ಭಾವ‘ತೀರ’ದ ಯಾನ..: ರವಿ-ಶಶಿಯ ವಿರಹ ನೋಡಿ ಒಂದಾದ ಜೋಡಿಯದು

ಅಲೆಯು ಅಪ್ಪಳಿಸಿದಂತೆಲ್ಲ ಸವೆದ ಸಂಬಂಧವದು, ಎಲ್ಲದರಿಂದ ಬೇಸತ್ತು ಬೇರಾಗ ಬಯಸಿಹುದು.

Team Udayavani, Feb 14, 2023, 12:21 PM IST

ಭಾವ‘ತೀರ’ದ ಯಾನ..: ರವಿ-ಶಶಿಯ ವಿರಹ ನೋಡಿ ಒಂದಾದ ಜೋಡಿಯದು

ಸೂರ್ಯಾಸ್ತದ ಸಮಯವದು…ತಂದೆ ಪೂರ್ವವಾದರೆ ತಾಯಿ ಪಶ್ಚಿಮದತ್ತ, ಎತ್ತಲ್ಲೋ ಸಾಗಿತ್ತು ಇಬ್ಬರ ಚಿತ್ತ.  ಸೂರ್ಯಾಸ್ತದ ಸಮಯವದು, ಸಾಗರವು ಭೋರ್ಗರೆಯುತಿಹುದು, ಬಳಿಯೇ ಮುದ್ದಿನ ಮಗುವು ನಗುತ ಆಡುತಲಿಹುದು..

ಪ್ರಾಣವೇ ನೀನೆನ್ನುತ ಪ್ರೇಮಿಸಿದ ಜೋಡಿಯದು, ಅದರ ಕುರುಹು ಆಡುತಿಹ ಕಂದಮ್ಮನೇ ಆಗಿಹುದು! ಕಾಲ ಕಳೆದಂತೆಲ್ಲ, ಅಲೆಯು ಅಪ್ಪಳಿಸಿದಂತೆಲ್ಲ ಸವೆದ ಸಂಬಂಧವದು, ಎಲ್ಲದರಿಂದ ಬೇಸತ್ತು ಬೇರಾಗ ಬಯಸಿಹುದು.

ʼಅಮ್ಮಾ ಅಗೋ ಅಲ್ನೋಡು…ʼ ಅದ್ಭುತದತ್ತ ಬೊಟ್ಟು ಮಾಡುತ್ತಾ ಮಗಳು ಕರೆದಿದ್ದಳು. ತಂದೆಯ ಮುಖವ ಅತ್ತ ತಿರುಗಿಸುತ ʼನೀನೂ ನೋಡು ಅಪ್ಪʼ ಎಂದಿದ್ದಳು.

ರವಿಯು ಮುಳುಗುತಲಿಲ್ಲ, ಶಶಿಯ ಮುಗುಳ್ನಗುವಿಲ್ಲ, ಸಂಜೆ ಸೊಬಗ ಕಳೆದುಕೊಂಡಂತೆ! ಮುಳುಗುತಿಹ ಸೂರ್ಯನಿಗೆ ಮೂಡುತಿಹ ಚಂದ್ರನ ಕಂಡು ಎಂದಿನಿಂದಲೋ ಒಲವಂತೆ.

ಹೇಗಾದೀತು ಆಕೆಯ ಆಗಮನ, ಆಗದೇ ಆತನ ನಿರ್ಗಮನ, ಅವರತ್ತಲೇ ನೆಟ್ಟಿತ್ತು ನೋಡುಗರ ಗಮನ.

ʼಒಂದು ಕ್ಷಣ ತಡಿಯಣ್ಣ…ʼ ಅವನೆಂದಾಗ ಅಲೆಯೊಂದು ಗಹಗಹಿಸಿಹುದು, ʼದಿನವೂ ಒಂದೇ ನಾಟಕವೇ..!?ʼ ಎಂದಿಹುದು. ಕಳೆದ ದಿನದ ನೆನಪು ಮತ್ತೆ ಮರುಕಳಿಸಿಹುದು. ಭಾಸ್ಕರನ ನುಂಗಲು ಕಡಲು ಬಾಯ್ತೆರೆದು ನಿಂತಿದೆ. ಶಶಿಗೆ ಅದ ನೋಡಿ ಅಳುವೇ ಬಂದಂತಿದೆ.

ಇಬ್ಬರ ದುಃಖವನು ಮಗುವು ನೋವಿನಲಿ ನೋಡುತಿದೆ, ನಾಳೆ ನನಗೂ ಇದು ಕಾದಿದೆಯೇ ಎಂಬುದ ನೆನೆನೆನೆದು ನಿಂತಲ್ಲೇ ಬೆದರುತಿದೆ.

ತಂದೆಯ ನೆರಳಿದ್ದರೆ ಹಿಡಿದ ತಾಯಿಯ ಕೈಬೆರಳು ಸಡಿಲಾಗುವ ಭಯ, ಜನನಿಯ ಕೈತುತ್ತು ಸವಿಯ ಬಯಸಿದರೆ ಜನಕನ ಹೆಗಲಿಂದ ಜಾರುವ ಆತಂಕ.. ಆಗ ಒಬ್ಬರಿಲ್ಲದೆ ಇನ್ನೊಬ್ಬರಿರುತ್ತಿರಲಿಲ್ಲ, ಈಗ ಒಬ್ಬರಿರುವಲ್ಲಿ ಇನ್ನೊಬ್ಬರು ಇರಬಯಸುತ್ತಿಲ್ಲ.

ಸೂರ್ಯ ಚಂದ್ರರ ನೋವ ನೋಡಲಾಗುತ್ತಿಲ್ಲ, ಒಟ್ಟಿಗಿದ್ದ ಕ್ಷಣಗಳ ಮರೆಯಲಾಗುತ್ತಿಲ್ಲ..

ಉತ್ತರ ದಕ್ಷಿಣಗಳು ಮುಖಾಮುಖಿಯಾಗಿಹವು, ಕಣ್ಣಾಲಿಯ ತುಂಬಿಕೊಂಡು ಪರಸ್ಪರ ನೋಡಿಕೊಂಡಿಹವು. ಮಗುವಿನ ಮೊಗದಲ್ಲಿ ಮುಗುಳ್ನಗು ಮೂಡಿಹುದು, ಹೆತ್ತವರು ಹತ್ತಿರಾದುದ ನೋಡಿ ಹರ್ಷಿಸುತಲಿಹುದು.

ಮುಳುಗುತ್ತ ರವಿಯೆಂದ, ನಾವಂತೂ ಒಂದಾಗಲಿಲ್ಲ, ನಮ್ಮ ವೇದನೆಯ ನೋಡಿ ಅವರಾದರೂ ಒಂದಾದರಲ್ಲ. ಬಾರದ ನಗುವ ತಾ ತೊಡುತ ಬಾನಂಗಳವನೇರುತ ಶಶಿಯು ಉಸುರಿಹಳು, ‘ತನ್ನ ಆಟವನು ಆ ದೇವರೇ ಬಲ್ಲ’.

ಆಕೆ ನುಡಿದಿಹಳು, ನೀನೇ ನನಗೆಲ್ಲಾ. ಆತನೆಂದಿಹ, ನೀನಿಲ್ಲದೆ ನಾನು ಏನೂ ಅಲ್ಲ

ಮೈತ್ರಿ. ಎಸ್ ಅಶ್ವತ್ಥಪುರ

ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.