ಭಾರತದ ವಿಘ್ನ ಕಳೆದ ವಿನಾಯಕ


Team Udayavani, May 28, 2021, 6:30 AM IST

ಭಾರತದ ವಿಘ್ನ ಕಳೆದ ವಿನಾಯಕ

12 ವರ್ಷದ ಮಗು ಬೆಳಗ್ಗೆ ಅಮ್ಮ ಎಬ್ಬಿಸಿದಾಗ ಇಷ್ಟವಿಲ್ಲದಿದ್ದರೂ ಏಳುವುದು, ಅಮ್ಮ ಗದರಿಸಿದ್ದಕ್ಕಾಗಿ ಬ್ರಶ್‌ ಮಾಡುವುದು, ತಿಂಡಿ ತಿನ್ನುವುದು, ಶಾಲೆಯಲ್ಲಿ “ಮಿಸ್‌’ ಭಯಕ್ಕೆ ತನಗೆ ಅರ್ಥ ವಾಗದಿದ್ದರೂ ಓದಿ ಬರೆಯುವುದು, ಹೋಮ್‌ವರ್ಕ್‌ ಮಾಡುವುದು ಹೀಗೆ ತನಗೇನು ಬೇಕು ಎಂದು ಅರಿವಿಲ್ಲದ ಅಥವಾ ತನಗಿಷ್ಟವಿದ್ದಂತೆ ಇರಲು ಸ್ವಾತಂತ್ರ್ಯವಿಲ್ಲದ ವಯ ಸ್ಸದು. ಆದರೆ ಅದೇ ವಯಸ್ಸಿನಲ್ಲಿ ಆ ಹುಡುಗ ಸ್ವಾತಂತ್ರ್ಯ ಲಕ್ಷ್ಮೀಯ ಉಪಾಸನೆ ಮಾಡಿದ. ಸವಾಯಿ ಮಾಧವಸಿಂಗ್‌, ಚಾಪೇಕರ್‌ ಸಹೋದರರ ಬಗ್ಗೆ ಪ್ರೇರಣಾದಾಯಿ ಲೇಖನಗಳನ್ನು ಬರೆದ… “ಜನ್ಮಜಾತ ದೇಶಭಕ್ತ’, ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌. ಮೇ 28 ಈ ಅಸಾಮಾನ್ಯ ಪುರುಷನ ಜನ್ಮದಿನ.

ಬ್ರಿಟಿಷ್‌ ಅಧಿಕಾರಿ ರಾಂಡ್‌ನ‌ನ್ನು ವಧಿಸಿದ ಚಾಪೇಕರ್‌ ಸಹೋದರರನ್ನು ಇಡೀ ದೇಶದ ಜನ ಕೊಲೆಗಡುಕರು ಅಂತ ಕರೆದಾಗ ಇನ್ನೂ ಹದಿಹರೆಯದ ಆದಿಯಲ್ಲಿದ್ದ ಬಾಲಕ ಅದು ಕೊಲೆಯಲ್ಲ, ಸಂಹಾರ. ಚಾಪೇಕರ್‌ ಸಹೋದ ರರು ಮಾಡಿದ್ದು ರಾಕ್ಷಸನ ಸಂಹಾರ. ಅಂದಾಗ ಬ್ರಿಟಿಷ್‌ ಅಧಿಕಾರಿಗಳೇ ದಂಗಾಗಿದ್ದರು. ಆ ಪುಟ್ಟ ಬಾಲಕನ ಧೈರ್ಯ ಕಂಡು ಭಾರತೀಯರು ಮೂಕವಿಸ್ಮಿತರಾಗಿದ್ದರು. ಇವತ್ತು “ಧೈರ್ಯ’ ಅಂದಾಗ ಸಾವರ್ಕರ್‌ ನೆನಪಾಗುತ್ತಾರೆ.

