ಮಾನವೀಯ ದೃಷ್ಟಿಯಿಂದ ಒಂದಾಗೋಣ
Team Udayavani, May 6, 2021, 6:20 AM IST
ಕೋವಿಡ್ ಎರಡನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ಉದಯವಾಣಿಯ “ಒಂದಾಗಿ ಕೊರೊನಾ ಓಡಿಸೋಣ’ ಆಶಯಕ್ಕೆ ವಿವಿಧ ಪಕ್ಷಗಳ ನಾಯಕರು ತಮ್ಮ ಅಭಿಮತ ಮಂಡಿಸಿದ್ದಾರೆ. ಇವರೆಲ್ಲರ ಒಕ್ಕೊರೊಲ ಆಶಯ ಒಂದೇ; “ಕೊರೊನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ಬದಿಗಿಡಲೇಬೇಕು. ಮಾನವೀಯ ದೃಷ್ಟಿಯಿಂದ ನಾವೆಲ್ಲರೂ ಒಂದಾಗಿ ಸಮಸ್ಯೆ ಎದುರಿಸಬೇಕು…’
ಕೋವಿಡ್ ನಿರ್ಮೂಲನೆಗೆ ಎಲ್ಲರೂ ಒಂದಾಗಬೇಕು. ಆಡಳಿತ ಪಕ್ಷದವರು ಇದು ನಮ್ಮ ಕರ್ತವ್ಯ ಎಂದು ಭಾವಿಸಿದಾಗ ಸ್ವಾಭಾವಿಕವಾಗಿ ವಿಪಕ್ಷದವರೂ ಅವರಿಗೆ ಸಹಕಾರ ನೀಡಬೇಕು. ಆಡಳಿತ ಪಕ್ಷದವರು ಇದು ನಮ್ಮದೇ ಅಧಿ ಕಾರ, ಬೇಕಾದ ರೀತಿಯಲ್ಲಿ ಚಲಾಯಿಸು ತ್ತೇವೆ ಎಂದು ಅಂದುಕೊಳ್ಳುವುದು, ವಿಪಕ್ಷದವರು ಟೀಕೆ ಮಾಡುವುದೇ ನಮ್ಮ ಕೆಲಸ ಎಂದು ಅಂದುಕೊಳ್ಳುವುದು ಇವೆರಡೂ ಸಮಾಜಕ್ಕೆ ಮಾಡುವ ದ್ರೋಹ. ಇಬ್ಬರೂ ಸೇರಿ 100 ವರ್ಷ ಗಳ ಅನಂತರ ಬಂದಿರುವ ಈ ಪಿಡುಗನ್ನು ಗೆಲ್ಲಬೇಕು. ಎಲ್ಲ ಪಕ್ಷಗಳು ಸಮಾಜ ಸೇವೆ ಎಂದು ಪರಿಗಣಿಸಿ ಸೇವೆ ಮಾಡಿದರೆ ನಾವು ಯಶಸ್ವಿಯಾಗುತ್ತೇವೆ. -ಕೆ.ಎಸ್.ಈಶ್ವರಪ್ಪ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
ವಿಶ್ವವೇ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿದೆ. ವಿಜ್ಞಾನಿಗಳು, ವೈದ್ಯರು, ವೈದ್ಯಕೀಯ ಸಿಬಂದಿ, ಪೊಲೀಸರು ಜೀವವನ್ನೇ ಒತ್ತೆಯಿಟ್ಟು ಜನರ ಆರೋಗ್ಯ ರಕ್ಷಣೆಗೆ ದುಡಿಯುತ್ತಿದ್ದಾರೆ. ಸರಕಾರವೂ ಹಗಲಿರುಳು ಶ್ರಮಿಸುತ್ತಿದೆ. ಈ ಸನ್ನಿವೇಶದಲ್ಲಿ ಸರಕಾರ ಟೀಕಿಸುವ ಮುನ್ನ ಎದೆ ಮುಟ್ಟಿ ನೋಡಿಕೊಳ್ಳಬೇಕು. ವಿನಾಕಾರಣ ಸರಕಾರದ ವಿರುದ್ಧ ಟೀಕಿಸುವುದು ಬಿಟ್ಟು ಸಕಾರಾತ್ಮಕ ಸಲಹೆ- ಸೂಚನೆ ನೀಡಬೇಕು. ಗದಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಆಡಳಿತ-ವಿಪಕ್ಷದ ಶಾಸಕರು ಸಮನ್ವಯದಿಂದ ಅ ಧಿಕಾರಿಗಳ ಸಭೆ ನಡೆಸುತ್ತಿದ್ದೇವೆ.-ಸಿ.ಸಿ. ಪಾಟೀಲ್, ಸಣ್ಣ ಕೈಗಾರಿಕೆ ಸಚಿವರು
