ಆಧುನಿಕತೆಯ ವಿವಿಧ (ಕು)ರೂಪಗಳು


Team Udayavani, Nov 18, 2018, 12:30 AM IST

12.jpg

ಈ ಶತಮಾನದಲ್ಲಿ ಎಲ್ಲವೂ ಬದಲಾಗಿದೆ- ಬದಲಾಗುತ್ತಿದೆ. ವಿಜ್ಞಾನವು ಬೆಳೆಯುತ್ತಿದ್ದಂತೆಯೇ ಜಗತ್ತಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಕ್ರಾಂತಿ ಉಂಟಾತ್ತಿದೆಯೆನ್ನಬಹುದು. ಅದರಲ್ಲೂ ಈ ವಿಜ್ಞಾನದ ಬಿರುಗಾಳಿ ಭಾರತದಲ್ಲಿ ಬೀಸಿದ ರಭಸಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯೂ ಸೇರಿಕೊಂಡಿರುವುದನ್ನು ಗಮನಿಸಬಹುದು. 

ವಾಸ್ತವವಾಗಿ ನಾವೆಲ್ಲ ಎಲ್ಲರೊಂದಿಗೆ ಹೇಳುತ್ತಿರುತ್ತೇವೆ- ಜಗತ್ತು ಬದಲಾದಾಗ ನಾವೂ ಬದಲಾಗಬೇಕು ಎಂದು. ನಾವು ಬದಲಾಗುವುದು ತಪ್ಪಲ್ಲ, ನಮ್ಮ ಸಂಸ್ಕೃತಿಯ ನಿಜವಾದ ಮೌಲ್ಯಗಳನ್ನು ಗ್ರಹಿಸದೆ ಅದನ್ನು ತಿರಸ್ಕರಿಸಿ ಈ ಆಧುನಿಕತೆಯನ್ನು ಯಾವತ್ತೋ ಹೊದ್ದುಕೊಂಡಾಗಿದೆಯಲ್ಲಾ ಅದು ತಪ್ಪು. ಈ ಆಧುನಿಕತೆಯ ಬೇರು ಯಾವ ರೀತಿ ನಮ್ಮ ದೈನಂದಿನ ಬದುಕಿನ ಆಳದಲ್ಲಿ ಬೇರೂರಿದೆ ಎಂದು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದರೆ ನಮಗೆ ನಾವೆಷ್ಟು ಆಧುನಿಕತೆಯೊಳಗೆ ಮುಳುಗಿ ಹೋಗಿದ್ದೇವೆ ಎಂಬುದು ಮನದಟ್ಟಾಗುತ್ತದೆ. 

ಶಿಲ್ಪಕಲೆ, ವರ್ಣಕಲೆ, ಸಂಗೀತ, ವೇದಾಂತ, ಇತಿಹಾಸ, ಆಚಾರ-ವಿಚಾರಗಳೆಲ್ಲವುಗಳ ತಥ್ಯ ಬುಲೆಟ್‌ ಟ್ರೈನ್‌ ವೇಗದಲ್ಲಿ ದೂರಕ್ಕೆ ಓಡುತ್ತಿರುವುದು ದುರಂತ. ವಿಜ್ಞಾನದಿಂದ ಅನೇಕ ಸೌಲಭ್ಯಗಳನ್ನು ಕುಳಿತಲ್ಲೇ ಕಿರುಬೆರಳ ತುದಿಯಲ್ಲೇ ದೊರಕಿಸಿ ಕೊಳ್ಳುತ್ತಿದ್ದೇವೆ. ನಾವು ಅದರ ಸಹಾಯದಿಂದ ನಮ್ಮ ಸುತ್ತಿನ ಸಮಾಜ ದಲ್ಲಿ ಕೆಲವೊಂದು ಸುಧಾರಣೆಗಳನ್ನು ಮಾಡುವುದಕ್ಕೂ ಅಷ್ಟೇ ವೇಗದಲ್ಲಿ ಮರೆತು ಹೋಗುತ್ತಿರುವುದು ವಿಪರ್ಯಾಸವೇ ಸರಿ. 

ನಮ್ಮ ಬದುಕಿನಲ್ಲಿ ತಳುಕು ಹಾಕಿಕೊಳ್ಳುತ್ತಿರುವ ರೀತಿನೀತಿಯನ್ನು ಕೂಲಂಕಷವಾಗಿ ಅವಲೋಕಿಸಿದರೆ “ಆಧುನಿಕತೆ’ಯ ಆಡಂಬರದಲ್ಲಿ ನಾವು ಮೈಮರೆತು ಭ್ರಮಾಲೋಕದಲ್ಲಿ ಯಾಂತ್ರಿಕವಾಗಿ ಕಳೆದು ಹೋಗು ತ್ತಿದ್ದೇವೆ. ಇದು ಯಾಕೆ ಹೀಗಾಗುತ್ತಿದೆ ಎಂದು ಒಂದು ಕ್ಷಣ ಬದುಕಿನ ದಡದಲ್ಲಿ ನಿಂತು ಅವಲೋಕಿಸಿದರೆ ದಿಗ್ಭ್ರಮೆಯಾಗುತ್ತದೆ. ಆಗ ಆಧುನಿಕತೆಯ ನಿಜವಾದ ಬದಲಾವಣೆಯ ಪರಿಣಾಮ ಮನಕಲಕುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿಯ ಲೋಪದೋಷಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ಅದನ್ನೇ ನಮ್ಮ ಸಂಸ್ಕೃತಿಯಲ್ಲಿ ಅಳವಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಾ ಬಂದದ್ದೇ ಈಗ ಎಲ್ಲದರಲ್ಲೂ ಆಧುನಿ ಕತೆಯ ಸ್ಪರ್ಶಕ್ಕೆ ಹಾತೊರೆಯುವಂತಾಗಿದೆ. 

ಇದನ್ನೆಲ್ಲ ಮೂಲಭೂತವಾಗಿ ಪರಿಗಣಿಸಿದಾಗ ಅರ್ಥವಾಗುವ ವಿಚಾರವೆಂದರೆ, ವಿಶೇಷವಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟಾಗ ಅದರಲ್ಲಿಯ ಉತ್ತಮವಾದ ಗುಣಗಳನ್ನು ಬೇಕುಬೇಡವೆಂಬ ಅನಿರ್ಧಾರದ ನಿರ್ಲಕ್ಷ್ಯದಿಂದ ಬದಿಗೆ ಸರಿಸಿ, ಅಗ್ರಾಹ್ಯ ಅಂಶಗಳನ್ನು ಮಾತ್ರ ಹಸಿವಿನಿಂದ ಕಂಗೆಟ್ಟವನು ಕೈಗೆಟುಕಿದ್ದನ್ನೆಲ್ಲ ಕಬಳಿಸು ವಂತೆ ನಾವು ಬರಮಾಡಿಕೊಂಡ ದುರಂತವಿದು.

ಇಷ್ಟಲ್ಲದೆ ಇನ್ನೂ ರಾತ್ರಿಯಿಡೀ ನಡೆಯುವ ನೈಟ್‌ ಕ್ಲಬ್‌ಗಳು, ಮಿಡ್‌ನೈಟ್‌ ಪಬ್‌ಗಳು, ಲವ್ಲಿ ಹಾರ್ಟ್‌ ಬೀಟ್ಸ್‌ಗಳು, ಸೆಕ್ಸ್‌ ಡ್ಯಾನ್ಸ್‌ಗಳು-ಹೀಗೆ ಪಾಶ್ಚಿಮಾತ್ಯರ ಧಾಟಿಯಲ್ಲಿ ಪ್ರಚಲಿತವಾಗುತ್ತಿರುವ ನಮ್ಮ ವಿವಿಧ ಮನೋರಂಜನೆಯ ಸಾಧನಗಳ ಪಟ್ಟಿ ಬಹಳಷ್ಟು ದೊಡ್ಡದಿವೆ. ಇತ್ತೀಚೆಗಂತೂ ಜನಪ್ರಿಯವಾಗುತ್ತಿರುವ ಡ್ರಿಂಕ್ಸ್‌ ಕ್ಲಬ್‌, ಡ್ರಿಂಕ್ಸ್‌ ಕಾರ್ನರ್‌, ಡ್ರಿಂಕ್ಸ್‌ ಡಾಬಾ ಇವೆಲ್ಲ ಮದ್ಯಪಾನಗಳ ಸುತ್ತ ಹುತ್ತ ಕಟ್ಟಿಕೊಳ್ಳುತ್ತಿರುವ ಪಾಶ್ಚಿಮಾತ್ಯರ ಮಾದರಿಯನ್ನೇ ಅನುಸರಿಸುತ್ತಿರುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನಗಳು ಬೇಕಿಲ್ಲ. 