ತಾಳ್ಮೆಯ ಸಾಕಾರ ಮೂರ್ತಿ…

ಆ ಅಂಡಮಾನಿನ “ಕರಿನೀರಿನ ಶಿಕ್ಷೆ’, ಐವತ್ತು ಮಂದಿ ಮಾತ್ರ ಕೂರಬಹುದಾದ ಜೈಲಿನಲ್ಲಿ ಇನ್ನೂರು ಮಂದಿಯನ್ನು ತುರುಕಿಸಿದಾಗ, ಕೈ ಮತ್ತು ಬಾಯಿಯಲ್ಲಿ ತೆಂಗಿನ ನಾರನ್ನು ಬಿಚ್ಚುವಾಗ, ಎತ್ತಿನ ಬದಲು ತನ್ನನ್ನೇ ಗಾಣಕ್ಕೆ ಕಟ್ಟಿ ದಿನಕ್ಕೆ ಮೂವತ್ತು ಪೌಂಡ್‌ (ಸುಮಾರು 13 ಲೀ.) ಗಳಷ್ಟು ಎಣ್ಣೆ ತೆಗೆ ಯುವಾಗ, ಎತ್ತರ ಮತ್ತು ಅಗಲ ಕಿರಿದಾದ ಜೈಲಿನ ಕೋಣೆಯೊಳಗೆ ಇದ್ದಷ್ಟು ದಿನ ಬಗ್ಗಿಯೇ ನಿಲ್ಲಬೇಕಾಗಿ ಬಂದಾಗ, ತಾನು ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟೆನೋ ಅದೇ ದೇಶದ ಜನ ತನ್ನ ಸ್ವಂತ ತಮ್ಮ ನಾರಾಯಣ ಸಾವರ್ಕರರನ್ನು ಕಲ್ಲು ಹೊಡೆದು ಕೊಂದಾಗ, ತನ್ನನ್ನು ಕಲ್ಲು ಹೊಡೆದು ಗಂಭೀರ ಗಾಯಗೊಳಿಸಿದಾಗ, 1951ರಲ್ಲಿ ಪಾಕ್‌ ಪ್ರಧಾನಿ ಲಿಯಾಖತ್‌ ಆಲೀ ಖಾನ್‌ ಭಾರತ ಭೇಟಿಯ ಸಂದರ್ಭದಲ್ಲಿ ತನ್ನನ್ನು ಭಯೋತ್ಪಾದಕ ನೆಂಬಂತೆ ಬಿಂಬಿಸಿ ತನ್ನದೇ ದೇಶದ ಪ್ರಧಾನಿ ತನ್ನನ್ನು ಜೈಲಿಗಟ್ಟಿದಾಗ, ಮಾತ್ರವಲ್ಲ ಪಾಕ್‌ ಪ್ರಧಾನಿ ವಾಪಸ್‌ ಹೋಗಿ ಅನಂತರ 60 ದಿನಗಳ ವರೆಗೂ ಜೈಲಿನಿಂದ ಬಿಡುಗಡೆ ಮಾಡದೆ ಕೃತಘ್ನನಾಗಿ ಸೇಡು ತೀರಿಸಿಕೊಂಡಾಗ, ಬ್ರಿಟಿಷ್‌ ಪೊಲೀಸರು ಕೇಳದಂತಹ ಅಸಹ್ಯ ಪ್ರಶ್ನೆಗಳನ್ನು ನಮ್ಮ ದೇಶದ ಪೊಲೀಸರು ಕೇಳಿದಾಗ…ಅಬ್ಟಾ ಅದೆಂತಹ ತಾಳ್ಮೆ ಸಾವರ್ಕರರದ್ದು!! ತಾಳ್ಮೆ ಅಂದಾಗ ಸಾವರ್ಕರ್‌ ಹೊರತು ಇನ್ಯಾರು ಕಣ್ಮುಂದೆ ಬಂದಾರು?

