Uttarkashi Tunnel; ನೆರವಿಗೆ ಬಾರದ ಆಗರ್ ಮೆಷಿನ್
41 ಮಂದಿಯನ್ನು ಆಚೆಗೆ ತರಲು ವಿವಿಧ ರೀತಿಯ ಪ್ರಯತ್ನ
Team Udayavani, Nov 27, 2023, 5:23 AM IST
ಉತ್ತರಾಖಂಡದ ಉತ್ತರಕಾಶಿಯಲ್ಲಿ ಸುರಂಗದಲ್ಲಿ ಸಿಲುಕಿರುವ 41 ಮಂದಿಯನ್ನು ಆಚೆಗೆ ತರಲು ವಿವಿಧ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ. ಭಾರೀ ನಿರೀಕ್ಷೆ ಇರಿಸಿಕೊಂಡು ಅಮೆರಿಕದಿಂದ ಆಗರ್ ಮೆಷಿನ್ ಅನ್ನೂ ತರಿಸಿಕೊಳ್ಳಲಾಗಿತ್ತು. ಇದು ಲಂಬವಾಗಿ ಕೊರೆಯುವ ಯಂತ್ರವಾಗಿದೆ. ಇದನ್ನು ಉತ್ತರಕಾಶಿಯಲ್ಲಿ ಅಡ್ಡವಾಗಿ ಕೊರೆಯಲು ಬಳಸಿಕೊಳ್ಳಲಾಗಿದ್ದು, ಈಗ ಕೈಕೊಟ್ಟಿದೆ. ಏನಿದು ಮೆಷಿನ್? ಏನಿದರ ವಿಶೇಷ?
ಎಷ್ಟು ಕೊರೆದಿದೆ?
ಸದ್ಯ ಈ 25 ಟನ್ ಯಂತ್ರವು 46.9 ಮೀ. ವರೆಗೆ ಕೊರೆದಿದೆ. ಆದರೆ ಮತ್ತೆ ಕೆಲವು ವಸ್ತುಗಳು ಅಡ್ಡಿಯಾಗಿದ್ದು ಮುಂದಕ್ಕೆ ಕೊರೆಯಲು ಆಗುತ್ತಿಲ್ಲ. ಅಲ್ಲದೆ ಅದನ್ನು ಹೊರಗೆ ತೆಗೆಯಲೂ ಆಗುತ್ತಿಲ್ಲ. ಈಗ ತೆಗೆಯುವ ಸಂಬಂಧ
ಹೈದರಾಬಾದ್‌ನಿಂದ ಪ್ಲಾಸ್ಮಾ ಕಟ್ಟರ್ ತರಿಸಿಕೊಳ್ಳಲಾಗುತ್ತಿದೆ.
ಏನಿದು ಆಗರ್ ಮೆಷಿನ್?
ಇದೊಂದು ಬೃಹದಾಕಾರದ ಡ್ರಿಲ್ಲಿಂಗ್ ಮೆಷಿನ್ ಆಗಿದೆ. ನೆಲವನ್ನು ಕೊರೆಯುವ ಸಂಬಂಧ ಬಳಕೆ ಮಾಡಲಾಗುತ್ತದೆ. ಇದರಲ್ಲಿ ತಿರುಗುವ ಉದ್ದನೆಯ ಮೆಟಲ್ ರಾಡ್ ಅಥವಾ ಪೈಪ್‌ಗಳು ಇರುತ್ತವೆ. ಒಂದು ಅಥವಾ ಒಂದಕ್ಕಿಂತ ಹೆಚ್ಚು ಬ್ಲೇಡ್‌ಗಳನ್ನು ಅಳವಡಿಸಲಾಗಿದ್ದು, ಇದರ ಸಹಾಯದಿಂದ ನೆಲ ಕೊರೆಯಲಾಗುತ್ತದೆ. ಇದನ್ನು ಅಂಡರ್‌ಗ್ರೌಂಡ್ ಪೈಪ್‌ಲೈನ್‌ಗಳನ್ನು ಅಳವಡಿಸಲು ಈ ಮೆಷಿನ್ ಅನ್ನು ಹಿಂದೆ ಬಳಕೆ ಮಾಡಲಾಗುತ್ತಿತ್ತು. ಇದು ಮೂರು ಕೆಲಸ ಮಾಡುತ್ತದೆ. ಮೊದಲನೆಯದು ನೆಲ ಕೊರೆಯುವುದು, ಎರಡನೆಯದು ಕೊರೆದಿರುವ ರಂಧ್ರವನ್ನು ಅಗಲ ಮಾಡುವುದು, ಮೂರನೆಯದು ಕೊರೆದಿರುವ ರಂಧ್ರದಲ್ಲಿ ಪೈಪ್ ಅಳವಡಿಸುವುದು.
ಉತ್ತರಕಾಶಿಯಲ್ಲಿ ಬಳಸಿದ್ದು ಹೇಗೆ?
ಇದರ ಶಕ್ತಿ, ಸಾಮರ್ಥ್ಯದಿಂದಾಗಿ ಈ ಮೆಷಿನ್ ಅನ್ನು 60-1200 ಎಂದೇ ಕರೆಯಲಾಗುತ್ತದೆ. ದೊಡ್ಡ ಮಟ್ಟದ ಯೋಜನೆಗಳನ್ನು ಬಳಕೆ ಮಾಡಲಾಗುತ್ತದೆ. ಸಿಲ್ಕಾéರದಲ್ಲಿ ಈ ಯಂತ್ರ ಬಳಸಲಾಗಿದ್ದು, ಮೊದಲಿಗೆ 22 ಮೀಟರ್ ಒಳಗೆ ಹೋದ ಮೇಲೆ ಬ್ಲೇಡ್‌ಗಳಿಗೆ ವಸ್ತುವೊಂದು ಅಡ್ಡವಾದ ಪರಿಣಾಮ ನಿಂತಿದ್ದು. ಬಳಿಕ ಇಂದೋರ್‌ನಿಂದ ಇನ್ನೊಂದು ಯಂತ್ರ ತರಿಸಿಕೊಂಡು ಮತ್ತೆ ಕೊರೆಯಲು ಶುರು ಮಾಡಿದ್ದು, ಕಾರ್ಮಿಕರು ಇರುವ ಸ್ಥಳದ ಹತ್ತಿರಕ್ಕೇ ಹೋಗಿತ್ತು. ಆದರೆ ಇನ್ನು 10 ಮೀ. ಇರುವ ವೇಳೆಗೆ ಯಂತ್ರಕ್ಕೆ ಮತ್ತೆ ಅಡ್ಡಿಯುಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.