ಇನ್ನು ನಮ್ಮ ಚಲನಚಿತ್ರಗಳ ಗುಣಮಟ್ಟದ ವಿಷಯ ಪಕ್ಕಕ್ಕಿಟ್ಟು ಗಮನಿಸಿದರೆ, ಲೈಂಗಿಕ ಸೋಂಕಿನಿಂದ ಬಳಲುತ್ತಾ ಅವರಲ್ಲಿ ಹುಚ್ಚೆಬ್ಬಿಸಲೆಂದೇ ಪ್ರಚಲಿತವಾಗಿರುವ ಹತ್ತು-ಹಲವು ಫ್ಯಾಶನ್‌ ಡ್ರೆಸ್‌ಗಳ ನಾನಾ ರೀತಿಯ ವಿನ್ಯಾಸಗಳು ಮಾನ ಮುಚ್ಚಿಕೊಳ್ಳಲೂ ಹರಸಾಹಸ ಪಡುತ್ತಿವೆ. ಇವೆಲ್ಲ ನಮ್ಮ ಆಧುನಿಕತೆಯ ಆಡಂಬರದ ವಿವಿಧ ರೂಪಗಳು. ವಾಸ್ತವವಾಗಿ ಇವೆಲ್ಲ ನಮ್ಮ ಯುವ ಜನಾಂಗದ ಕಣ್ಣು ತೆರೆಸುವ ಕೆಲಸವೋ ಅಥವಾ ಕಣ್ಣು ತೆಗೆಯುವ ಕೆಲಸವೋ ಎಂಬ ದ್ವಂದ್ವ ಕಾಡುತ್ತದೆ. ಈ ಬಗೆಯ ಆಧುನಿಕತೆಯನ್ನು ಯುವ ಪೀಳಿಗೆ ಅನುಸರಿಸುತ್ತಾ ಹೋದರೆ ಇಂದಿನ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಏರುತ್ತಾ ಹೋಗುವೆವೆಂಬ ಯುವ ಜನಾಂಗದ ಭಾವನೆಗಳಿಗೆ ಅರ್ಥವೇ ಇಲ್ಲ.

ನಾವು ಕಾಲದ ತುಳಿತದಿಂದ ತಪ್ಪಿಸಿಕೊಂಡಷ್ಟೂ ಜಾಣರಾಗಿದ್ದೇವೆಂದು ಬೀಗುತ್ತಿದ್ದೇವೆ ಅಷ್ಟೇ. ಆದರೆ ಬದುಕಿನಲ್ಲಿ ನಡೆದು ಬಹಳಷ್ಟು ದೂರ ಬಂದಾಗ ಒಮ್ಮೆಯಾದರೂ ಹಿಂದಿರುಗಿ ನೋಡುವ ಅನಿವಾ ರ್ಯತೆ ಇದೆ. ಏಕೆಂದರೆ ಸ್ವಾತಂತ್ರ್ಯ ಪೂರ್ವದ ನಮ್ಮ ಆದರ್ಶಗಳಾದ ಸ್ವದೇಶಿ ಬಗೆಗೆ ಇರುವ ಅಪಾರ ಆದರಾಭಿಮಾನ ಯುವಶಕ್ತಿಯ ಹೃದಯವನ್ನು ಇಂದು ಅಷ್ಟಾಗಿ ಸ್ಪಂದಿಸುತ್ತಿಲ್ಲ.  ಇಂದು ಕೂಲಿ ಕೆಲಸ ಮಾಡುವವರೂ ಭಾನುವಾರ ಬಂತೆಂದರೆ ಯಾವುದಾದರೂ ಒಂದು ಸಿನಿಮಾ ಥಿಯೇಟರ್‌ ಕಡೆ ಮುಖ ಮಾಡುತ್ತಾರೆ; ಹಲವರು ಬಾರ್‌ ರೆಸ್ಟೋರೆಂಟ್‌ಗಳಲ್ಲಿ ಕಾಲ ಕಳೆಯುತ್ತಾರೆ; ಕೆಲವರು ಜಾಲಿಪೋಲಿ ಆಟಗಳೆಂದು ಮನೆಬಿಟ್ಟು ಎಲ್ಲೆಲ್ಲೋ ಕುಳಿತು ಮೊಬೈಲ್‌ಗ‌ಳಲ್ಲಿ ಕಾಲಹರಣ ಮಾಡುತ್ತಾರೆ. ಇದಕ್ಕೆಲ್ಲ ಕಾರಣ ಬಿಡುವಿನ ವೇಳೆಯನ್ನು ಹೇಗೆಲ್ಲಾ ಕಳೆಯುವುದೆಂಬ ಚಿಂತೆ. ಹೀಗಾಗಿ ತಮ್ಮ ಬಿಡುವಿನ ಸಮಯವನ್ನು, ರಜೆಯ ದಿನಗಳನ್ನು ಅವರು ವ್ಯರ್ಥವಾಗಿ ಕಳೆಯುವ ಸಂಭವವೇ ಹೆಚ್ಚು. 