ಅಸಾಮಾನ್ಯ ದೂರದೃಷ್ಟಿ :

ದೇಶಾದ್ಯಂತ ಇರುವ ಬ್ರಿಟಿಷರ ಮೂರ್ತಿಗಳನ್ನು ಧ್ವಂಸ ಮಾಡಬೇಕು ಅನ್ನುವ ಸಾಮಾನ್ಯ ಗುರಿ ಯಿಟ್ಟು ಕೊಂಡಿದ್ದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ರಿಗೆ ರಾಸ್‌ ಬಿಹಾರಿ ಬೋಸ್‌ರ ಸಂಪರ್ಕ ಸಾಧಿಸುವಂತೆ ವ್ಯವಸ್ಥೆ ಮಾಡಿ,  ಜಪಾನಿಗೆ ಕಳುಹಿಸಿ INA ಗೆ ಪ್ರೇರಣೆ ನೀಡಿದ್ದು ಸಾವರ್ಕರ್‌. ಎರಡನೇ ಮಹಾಯುದ್ಧ ಸ್ಫೋಟವಾದಾಗ ಸಾವರ್ಕರ್‌ ಹೇಳುತ್ತಾರೆ ಎರಡನೇ ಮಹಾಯುದ್ಧ ಮುಗಿಯುವಷ್ಟರಲ್ಲಿ ಬ್ರಿಟಿಷ್‌ ಸರಕಾರ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಅನಂತರ ಅವರು ಭಾರತದಲ್ಲಿ ಆಡಳಿತ ನಡೆಸು ವಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಹಾಗಾಗಿ ಅವರು ಖಂಡಿತವಾಗಿಯೂ ಭಾರತವನ್ನು ಬಿಟ್ಟು ಹೋಗುತ್ತಾರೆ. ಅಂತಹ ಸಮಯದಲ್ಲಿ ನಮ್ಮ ಸೈನಿಕ ಶಕ್ತಿ ಅತ್ಯಂತ ಸಮೃದ್ಧವಾಗಿ ಬಲಶಾಲಿ ಯಾಗಿರಬೇಕು. ದೇಶಾದ್ಯಂತ ಯುವಕರು ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡಬೇಕು. ಇದು ತೀರಾ ಅನಿವಾರ್ಯ ಅಂದಾಗ ಹಲವು ನಾಯಕರು ಸಾವರ್ಕರ್‌ ಮಾತನ್ನು ಅಪಹಾಸ್ಯ ಮಾಡುತ್ತಾರೆ. ಇದರಿಂದ ವಿಚಲಿತರಾಗದ ಸಾವರ್ಕರ್‌ ದೇಶಾದ್ಯಂತ ಪ್ರವಾಸ ಮಾಡಿ, ಯುವ ಕರನ್ನು ಸಂಘಟಿಸಿ, ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡುತ್ತಾರೆ. ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಯುವಕರು ಸೈನ್ಯ ಸೇರುತ್ತಾರೆ. ಇತಿಹಾಸಕಾರರು ಹೇಳುತ್ತಾರೆ ಸಾವರ್ಕರರ ಆ ದೂರದೃಷ್ಟಿಯ ಕಾರಣದಿಂದ ಭಾರತ ಸ್ವಾತಂತ್ರ್ಯ ಸಿಕ್ಕ ಅನಂತರವೂ ಭಾರತವಾಗಿ ಉಳಿಯಿತು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಸುಮ್ಮನೆ ಹೋಗಲಾರರು, ಮತ ಆಧಾರಿತ ದೇಶವೊಂದನ್ನು ಹುಟ್ಟುಹಾಕಿ ಹೋಗುತ್ತಾರೆಂಬ ಸಂಗತಿ ಸಾವರ್ಕರರಿಗೆ ಮೊದಲೇ ತಿಳಿದಿತ್ತೆ? ಎಂಥ ದೂರದೃಷ್ಟಿ ಸಾವರ್ಕರರದ್ದು !!

