂ ಎಸ್‌ಪಿವಿಯನ್ನು ನಿಯಂತ್ರಿಸುವವರು ಸ್ಥಳೀಯರೇ ಆಗಿರುತ್ತಾರೆ. ಇವರನ್ನು ವಿಲೇಜ್‌ ಲೆವೆಲ್‌ ಎಂಟರ್‌ಪ್ರೈನರ್‌ ಎಂದು ಕರೆಯುತ್ತಾರೆ.

ಯಾವೆಲ್ಲ ಭಾಷೆಗಳಲ್ಲಿ ಕೋರ್ಸ್‌ಗಳು ಲಭ್ಯವಿವೆ ?:

ಇಂಗ್ಲಿಷ್‌ ಭಾಷೆಯೊಂದಿಗೆ ಇತರ 8 ಪ್ರಾದೇಶಿಕ ಭಾಷೆಗಳು ಇವೆ. ಅವುಗಳೆಂದರೆ ಕನ್ನಡ, ಹಿಂದಿ, ಮರಾಟಿ, ಬೆಂಗಾಲಿ, ಗುಜರಾತಿ, ತೆಲುಗು, ತಮಿಳು, ಮಲಯಾಳ.

ಉಚಿತ ಕೋರ್ಸ್‌ಗಳು :

ಈ ಪೋರ್ಟಲ್‌ನಲ್ಲಿರುವ ಕೋರ್ಸ್‌ಗಳು ಹಾಗೂ ಬೇಕಾಗುವ ಮೆಟೀರಿಯಲ್‌ಗ‌ಳು ಉಚಿತವಾಗಿರುತ್ತವೆ. ವಿದ್ಯಾರ್ಥಿಯು ಒಂದು ಸಲ ಈ ಪೊರ್ಟಲ್‌ನಲ್ಲಿ ನೋಂದಾಯಿಸಿಕೊಂಡರೆ ಅನಂತರ ಉಚಿತವಾಗಿ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದು.

ವಿದ್ಯಾರ್ಥಿಗಳು ತಮ್ಮದೇ ಲ್ಯಾಪ್‌ಟಾಪ್‌ಗ್ಳ ಮೂಲಕ ಈ ಪೋರ್ಟಲ್‌ ಅನ್ನು ಬಳಸಬಹುದು. 

ಯುಜಿಸಿಯ ಮುಂದಿನ ಗುರಿ :

ಯುಜಿಸಿಯು ಈ ಪೋರ್ಟಲ್‌ಗೆ ಹೆಚ್ಚು ವಿಷಯ ಹಾಗೂ ಕೋರ್ಸ್‌ಗಳನ್ನು ಸೇರಿಸುವ ಗುರಿ ಹೊಂದಿದೆ.  ಜತೆಗೆ ಇನ್ನೂ ಹೆಚ್ಚಿನ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್‌ಗಳನ್ನು ನೀಡುವುದಕ್ಕೆ  ಮುಂದಾಗುತ್ತಿದೆ. ಹೆಚ್ಚು  ಸಿಎಸ್‌ಸಿ ಹಾಗೂ ಎಸ್‌ಪಿವಿಗಳನ್ನು ಆರಂಭಿಸಿ ದೇಶದ ಮೂಲೆ ಮೂಲೆಗಳನ್ನು ತಲುಪುವ ಉದ್ದೇಶವಿದೆ.

ಯುಜಿಸಿಯು ಡಿಜಿಟಲ್‌ ಯುನಿವರ್ಟಿಟಿಯನ್ನು ಅಭಿವೃದ್ಧಿ ಪಡಿಸಲು ತಯಾರಿ ನಡೆಸುತ್ತಿದೆ. ಡಿಜಿಟಲ್‌ ಲೈಬ್ರರಿಯನ್ನು ಆರಂಭಿಸಿ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿ ಮತ್ತು ವಿಷಯಗಳನ್ನು ಅದಕ್ಕೆ ಸೇರಿಸಲು ಮುಂದಾಗಿದ್ದು, ಇದರಿಂದ ವಿದ್ಯಾರ್ಥಿಗಳು ಸುಲಭವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಯುಜಿಸಿಯು ಈಗಾಗಲೇ ಏಕಕಾಲದಲ್ಲಿ ಎರಡು ಡಿಗ್ರಿ ಕೋರ್ಸ್‌ಗಳನ್ನು ಮಾಡಲು ಅನುಮತಿ ನೀಡಿದೆ.  ಕಾಲೇಜಿನಲ್ಲಿ ಪದವಿ ಪಡೆಯುವ ಜತೆಗೆ ಡಿಜಿಟಲ್‌ ಯುನಿವರ್ಸಿಟಿಯಿಂದ ಆನ್‌ಲೈನ್‌ ಡಿಗ್ರಿ  ಪಡೆದುಕೊಳ್ಳಲು ಅವಕಾಶವಿದೆ.

ಯುಜಿಸಿ ಪೋರ್ಟಲ್‌ ಲಿಂಕ್‌- https://ugceresources.in

ಟಾಪ್ ನ್ಯೂಸ್

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.