Cricket ಸಮಯ ಪಾಲನೆಗೆ ಸ್ಟಾಪ್‌ ಕ್ಲಾಕ್‌ ಬಳಕೆ

ಐಸಿಸಿಯಿಂದ ಎಪ್ರಿಲ್‌ ಅಂತ್ಯದವರೆಗೆ ಟಿ20, ಏಕದಿನ ಪಂದ್ಯಗಳಲ್ಲಿ ಪ್ರಯೋಗ

Team Udayavani, Dec 24, 2023, 5:13 AM IST

1-asddasd

ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿ ರುವ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್‌ ಆಟದಲ್ಲಿ ಆಗಾಗ್ಗೆ ಹೊಸ ಹೊಸ ನಿಯಮಗಳು, ತಂತ್ರಜ್ಞಾನಗಳನ್ನು ಅಳವ ಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಆಟವನ್ನು ಇನ್ನಷ್ಟು ರೋಮಾಂಚನಗೊಳಿಸಲು ಪ್ರಯ ತ್ನಗಳು ನಡೆಯುತ್ತಿವೆ. ಈಗಾಗಲೇ ಹಲವಾರು ತಂತ್ರಜ್ಞಾನಗಳ ಅಳವಡಿಕೆಯಿಂದ ಕ್ರಿಕೆಟ್‌ನ ಪ್ರತೀ ಕ್ಷಣವನ್ನು ಆನಂದಿಸಲು ಸಾಧ್ಯವಾಗುತ್ತಿದೆ. ಆಟವು ಯಾವುದೇ ವಿರಾಮವಿಲ್ಲದಂತೆ ನಿರಂತರ ಸಾಗಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಗಾಗ್ಗೆ ಹೊಸ ಹೊಸ ನಿಯಮಗಳ ಅನ್ವೇ ಷಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಓವರ್‌ಗಳ ನಡುವೆ ವ್ಯರ್ಥವಾಗುತ್ತಿರುವ ಸಮಯವನ್ನು ಕಡಿಮೆ ಮಾಡಲು “ಸ್ಟಾಪ್‌ ಕ್ಲಾಕ್‌’ ಅಳವಡಿಸಲು ಮುಂದಾಗಿದೆ. ಐಸಿಸಿ ಯ ಈ ಚಿಂತನೆ ಇದೀಗ “ಪ್ರಯೋಗ’ ಹಂತ ದಲ್ಲಿದ್ದು ಮುಂದಿನ ದಿನಗಳಲ್ಲಿ ಇದನ್ನು ಕೂಡ ನಿಯಮವನ್ನಾಗಿ ಜಾರಿಗೊಳಿಸುವ ಸಾಧ್ಯತೆಯಿದೆ.

ಸ್ಟಾಪ್‌ ಕ್ಲಾಕ್‌ ಪ್ರಯೋಗ
ಕೆಲವು ದಿನಗಳ ಹಿಂದೆ ಮುಗಿದ ವೆಸ್ಟ್‌ ಇಂಡೀಸ್‌- ಇಂಗ್ಲೆಂಡ್‌ ನಡುವಣ ಟಿ20 ಸರಣಿಯಲ್ಲಿ ಮೊದಲ ಬಾರಿ “ಸ್ಟಾಪ್‌ ಕ್ಲಾಕ್‌’ ಅನ್ನು ಬಳಕೆ ಮಾಡಲಾಯಿತು. ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ನಿರ್ಬಂ ಧಿಸಲು ಮತ್ತು ಆಟದ ವೇಗವನ್ನು ಸಾಧ್ಯ ವಾದಷ್ಟು ಹೆಚ್ಚಿಸಲು ಐಸಿಸಿ “ಸ್ಟಾಪ್‌ ಕ್ಲಾಕ್‌’ ಬಳಕೆಯ ಪ್ರಯೋಗ ಮಾಡಲು ಮುಂ ದಾಗಿದೆ. ಮುಂದಿನ ಎಪ್ರಿಲ್‌ ಅಂತ್ಯದವರೆಗೆ ವಿಶ್ವದ ವಿವಿಧೆಡೆಗಳಲ್ಲಿ ನಡೆಯಲಿರುವ ಹಲವು ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಈ ಪ್ರಯೋಗ ನಡೆಸಲಾಗುತ್ತದೆ. ಆ ಬಳಿಕ ಐಸಿಸಿಯ ಸಮಿತಿ ಇದರ ಬಗ್ಗೆ ಚರ್ಚಿಸಿ ಭವಿಷ್ಯದ ಪಂದ್ಯಗಳಲ್ಲಿ ಇದರ ಬಳಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಏನಿದು ಸ್ಟಾಪ್‌ ಕ್ಲಾಕ್‌?
ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸುವ ಉದ್ದೇ ಶದಿಂದ “ಸ್ಟಾಪ್‌ ಕ್ಲಾಕ್‌’ ಬಳಕೆ ಮಾಡಲಾ ಗುತ್ತದೆ. ಇಲ್ಲಿ ಬೌಲಿಂಗ್‌ ಮಾಡುವ ತಂಡವು ಹಿಂದಿನ ಓವರ್‌ ಮುಗಿದ 60 ಸೆಕೆಂಡುಗಳ ಅಂತರದಲ್ಲಿ ತಮ್ಮ ಮುಂದಿನ ಓವರಿನ ಮೊದಲ ಎಸೆತವನ್ನು ಮಾಡಲು ಸಿದ್ಧವಿ ರಬೇಕು. ಎರಡು ಎಚ್ಚರಿಕೆಯ ಬಳಿಕ ಬೌಲಿಂ ಗ್‌ ತಂಡ ಮೂರನೇ ಬಾರಿ ಒಂದು ವೇಳೆ ತಪ್ಪು ಮಾಡಿದರೆ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ.