ಸ್ವದೇಶಿ ಚಿಂತನೆಯ ಪ್ರಬಲ ಪ್ರತಿಪಾದಕ :

ವಾರವಿಡೀ ಪುಣೆಯ ಉದ್ದಕ್ಕೂ ಓಡಾಡಿ ವಿದೇಶಿ ವಸ್ತುಗಳನ್ನು ಸಂಗ್ರಹ ಮಾಡಿ ಶನಿವಾರ ದಂದು “ವಾಡಾ’ದ ಹತ್ತಿರ ತಿಲಕರ ಸಮ್ಮುಖದಲ್ಲಿ ಆ ವಿದೇಶಿ ವಸ್ತುಗಳಿಗೆ ಬೆಂಕಿ ಹಚ್ಚುವುದು, ಅಭಿನವ ಭಾರತ ಹೆಸರಿನ ಸಾವರ್ಕರ್‌ ಗುಂಪಿನ ಕೆಲಸ. “ಸುಡುವುದಕ್ಕಿಂತ ಬಡವರಿಗೆ ಹಂಚುವುದು ಒಳ್ಳೆಯ ದಲ್ಲವೇ? ಅಂದಿದ್ದರಂತೆ ಗಾಂಧೀಜಿ. ವಿದೇಶಿ ವಸ್ತುಗಳನ್ನು ಸುಡಬೇಕು ಎನ್ನುವುದು ನಮ್ಮ ಸಂಕಲ್ಪ ಅದನ್ನು ಹಂಚಬೇಕೆ!!  ಅನ್ನುವುದು ಸಾವರ್ಕರ್‌ ವಾದ. ಗಾಂಧೀಜಿ ಸ್ವದೇಶಿ ವ್ರತ ಸ್ವೀಕಾರ ಮಾಡು ವುದಕ್ಕಿಂತ 15 ವರ್ಷಗಳ ಮೊದಲೇ ಸಾವರ್ಕರ್‌ ಸ್ವದೇಶಿ ಚಿಂತನೆಯನ್ನು ದೇಶದಲ್ಲಿ ಬಿತ್ತಿದ್ದರು.

ಅಸಾಮಾನ್ಯ ಕವಿ :

ಅಂಡಮಾನಿನಲ್ಲಿ ಪೆನ್ನು, ಪೇಪರ್‌ ಬಳಕೆಗೆ ಅವಕಾಶ ಸಿಗದಿದ್ದಾಗ ಮೊಳೆಯಿಂದ ಕಲ್ಲಿನ ಗೋಡೆಯಲ್ಲಿ ಹತ್ತು ಸಾವಿರ ಸಾಲುಗಳ ಕಾವ್ಯಗಳನ್ನು ರಚಿಸಿ ಬರೆಯುತ್ತಾರೆ ಸಾವರ್ಕರ್‌!! ಕಮಲ, ಗೋಮಾಂತಕ, ಸಾಗರ್‌, ವಿಶ್ವಾಸ್‌ ಮುಂತಾದ ಕಾವ್ಯ- ನಾಟಕಗಳ ರಚನೆಯನ್ನು ಮಾಡುತ್ತಾರೆ ಮೊಳೆಯಿಂದ.. ಮತ್ತು ಅಷ್ಟನ್ನೂ ನೆನಪಿಟ್ಟುಕೊಂಡು ಜೈಲಿನಿಂದ ಬಿಡುಗಡೆಯಾಗಿ ಬಂದ ಅನಂತರ ಮತ್ತೆ ಬರೆದು ಸಮಾಜಕ್ಕೆ ಆ ಮಹಾನ್‌ ಕಾವ್ಯ ಸಾಹಿತ್ಯಗಳನ್ನು ಕೊಟ್ಟ ಜಗತ್ತಿನ ಅದ್ಭುತ ಕವಿ ಸಾವರ್ಕರ್‌.

