Zakir Hussain; ಕರಾವಳಿಗರ ಮನಗೆದ್ದಿದ್ದ ಉಸ್ತಾದ್‌ ಜಾಕೀರ್‌ ಹುಸೇನ್‌


Team Udayavani, Dec 17, 2024, 6:35 AM IST

ಕರಾವಳಿಗರ ಮನಗೆದ್ದಿದ್ದ ಉಸ್ತಾದ್‌ ಜಾಕೀರ್‌ ಹುಸೇನ್‌

ಕರಾವಳಿಯ ಮಂಗಳೂರು, ಉಡುಪಿ ಹಾಗೂ ಕಾರ್ಕಳದಲ್ಲಿ ಉಸ್ತಾದ್‌ ಜಾಕೀರ್‌ ಹುಸೇನ್‌ ಸಂಗೀತ ಕಛೇರಿಗಳನ್ನು ನಡೆಸಿ ಕೊಟ್ಟಿದ್ದರು. ಇಂದಿಗೆ 17 ವರ್ಷ ಮೊದಲು ಮಂಗಳೂರು ವಿವಿ ಕಾಲೇಜಿನ ತೆರೆದ ಮೈದಾನದಲ್ಲಿ ನಡೆದ ಕಛೇರಿಯಲ್ಲಿ ಉಸ್ತಾದ್‌ ಜಾಕೀರ್‌ ಹುಸೇನ್‌ ಅವರು ತಮ್ಮ ಸುಮಧುರ ತಬಲಾ ವಾದನ ಮೂಲಕ ಮನರಂಜಿಸಿದ್ದರು.

ಆ ವರ್ಷ ಒಟ್ಟು ಮೂರು ಬಾರಿ ಮಂಗಳೂರಿಗೆ ಜಾಕೀರ್‌ ಭೇಟಿ ನೀಡಿ ದ್ದರು. ಅದೇ ವರ್ಷ ಅವರಿಗೆ ಆಳ್ವಾಸ್‌ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಅವರು ತಮ್ಮ ತಬಲಾ ವಾದನದ ಮೂಲಕ ಶ್ರೋತೃ ಗಳನ್ನು ಮಂತ್ರಮುಗ್ಧಗೊಳಿಸಿದ್ದರು.

ಕರಾವಳಿ ಉತ್ಸವ ಸಮಿತಿ ಹಮ್ಮಿ ಕೊಂಡಿದ್ದ ಉದಯವಾಣಿ ಮಾಧ್ಯಮ ಸಹಯೋಗವಿದ್ದ ಕಛೇರಿ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದಿದ್ದು, ಅದರಲ್ಲಿ ಖ್ಯಾತ ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮಾ ಹಾಗೂ ಜಾಕೀರ್‌ ಅವರ ಜುಗಲ್‌ಬಂದಿ ನಡೆದಿತ್ತು. 1800ಕ್ಕೂ ಅಧಿಕ ಮಂದಿ ಕಛೇರಿ ವೀಕ್ಷಿಸಿ ಖುಷಿ ಪಟ್ಟಿದ್ದರು.

ವಿವಿ ಮೈದಾನದಲ್ಲಿ ನಡೆದ ಕಛೇರಿ ಯ ದಿನ, ಅವರಿಗೆ ಸಾಥ್‌ ನೀಡಿದ್ದ ಮಂಗಳೂರಿನ ಯುವ ಸಿತಾರ್‌ ಪ್ರತಿಭೆ ಅಂಕುಶ್‌ ನಾಯಕ್‌ ಅವರ ಜನ್ಮದಿನವೂ ಆಗಿತ್ತು. ಅದನ್ನು ತಿಳಿದ ಜಾಕೀರ್‌ ಹುಸೇನ್‌ ಅವರು ಮೊದಲು ತಬಲಾ ದಲ್ಲೇ ಹ್ಯಾಪಿ ಬರ್ತ್‌ ಡೇ ನುಡಿಸಿದ್ದರು! ಸಂಗೀತ ಭಾರತಿ ಪ್ರತಿಷ್ಠಾನ ಹಮ್ಮಿಕೊಂ ಡಿದ್ದ ಆ ಕಛೇರಿಯಲ್ಲಿ ಅವರು ಒಂದೂ ವರೆ ಗಂಟೆ ಕಾಲ ತಬಲಾ ವಾದನ ಮಾಡಿದ್ದರು.

ಜಾಕೀರ್‌ ಹುಸೇನ್‌ ಅವರು ಉಡುಪಿ ಶ್ರೀ ಕೃಷ್ಣ ಮಠದೊಂದಿಗೂ ನಿಕಟ ಬಾಂಧವ್ಯ ಹೊಂದಿದ್ದರು.

ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪರ್ಯಾಯ 2016-17ರಲ್ಲಿ ಉಡು ಪಿಗೆ ಆಗಮಿಸಿದ್ದ ಅವರು ರಾಜಾಂ ಗಣದಲ್ಲಿ ಹಿರಿಯ ಕಲಾವಿದ ಕುಮರೇಶ್‌ ಅವರ ಪಿಟೀಲು, ಜಯಂತಿ ಕುಮರೇಶ್‌ ಅವರ ವೀಣೆ ವಾದನಕ್ಕೆ ತಬಲದ ಸಾಥ್‌ ನೀಡಿದ್ದರು.

