ನೀ ಬರಿಯೋ ಕವಿತೆಗಳ ಪ್ರತೀ ಸಾಲು ನನಗಿಷ್ಟ… ಕವಿಯೂ ಇಷ್ಟ !


Team Udayavani, Feb 14, 2021, 1:18 PM IST

valentine’s day special

ಹಸಿರ ಹುಲ್ಲು ಹಾಸಿನ ಮೇಲೆ ಮಲಗಿ ಮುಗಿಲ ಆಟವನು ನೋಡುತ್ತಿದ್ದವನಿಗೆ ಕೇಳಿದ್ದ ಆ ಗೆಜ್ಜೆ ಸದ್ದು ನಿನ್ನದೋ ಎಂಬ ಅನುಮಾನ, ಮೇಲೆದ್ದು ಸುತ್ತ ಹುಡುಕಿದವನಿಗೆ ಕಂಡಿದ್ದು ಭರಪೂರವಾಗಿ ತುಂಬಿದ್ದ ಹಸಿರು‌ ಮಾತ್ರ… ಮನಸು ನಾಚಿ ಮುಗುಳ್ನಕ್ಕು ನನ್ನ ಕೈಯಿಂದಲೆ ತಲೆಗೊಂದು ಏಟು ಕೊಡಿಸಿದಾಗ ಎಚ್ಚೆತ್ತ ಹೃದಯ ಕೇಳಿದ್ದೊಂದೆ ಪ್ರಶ್ನೆ! ಕೇಳಿದ ಗೆಜ್ಜೆ ಸದ್ದು ನಿನ್ನದು ಅಂತ ಅನಿಸಿದ್ದೇಕೆ?

ಅದೇ, ಪ್ರೀತಿ…

ಬಿಳಿಯ ಕಾಗದದಲಿ ಬರೆದು ಮುಗಿಸಲಾಗದಷ್ಟು ಅರ್ಥಗಳು, ಸರಿದ ನಿಮಿಷಗಳು ಮರೆಯದೇ ಇರುವಷ್ಟು ನೆನಪುಗಳು, ಹೇಳಿ ಮುಗಿಸಲಾರದಷ್ಟು ಭಾವನೆಗಳು, ಮನಸೊಳಗೆ ಅಳಿಸಲಾರದಷ್ಟು ಒಲವ ರೇಖೆಗಳು.

ಹಳೇ ಕಥೆಗಳನು ನೆನಪಿನ ರುಮಾಲಿನಲ್ಲಿ ಬಿಗಿಯಾಗಿ ಕಟ್ಟಿ ಕುಂತರೂ ರುಮಾಲಿನ ತುದಿಯೆಳೆದು ಮತ್ತೆ ಹೊರಬಂದು ಮನಸಿನಲಿ ಕುಣಿಯುತ್ತಿರುತ್ತದೆ. ಅದೇನು ಬಚ್ಚಿಟ್ಟು ಕೂರುವಂಥ ನೆನಪುಗಳೇ?!

ಕಾಲೇಜಿನಲ್ಲಿ ಯಾವುದೋ ಆಲೋಚನೆಯಲಿ ಕುಳಿತಿದ್ದವನ ಆಲೋಚನೆಗಳ ಕದಡಿಸಿ ನೀ ಹೇಳಿದ ಆ ಮಾತುಗಳು ಈಗಲೂ ಕೇಳಿಸುತ್ತಿವೆ. ನಿನ್ನ ಬಾಯಿಯಿಂದ ಬಂದ ಆ ಹೊಗಳಿಕೆ ‘ ನೀ ಬರಿಯೋ ಕವಿತೆಗಳ ಪ್ರತೀ ಸಾಲು ನನಗಿಷ್ಟ.. ದಿನವೂ ಓದುತ್ತಲೇ ಇರುತ್ತೇನೆ.. ಕವಿತೆಯ ಜೊತೆಗೆ ಕವಿಯೂ ಇಷ್ಟವಾದ.. ಮತ್ತೇನೂ ಹೇಳಬೇಕಿಲ್ಲ ಅಲ್ವಾ?’ ಅಂತ ಒಂಟಿ ಹುಬ್ಬೇರಿಸಿ ನಡೆದದ್ದು ನಿನಗೆ ನೆನಪಿದೆಯೋ ಇಲ್ವೋ, ನನಗಂತೂ ಅದುವೇ ಮಧುರ ಕ್ಷಣ. ಅದೇಕೋ ಸಿನಿಮಾ ಶೈಲಿಯಲ್ಲೇ ತಂಗಾಳಿ ಬಂದು ನಿನ್ನ ಮುಂಗುರಳ ನಡುವೆ ಹಾದು, ಕಿವಿಯೋಲೆಗಳ ಹಿಡಿದು ತೂಗಾಡಿ ಸಾಗಿತ್ತು. ಅದರ ರಭಸಕೆ ಮುಚ್ಚಿಕೊಂಡ ಕಣ್ರೆಪ್ಪೆ ನಿನ್ನ ಕಣ್ಣುಗಳ ನಗುವನ್ನೊಮ್ಮೆ ಮರೆಯಾಗಿಸಿ ಮತ್ತೆ ತೆರೆದುಕೊಂಡಿತ್ತು. ಪಕ್ಕದಲಿ ಕುಳಿತಿದ್ದ ಗೆಳೆಯರ ಕೂಗಾಟವೇ ಕೇಳಿಸದೆ, ನಿನ್ನ ತುಂಟ ನಗುವೇ ಕಿವಿಯೊಳಗೆ ಇಳಿದಿತ್ತು.

