ಸಂಪತ್ತು, ಸಮೃದ್ಧಿದಾತೆ ವರಮಹಾಲಕ್ಷ್ಮೀ
Team Udayavani, Aug 20, 2021, 6:10 AM IST
ಭಾರತೀಯ ಋಷಿ ಪರಂಪರೆ ಹಿಂದೂ ಧರ್ಮಕ್ಕೆ ಮುಖ್ಯ ಆಧಾರಸ್ತಂಭವಾಗಿದೆ. ಮನುಷ್ಯರು ಧರ್ಮ ಮಾರ್ಗದ ಮೂಲಕ ನಡೆಯಲು ಪೂರ್ವಿಕ ಋಷಿಮುನಿಗಳು ಧಾರ್ಮಿಕ ನೆಲೆಯಲ್ಲಿ ಹಲವು ವ್ಯವಸ್ಥೆಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅದರಂತೆ ಮನುಷ್ಯ ತನ್ನ ಅಭಿವೃದ್ಧಿಗೆ ದೇವರ ಆರಾ ಧನೆಯ ಮೂಲಕ ತನ್ನ ಪಯಣವನ್ನು ಆರಂಭಿಸುತ್ತಾನೆ. ಅಂತಹ ಆರಾಧನೆಯಲ್ಲಿ ಶ್ರಾವಣ ಮಾಸದಲ್ಲಿ ಆರಾಧಿಸುವ ವರಮಹಾಲಕ್ಷ್ಮೀ ಪೂಜೆಯೂ ಒಂದಾಗಿದೆ.
ವ್ರತ ಎಂದರೆ ನಿಷ್ಠೆ ಎಂದರ್ಥ. ದೇವತೆಗಳಲ್ಲಿ ನಾವು ತೋರಿಸುವ ಭಕ್ತಿ, ಗೌರವಗಳು ವ್ರತದ ಮೂಲಕ ಪೂಜಾರೂಪದಲ್ಲಿ ಆರಾಧಿಸಲ್ಪಡು ತ್ತದೆ. ವ್ರತಗಳ ಮೂಲವನ್ನು ನಾವು ಸ್ಮೃತಿ ಪುರಾಣಗಳಲ್ಲಿ ಕಾಣುತ್ತೇವೆ. “ವೇದೋ ಖೀಲಂ ಧರ್ಮ ಮೂಲಂ’ ಎಂಬಂತೆ ವೇದಗಳೇ ನಮ್ಮ ಸಂಸ್ಕೃತಿಯ ತಾಯಿ ಬೇರು, ಅಂತೆಯೇ ಎಲ್ಲ ಪೂಜೆ, ಧಾರ್ಮಿಕ ಕಾರ್ಯಗಳಲ್ಲೂ ವೈದಿಕ ಮಂತ್ರಗಳು ಬಳಕೆಯಲ್ಲಿವೆ. ಪ್ರತಿಯೊಂದು ವ್ರತಾಚರಣೆಯ ಮೊದಲು ಅದಕ್ಕೆ ಅವಶ್ಯವಾದ ಪೂಜಾಸಿದ್ಧತೆ ಇದ್ದರೂ ಕಾಲಗುಣಕ್ಕೆ ತಕ್ಕಂತೆ ಪೂಜಾ ದ್ರವ್ಯಗಳನ್ನು ಬಳಸಿದರೂ ಕೆಲವೊಂದು ಸಂಪ್ರದಾಯಗಳು, ವಿಶಿಷ್ಟ ನಿಯಮಗಳನ್ನು ಪಾಲಿಸಬೇಕಾಗಿದೆ. ಇಂಥ ಮಹಾವ್ರತಗಳಲ್ಲಿ ವರ ಮಹಾಲಕ್ಷ್ಮೀ ವ್ರತ ಶ್ರೇಷ್ಠವಾದ ವ್ರತ.
ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿ ಮೋಪಾಂತ್ಯ ಭಾರ್ಗವೇ | ವರಲಕ್ಷ್ಮಾವ್ರತಂ ಕಾರ್ಯಂ|| ಎಂಬ ಶಾಸ್ತ್ರದಂತೆ ಪೌರ್ಣಮೀ ಸಮೀಪವಾದ ಶುಕ್ರವಾರ ದಿನದಂದು ವರ ಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ.