1984ರಲ್ಲಿ ಉಡುಪಿ ಸಂಗೀತ ಸಭಾದಿಂದ ಮಣಿಪಾಲದಲ್ಲಿ ನಡೆದಿದ್ದ ಐಟಿಸಿ ಮ್ಯೂಸಿಕ್‌ ಫೆಸ್ಟ್‌ನಲ್ಲಿ ಮೊದಲ ಬಾರಿಗೆ ಉಡುಪಿಗೆ ಆಗಮಿಸಿ ಭಾಗವಹಿ ಸಿದ್ದರು. ಹರಿಪ್ರಸಾದ ಚೌರಾಸಿ ಯಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

1986ರ ಸಂಗೀತ ಸಭಾ ಕಾರ್ಯಕ್ರಮ, 1997ರಲ್ಲಿ ಎಂಜಿಎಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ತಮ್ಮ ಫೈಜಲ್‌ ಕುರೇಶಿ ಅವರೊಂದಿಗೆ ಕಾರ್ಯಕ್ರಮ ನೀಡಿದ್ದರು. ಮುಕುಂದ ಕೃಪಾ ಶಾಲಾವರಣದಲ್ಲಿ ಇರುವ ಸಂಗೀತ ಸಭಾದ ಶಾಲೆಗೂ ಭೇಟಿ ನೀಡಿ ಮಕ್ಕಳ ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಣಿಪಾಲದ ಪೈ ಕುಟುಂಬದವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಜಾಕೀರ್‌ ಹುಸೇನ್‌ ಅವರು ಟಿಎಂಎ ಪೈ ಅವರ ಪುತ್ರರಾದ ಟಿ. ಮೋಹನದಾಸ್‌ ಪೈ ಮತ್ತು ಟಿ. ಪಾಂಡುರಂಗ ಪೈ ಅವರ ಮನೆಗೂ ಭೇಟಿ ನೀಡಿದ್ದರು.

ಜಿಎಸ್‌ಬಿ ಶೈಲಿ ಊಟಕ್ಕೆ ವಾವ್‌
ಕಾರ್ಕಳ ಸಂಗೀತ ಸಭಾ ಸಂಸ್ಥೆ ವತಿಯಿಂದ ನಡೆದ “ಪಂಚಮ ಇಂಚರ’ ಕಾರ್ಯಕ್ರಮದಲ್ಲಿ 1997 ಫೆ.4ರಂದು ಸಂಗೀತ ಕಾರ್ಯಕ್ರಮ ನೀಡಿ ಸಂಗೀತ ಪ್ರಿಯರನ್ನು ರಂಜಿಸಿದ್ದರು. ಅಂದು ಮಧ್ಯಾಹ್ನ ಜಿಎಸ್‌ಬಿ ಶೈಲಿ ಉಪ್ಕರಿ, ದಾಲ್‌ ತೋವೆ, ಪತ್ರೊಡೆ, ಜಿ ಗುಜ್ಜೆ ಖಾದ್ಯವನ್ನು ಸವಿದ ಅವ ರು ಸಂಜೆಯು ಇದೇ ಜಿಎಸ್‌ಬಿ ಶೈಲಿಯ ಊಟವೇ ಇರಲಿ ಎಂದು ಬಯಕೆ ವ್ಯಕ್ತಪಡಿಸಿ, ರಾತ್ರಿ ಇಲ್ಲಿಯೇ ಊಟ ಮಾಡಿ ಪತ್ರೊಡೆ ಯನ್ನು ಪಾರ್ಸೆಲ್‌ ಪಡೆದುಕೊಂಡಿದ್ದರು. ಜಾಕೀರ್‌ ಹುಸೇನ್‌ ಅವರಿಗೆ ಅಂದು ವಯೋಲಿನ್‌ನಲ್ಲಿ ಜಿ. ಟಿ. ಗೋಪಾಲ ಕೃಷ್ಣ, ಹಾರ್ಮೋನಿಯಂನಲ್ಲಿ ಸುಧೀರ್‌ ನಾಯಕ್‌, ಕಾರ್ಕಳದ ಮೀರಾ ಶೆಣೈ ಸಾಥ್‌ ನಿಡಿ ಸಹಕರಿಸಿದ್ದರು. ಸಂಗೀತ ಕೇಳಲು ಸಾವಿ ರಾರು ಮಂದಿ ಸೇರಿ ದ್ದರು. ಕಾರ್ಯ ಕ್ರಮದಲ್ಲಿ ಪಂಚಮ ಇಂಚರ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು.

ಟಾಪ್ ನ್ಯೂಸ್

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

1-kho-kho

Kho kho World Cup: ಭಾರತಕ್ಕೆ 71-34 ಅಂತರದ ಗೆಲುವು

Vinesh 2

ಶಾಸಕಿಯಾದ ಬಳಿಕ ವಿನೇಶ್‌ ಪೋಗಟ್‌ ಮತ್ತೆ ಕುಸ್ತಿ ಅಭ್ಯಾಸ?

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ

ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

6-kumbamela

Maha Kumbh Mela 2025: ಬಾಬಾ ವೇಷ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

India US

US ;ಬಾರ್ಕ್‌ ಸೇರಿ 3 ಸಂಸ್ಥೆಗಳ ಮೇಲಿನ ನಿಷೇಧ ತೆರವು

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

1-PVS

India Open Super 750 Badminton: ಸಿಂಧು, ಕಿರಣ್‌ ಜಾರ್ಜ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.