ನಮ್ಮ ಯುವಕರಿಗೆ ತದ್ವಿರುದ್ಧವಾಗಿ ಪಾಶ್ಚಿಮಾತ್ಯ ಯುವಕರಿದ್ದಾರೆಂದರೆ ಆಶ್ಚರ್ಯವಾಗಬಹುದು. ಪಾಶ್ಚಿಮಾತ್ಯ ಯುವಕರು ಜೀವನದ ಒಂದೇ ಒಂದು ನಿಮಿಷವನ್ನೂ ಪೋಲು ಮಾಡಲು ಬಯಸುವುದಿಲ್ಲ. ಪಾಶ್ಚಿಮಾತ್ಯ ಯುವಕರಲ್ಲಿ ಉನ್ನತ ಮಟ್ಟದ ವ್ಯಾಸಂಗವನ್ನು ಮಾಡಲಿಚ್ಛಿಸುವ ಅಪೇಕ್ಷಿತರು ಅದಕ್ಕಾಗಿ ಶ್ರಮಿಸುವ ರೀತಿಯನ್ನು ಅವಲೋಕಿಸಿದರೆ ಅಚ್ಚರಿಯೊಂದಿಗೆ ನಾಚಿಕೆಯೂ ಉಂಟಾದೀತು. ಅವರ ಅಧ್ಯಯನದ ರೀತಿ, ಅನುಸರಿಸುವ ನೀತಿ, ಶಿಕ್ಷಣದ ದಾಹ ನಮ್ಮಲ್ಲಿಯಂತೆ ಕೇವಲ ಪರೀಕ್ಷೆಗಳನ್ನು ಪಾಸಾಗುವುದಕ್ಕಷ್ಟೇ ಸೀಮಿತವಾಗಿಲ್ಲ; ಉನ್ನತ ವ್ಯಾಸಂಗಕ್ಕಾಗಿ ಒದಗಿಸಬೇಕಾಗುವ ಹಣವನ್ನೂ, ಇತರ ತಮ್ಮ ಪ್ರಮುಖ ಅವಶ್ಯಕತೆಗಳನ್ನೂ ಅವರು ತಾವೇ ಸ್ವಯಂ ಜವಾಬ್ದಾರಿ ವಹಿಸಿಕೊಂಡು ಪೂರೈಸಿ ಕೊಳ್ಳುವಂತಹ ಪರಂಪರೆಯೇ ಅಲ್ಲಿ ರೂಢವಾಗಿದೆ. 

ಮಾತ್ರವಲ್ಲ ಪಾಶ್ಚಿಮಾತ್ಯ ಯುವಕ- ಯುವತಿಯರು ತಮ್ಮ 20-21ನೆಯ ವಯಸ್ಸಿನಲ್ಲಿಯೇ ಸಮಾಜದ ಸಂಪರ್ಕದಲ್ಲಿ ತಮ್ಮ ಹೊಣೆಯನ್ನು ಸದಾ ಅರಿತುಕೊಳ್ಳಲು ಮುಂದಾ ಗುತ್ತಾರೆ. ತಾಯಿ-ತಂದೆಯರಿಂದ ಸ್ವತಂತ್ರ ರಾಗಲು ಬಯಸುತ್ತಾರೆ. ಹಾಗಾಗಿ ತಮ್ಮ ರಜೆಯ ದಿನಗಳಲ್ಲಿ ಅವರು ಯಾವುದಾದರೊಂದು ಕೆಲಸವನ್ನು ಗಿಟ್ಟಿಸಿ ಕೊಳ್ಳಲು ಹರಸಾಹಸ ಮಾಡುತ್ತಲೇ ಇರುತ್ತಾರೆ. ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಹಣ ಸಂಪಾದಿಸಿ ತಮ್ಮ ವ್ಯಾಸಂಗವನ್ನು ಮುಂದುವರಿಸುತ್ತಾರೆ. ನಮ್ಮಂತೆ ಅವರಿಗೆ ಇಂಥದೇ ಕೆಲಸವಾಗಬೇಕೆಂಬ ನಿರ್ಬಂಧ ವಿಲ್ಲ. ಯಾವ ಕೆಲಸವೂ ತಮ್ಮ ಗೌರವಕ್ಕೆ ಕುಂದೆಂದು ಅವರು ಭಾವಿಸುವುದೇ ಇಲ್ಲ. ಭವಿಷ್ಯಕ್ಕಾಗಿ ಸಂಪಾದಿ ಸುವ ನಿಟ್ಟಿನಲ್ಲಿ ಶಕ್ತಿಯನ್ನು ವಿನಿಯೋಗಿಸುತ್ತಾರೆ. 