ಸಾಮರಸ್ಯದ ಹರಿಕಾರ :

ಸಮಾಜದ ಒಡಕಿಗೆ ಬಹುಮುಖ್ಯ ಕಾರಣ ವಾಗಿದ್ದ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ ಭಾವನೆ ಯನ್ನು ತೊಡೆದು ಹಾಕಲು ಸಾವರ್ಕರ್‌ ತಮ್ಮ ತನು-ಮನಗಳೆರಡನ್ನೂ ಮುಡಿಪಾಗಿಟ್ಟರು. “ಪತಿತ ಪಾವನ ಮಂದಿರ’ ವನ್ನು ನಿರ್ಮಿಸಿ ಆ ಮಂದಿರಕ್ಕೆ  ಎಲ್ಲ ಜಾತಿಯ ಜನರು ಯಾವುದೇ ಅಳುಕಿಲ್ಲದೆ ಪ್ರವೇಶಿಸಿ ಭಗವಂತನ ದರ್ಶನ ಪಡೆಯುವ ಅವಕಾಶವನ್ನು ಕಲ್ಪಿಸಿದರು. ಆಸ್ಟ್ರಿ ಯಾದ ಹಿಡಿತದಿಂದ ಇಟಲಿಯನ್ನು ಪಾರು ಮಾಡಿ ಇಟಲಿಗೆ ಸ್ವಾತಂತ್ರ್ಯ ಕೊಡಿಸಿದ ಮಹಾಪುರುಷ “ಜೋಸೆಫ್ ಮ್ಯಾಝಿನಿ’ಯಿಂದ ಪ್ರೇರಿತರಾದ ಸಾವರ್ಕರ್‌, ಆತನನ್ನು ಉತ್ಕೃಷ್ಟ ಶಬ್ಧಗಳಲ್ಲಿ ವರ್ಣಿಸಿ ಗ್ರಂಥವೊಂದನ್ನು ಬರೆದರು.

ಮರಾಠಿಯ ಖ್ಯಾತ ಕವಿ ಗೋವಿಂದ್‌ ಹೇಳು ವಂತೆ ಸಾವರ್ಕರ್‌ ಅಂದರೆ ತೇಜಸ್ಸು, ತ್ಯಾಗ, ತಪಸ್ಸು, ತಣ್ತೀ, ತರ್ಕ, ತಾರುಣ್ಯ, ಬಾಣದಂತೆ ವೇಗ, ತಲವಾರಿನಂತೆ ಹರಿತ, ಸಹನೆ, ಉನ್ನತವಾದ ಯಾವುದೇ ಗುಣಗಳು ಕಣ್ಮುಂದೆ ಬಂದರೂ ಆ ಗುಣಗಳಿಗೆ ಹೋಲಿಕೆಯಾಗುವ ಏಕೈಕ ಹೆಸರು ವಿನಾಯಕ ದಾಮೋದರ ಸಾವರ್ಕರ್‌.

ಆತ್ಮವಿಶ್ವಾಸದ ಖಜಾನೆ :

ತಾನೀಗ ಬ್ರಿಟಿಷರ ಹಡಗಿನಲ್ಲಿ ಬಂಧಿ. ಅದು ಚಲಿಸುತ್ತಿದ್ದುದು ಫ್ರಾನ್ಸಿನ ಆಳ ಸಮುದ್ರದಲ್ಲಿ. ಇಂತಹ  ಪರಿಸ್ಥಿತಿಯಲ್ಲೂ ಬ್ರಿಟಿಷರ ಹಡಗಿನ ಕಿರಿದಾದ ಕಿಂಡಿಯಿಂದ ತೂರಿ, ಆ ಭೋರ್ಗರೆಯುವ ಸಮುದ್ರದಲ್ಲಿ ಈಜಿ, ದಡ ಸೇರಿದ ಸಾವರ್ಕರ್‌.. ಆತ್ಮವಿಶ್ವಾಸಕ್ಕೆ ಮತ್ತೂಂದು ಹೆಸರು.

 

– ಪ್ರಕಾಶ್‌ ಮಲ್ಪೆ, ಉಡುಪಿ

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.