ಇಲ್ಲಿ ಮೂರನೇ ಅಂಪಾಯರ್‌ ಓವ ರೊಂದು ಪೂರ್ತಿಯಾದ ತತ್‌ಕ್ಷಣ “ಸ್ಟಾಪ್‌ ಕ್ಲಾಕ್‌’ ಆನ್‌ ಮಾಡುತ್ತಾರೆ. ಇದರ ಚಿತ್ರವನ್ನು ಮೈದಾನದಲ್ಲಿ ಅಳವಡಿಸಲಾದ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ ಸಲ ಕರಣೆ ಬದಲಾವಣೆ, ಪಾನೀಯ ಅಥವಾ ಗಾಯದ ವಿರಾಮವಿದ್ದರೆ 60 ಸೆಕೆಂಡುಗಳ ಫೀಲ್ಡಿಂಗ್‌ ಸಮಯ ಮೀರಿದರೆ ದಂಡ ವಿಧಿಸಲಾಗುವುದಿಲ್ಲ. ಒಂದು ವೇಳೆ ಬೌಲರ್‌ ಸಿದ್ಧರಾಗಿದ್ದರೂ ಬ್ಯಾಟ್ಸ್‌ಮನ್‌ ಸಿದ್ಧವಾ ಗದಿದ್ದ ಸಂದರ್ಭ ಪಂದ್ಯದ ಅಧಿಕಾರಿಗಳು ಬ್ಯಾಟಿಂಗ್‌ ತಂಡದ ಇನ್ನಿಂಗ್ಸ್‌ನ ಸಮಯದ ಅವಧಿಯಿಂದ ಬ್ಯಾಟ್ಸ್‌ಮನ್‌ ವ್ಯರ್ಥ ಮಾಡಿದ ನಿಮಿಷಗಳನ್ನು ಕಡಿತ ಮಾಡುತ್ತಾರೆ ಮಾತ್ರವಲ್ಲದೇ ಅಗತ್ಯಬಿದ್ದರೆ ದಂಡ ವಿಧಿಸುವ ಸಾಧ್ಯತೆಯೂ ಇದೆ.

ಕ್ರಿಕೆಟ್‌ನಲ್ಲಿ “ಸ್ಟಾಪ್‌ ಕ್ಲಾಕ್‌’ನ ಕಲ್ಪನೆಯನ್ನು ಎಂಸಿಸಿಯ ವಿಶ್ವ ಕ್ರಿಕೆಟ್‌ ಸಮಿತಿಯು 2018ರಲ್ಲಿ ಪ್ರಸ್ತಾವ ಮಾಡಿತ್ತು. ರಿಕಿ ಪಾಂಟಿಂಗ್‌, ಸೌರವ್‌ ಗಂಗೂಲಿ, ಕುಮಾರ ಸಂಗಕ್ಕರ ಮತ್ತು ಇತರರು ಈ ಸಮಿತಿಯ ಲ್ಲಿದ್ದರು. ಅವರೆಲ್ಲರೂ ಓವರ್‌ಗಳ ನಡುವಣ ಸಮಯ ವ್ಯರ್ಥ ಮಾಡುವುದನ್ನು ಕಡಿತ ಮಾಡಲು “ಸ್ಟಾಪ್‌ ಕ್ಲಾಕ್‌’ ಬಳಕೆ ಸೂಕ್ತವೆಂದು ಅಭಿಪ್ರಾಯಪಟ್ಟಿದ್ದರು.

ಶಂಕರನಾರಾಯಣ ಪಿ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.