ವಿಪಕ್ಷದಲ್ಲಿದ್ದರೂ ನಾವೆಲ್ಲ ರಚನಾತ್ಮಕ ಸಲಹೆ-ಬೆಂಬಲ ನೀಡುತ್ತಿದ್ದೇವೆ. ಸರಕಾರ ಮಾಡಬೇಕಾದ ಕೆಲಸದಲ್ಲಿ ಭಾಗವಹಿಸಿ ಕೆಲಸ ಮಾಡುತ್ತಿದ್ದೇವೆ. ಸ್ಥಳೀಯ ಮಟ್ಟದ ನಾಯಕರು ಕೂಡ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಜನತೆಗೆ ಧೈರ್ಯ ತುಂಬಲು ಝೂಮ್ ಆ್ಯಪ್ ಮೂಲಕ ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರೊಂದಿಗೆ ಸಂವಾದ ನಡೆಸಿ ಅವರ ಅಗತ್ಯತೆ ಪೂರೈಸುವ ಕೆಲಸ ಮಾಡಿದ್ದೇವೆ. ರಾಜಕೀಯ ಪಕ್ಷಗಳ ಎರಡನೇ ಹಂತದ ನಾಯಕರು ಇದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. – ಎಚ್.ಕೆ. ಪಾಟೀಲ, ಗದಗ ಶಾಸಕ
ಸರಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವುದಕ್ಕಿಂತ ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಈ ಸಂದರ್ಭವನ್ನು ಎದುರಿಸಬೇಕು. ಸ್ವಸ್ಥ ಸಮಾಜ, ಕರುನಾಡು ನಿರ್ಮಾಣ ಇಂತಹ ಪ್ರಯತ್ನದಿಂದ ಸಫಲವಾಗುತ್ತದೆ.-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಕೋವಿಡ್ ನಿಯಂತ್ರಣ ವಿಚಾರದಲ್ಲಿ ಎಲ್ಲ ಪಕ್ಷಗಳು ಒಗ್ಗೂಡಿ ಕೆಲಸ ಮಾಡುವುದು ಒಳ್ಳೆಯದೇ. ಆದರೆ ಇದು ಬರೀ ಬಾಯಿ ಮಾತಿಗೆ ಸೀಮಿತವಾಗದೆ ಒಗ್ಗೂಡಿ ಕೆಲಸ ಮಾಡಲು ಎಲ್ಲ ಪಕ್ಷದವರೂ ಮನಸ್ಸು ಮಾಡಬೇಕು. ಜಿಲ್ಲಾ ಹಂತದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಮಟ್ಟದ ನಾಯಕರು ಮೊದಲು ಈ ಕಾರ್ಯಕ್ಕೆ ಅಣಿಯಾಗಬೇಕು. ಅದಕ್ಕೆ ನಮ್ಮ ಸಹಕಾರ, ಸ್ಪಂದನೆ ಇದ್ದೇ ಇದೆ. -ಡಾ| ಜಿ.ಎಂ. ಸಿದ್ದೇಶ್ವರ, ಸಂಸದರು, ದಾವಣಗೆರೆ
ವಿಪಕ್ಷದಲ್ಲಿದ್ದರೂ ನಾವೆಲ್ಲ ರಚನಾತ್ಮಕ ಸಲಹೆ-ಬೆಂಬಲ ನೀಡುತ್ತಿದ್ದೇವೆ. ಸರಕಾರ ಮಾಡಬೇಕಾದ ಕೆಲಸದಲ್ಲಿ ಭಾಗವಹಿಸಿ ಕೆಲಸ ಮಾಡುತ್ತಿದ್ದೇವೆ. ಸ್ಥಳೀಯ ಮಟ್ಟದ ನಾಯಕರು ಕೂಡ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಜನತೆಗೆ ಧೈರ್ಯ ತುಂಬಲು ಝೂಮ್ ಆ್ಯಪ್ ಮೂಲಕ ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರೊಂದಿಗೆ ಸಂವಾದ ನಡೆಸಿ ಅವರ ಅಗತ್ಯತೆ ಪೂರೈಸುವ ಕೆಲಸ ಮಾಡಿದ್ದೇವೆ. ರಾಜಕೀಯ ಪಕ್ಷಗಳ ಎರಡನೇ ಹಂತದ ನಾಯಕರು ಇದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು.– ಎಚ್.ಕೆ. ಪಾಟೀಲ, ಗದಗ ಶಾಸಕ