ಹಿನ್ನೆಲೆ :
ಸಕಲ ಮುನಿಗಳಿಂದ ರಮ್ಯವಾಗಿರುವ ಕೈಲಾಸ ಪರ್ವತದಲ್ಲಿ ಕುಬೇರ, ಇಂದ್ರ, ದಿಕಾ³ಲಕರಿಂದಲೂ ನಾರದ, ಆಗಸ್ತ್ಯ ಮೊದಲಾದ ಋಷಿಗಳಿಗೆ ನೆಲೆಮನೆಯಾಗಿಯೂ ಇರುವ ರತ್ನ ಸಿಂಹಾಸನನಾಗಿರುವ ಈಶ್ವರನನ್ನು ನೋಡಿ ಪಾರ್ವತಿ ದೇವಿಯು ಲೋಕಹಿತಾರ್ಥ ವಾಗಿಯೂ ಅತ್ಯಂತ ರಹಸ್ಯವಾಗಿಯೂ ಪಾವನ ವಾಗಿಯೂ ಇರುವ ವ್ರತವೊಂದನ್ನು ದಯ ವಿಟ್ಟು ಹೇಳಬೇಕೆಂದು ಪ್ರಾರ್ಥಿಸಿದಾಗ, ವ್ರತ ಗಳಲ್ಲಿ ಉತ್ತಮವಾದ ವ್ರತವೊಂದಿದೆ. ಅದು ಸಕಲ ಸಂಪತ್ತುಗಳಿಗೆ ಮೂಲವಾಗಿಯೂ, ಪುತ್ರ ಪೌತ್ರ ಸುಖದಾಯಕವಾಗಿ ಅನುಗ್ರಹಿಸುವ ವ್ರತವೇವರ ಮಹಾಲಕ್ಷ್ಮೀ ವ್ರತ. ಈ ವ್ರತವನ್ನು ಆಚರಿಸುವ ಸುಮಂಗಲಿಯರಿಗೆ ಉತ್ತಮ ಪುಣ್ಯಫಲ ಪ್ರಾಪ್ತವಾಗುವುದು ಎಂದು ಅಭಯ ನೀಡುವನಂತೆ.
ಕುಂಡಿನೀ ಎಂಬ ಪಟ್ಟಣ, ಓರ್ವ ಸುಮಂಗಲೇ ಚಾರುಮತೀ, ಆಕೆ ಪತಿ ಭಕ್ತಿ ಪರಾಯಣಳಾಗಿ ಅತ್ತೆ-ಮಾವಂದಿರ ಶುಶ್ರೂಷೆ ಮಾಡುವುದರಲ್ಲಿ ನಿರತಳಾಗಿರುವ ಅವಳಿಗೆ ಲಕ್ಷ್ಮೀ ದೇವಿ ಸ್ವಪ್ನದಲ್ಲಿ ಪ್ರಸನ್ನಳಾಗಿ ನಿನಗೆ ಶುಭವನ್ನು ಉಂಟುಮಾಡಲು ವರಲಕ್ಷ್ಮೀ ಯಾಗಿ ಬಂದಿರುವೆನು. ಶ್ರಾವಣ ಮಾಸದಲ್ಲಿ ಪೂರ್ಣಮೀಗೆ ಮುಂದಾಗಿ ಬರುವ ಶುಕ್ರವಾರ ನನ್ನನ್ನು ಆರಾಧಿಸು, ನಿನಗೆ ಇಷ್ಟಾರ್ಥವನ್ನು ಸಲ್ಲಿಸುವೆನು ಎಂದು ಹೇಳಿ ಆಕೆಗೆ ವರಕೊಟ್ಟು ಆಂತರ್ಧಾನಳಾದಳು. ಒಮ್ಮೆಲೇ ಎಚ್ಚರ ಆದ ಚಾರುಮತಿ ನನಗೆ ಜನ್ಮಾಂತರದ ಪುಣ್ಯದ ಫಲದಿಂದ ಶಕ್ತಿಯ ದರ್ಶನವಾಯಿತು ಎಂದು ತಿಳಿದು ತನ್ನ ಮಿತ್ರರಿಗೆ, ಪುರದ ಸ್ತ್ರೀಯರಿಗೆ ವಿಷಯ ತಿಳಿಸಿದಳು. ಆದರಂತೆ ಪುರದ ಸುಮಂಗಲೆಯರು ಶ್ರಾವಣದ ಶುಕ್ರವಾರ ದಿನದಂದು ಅತ್ಯುತ್ಸಾಹದಿಂದ ನಿರ್ಮಲ ಮನಸ್ಕರಾಗಿ ಸ್ನಾನ ಮಾಡಿ ವಿಧ ವಿಧ ಅಲಂಕಾರ ಮಾಡಿ ಸಿಂಗರಿಸಿಕೊಂಡು ಹೊಸ ದಾದ ಅಕ್ಕಿಯಿಂದ ಪೀಠ ರಚಿಸಿ, ಇದರಲ್ಲಿ ಕಲಶ ಪ್ರತಿಷ್ಠಾಪಿಸಿ ಬಂಗಾರ ಸಹಿತ ಹೂವಿನ ಅಲಂಕಾರ ಮಾಡಿ ವರ ಮಹಾಲಕ್ಷ್ಮೀಯನ್ನು ಕಲಶದಲ್ಲಿ ಅವಾಹಿಸಿ ಪುಷ್ಪಾದಿಗಳಿಂದ ಅರ್ಚಿಸಿ ಕುಂಕುಮ- ಅರಶಿನಗಳಿಂದ ಪೂಜಿಸಿ, ತಾನು ಅಲ್ಲದೆ, ಪುರೋಹಿತರ ಮೂಲಕ ಕಲೊ³àಕ್ತ ಪೂಜೆ ಮಾಡಿಸಿ, ರಕ್ಷೆಗೋಸ್ಕರ ಬಲಹಸ್ತದಲ್ಲಿ ಹಸಿದಾರವನ್ನು ಮೂರು ಎಳೆಯನ್ನಾಗಿ ಮಾಡಿ, ಒದ್ದೆ ಮಾಡಿ ಅರಶಿನ ಹಚ್ಚಿ ದಾರವನ್ನು ವೀಳ್ಯದೆಲೆಯಲ್ಲಿಟ್ಟು ಪೂಜಿಸಿ ತುಪ್ಪದಿಂದ ಮಾಡಿದ ಭಕ್ಷÂಗಳನ್ನು ಸಮರ್ಪಿಸಿ, ಬ್ರಾಹ್ಮಣ ಸುವಾಸಿನಿ ಆರಾಧನೆ ಮಾಡಿ, ಬಾಗಿನಗಳನ್ನು ಕೊಟ್ಟು, ಬಂಧು ಬಾಂಧವರೊಡಗೂಡಿ ಭೋಜನ ಸತ್ಕಾರ್ಯದಲ್ಲಿ ಪಾಲ್ಗೊಂಡರು. ವರಮಹಾಲಕ್ಷ್ಮೀಯ ಪ್ರಭಾವದಿಂದ ಚಾರು ಮತೀ ಸಹಿತ ಸುಮಂಗಲೆಯರಿಗೆ ಸಕಲ ರತ್ನಾಭರಣಗಳು, ಪುತ್ರ ಪೌತ್ರಾದಿಗಳು, ಧನಧಾನ್ಯ ಸಮೃದ್ಧಿ ಪಡೆದು ದಾಂಪತ್ಯ ಜೀವನದಲ್ಲಿ ಸುಖ, ನೆಮ್ಮದಿ, ಮನೆಯಲ್ಲಿ ಸದಾ ಕಾಲ ಅನ್ನದಾನವು ಈ ವ್ರತದಿಂದ ಪ್ರಾಪ್ತಿಯಾಯಿತು.
ಶ್ರೇಷ್ಠ ವ್ರತ :
ಇದು ವ್ರತಗಳಲ್ಲಿ ಶ್ರೇಷ್ಠವಾದ ವ್ರತ. ಯಾರು ಈ ವ್ರತವನ್ನು ಹೇಳುವರೋ, ಮಾಡಿಸುವರೋ, ಮಾಡುವರೋ ಅವರಿಗೆ ಸಕಲ ಕಾರ್ಯಗಳು ಸಿದ್ಧಿಯಾಗುವುದು. ವ್ರತದ ಸಂಕಲ್ಪ ಕೈಗೊಂಡವರ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸಹಿತವಾಗಿ ಸಕಲ ರತ್ನಾಭರಣಗಳು, ಪುತ್ರ ಪೌತ್ರಾದಿಗಳು, ಧನಧಾನ್ಯ ಸಮೃದ್ಧಿ ಪಡೆದು ದಾಂಪತ್ಯ ಜೀವನದಲ್ಲೂ ಸುಖ ನೆಮ್ಮದಿ ಪ್ರಾಪ್ತವಾಗುವುದು ಎಂಬ ನಂಬಿಕೆಯಿದೆ. ಭವಿಷ್ಯೋತ್ತರದ ಪುರಾಣ ಗಳಲ್ಲಿಯೂ ವರಮಹಾಲಕ್ಷ್ಮೀ ವ್ರತದ ಉಲ್ಲೇಖ ವಿದ್ದು, ಶ್ರಾವಣ ಮಾಸದ ಪೌರ್ಣಮಿಗೆ ಪೂರ್ವದಲ್ಲಿ ಬರುವ ಶುಕ್ರವಾರ ( ಈ ಬಾರಿ ಆ.20) ಎಲ್ಲೆಡೆ ಶ್ರೀ ವರಮಹಾಲಕ್ಷ್ಮೀ ಪೂಜೆ ಮತ್ತು ವ್ರತ ನಡೆಯುತ್ತಿದೆ. ವರಮಹಾಲಕ್ಷ್ಮೀ ವ್ರತಾಚರಣೆಯ ಮೂಲಕವಾಗಿ ಜಗತ್ತಿಗೆ ಅಂಟಿರುವ ಕೊರೊನಾ ಮಹಾಮಾರಿಯ ಶಾಪ, ಪ್ರಾಕೃತಿಕ ವೈಪರೀತ್ಯದ ಭೀತಿ ಸಹಿತವಾಗಿ ಸಕಲ ದುರಿತಗಳೂ ನಿವಾರಣೆಯಾಗಿ ಸನ್ಮಂಗಲವಾಗಲಿ ಎಂದು ತಾಯಿ ಮಹಾಲಕ್ಷ್ಮೀ ಸ್ವರೂಪಿ ಅನ್ನಪೂರ್ಣೇಶ್ವರಿ ದೇವಿಯಲ್ಲಿ ಪ್ರಾರ್ಥಿಸೋಣ.
– ವೇ|| ಮೂ|| ಕುತ್ಯಾರು ಕೇಂಜ ಶ್ರೀಧರ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.