ಪ್ರೇಮ ಪುಟದಲಿ ಗೀಚಿದ ಭಾವನೆಗಳ ಸಾಲು
Team Udayavani, Feb 14, 2021, 9:00 PM IST
ಇದೇನಾ ಪ್ರೀತಿ!???
ಗುಳಿ ಗೆನ್ನೆಯ ಆ ನಿನ್ನ ತುಂಟ ನೋಟ
ಹುಣ್ಣಿಮೆಯ ಚಂದಿರನ ಮುಖಪುಟ
ಕಣ್ಣಲ್ಲೇ ಸೆಳೆಯುವೆ ಮತ್ತೆ ಮತ್ತೆ ನೀನು
ಸೋತು ಹೊಗುವೆನೇಕೆ ಇನಿಯ ನಾನು!
ಪ್ರೀತಿಯ ಸಂಕೇತ ಆ ನಿನ್ನ ತುಡಿತ
ಕನಸಿನ ಪ್ರತೀಕ ನನ್ನೀ ಮಿಡಿತ
ಭಾವನೆಯ ಬೀಡು ಆ ನಿನ್ನ ಹೃದಯ
ಅರ್ಪಿಸುವೆನು ನಿನಗೆ ನನ್ನೀ ಆಲಯ
ಈರ್ಷೆ ತುಂಬಿದ ಈ ಜಗದಲಿ
ಬೆಳಕಾಗಿ ಬರುವೆಯ ನನ್ನ ಬಾಳಲಿ
ಬಂಧಿಯಗುವ ಬಯಕೆ ಬರುತಿದೆ ಇಂದು
ಜೊತೆಯಾಗಿ ಬಾಳುವ ಬದುಕಿಗೆಂದು
ಸಹನೆಯ ಸ್ವರೂಪ ಆ ನಿನ್ನ ರೂಪ
ಮಾಯವಾಗಿಸುವೆ ಕ್ಷಣದಲಿ ನನ್ನೆಲ್ಲ ತಾಪ
ಕಟ್ಟುವೆಯ ನನ್ನ ಬಾಳ ತೋರಣವ
ಸದಾ ನೀಡುವೆನು ನನ್ನ ಪ್ರೀತಿಯ ಉತ್ತರವ
-ಸ್ವಾತಿ ನಾಯಕ್
ಈ ಜೀವದ ಸರ್ವಸ್ವವೇ ನನ್ನಾಕೆ।
ದಿನಾ ಅರಳೋ ಹೂ ಮನದಾಳಕೆ।।
ಎಂದೂ ಬಾಡದ ಪ್ರೀತಿ ಹೂವದು।
ನನಗಾಗಿ ಅರಳಿಹ ನನ್ನ ಹೂವದು।।
ಎನ್ನ ನೆರಳ ನೀ ಹಿಂಬಾಲಿಸಿಲ್ಲ।
ನನ್ನ ನೆರಳು ನೀನಾದೆಯಲ್ಲ।।
ಛಾಯೆಯೊಳ ನೋಡ ನಿನ್ನ ನಲ್ಲ।
ನನ್ನವಳ ಛಾಯೆ ನಾನಾದೆಯಲ್ಲ।।
–ಸಿಧ್ದಿ ಕೊಲ್ಯ
ಅವನೆಂದರೆ,
ಹೃದಯಕ್ಕೊಂದು ಪುಳಕ….
ಮನದಲ್ಲೊಂದು ನವಿರಾದ ಭಾವ..
ನೆನಪುಗಳಲ್ಲಿನ ಮಾಧುರ್ಯತೆ…..
ಕನಸುಗಳಿಗೊಂದು ಹೊಸ ಪರಿಚಯ….
ಪ್ರೀತಿಯ ಲೋಕದೊಳಗೆ ಕರೆದೊಯ್ಯುವ ಮಾಂತ್ರಿಕ….
-ಅನು ವೆಂಕಟೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.