ಪ್ರತೀ ಮಾನವ ಜೀವನ ಅಮೂ ಲ್ಯವಾದದ್ದು. ಕೋವಿಡ್ ಸಂಕ್ರಮಣ ಕಾಲದಲ್ಲಿ ಸೋಂಕಿತರ ಜೀವ ಉಳಿಸುವ ಪ್ರಯತ್ನ ಆಗಬೇಕಿದೆ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಪರಿಶ್ರಮಿಸಬೇಕಿದೆ. ಸರಕಾರದ ಜತೆಗೆ ಆರಂಭದಿಂದಲೂ ವಿಪಕ್ಷ ಸಹಕಾರ ನೀಡುತ್ತಲೇ ಬಂದಿದ್ದು, ಮುಂದೆಯೂ ನೀಡಲಿದೆ. ಪಾಸಿಟಿವ್ ರೋಗಿಗಳಿಗೆ ಬೆಡ್, ರೆಮಿಡಿಸಿವಿರ್ ಚುಚ್ಚುಮದ್ದು, ಆಕ್ಸಿಜನ್ ಸೇರಿ ಆರೋಗ್ಯ ಸೌಲಭ್ಯಗಳು ಸಕಾಲಕ್ಕೆ ಸಿಗಬೇಕಿದೆ. ಇದಕ್ಕಾಗಿ ಪರಿಶೀಲನೆ ಆಗಬೇಕಾದರೆ ಸರ್ವಪಕ್ಷಗಳ ಸಮಿತಿ ರಚನೆಯಾಗಬೇಕಾದ ಅಗತ್ಯವಿದೆ.-ಈಶ್ವರ ಖಂಡ್ರೆ, ಶಾಸಕರು, ಭಾಲ್ಕಿ
ಕೋವಿಡ್ ಸಂದಿಗ್ಧ ಸ್ಥಿತಿಯಲ್ಲಿ ಸೋಂಕಿತರ ಜೀವ ಉಳಿಸುವುದು ಎಲ್ಲರ ಪ್ರಥಮಾದ್ಯತೆ ಆಗಬೇಕಿದೆ. ಕೋವಿಡ್ ನಿಯಂತ್ರಣ ವಿಷಯದಲ್ಲಿ ಪ್ರಯತ್ನಿಸುವುದು ಆಡಳಿತಾರೂಢ ಸರಕಾರದ ಜತೆ ವಿಪಕ್ಷದ ಜವಾಬ್ದಾರಿಯೂ ಇದೆ. ವಿಪಕ್ಷಗಳು ಸಲಹೆ -ಸೂಚನೆ ನೀಡಬೇಕು. ಕೇಂದ್ರ-ರಾಜ್ಯ ಸರಕಾರ ಇದನ್ನು ಅಪೇಕ್ಷೆ ಪಡುತ್ತದೆ. ಆದರೆ, ಇದರಲ್ಲಿ ರಾಜಕೀಯ ಬೆರೆಸಬಾರದು. ಸೂಕ್ತ ಸಲಹೆಗಳನ್ನು ಸರಕಾರ ಪರಿಗಣಿಸುತ್ತ ಬಂದಿದೆ. ಎಲ್ಲರೂ ಒಗ್ಗೂಡಿ ಸೋಂಕಿನ ವಿರುದ್ಧ ಹೋರಾಡಬೇಕಿದೆ.-ಭಗವಂತ ಖೂಬಾ, ಸಂಸದ, ಬೀದರ
ಈ ಕಾಲಮಾನದಲ್ಲಿ ನಾವು ಯಾರೂ ಕಂಡು ಕೇಳರಿಯದ ಮಹಾಮಾರಿ ಇದು. ಈ ಸ್ಥಿತಿಯಲ್ಲಿ ಆಗಿರುವ ಅನಾಹುತಗಳಿಗೆ ಸರಕಾರವೇ ಕಾರಣ ಎಂದು ಬಿಂಬಿಸುತ್ತ ಹೊರಟರೆ ಸಮಸ್ಯೆ ಬಗೆಹರಿಯಲ್ಲ. ರಾಜೀನಾಮೆ ಕೊಡುವುದರಿಂದ ಪರಿಹಾರ ಸಿಗಲ್ಲ. ಬದಲಾಗಿ ಪ್ರಾಮಾಣಿಕ ಕೆಲಸ ಮಾಡುವವರ ನೈತಿಕ ಸ್ಥೈರ್ಯ ಕುಸಿಯುತ್ತದೆ. ಎಲ್ಲರೂ ಬಿಗಿ ಕೆಲಸ ಮಾಡಿದರೆ ಇದನ್ನು ನಿಯಂತ್ರಿಬಹುದು.-ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು.