ನಿನ್ನ ಹೆಸರೇ ನೆನಪಿರಲಿಲ್ಲ ಮೊದಲು. ನಿನ್ನ ಹೆಸರು ಬೇಕಾಗಿಯೂ ಇರಲಿಲ್ಲ. ನಿನ್ನ ಪ್ರೀತಿಗೆ, ಮಾತಾಡೋ ರೀತಿಗೆ, ನಗುವ ಕಂಗಳಿಗೆ ನಾನೇ ನೆನಪಾಗೋ ಹೆಸರಿಟ್ಟಾಗಿತ್ತು. ಮನಸು ಆ ಹೆಸರ ಕರೆಯುತ್ತಿತ್ತು ಬಿಟ್ಟರೆ ಹೊರಗೆ ಹೇಳಿದ್ದಿಲ್ಲ. ಭಾವನೆಗಳನ್ನು ನಿನ್ನಲ್ಲಿ ಹಂಚಿದಷ್ಟು ಇನ್ನೊಬ್ಬರಿಗೆ ತಿಳಿಸಿದ್ದಿಲ್ಲ.

ಬಹುಶಃ ನಮ್ಮ ಪ್ರೀತಿಗೆ ನಾವಿಬ್ಬರೂ ಆಡಿದ ಜಗಳಗಳೂ ಸಾಥ್ ಕೊಟ್ಟಿರಬೇಕು. ಅದ್ಯಾರೋ ಪ್ರೇಮಿಗಳು ಮೊದಲೇ ಹೇಳಿದ್ದಾರೆಲ್ಲವೇ, ಜಗಳವಾಡಿದ್ರೇನೆ ಪ್ರೀತಿ ಹೆಚ್ಚಾಗೋದಂತೆ; ಹಾಗೇನೆ. ಜಗಳದ ನಂತರ, ಮಾತು ನಿಂತಾದ ಮೇಲೆ, ಕ್ಷಣಗಳಿಗೊಮ್ಮೆ ಮನಸು ಭಾರವಾಗುತ್ತ ಹೋದಂತೆ ಅನಿಸಿದಾಗ ಕೇಳುವ ಆ ‘SORRY’ ಪದ ತನ್ನಲ್ಲೇ ಮುಗಿಯದಷ್ಟು ಪ್ರೀತಿ ತಂದಿರುತ್ತದೆ. ದೂರ ಹೋಗು ಅಂದಿದ್ದ ಹೃದಯ ಹತ್ತಿರ ಬಾ ಎಂದು ಕೂಗಿ ಕರೆಯುತ್ತದೆ.

ಭಾವನೆಗಳಿಗೆ ಬೇಕಾದ ಬಣ್ಣ ಹಚ್ಚಿ ನಮಗಿಬ್ಬರಿಗೆ ಮಾತ್ರ ಕಾಣುವಂತೆ ಚಿತ್ರಿಸಿ ದಿನವೂ ನೋಡಿ ಖುಷಿಪಡುತ್ತಿದ್ದಿದ್ದು ನೆನಪಿರಬಹುದು ನಿನಗೆ. ಹುಟ್ಟಿದ ಹಬ್ಬದ ದಿನ ನೀ ಹೇಳಿದ ಶುಭಾಶಯಗಳು, ನೀ ಕೊಡಿಸಿದ ನೀಲಿ ಬಣ್ಣದ ಲೇಖನಿಯಲ್ಲಿರೋ ನಿನ್ನ ಹಸ್ತಾಕ್ಷರ, ಸಂಜೆ ಕುಳಿತು ಕುಡಿದ ಕಾಫಿ, ಜೊತೆಗೆ ನಡೆದು ಸವೆಸಿದ ಹೆಜ್ಜೆಗಳು, ಹಾದಿಗಳು….ಪ್ರೀತಿಯ ಹಬ್ಬಗಳ ತುಂಬಿರೋ ಹೊಸ ಸಂವತ್ಸರ.

ಇನ್ನೇನಿದೆ ಹೇಳೋಕೆ?…

ಮನಸಿನ ಅಪ್ಸರೆಯೆ ಕನಸಲ್ಲೂ ಕನವರಿಸು

ನಾ ಬಂದು ಮುದ್ದಿಸುವೆ ಮನಸು ಹೇಳುವಷ್ಟು

ಹೃದಯದ ಅರಮನೆಯ ಬಾಗಿಲೊಳಗೆ ಕಾಲಿರಿಸು

ಕೈ ಹಿಡಿದು ಕರೆದೊಯ್ವೆ, ದಾರಿ ಮುಗಿಯದಷ್ಟು.

ನಿನ್ನ ಪ್ರೇಮಲೋಕದ ಕಥೆಗಾರ-  ಮೃಗಾಂಕ (ಶ್ರೀಶ)

ಟಾಪ್ ನ್ಯೂಸ್

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.