ಸ್ಟಾರ್ಟ್‌ಅಪ್ ಗಳಲ್ಲಿ ಹೂಡಿಕೆಗೆ ವಿಸಿಗಳು ಉತ್ಸುಕ
Team Udayavani, Oct 26, 2022, 9:00 AM IST
ಭಾರತದಲ್ಲಿ ವೆಂಚರ್ ಕ್ಯಾಫಿಟಲಿಸ್ಟ್‌ಗಳು ಏರಿಕೆಯಾಗಿದ್ದು, ಇದು ದೇಶದಲ್ಲಿ ಸ್ಟಾರ್ಟ್ ಅಪ್‌ಗಳು ಯಶಸ್ವಿಯಾಗಿರುವುದನ್ನು ಸೂಚಿಸುತ್ತಿದೆ. ಟ್ರ್ಯಾಕ್‌ಎಕ್ಸ್‌ಎನ್ ಡೇಟಾ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ 145 ವೆಂಚರ್ ಕ್ಯಾಪಿಟಲಿಸ್ಟ್(ವಿಸಿ) ಸಂಸ್ಥೆಗಳು ಸ್ಥಾಪನೆಯಾಗಿವೆ. ಈ ಪೈಕಿ 2021ರಲ್ಲಿ 123 ವಿಸಿಗಳು ಮತ್ತು 2022ರಲ್ಲಿ 22 ವಿಸಿಗಳು ಸ್ಥಾಪನೆಯಾಗಿವೆ.
ಸ್ಟಾರ್ಟ್‌ಅಪ್ ಗಳೊಂದಿಗೆ ಒಪ್ಪಂದ
2020ಕ್ಕೆ ಹೋಲಿಸಿದರೆ 2021ರಲ್ಲಿ ಒಟ್ಟು ಮೇಡ್ ಇನ್ ಇಂಡಿಯಾ ವಿಸಿಗಳ ಸಂಖ್ಯೆಯಲ್ಲಿ ಶೇ.29ರಷ್ಟು ಏರಿಕೆಯಾಗಿದೆ. 95 ಹೂಡಿಕೆಗಳನ್ನು ಮಾಡಲಾಗಿದೆ. ಇದುವರೆಗೂ ಹೊಸ ವಿಸಿಗಳು ಒಟ್ಟು 2,262 ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿವೆ. ಜತೆಗೆ 2021ರಲ್ಲಿ 1,349 ಒಪ್ಪಂದಗಳು ಆಗಿವೆ ಹಾಗೂ 2022ರಲ್ಲಿ 913 ಒಪ್ಪಂದಗಳು ಆಗಿವೆ.
ಈ ವರ್ಷ ತಗ್ಗಿದ ಹೂಡಿಕೆ
ವಿಸಿಗಳ ಸಂಖ್ಯೆಯಲ್ಲಿ ಏರಿಕೆಯ ಹೊರ ತಾಗಿಯೂ 2021ರ ಜುಲೈ- ಸೆಪ್ಟೆಂಬರ್ ತ್ತೈಮಾಸಿಕದಲ್ಲಿ ಸ್ಟಾಟ್‌ಅಪ್‌ಗಳಲ್ಲಿ ಹೂಡಿಕೆಯು 14.9 ಬಿಲಿ ಯನ್ ಡಾಲರ್ ಇದ್ದದು, 2022ರ ಇದೇ ತ್ತೈಮಾಸಿಕದಲ್ಲಿ 3 ಬಿಲಿಯನ್ ಡಾಲರ್‌ಗೆ ತಗ್ಗಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆ ಹೂಡಿಕೆಯಾಗಿದೆ. ಅನುಕ್ರಮವಾಗಿ ಹೂಡಿಕೆಯು ಶೇ.57ರಷ್ಟು ತಗ್ಗಿದೆ. ಇದರ ಹೊರತಾಗಿಯೂ ಭಾರತದಲ್ಲಿ ಹೂಡಿಕೆ ಬಗ್ಗೆ ನೂತನ ವಿಸಿಗಳು ಆಶಾಭಾವನೆ ಹೊಂದಿದ್ದು, ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆಯನ್ನು ಅವು ಮುಂದುವರಿಸಿವೆ.
ಭೌತಿಕ ಬಂಡವಾಳ ಹೂಡಿಕೆ
ಇನ್ನೊಂದೆಡೆ ಈ ವರ್ಷ ಇನ್‌ಪ್ಲೆಕ್ಷನ್ ಪಾಯಿಂಟ್ ವೆಂಟರ್(ಐಪಿವಿ) ಭೌತಿಕ ಬಂಡವಾಳ ಹೂಡಲು ಆರಂಭಿಸಿವೆ. ಆರಂಭಿಕ ಹಂತದಲ್ಲಿ ಸ್ಟಾರ್ಟ್‌ಅಪ್ ಉತ್ತೇಜನ ನೀಡಲು 50 ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಐಪಿವಿಗಳ ಸಂಸ್ಥಾಪಕರು, ಸ್ಟಾಟ್‌ಅಪ್‌ಗಳಲ್ಲಿ ದೀರ್ಘಕಾಲಿಕ ಹೂಡಿಕೆ ಮಾಡಲು ಬಯಸಿದ್ದಾರೆ. ಭೌತಿಕ ಬಂಡವಾಳ ಹೂಡಿಕೆಯು ಆರಂಭದಿಂದಲೇ ಅವರನ್ನು ಕಂಪೆನಿಯ ಭಾಗವಾಗಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.