ಕೋವಿಡ್ ಈ ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡಬಾರದು. ಸರಕಾರ ಏನೇ ಮಾಡಿದರೂ ಅದು ಜನರ ಒಳಿತಿಗೆ. ಟೀಕೆಗಳಿಂದ ಸಮಸ್ಯೆಗೆ ಪರಿಹಾರ ಇಲ್ಲ. ಕೊರೊನಾ ನಿಯಂತ್ರಣಕ್ಕೆ ಜನರು ಮೊದಲು ಎಚ್ಚೆತ್ತುಕೊಳ್ಳಬೇಕು. ಕೇಂದ್ರ ಸರಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹಾಕಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು. ಇದರಿಂದ ಈ ಸೋಂಕು ಹತೋಟಿಗೆ ತರಬಹುದು.-ಅಣ್ಣಾಸಾಹೇಬ ಜೊಲ್ಲೆ, ಸಂಸದರು-ಚಿಕ್ಕೋಡಿ
ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ರಾಜಕೀಯ ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಕೆಲ ಸಮಯದಲ್ಲಿ ಲೋಪಗಳಾಗುತ್ತವೆ.ಅದನ್ನೇ ದೊಡ್ಡದಾಗಿ ಬಿಂಬಿಸುವ ಬದಲು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು. -ಶಶಿಕಲಾ ಜೊಲ್ಲೆ, ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವರು
ಸಾವಿನಲ್ಲಿ ರಾಜಕಾರಣ ಮಾಡುವ ಸಮಯ ಇದಲ್ಲ. ಪಕ್ಷ ಭೇದ ಮರೆತು ಜನರಿಗಾಗಿ ಧ್ವನಿ ಎತ್ತಬೇಕು. ದಿನದ 24 ಗಂಟೆಯೂ ರಾಜಕಾರಣದ ಅಗತ್ಯ ಇಲ್ಲ. ದೇಶಕ್ಕೆ ಆಪತ್ತು ಬಂದಾಗ ಕಾಂಗ್ರೆಸ್ ಬೆನ್ನಿಗೆ ನಿಂತು ಕೆಲಸ ಮಾಡುತ್ತಲೇ ಬಂದಿದೆ. ಈಗಲೂ ನಾವು ನಿಷ್ಪಕ್ಷಪಾತವಾಗಿ ಜನರ ಧ್ವನಿಗೆ ಧ್ವನಿಯಾಗುತ್ತೇವೆ. ತಜ್ಞರ ಪ್ರಕಾರ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುವ ಮುನ್ನ ಜನರಿಗೆ ಕಷ್ಟವಾಗದಂತೆ ಜೀವನಮಟ್ಟಸುಧಾರಿಸಲು ಆರ್ಥಿಕವಾಗಿ ಸಹಾಯ ಮಾಡಬೇಕು. -ಲಕ್ಷ್ಮೀ ಹೆಬ್ಟಾಳ್ಕರ್, ಶಾಸಕಿ-ಬೆಳಗಾವಿ ಗ್ರಾಮೀಣ
ಈಗ ಪಕ್ಷ ರಾಜಕಾರಣ ಬೇಡ. ಎಲ್ಲರೂ ಸೇರಿ ಈ ಯುದ್ಧವನ್ನು ಎದುರಿಸಿ, ದೇಶ ಗೆಲ್ಲಬೇಕು. ಅದೇ ರೀತಿಯ ಸಂದರ್ಭವಿದು. ಯಾರು ಸಲಹೆ, ಯಾರು ಸೇವೆ ಮಾಡಿದರೂ ಕಡಿಮೆಯೇ. ಅದಕ್ಕಾಗಿ ಇದರಲ್ಲಿ ಆಡಳಿತ ಪಕ್ಷ, ವಿಪಕ್ಷ ಎನ್ನುವಂತಹದ್ದು ಇಲ್ಲ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆ. ಅಷ್ಟೇ ಜವಾಬ್ದಾರಿ ವಿಪಕ್ಷಕ್ಕೂ ಇದೆ. ಅದಕ್ಕಾಗಿ ಎಲ್ಲರೂ ಸೇರಿ ಕೋವಿಡ್ ಎಂಬ ಯುದ್ಧವನ್ನು ಎದುರಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಸರ್ವಪಕ್ಷ ಸಮಿತಿ ರಚನೆ ಸ್ವಾಗತಾರ್ಹ.-ಶೋಭಾ ಕರಂದ್ಲಾಜೆ, ಉಡುಪಿ-ಚಿಕ್ಕಮಗಳೂರು ಸಂಸದೆ
ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ವಪಕ್ಷಗಳ ಸಮಿತಿ ರಚನೆ ಮಾಡು ವುದರಿಂದ ಎಲ್ಲರಲ್ಲೂ ಜವಾಬ್ದಾರಿ ಹೆಚ್ಚಾಗುತ್ತದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ. ಸಮಿತಿ ಮಾಡುವುದರಿಂದ ರಾಜಕೀಯ ಕಾರಣದಿಂದ ಟೀಕೆ ಮಾಡುವುದು ತಪ್ಪುತ್ತದೆ. ಎಲ್ಲರ ಮೇಲೂ ಸಾಮೂಹಿಕ ಹೊಣೆಗಾರಿಕೆ ಹೊರಿಸಿದಂತೆ ಆಗುತ್ತದೆ. ಎಲ್ಲರೂ ಸೇರಿ ಕೋವಿಡ್ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ. ಆದ್ದರಿಂದ, ಸರ್ವಪಕ್ಷಗಳ ಸಮಿತಿ ರಚನೆ ಮಾಡುವುದು ಒಳ್ಳೆಯದು.-ಸಿ.ಟಿ.ರವಿ, ಶಾಸಕರು, ಚಿಕ್ಕಮಗಳೂರು
ಉತ್ತಮ ಸಲಹೆಗಳನ್ನು ಯಾರು ಕೊಟ್ಟರೂ ಸ್ವೀಕಾರ ಮಾಡಬೇಕು. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಇದು ದೇಶದೊಳಗಿರುವ ಕಾಯಿಲೆ. ಹಾಗಾಗಿ ನನ್ನ ಅಭಿಪ್ರಾಯದಂತೆ ಎಲ್ಲರನ್ನು ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಕೊರೊನಾ ನಿಯಂತ್ರಿಸುವುದು ಹೇಗೆ ಎಂಬ ದೃಷ್ಟಿಯಿಂದ ಎಲ್ಲರೂ ಪ್ರಯತ್ನ ಮಾಡುವುದು ಸೂಕ್ತ. ಈ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ಸಮಿತಿ ರಚಿಸಿ, ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವುದು ಒಳ್ಳೆಯದು.-ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಉಪ ಸಭಾಪತಿ.
ಸೋಂಕು ನಿಯಂತ್ರಣಕ್ಕೆ ತರಲು ಎಲ್ಲರ ಸಲಹೆ ಪಡೆದುಕೊಳ್ಳಬೇಕು. ಅವರು ನೀಡುವ ಸಲಹೆಗಳ ಜತೆಗೆ ಸರಕಾರದ ಮಾರ್ಗದರ್ಶ ನದಂತೆ ಕೆಲಸ ಮಾಡುವುದರಿಂದ ಸೋಂಕು ಹತೋಟಿಗೆ ತರಲು ಸಾಧ್ಯ. ಸರ್ವಪಕ್ಷದ ಪ್ರಮುಖರ ಜತೆಗೆ ಮುಖ್ಯಮಂತ್ರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಇದರೊಟ್ಟಿಗೆ ಸರ್ವ ಪಕ್ಷಗಳ ಸಮಿತಿ ರಚಿಸುವುದರಿಂದ ಎಲ್ಲರಿಗೂ ಜವಾಬ್ದಾರಿ ಹೆಚ್ಚುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಸೋಂಕು ತಡೆಗಟ್ಟಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ವ ಪಕ್ಷಗಳ ಸಮಿತಿ ರಚಿಸುವುದು ಒಳ್ಳೆಯದು.-ಎಸ್.ಅಂಗಾರ, ಚಿಕ್ಕಮಗಳೂರು ಉಸ್ತುವಾರಿ ಸಚಿವರು
ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಸರ್ವಪಕ್ಷಗಳ ಸಮಿತಿ ರಚನೆ ಮಾಡುವುದು ಒಳ್ಳೆಯದು. ಕೋವಿಡ್‌ನಿಂದ ಇಂದು ಆರ್ಥಿಕ ಸಂಕಷ್ಟ ಎದುರಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಾಜಕೀಯ ಮರೆತು ಪಾರದರ್ಶಕವಾಗಿ ಮತ್ತು ಎಲ್ಲ ವ್ಯವಸ್ಥೆಯನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಮಿತಿ ರಚನೆ ಅಗತ್ಯವಾಗಿದೆ.-ವೈಎಸ್‌ವಿ ದತ್ತ, ಮಾಜಿ ಶಾಸಕರು, ಕಡೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.