ನಾವು ಇಂದಿನ ದೈನಂದಿನ ಜೀವನ ಜಂಜಾಟದಲ್ಲೂ ಆಧುನಿಕತೆಯ ಹುರುಳಿಲ್ಲದ ಮೆರಗನ್ನು ಅನುಸರಿ ಸುತ್ತಿರುವುದು ವಿಷಾದಕರ ಸಂಗತಿ. ಇಂದು ಆಧುನಿಕತೆಯ ಆಡಂಬರದಲ್ಲಿ ಅನೇಕ ರಾಷ್ಟ್ರಗಳು ಭಾರತ ದೇಶಕ್ಕೆ ಮಗ್ಗುಲು ಮುಳ್ಳುಗಳಾಗಿಯೇ ಚುಚ್ಚು ತ್ತಿರುವುದನ್ನೂ ಮರೆತಿದ್ದೇವೆ. ಆದರೆ ವಿಜ್ಞಾನದ ಚಕ್ರವ್ಯೂಹದಲ್ಲಿ ಸಿಕ್ಕು ಪಾರಾಗಲಾಗದೇ ಅದೇ ವೇಗದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿರುವ, ಅನುಭವಿಸುತ್ತಿರುವ ಬಹುತೇಕ ಎಲ್ಲಾ ದೇಶಗಳು ಈಗ ಒಂದೆಡೆ ಆಂತರಿಕ ಅತೃಪ್ತಿಯಲ್ಲೂ ಇನ್ನೊಂದೆಡೆ ಆಂತರಿಕ ತೃಪ್ತಿಯಲ್ಲೂ ತಮ್ಮ ಪರಾಭವವನ್ನು ಈಗಾಗಲೇ ಒಪ್ಪಿಕೊಂಡಿವೆ.  ಆಧುನಿಕತೆಯ ವಿಷಯ ಬಂದಾಗಲೆಲ್ಲಾ ಹಾಗೆಯೇ. ಆದರೆ ಈಗ ಆಂತರಿಕ ಪ್ರಚೋದನೆಗಾಗಿ, ಒಂದು ತರಹದ ನೆಮ್ಮದಿ, ಶಾಂತಿಗಾಗಿ ಹೆಚ್ಚಿನ ಎಲ್ಲಾ ದೇಶಗಳು ಭಾರತೀಯ ಸಂಸ್ಕೃತಿಯ ಮೊರೆ ಹೊಕ್ಕಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಸತ್ಯ. ಆದರೂ ಪಾಶ್ಚಿಮಾತ್ಯರ ಒಳ್ಳೆಯ ಯಾವುದೇ ಅಂಶಗಳನ್ನು ಅನುಸರಿಸುವುದಕ್ಕೆ ನಾವು ಹೋಗಿದ್ದೇವೆಯೆ ಎಂಬುದನ್ನು ಯೋಚಿಸಿದಾಗ ನಮ್ಮ ಯುವಶಕ್ತಿ ಕೊರಗುತ್ತಿದೆಯೋ ಅಥವಾ ಕರಗುತ್ತಿದೆಯೋ ಎಂಬ ಅನುಮಾನ ಕಾಡುವುದು ಸುಳ್ಳಲ್ಲ. ಹಾಗಾಗಿ ಪ್ರತಿಯೊಬ್ಬರೂ “ಆತ್ಮವಿಮರ್ಶೆ’ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. 

ವಿಠಲಗಟ್ಟಿ ಉಳಿಯ 

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.